Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆಯನ್ನು ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನದ ಭಾಗವಾಗಿ,ಭಾರತ ಸರ್ಕಾರ ಪರಿಚಯಿಸಿರುವ ಸಣ್ಣ ಉಳಿತಾಯ ಠೇವಣಿಯಾಗಿದೆ. ಯೋಜನೆ ಹೆಣ್ಣು ಮಕ್ಕಳಿಗಾಗಿ ಇರುವಂತಹ ಸಣ್ಣ ಉಳಿತಾಯ ಯೋಜನೆಯಾಗಿದೆ. ಹೆಣ್ಣು ಮಕ್ಕಳ ಮುಂದಿನ ಭವಿಷ್ಯದ ಉಳಿತಾಯಕ್ಕಾಗಿ ಇರುವ ಸುಕನ್ಯಾ ಸಮೃದ್ಧಿ ಯೋಜನೆಯು ಸರ್ಕಾರ ಬೆಂಬಲಿತವಾದ ಯೋಜನೆಯಾಗಿದೆ. 2025ರ ಜುಲೈ,ಸೆಪ್ಟೆಂಬರ್ ತಿಂಗಳಸುಕನ್ಯಾ ಸಮೃದ್ಧಿ ಯೋಜನೆ (SSY) ಖಾತೆ ಬಡ್ಡಿ ದರವನ್ನು ಸರ್ಕಾರ ಘೋಷನೆಯನ್ನು ಮಾಡಿದೆ. ಬಡ್ಡಿದರ ಎಷ್ಟು ಹೆಚ್ಚಳವಾಗಿದೆ ಎಂಬ ಹೆಚ್ಚಿನ ವಿವರ ಇಲ್ಲಿದೆ.

ಹೌದು, ಸುಕನ್ಯಾ ಸಮೃದ್ಧಿ ಯೋಜನೆಯ ಮೂಲಕ ಪೋಷಕರು ತಮ್ಮ ಮಗಳ ಭವಿಷ್ಯಕ್ಕಾಗಿ, ಉನ್ನತ ವ್ಯಾಸಂಗ ಅಥವಾ ಮದುವೆಗಾಗಿ ಹಣವನ್ನು ಉಳಿಸಲು ಇದು ಸಹಾಯ ಮಾಡುತ್ತದೆ.ಈ ಯೋಜನೆಯು ಹೆಚ್ಚಿನ ಬಡ್ಡಿದರವನ್ನು ಮಾತ್ರವಲ್ಲದೆ ತೆರಿಗೆ ರಹಿತ ಆದಾಯವನ್ನು ಮಾಡುತ್ತದೆ. ಹೀಗಾಗಿ ಇದು ಹೆಣ್ಣು ಮಗುವಿನಿರುವ ಕುಟುಂಬಗಳಿಗೆ ಸುರಕ್ಷಿತ ಉಳಿತಾಯ ಆಯ್ಕೆಗಳಲ್ಲಿ ಒಂದಾಗಿದೆ.ಈ ಯೋಜನೆ ಮೂಲಕ ನಿಮ್ಮ ಮಕ್ಕಳ ಭವಿಷ್ಯಕ್ಕೆ ಹೂಡಿಕೆ ಮಾಡುವುದರಿಂದ ಹೆಚ್ಚಿನ ಸುರಕ್ಷಿತ ಸಿಗುತ್ತದೆ. ಏಪ್ರಿಲ್ ನಿಂದ ಜೂನ್ 2025 ರ ಮೂರು ತಿಂಗಳ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವು ಶೇ. 8.2 ನಲ್ಲಿಯೇ ಉಳಿದಿದೆ. ಅಂದರೆ ಸರ್ಕಾರವು SSY ಯ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯನ್ನು ಕಂಡಿಲ್ಲ.
ಸುಕನ್ಯಾ ಸಮೃದ್ಧಿ ಯೋಜನೆ (SSY) ಖಾತೆ ಬಡ್ಡಿ ದರ ಜುಲೈ-ಸೆಪ್ಟೆಂಬರ್ 2025
ಹಣಕಾಸು ಸಚಿವಾಲಯವು 2025-26ನೇ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಸುಕನ್ಯಾ ಸಮೃದ್ಧಿ ಯೋಜನೆ (SSY) ಖಾತೆ ಬಡ್ಡಿ ದರವನ್ನು ಪ್ರಕಟಿಸಿದ್ದು,ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ.
ಸುಕನ್ಯಾ ಸಮೃದ್ಧಿ ಯೋಜನೆ (SSY)ಯಲ್ಲಿ ಯಾರು ಹೂಡಿಕೆ ಮಾಡಬಹುದು?
ಸುಕನ್ಯಾ ಸಮೃದ್ಧಿ ಯೋಜನೆ (SSY) ಖಾತೆಯನ್ನು ತೆರೆಯಲು ಕೆಲವು ನಿಯಮಗಳಿವೆ. ಆ ನಿಯಮಗಳು ಈ ಕೆಳಗಿನಂತೆ ಇವೆ.
- ಸರ್ಕಾರದ ನಿಯಮಗಳ ಪ್ರಕಾರ,ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೆಣ್ಣು ಮಗುವಿನ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ಅಥವಾ ಯಾವುದೇ ಬ್ಯಾಂಕಿನಲ್ಲಿ ಕೇವಲ ಒಂದು SSY ಖಾತೆಯನ್ನು ಮಾತ್ರ ತೆರೆಯಲು ಅವಕಾಶವಿದೆ.
- ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತರೆಯಲು ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಮಾತ್ರ ಅವಕಾಶವಿದೆ. ಅವಳಿ ಅಥವಾ ತ್ರಿವಳಿ ಹೆಣ್ಣು ಮಕ್ಕಳು ಜನಿಸಿದರೆ, ಆ ಸಂದರ್ಭದಲ್ಲಿ ಇಬ್ಬರಿಗಿಂತ ಹೆಚ್ಚು ಖಾತೆಗಳನ್ನು ತೆರೆಯಲು ಅವಕಾಶವಿದೆ.
- ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರಸ್ತುತ ವಾರ್ಷಿಕವಾಗಿ ಶೇ. 8.2ರಷ್ಟು ಬಡ್ಡಿ ಸಿಗಲಾಗುತ್ತದೆ. ಒಂದು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 1.5 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಈ ಖಾತೆಯು ಮುಕ್ತಾಯಗೊಂಡ ನಂತರ ಹಿಂಪಡೆಯುವ ಹಣಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.
ಸುಕನ್ಯಾ ಸಮೃದ್ಧಿ(SSY) ಖಾತೆಯ ನಿರೀಕ್ಷೆಗಳು ಏನು ಇದ್ದವು..?
ಏಪ್ರಿಲ್ 1, 2024ರಿಂದ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವು ಶೇ. 8.2ರಲ್ಲಿ ಯಾವುದೇ ಬದಲಾವಣೆಯಿಲ್ಲದೆ ಮುಂದುವರಿದಿದೆ.ಈ ಹಿಂದೆ, ಹೆಣ್ಣು ಮಕ್ಕಳಿಗಾಗಿ ಇರುವ ಈ ಉಳಿತಾಯ ಯೋಜನೆಯ ಬಡ್ಡಿದರದಲ್ಲಿ ಹಾಗೂ ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಜೂನ್ 30ರಂದು ಕಡಿತವಾಗಬಹುದು ಎಂದು ನಿರೀಕ್ಷೆ ಕೂಡ ಇರುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ರೆಪೊ ದರವನ್ನು 100 ಬೇಸಿಸ್ ಪಾಯಿಂಟ್‌ಗಳಷ್ಟು (ಶೇ.1) ಕಡಿಮೆ ಮಾಡುವ ನಿರ್ಧಾರ ತೆಗೆದುಕೊಂಡ ನಂತರ ಜನವರಿ 2025ರಿಂದ G-Securities ಇಳುವರಿ ಕುಸಿದಿದೆ. ಹೀಗಾಗಿ, ಸರ್ಕಾರವು SSY ಬಡ್ಡಿದರವನ್ನು ಕಡಿಮೆ ಮಾಡಲು ಇದು ಒಂದು ಪ್ರಮುಖ ಕಾರಣವಾಗಬಹುದೆಂದು ಎಂಬ ನಿರೀಕ್ಷೆಗಳು ಇದ್ದವು.
ಸರ್ಕಾರವು ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಹಣಕಾಸು ಸಚಿವಾಲಯವು SSY ಬಡ್ಡಿದರವನ್ನು ಬದಲಿಸದೆ ಮುಂದುವರಿಸಬಹುದು ಎಂಬ ನಿರೀಕ್ಷೆ ಕೂಡ ಇತ್ತು.
ಒಟ್ಟಾರೆಯಾಗಿ ಹೇಳುವುದಾರೆ ಚಿಕ್ಕ ಮಯಸ್ಸಿನ ಹೆಣ್ಣು ಮಗುವಿನ ಹೆಸರಲ್ಲಿ ಹೂಡಿಕೆ ಮಾಡುವುದರಿಂದ ಅವರು ಮುಂದಿನ ಭವಿಷ್ಯ ಆರ್ಥೀಕವಾಗಿ ಸದೃಡವಾಗಿ ಇರುತ್ತದೆ.


Click it and Unblock the Notifications