ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ: 15,000 ಹೂಡಿಕೆ ಮಾಡಿ 50,000 ಪಿಂಚಣಿ ಪಡೆಯಿರಿ

ನೀವು ನಿವೃತ್ತಿ ಹೊಂದುತ್ತಿರುವಿರಾ? ನಿವೃತ್ತಿ ಬಳಿಕ ಮುಂದೇನು? ಎಂಬ ಗೊಂದಲ ಇದ್ಯಾ? ಇದಕ್ಕೆ ಉತ್ತರ ಇಲ್ಲಿದೆ. ನಿವೃತ್ತಿಯ ನಂತರ ದೊಡ್ಡ ಪಿಂಚಣಿ ಪಡೆಯುವ ಅವಕಾಶ ಇದೆ. ಹೌದು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ನಿಮಗೆ ಉತ್ತಮ ಆಯ್ಕೆಯಾಗಿದೆ. 40ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿವೃತ್ತಿ ಬಳಿಕ ಪ್ರತಿ ತಿಂಗಳು 50 ಸಾವಿರ ಪಿಂಚಣಿ ಪಡೆಯಬಹುದು. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ:

ಸಾಕಷ್ಟು ಜನರಿಗೆ ನಿವೃತ್ತಿಯ ಮೇಲೆ ನಿಯಮಿತ ಆದಾಯದ ಅಗತ್ಯವಿರುತ್ತದೆ. ನಿಯಮಿತ ಆದಾಯಕ್ಕಾಗಿ, ಜನರು ಈಗಾಗಲೇ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ವಿಶೇಷವಾಗಿ ಹೆಚ್ಚಿನ ಜನರು ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ನಿಮ್ಮ ನಿವೃತ್ತಿಯ ನಂತರ ನೀವು ಭಾರಿ ಪಿಂಚಣಿ ಪಡೆಯಲು ಬಯಸಿದರೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ನಿಮಗೆ ಉತ್ತಮವಾದ ಆಯ್ಕೆಯಾಗಿದೆ.

ಸಿಹಿ ಸುದ್ದಿ! 15,000 ಹೂಡಿಕೆ ಮಾಡಿ 50,000 ಪಿಂಚಣಿ ಪಡೆಯಿರಿ: ಹೇಗೆ?

ಈ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಸರ್ಕಾರಿ ಯೋಜನೆಯಾಗಿದೆ,ಇದು ಮಾರುಕಟ್ಟೆಗೆ ಲಿಂಕ್ ಆಗಿದೆ ಅಂದರೆ ಅದರ ಆದಾಯವು ಮಾರುಕಟ್ಟೆಯನ್ನು ಆಧರಿಸಿದೆ. ನಿವೃತ್ತಿ ಯೋಜನೆಗೆ ಸಂಬಂಧಿಸಿದಂತೆ ಈ ಯೋಜನೆಯು ಬಹಳ ಜನಪ್ರಿಯವಾಗಿದೆ. ಈ ಯೋಜನೆಯು ನಿಮಗೆ ಪಿಂಚಣಿಯ ಲಾಭವನ್ನು ನೀಡುತ್ತದೆ ಜೊತೆಗೆ ದೊಡ್ಡ ಮೊತ್ತವನ್ನು ಸಹ ನೀಡುತ್ತದೆ.

ನೀವು 40 ವರ್ಷ ವಯಸ್ಸಿನವರಾಗಿದ್ದರೆ ಮತ್ತು ನೀವು ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ 50 ಸಾವಿರ ಪಿಂಚಣಿ ಪಡೆಯಲು ನೀವು ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಬೇಕು? ಎಂಬುವುದನ್ನು ತಿಳಿಯೋಣ ಬನ್ನಿ

ಯಾರು ಹೂಡಿಕೆ ಮಾಡಬಹುದು?

NPS ನಿಮಗಾಗಿ ಒಂದು ಉತ್ತಮ ಯೋಜನೆಯಾಗಿದೆ. 18 ರಿಂದ 70 ವರ್ಷಗಳ ನಡುವಿನ ಯಾವುದೇ ನಾಗರಿಕರು ಸಹ ಹೂಡಿಕೆ ಮಾಡಬಹುದು. ಎನ್‌ಪಿಎಸ್‌ನಲ್ಲಿ ನೀವು ಯಾವುದೇ ಕೊಡುಗೆ ನೀಡಿದರೂ, ಆ ಹಣವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ನಿವೃತ್ತಿಯ ನಂತರ, ನೀವು ಮೊತ್ತದ 60 ಪ್ರತಿಶತವನ್ನು ಒಟ್ಟು ಮೊತ್ತವಾಗಿ ತೆಗೆದುಕೊಳ್ಳಬಹುದು ಮತ್ತು 40 ಪ್ರತಿಶತವು ವರ್ಷಾಶನಕ್ಕೆ ಹೋಗುತ್ತದೆ. ಈ ವರ್ಷಾಶನ ಮೊತ್ತದಿಂದ ನಿಮ್ಮ ಪಿಂಚಣಿಯನ್ನು ಸಿದ್ಧಪಡಿಸಲಾಗಿದೆ. ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತದೆ.

ಮಾಸಿಕ 50,000 ಪಿಂಚಣಿ ಪಡೆಯುವುದು ಹೇಗೆ?

ನೀವು 40 ನೇ ವಯಸ್ಸಿನಲ್ಲಿ 50,000 ರೂಪಾಯಿಗಳ ಮಾಸಿಕ ಪಿಂಚಣಿ ಪಡೆಯಲು ಬಯಸಿದರೆ, ನೀವು NPM ನಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಗುರಿಯನ್ನು ಮುಟ್ಟಬಹುದು.ಇದಕ್ಕಾಗಿ ನೀವು ಉತ್ತಮ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ. ನೀವು 40 ನೇ ವಯಸ್ಸಿನಲ್ಲಿ ತಿಂಗಳಿಗೆ ಕನಿಷ್ಠ 15,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ ಮತ್ತು ನೀವು 65 ವರ್ಷ ವಯಸ್ಸಿನವರೆಗೆ ಈ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಅಂದರೆ 25 ವರ್ಷಗಳವರೆಗೆ ಮಾಸಿಕ 15,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

ಲೆಕ್ಕಾಚಾರದ ಪ್ರಕಾರ, ನೀವು ಒಟ್ಟು 45 ಲಕ್ಷ ರೂ. ಈ ಮೊತ್ತದ ಮೇಲೆ ನೀವು ಶೇ.10 ರ ದರದಲ್ಲಿ ಬಡ್ಡಿಯನ್ನು ಪಡೆದರೆ, ನೀವು ಬಡ್ಡಿಯಿಂದ 1,55,68,356 ರೂಗಳನ್ನು ಪಡೆಯುತ್ತೀರಿ. ಇದರ ಪ್ರಕಾರ, 45,00,000 + 1,55,68,356 = 2,00,68,356 ರೂ.ಗಳ ಕಾರ್ಪಸ್ ಅನ್ನು ಸಿದ್ಧಪಡಿಸಲಾಗುತ್ತದೆ.

ಈ ಮೊತ್ತದ ಶೇ.60ರಷ್ಟು ಅಂದರೆ 1,20,41,013 ರೂ.ಗಳನ್ನು ಒಟ್ಟು ಮೊತ್ತವಾಗಿ ಪಡೆಯಲಾಗುವುದು. ಉಳಿದ ಶೇ.40ರಷ್ಟು ಅಂದರೆ ರೂ 80,27,342 ವರ್ಷಾಶನಕ್ಕೆ ಹೋಗುತ್ತದೆ. ಈ ಮೊತ್ತದ ಮೇಲೆ 8 ಪ್ರತಿಶತದಷ್ಟು ಆದಾಯವನ್ನು ನಾವು ಊಹಿಸಿದರೆ, ಮಾಸಿಕ ಪಿಂಚಣಿ 53,516 ರೂಪಾಯಿಗಳು ಸಿಗುತ್ತಾವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+