ಭಾರತದಲ್ಲಿ ಹಲವಾರು ಮಂದಿ ತಮ್ಮ ಗೌಪ್ಯ ಮಾಹಿತಿಯನ್ನು ಬಹಳ ಸುಲಭವಾಗಿ ಆನ್‌ಲೈನ್ ಸೈಬರ್ ಹ್ಯಾಕ್ ಮಾಡುವವರು ತಿಳಿಯುವಂತಹ ರೀತಿಯಲ್ಲಿ ಇರುತ್ತದೆ. ಭಾರತೀಯರು ತಮ್ಮ ಗೌಪ್ಯ ಮಾಹಿತಿ ಸಂಗ್ರಹ ಮಾಡುತ್ತಿರುವ ರೀತಿಯು ಡೇಟಾ ಕಳ್ಳತನದ ಪ್ರಮುಖ ಅಪಾಯವನ್ನು ಸೃಷ್ಟಿ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಪರ್ ಯೂನಿಸಿಸ್ ಸೆಕ್ಯುರಿಟಿ ಇಂಡೆಕ್ಸ್ 2020 ವರದಿಯು ವೈಯಕ್ತಿಕ ಆರ್ಥಿಕ ಭದ್ರತೆಯ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ, ಎಟಿಎಂ ವಂಚನೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಅನಧಿಕೃತ ಬಳಕೆ ಅಥವಾ ಸುಳ್ಳು ಗುರುತುಗಳ ಮೇಲೆ ನೀಡಲಾದ ಮೊಬೈಲ್ ಸಂಖ್ಯೆಗಳ ಪ್ರಕರಣದಲ್ಲಿ ತೀವ್ರವಾಗಿ ಏರಿಕೆಯಾಗಿದೆ. ಅಂತೆಯೇ, ನೂರಾರು ದಶಲಕ್ಷದಷ್ಟು ವೈಯಕ್ತಿಕ ದಾಖಲೆಗಳನ್ನು ಕದ್ದಿರುವ ದೊಡ್ಡ ಪ್ರಮಾಣದ ಡೇಟಾ ಕಳ್ಳತನಗಳು ಸಹ ಅಧಿಕವಾಗಿದೆ.
ಈ ವರದಿಯು ವ್ಯಕ್ತಿಯ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿವರಗಳಿಗೆ ಹಾಗೂ ಆನ್‌ಲೈನ್ ಬ್ಯಾಂಕಿಂಗ್ ಮತ್ತು ಶಾಪಿಂಗ್‌ಗಳ ಮೇಲೆ ಅನಧಿಕೃತ ಪ್ರವೇಶದ ಮೂಲಕ ಬ್ಯಾಂಕ್ ವಂಚನೆಗಳು ಅಧಿಕವಾಗಿದೆ. ಇದು ತೀವ್ರ ಆತಂಕಕಾರಿ ಎಂದು ವರದಿಯು ಹೇಳಿದೆ. ಭಾರತದಲ್ಲಿ ಜನರು ತಮ್ಮ ATM, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ಆಧಾರ್ ಮತ್ತು PAN ಕಾರ್ಡ್ ವಿವರಗಳನ್ನು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಲೋಕಲ್ ಸರ್ಕಲ್ಸ್ ಒಂದು ಸಮೀಕ್ಷೆಯನ್ನು ನಡೆಸಿದೆ. ಇದು ದೇಶದ 393 ಜಿಲ್ಲೆಗಳಲ್ಲಿ ವಾಸಿಸುತ್ತಿರುವ 24,000 ಕ್ಕೂ ಹೆಚ್ಚು ಜನರ ಪ್ರತಿಕ್ರಿಯೆಗಳನ್ನು ಅಧ್ಯಯನ ಮಾಡಿದೆ. ಕೆಲವು ಮುಖ್ಯ ಅವಲೋಕನವನ್ನು ಮಾಡಿದೆ.
ತಜ್ಞರು ಹೀಗೆ ಹೇಳುತ್ತಾರೆ..
''ಎಟಿಎಂ ಪಿನ್ ಆಧಾರಿತ ಅಥವಾ ಒಟಿಪಿ ಆಧಾರಿತ ವೈಯಕ್ತಿಕ ಇಮೇಲ್ ಖಾತೆ, ಮೊಬೈಲ್‌ನಲ್ಲಿ ಸಂದೇಶಗಳು, ಅವರ ವೈಯಕ್ತಿಕ ಇಮೇಲ್ ಖಾತೆಗೆ ಫಿಶಿಂಗ್ ಮಾಡುವುದು ಹ್ಯಾಕರ್‌ಗಳು ಸೈಬರ್ ಅಪರಾಧ ಮಾಡಲು ಬಳಸಿಕೊಳ್ಳುವ ಸಾಮಾನ್ಯ ಮಾರ್ಗಗಳಲ್ಲಿ ಒಂದಾಗಿದೆ,'' ಎಂದು ಹಣಕಾಸು ತಜ್ಞರು ಹೇಳುತ್ತಾರೆ. ಆದಾಗ್ಯೂ, ಜನರು ತಮ್ಮ ಸೂಕ್ಷ್ಮ ವೈಯಕ್ತಿಕ ಹಣಕಾಸು ವಿವರಗಳಾದ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳು ಮತ್ತು ತಮ್ಮ ಎಟಿಎಂ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮಾಹಿತಿಯನ್ನು ತಮ್ಮ ಸ್ಮಾರ್ಟ್‌ಫೋನ್, ಇಮೇಲ್ ಅಥವಾ ಕಂಪ್ಯೂಟರ್‌ನಲ್ಲಿ ಸಂಗ್ರಹಿಸುವುದನ್ನು ಮುಂದುವರಿಸಿದ್ದಾರೆ. ಜನರು ಈ ರೀತಿಯಾಗಿ ತಮ್ಮ ಸ್ಮಾರ್ಟ್ ಫೋನ್‌ಗಳು, ಇಮೇಲ್ ಅಥವಾ ಕಂಪ್ಯೂಟರ್‌ನಲ್ಲಿ ತಮ್ಮ ಪಾಸ್‌ವರ್ಡ್‌ಗಳನ್ನು ಸಂಗ್ರಹ ಮಾಡಿ ಇರಿಸಿರುವುದು ಹ್ಯಾಕರ್‌ಗಳಿಗೆ ಜನರ ಖಾತೆಯಿಂದ ಹಣವನ್ನು ಎಗರಿಸಲು ಸುಲಭ ದಾರಿಯಾಗಿದೆ.
ಎಟಿಎಮ್ ಪಿನ್‌ಗಳನ್ನು ಕುಟುಂಬದೊಂದಿಗೆ ಹಂಚಿಕೊಳ್ಳುವವರು ಎಷ್ಟು?
ಸುಮಾರು 29 ಪ್ರತಿಶತದಷ್ಟು ಜನರು ತಮ್ಮ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಪಿನ್ ವಿವರಗಳನ್ನು ತಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಾರೆ. 4 ಪ್ರತಿಶತದಷ್ಟು ಜನರು 1 ಅಥವಾ ಹೆಚ್ಚಿನ ಕಚೇರಿ ಸಿಬ್ಬಂದಿಯನ್ನು ಮತ್ತು 2 ಪ್ರತಿಶತದಷ್ಟು ಜನರು ತಮ್ಮ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಪಿನ್ ವಿವರಗಳನ್ನು ಒಬ್ಬ ಅಥವಾ ಹೆಚ್ಚು ಆಪ್ತ ಸ್ನೇಹಿತರಿಗೆ ನೀಡಿದ್ದಾರೆ. ಆದಾಗ್ಯೂ, 65 ಪ್ರತಿಶತದಷ್ಟು ಜನರು ತಮ್ಮ ಎಟಿಎಂ ಅಥವಾ ಡೆಂಟ್/ಕ್ರೆಡಿಟ್ ಕಾರ್ಡ್ ವಿವರಗಳಿಗೆ ತಮಗೆ ಹೊರತುಪಡಿಸಿ ಬೇರೆ ಯಾರಿಗೂ ತಿಳಿದಿಲ್ಲ, ಬೇರೆ ಯಾರಿಗೂ ಈ ಮಾಹಿತಿಯನ್ನು ನೀಡಿಲ್ಲ ಎಂದು ಹೇಳಿದ್ದಾರೆ.
ಡೆಬಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಹೆಚ್ಚು ಡಿಜಿಟಲ್ ಪಾವತಿಗಳನ್ನು ಮಾಡುವ ಗುರಿಯನ್ನು ಹೊಂದಿ, ಆರ್‌ಬಿಐನ ಹೊಸ ನಿಯಮಗಳು ಡೆಬಿಟ್ ಮತ್ತು ಕ್ರೆಡಿಟ್ ಎರಡರ ಕಾರ್ಡುದಾರರು ವಹಿವಾಟು ಮಿತಿಗಳನ್ನು ನಿಗದಿಪಡಿಸುವುದನ್ನು ಕಡ್ಡಾಯಗೊಳಿಸಿದೆ.
ಗೌಪ್ಯ ಮಾಹಿತಿಯನ್ನು ಮೊಬೈಲ್‌ಗಳಲ್ಲಿ ಸಂಗ್ರಹ ಮಾಡುವವರು ಎಷ್ಟು?
ಪ್ರಬಲವಾದ ಪಾಸ್‌ವರ್ಡ್ ಅನ್ನು ರಚಿಸುವುದು ಸುಲಭ ಎಂದು ವರದಿಯು ಗಮನಿಸಿದೆ. ಆದರೆ ಅವುಗಳೆಲ್ಲವನ್ನೂ ನೆನಪನಲ್ಲಿ ಇಟ್ಟುಕೊಳ್ಳುವುದು ಬಹಳ ಕಷ್ಟ ಎಂದು ಕೂಡಾ ಇದೇ ಸಂದರ್ಭದಲ್ಲಿ ವರದಿಯು ಹೇಳಿದೆ. ಆದ್ದರಿಂದ ಸುಮಾರು 33 ಶೇಕಡ ಜನರು ತ್ಮಮ ಗೌಪ್ಯ ಮಾಹಿತಿಯಾದ ಪಾಸ್‌ವರ್ಡ್‌ಗಳನ್ನು ಪೋನ್, ಇಮೇಲ್, ಕಂಪ್ಯೂಟರ್‌ಗಳಲ್ಲಿ ಇರಿಸುತ್ತಾರೆ ಎಂದು ತಿಳಿಸಿದ್ದಾರೆ. ಇನ್ನು ಈ ಪೈಕಿ ಶೇಕಡ ಏಳರಷ್ಟು ಮಂದಿ ತಮ್ಮ ಗೌಪ್ಯ ಮಾಹಿತಿಯನ್ನು ಮೊಬೈಲ್‌ನಲ್ಲಿ ಇರಿಸಿದ್ದರೆ, ಇನ್ನು ಶೇಕಡ 15 ರಷ್ಟು ಮಂದಿ ತಮ್ಮ ಗೌಪ್ಯ ಮಾಹಿತಿಯನ್ನು ಇಮೇಲ್ ಅಥವಾ ಕಂಪ್ಯೂಟರ್‌ಗಳಲ್ಲಿ ಇರಿಸಿಕೊಳ್ಳುತ್ತಾರೆ. ಇನ್ನು ಶೇಕಡ ಏಳರಷ್ಟು ಮಂದಿ ಈ ಬಗ್ಗೆ ಮಾಹಿತಿ ನೀಡಲಾಗದು ಎಂದಿದ್ದಾರೆ. ಇನ್ನು ಶೇಕಡ 39 ರಷ್ಟು ಮಂದಿ ಈ ಮಾಹಿತಿಯನ್ನು ಪೇಪರ್‌ನಲ್ಲಿ ಬರೆದು ತಮ್ಮ ಬಳಿ ಇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು ಶೇಕಡ 21 ರಷ್ಟು ಮಂದಿ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದಾರೆ.
ಮೊಬೈಲ್ ಸಂಪರ್ಕ ವಿವರದಲ್ಲೂ ಇರಿಸುತ್ತಾರೆ ಪಾಸ್‌ವರ್ಡ್
ಲೋಕಲ್ ಸರ್ಕಲ್ಸ್ ನಲ್ಲಿ ಸಮುದಾಯದ ಚರ್ಚೆ ನಡೆಸಿದ ಸಂದರ್ಭದಲ್ಲಿ ಅನೇಕ ಜನರು ಬ್ಯಾಂಕಿಂಗ್ ಪಾಸ್‌ವರ್ಡ್ ಮತ್ತು ಎಟಿಎಂ, ಬ್ಯಾಂಕ್ ಖಾತೆ, ಇಮೇಲ್ ಇತ್ಯಾದಿಗಳ ವಿವರಗಳನ್ನು ಸಂಗ್ರಹಿಸಲು ತಮ್ಮ ಸ್ಮಾರ್ಟ್ ಫೋನ್ ನ ಸಂಪರ್ಕ ಪಟ್ಟಿಯನ್ನು ಅವಲಂಬಿಸಿದ್ದಾರೆ ಎಂದು ಸೂಚಿಸಿದ್ದಾರೆ. ಹೆಚ್ಚಿನ ಆನ್‌ಲೈನ್ ಅಪ್ಲಿಕೇಶನ್‌ಗಳು ಒಬ್ಬರ ಸಂಪರ್ಕ ಮತ್ತು ಸಂದೇಶಗಳನ್ನು ನೋಡಬೇಕಾದರೆ ಪಾಸ್‌ವರ್ಡ್ ಕೇಳುವ ಕಾರಣದಿಂದಾಗಿ ಈ ರೀತಿಯಾಗಿ ಪಾಸ್‌ವರ್ಡ್‌ಗಳನ್ನು ಮೊಬೈಲ್‌ನಲ್ಲೇ ಇರಿಸುವುದು ಅತ್ಯಂತ ಅಸುರಕ್ಷಿತ ಮಾರ್ಗ ಎಂದು ವರದಿಯು ಹೇಳಿದೆ.
ಹೆಚ್ಚಿನ ಆನ್‌ಲೈನ್ ಅಪ್ಲಿಕೇಶನ್‌ಗಳು ಒಬ್ಬರ ಸಂಪರ್ಕ ಮತ್ತು ಪಠ್ಯ ಸಂದೇಶಗಳನ್ನು ಪ್ರವೇಶಿಸಲು ಅನುಮತಿ ಕೇಳುವುದರಿಂದ ಅಂತಹ ರುಜುವಾತುಗಳನ್ನು ಸಂಗ್ರಹಿಸಲು ಇದು ಅತ್ಯಂತ ಅಸುರಕ್ಷಿತ ಮಾರ್ಗವಾಗಿದೆ ಎಂದು ವರದಿ ಹೇಳುತ್ತದೆ. ಸಮೀಕ್ಷೆಯಲ್ಲಿ 11 ಪ್ರತಿಶತದಷ್ಟು ನಾಗರಿಕರು ತಮ್ಮ ಮೊಬೈಲ್ ಫೋನ್‌ನ ಸಂಪರ್ಕ ಪಟ್ಟಿಯಲ್ಲಿ ಎಟಿಎಂ, ಬ್ಯಾಂಕ್ ಖಾತೆ, ಇಮೇಲ್ ಮತ್ತು ಇತರ ಆನ್‌ಲೈನ್ ಖಾತೆ ಪಾಸ್‌ವರ್ಡ್‌ಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications