Sukanya Samriddhi Yojana: ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನದ ಭಾಗವಾಗಿ, ಭಾರತ ಸರ್ಕಾರ ಪರಿಚಯಿಸಿರುವ ಸಣ್ಣ ಉಳಿತಾಯ ಠೇವಣಿ ಯೋಜನೆ ಎಂದರೆ ಸುಕನ್ಯಾ ಸಮೃದ್ಧಿ ಯೋಜನೆ. ಈ ಯೋಜನೆ ಹೆಣ್ಣು ಮಕ್ಕಳಿಗಾಗಿ ಇರುವಂತಹ ಸಣ್ಣ ಉಳಿತಾಯ ಯೋಜನೆ. ಈ ಯೋಜನೆಯ ಮೂಲಕ ಪೋಷಕರು ತಮ್ಮ ಮಗಳ ಭವಿಷ್ಯಕ್ಕಾಗಿ, ಉನ್ನತ ವ್ಯಾಸಂಗ ಅಥವಾ ಮದುವೆಗಾಗಿ ಹಣವನ್ನು ಉಳಿಸಲು ಇದು ಸಹಾಯ ಮಾಡುತ್ತದೆ.ಈ ಯೋಜನೆಯು ಹೆಚ್ಚಿನ ಬಡ್ಡಿದರವನ್ನು ಮಾತ್ರವಲ್ಲದೆ ತೆರಿಗೆ ರಹಿತ ಆದಾಯವನ್ನೂ ನೀಡುತ್ತದೆ , ಹೀಗಾಗಿ ಇದು ಹೆಣ್ಣು ಮಗುವಿನಿರುವ ಕುಟುಂಬಗಳಿಗೆ ಸುರಕ್ಷಿತ ಉಳಿತಾಯ ಆಯ್ಕೆಗಳಲ್ಲಿ ಒಂದಾಗಿದೆ. ಹಾಗಿದ್ರೆ ಸುಕನ್ಯಾ ಸಮೃದ್ಧಿ ಯೋಜನೆಯಿಂದಾಗಿ ಸಿಗುವ ಬಡ್ಡಿ ದರವೆಷ್ಟು..? ಏನೆಲ್ಲಾ ಪ್ರಯೋಜನಗಳಿವೆ ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ...
ಹೆಣ್ಣು ಮಕ್ಕಳ ಮುಂದಿನ ಭವಿಷ್ಯದ ಉಳಿತಾಯಕ್ಕಾಗಿ ಇರುವ ಸುಕನ್ಯಾ ಸಮೃದ್ಧಿ ಯೋಜನೆಯು ಸರ್ಕಾರ ಬೆಂಬಲಿತವಾದ ಯೋಗನೆಯಾಗಿದ್ದು,ಇಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಸುರಕ್ಷಿತ ಸಿಗುತ್ತದೆ. ಇದರಿಂದ ಹೆಚ್ಚಿನ ಬಡ್ಡಿ ದರಗಳುಗಳು ಸಹ ಸಿಗುತ್ತವೆ. ಏಪ್ರಿಲ್ ನಿಂದ ಜೂನ್ 2025 ರ ಮೂರು ತಿಂಗಳ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವು ಶೇ. 8.2ನಲ್ಲಿಯೇ ಉಳಿದಿದೆ. ಅಂದರೆ ಸರ್ಕಾರವು SSY ಯ ಬಡ್ಡಿದರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಸುಕನ್ಯಾ ಸಮೃದ್ಧಿ ಯೋಜನೆ(SSY)ಯ ಬಡ್ಡಿದರಗಳಲ್ಲಿ ಇಳಿಕೆಯನ್ನು ನಿರೀಕ್ಷಿಸಿದ್ದರೂ, ಸರ್ಕಾರವು ಯಾವುದೇ ದರ ಕಡಿತವನ್ನು ಮಾಡಿಲ್ಲ. ಆದ್ದರಿಂದ, ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ ಅಥವಾ ಯೋಜಿಸುತ್ತಿದ್ದರೆ, ಸಣ್ಣ ಉಳಿತಾಯ ಯೋಜನೆಗಳ ವಿಭಾಗದಲ್ಲಿ ಆದಾಯವು ಇನ್ನೂ ಅತ್ಯಧಿಕವಾಗಿದೆ.ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರಗಳನ್ನು ಪರಿಶೀಲಿಸಲಾಗಿದೆ. ಈ ತ್ರೈಮಾಸಿಕದಲ್ಲಿ, SSY ಸೇರಿದಂತೆ ಯಾವುದೇ ಯೋಜನೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಆದ್ದರಿಂದ ನಿಮ್ಮ ಹೂಡಿಕೆ ಸುರಕ್ಷಿತವಾಗಿರುತ್ತದೆ ಮತ್ತು ಉತ್ತಮ ಲಾಭವನ್ನು ಗಳಿಸುತ್ತಲೇ ಇರುತ್ತದೆ.
ಸುಕನ್ಯಾ ಸಮೃದ್ಧಿ (SSY)ನಲ್ಲಿ ನೀವು ಎಷ್ಟು ಠೇವಣಿ ಇಡಬಹುದು?
ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ನೀವು ಕೇವಲ 250 ರೂ.ಗಳಿಂದ ತಗೆಯಬಹುದು. ಅದನ್ನು ಸಕ್ರಿಯವಾಗಿಡಲು, ನೀವು ಪ್ರತಿ ವರ್ಷ ಕನಿಷ್ಠ 250 ರೂ.ಗಳನ್ನು ಠೇವಣಿ ಇಡಬೇಕು, ಆದರೆ ಪ್ರತಿ ವರ್ಷ ಠೇವಣಿ ಮಾಡಬಹುದಾದ ಗರಿಷ್ಠ ಮೊತ್ತ 1.5 ಲಕ್ಷ ರೂ.ಗಳು. ನಿಮ್ಮ ಬಜೆಟ್‌ಗೆ ಸೂಕ್ತವಾದ ಯಾವುದೇ ಸಮಯದಲ್ಲಿ ಅಥವಾ ವರ್ಷವಿಡೀ ಸಣ್ಣ ಮೊತ್ತದಲ್ಲಿ ಠೇವಣಿ ಇಡಲು ನೀವು ಆಯ್ಕೆ ಮಾಡಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನಗಳೇನು..?
ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಖಾತೆಗೆ ಹಾಕುವ ಹಣವು ಪ್ರತಿ ವರ್ಷ ಬಡ್ಡಿಯನ್ನು ಗಳಿಸುತ್ತದೆ ಮತ್ತು ಆ ಬಡ್ಡಿಯನ್ನು ನಿಮ್ಮ ಬ್ಯಾಲೆನ್ಸ್‌ಗೆ ಸೇರಿಸಲಾಗುತ್ತದೆ. ಬಡ್ಡಿ ಮತ್ತು ಮುಕ್ತಾಯದ ಸಮಯದಲ್ಲಿ ನೀವು ಪಡೆಯುವ ಒಟ್ಟು ಮೊತ್ತ ಎರಡೂ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿವೆ. SSY ಅಡಿಯಲ್ಲಿ ಮಾಡಿದ ಹೂಡಿಕೆಗಳು ಸೆಕ್ಷನ್ 80C ಅಡಿಯಲ್ಲಿ ಕಡಿತಗಳಿಗೆ ಅರ್ಹವಾಗಿವೆ, ಆದರೂ ಒಬ್ಬರು ಗರಿಷ್ಠ 1.5 ಲಕ್ಷ ರೂ.ಗಳವರೆಗೆ ಲಾಭವನ್ನು ಪಡೆಯಬಹುದು.
ಸುಕನ್ಯಾ ಸಮೃದ್ಧಿ ಖಾತೆ ಯಾವಾಗ ಪೂರ್ಣಗೊಳ್ಳುತ್ತದೆ?
ಖಾತೆ ತೆರೆದ ದಿನಾಂಕದಿಂದ 21 ವರ್ಷಗಳ ನಂತರ ಪೂರ್ಣಗೊಳ್ಳತ್ತದೆ. ಆ ಸಮಯದಲ್ಲಿ, ನೀವು ಗಳಿಸಿದ ಬಡ್ಡಿಯೊಂದಿಗೆ ಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ನಿಮ್ಮ ಮಗಳಿಗೆ 18 ವರ್ಷ ತುಂಬಿದ ನಂತರ ಮದುವೆಯಾದರೆ, ಖಾತೆಯನ್ನು ಮೊದಲೇ ಕ್ಲೋಸ್ ಸಹ ಮಾಡಿಸಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ಸಣ್ಣ ಉಳಿತಾಯವನ್ನು ಮಾಡಿದ್ರೆ ನಿಮ್ಮ ಮಗಳು ಮುಂದಿನ ಭವಿಷ್ಯ ಉತ್ತಮವಾಗಿರಲು ಆರ್ಥಿಕ ಅನುಕೂಲ ಇದರ ಮೂಲಕ ಸಿಗುತ್ತದೆ.
More From GoodReturns

Savings Tips: ತಿಂಗಳಿಗೆ 1000 ಹೂಡಿಕೆ ಮಾಡಿ, 4 ಲಕ್ಷ ಲಾಭ ಪಡೆಯಿರಿ! ಇದರಲ್ಲಿ ಮಾತ್ರ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!



Click it and Unblock the Notifications