ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಆದ ಸ್ವಿಗ್ಗಿ ಆಹಾರ ಆರ್ಡರ್‌ಗಳಿಗೆ ಪ್ಲಾಟ್‌ಫಾರ್ಮ್ ಶುಲ್ಕವನ್ನು ಏರಿಕೆ ಮಾಡಿದೆ. ಈ ಹಿಂದೆ ಪ್ಲಾಟ್‌ಫಾರ್ಮ್ ಶುಲ್ಕ ಎರಡು ರೂಪಾಯಿ ಆಗಿದ್ದು, ಅದನ್ನು ಈಗ ಹೆಚ್ಚಿಸಲಾಗಿದೆ. ಉದ್ಯಮದಲ್ಲಿನ ಸೇವೆ ನಿರ್ವಹಣೆ, ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಈ ಬದಲಾವಣೆಗೆ ಅವಶ್ಯಕವಾಗಿದೆ ಎಂದು ವಕ್ತಾರರು ಹೇಳಿದ್ದಾರೆ.
ಪ್ಲಾಟ್‌ಫಾರ್ಮ್ ಶುಲ್ಕ ಹೆಚ್ಚಳವು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿಂದೆ ತಮ್ಮ ಆಹಾರ ಆರ್ಡರ್‌ಗಳಿಗೆ ಪಾವತಿ ಮಾಡುತ್ತಿದ್ದ ಮೊತ್ತಕ್ಕಿಂತ ಅಧಿಕ ಹಣವನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ. ಆಗಾಗ್ಗೆ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವವರಿಗೆ ಇದು ಹೆಚ್ಚಿನ ಪ್ರಭಾವ ಬೀರಲಿದೆ.

ನೂತನ ಪ್ಲಾಟ್‌ಫಾರ್ಮ್ ಶುಲ್ಕ ಎಷ್ಟಿದೆ?
ಈ ಹಿಂದೆ ಸ್ವಿಗ್ಗಿಯಲ್ಲಿ ಪ್ಲಾಟ್‌ಫಾರ್ಮ್ ಶುಲ್ಕ ಎರಡು ರೂಪಾಯಿ ಆಗಿತ್ತು. ಆದರೆ "ನಾವು ಕಾರ್ಯನಿರ್ವಹಿಸುತ್ತಿರುವ ಬಹುತೇಕ ನಗರಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕ ಇದೀಗ ಮೂರು ರೂಪಾಯಿ ಆಗಿದೆ," ಎಂದು ವಕ್ತಾರರು ತಿಳಿಸಿದ್ದಾರೆ.
ಆಹಾರ ವಿತರಣೆಗೆ ಪ್ಲಾಟ್‌ಫಾರ್ಮ್ ಶುಲ್ಕ
ಪ್ರಮುಖವಾಗಿ ಪ್ಲಾಟ್‌ಫಾರ್ಮ್ ಶುಲ್ಕವು ಸ್ವಿಗ್ಗಿಯ ಆಹಾರ ವಿತರಣಾ ಸೇವೆಗೆ ಮಾತ್ರ ಅನ್ವಯಿಸುತ್ತದೆ. ಇನ್‌ಸ್ಟಾಮಾರ್ಟ್ ಆರ್ಡರ್‌ಗಳಿಗೆ ಅಲ್ಲ. ಏಪ್ರಿಲ್‌ನಲ್ಲಿ, ಕಂಪನಿಯು ಕಾರ್ಟ್ ಮೌಲ್ಯವನ್ನು ಲೆಕ್ಕಿಸದೆ ಪ್ರತಿ ಆರ್ಡರ್‌ಗೆ ಎರಡು ರೂಪಾಯಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿತು. ಆಗಸ್ಟ್‌ನಲ್ಲಿ, ಸ್ವಿಗ್ಗಿ ಪ್ರತಿಸ್ಪರ್ಧಿ ಜೊಮ್ಯಾಟೊ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪ್ರತಿ ಆರ್ಡರ್‌ಗೆ 2 ರೂಪಾಯಿಯಿಂದ 3 ರೂಪಾಯಿಗೆ ಹೆಚ್ಚಿಸಿದೆ.
ಜೊಮ್ಯಾಟೊ ಗೋಲ್ಡ್ ಬಳಕೆದಾರರಿಗೆ ಪ್ಲಾಟ್‌ಫಾರ್ಮ್ ಶುಲ್ಕ
ಈ ಹಿಂದೆ ವಿನಾಯಿತಿ ಪಡೆದಿದ್ದ ಜೊಮ್ಯಾಟೊ ಗೋಲ್ಡ್ ಬಳಕೆದಾರರಿಗೆ ಜೊಮ್ಯಾಟೊ ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದೆ. ಈ ನಡುವೆ ಸ್ವಿಗ್ಗಿ ತನ್ನ ಬಂಡವಾಳ ಸಹಾಯ ಕಾರ್ಯಕ್ರಮದ ಭಾಗವಾಗಿ 8,000 ಕ್ಕೂ ಹೆಚ್ಚು ರೆಸ್ಟೋರೆಂಟ್ ಮಾಲೀಕರಿಗೆ 450 ಕೋಟಿ ರೂಪಾಯಿಗಿಂತ ಹೆಚ್ಚಿನ ಸಾಲ ವಿತರಣೆಯನ್ನು ಸುಗಮಗೊಳಿಸಿದೆ.
2017 ರಲ್ಲಿ ಪ್ರಾರಂಭಿಸಲಾದ ಬಂಡವಾಳ ಸಹಾಯ ಕಾರ್ಯಕ್ರಮವು ಹಣಕಾಸಿನ ಅಂತರವನ್ನು ಕಡಿಮೆ ಮಾಡಲು ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಅಧಿಕಾರ ನೀಡಲು ಆರಂಭಿಸಿದ ಕಾರ್ಯಕ್ರಮವಾಗಿದೆ. 8,000 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಇಲ್ಲಿಯವರೆಗೆ ಸಾಲವನ್ನು ಪಡೆದಿವೆ. ಅದರಲ್ಲಿ 2022 ರಲ್ಲಿಯೇ 3,000 ರೆಸ್ಟೋರೆಂಟ್‌ಗಳು ಸಾಲವನ್ನು ಪಡೆದುಕೊಂಡಿವೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಸ್ವಿಗ್ಗಿ ಬಿರಿಯಾನಿ ಆರ್ಡರ್ ಏರಿಕೆ
ಈ ಹಿಂದೆಯೂ ಸ್ವಿಗ್ಗಿಯಲ್ಲಿ ದಾಖಲೆ ಮಟ್ಟದಲ್ಲಿ ಬಿರಿಯಾನಿ ಆರ್ಡರ್ ಮಾಡಲಾಗಿದೆ. ಈಗ ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೇಳೆ ಸ್ವಿಗ್ಗಿ ಬಿರಿಯಾನಿ ಆರ್ಡರ್‌ಗಳಲ್ಲಿ ಏರಿಕೆ ಕಂಡಿದೆ. ಚಂಡೀಗಢದ ಒಂದು ಕುಟುಂಬವು ಏಕಕಾಲದಲ್ಲಿ 70 ಬಿರಿಯಾನಿಗಳನ್ನು ಆರ್ಡರ್ ಮಾಡಿದೆ.
ಮುಖ್ಯವಾಗಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಸಮಯದಲ್ಲಿ, ಆನ್‌ಲೈನ್ ಆಹಾರ ಆರ್ಡರ್ ಮತ್ತು ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಬಿರಿಯಾನಿಯ ಆರ್ಡರ್‌ಗಳಲ್ಲಿ ಏರಿಕೆ ಕಂಡಿತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ವಿಗ್ಗಿ ನೆಟ್ಟಿಗರಿಗೆ ಮಾಹಿತಿ ನೀಡಿದೆ. ಇನ್ನು ಚಂಡೀಗಢದ ಕುಟುಂಬದ ಬಿರಿಯಾನಿ ಆರ್ಡರ್ ಪೋಸ್ಟ್ ವೈರಲ್ ಆಗಿದ್ದು ಅನೇಕ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಸ್ವಿಗ್ಗಿಯಲ್ಲಿ ಇಡ್ಲಿ ಆರ್ಡರ್!
ಪ್ರತಿ ವರ್ಷವು ಮಾರ್ಚ್ 30 ಅನ್ನು ಅಂತಾರಾಷ್ಟ್ರೀಯ ಇಡ್ಲಿ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಪ್ರಮುಖ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿ ಅಧ್ಯಯನವೊಂದನ್ನು ಪ್ರಕಟಿಸಿದೆ. ಸ್ವಿಗ್ಗಿಯಲ್ಲಿ ಒಂದು ವರ್ಷದ ಅವಧಿಯಲ್ಲಿ ಫುಡ್ ಅನ್ನು ಆರ್ಡರ್ ಮಾಡಿದ ಬಗ್ಗೆ ವಿವರಣೆಯನ್ನು ಸ್ವಿಗ್ಗಿ ನೀಡಿದೆ. ಈ ಡೇಟಾದಲ್ಲಿ ಅಪರೂಪದ, ವಿಲಕ್ಷಣ ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಅತೀ ಡಿಮ್ಯಾಂಡ್‌ನಲ್ಲಿರುವ ಈ ಆನ್‌ಲೈನ್ ಸೇವೆಯನ್ನು ನೀಡುವ ಸಂಸ್ಥೆಯು ಭಾರತದಲ್ಲಿ ಇಡ್ಲಿಯ ಜನಪ್ರಿಯತೆಯನ್ನು ನಿರ್ಧರಿಸಲು ಅದರ ಡೇಟಾವನ್ನು ವಿಶ್ಲೇಷನೆ ಮಾಡಿದೆ. ಈ ಡೇಟಾದಲ್ಲಿ ಹೊರಬಂದ ಮಾಹಿತಿಯು ಜನರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ವರದಿಗಳ ಪ್ರಕಾರ, ಭಾರತವು ಹಿಂದಿನ ವರ್ಷದಲ್ಲಿ ಸ್ವಿಗ್ಗಿ ಮೂಲಕ ಸುಮಾರು 33 ಮಿಲಿಯನ್ ಪ್ಲೇಟ್‌ಗಳ ಇಡ್ಲಿಯನ್ನು ಆರ್ಡರ್ ಮಾಡಿದೆ. ವ್ಯಕ್ತಿಯೋರ್ವ ಒಂದು ವರ್ಷದಲ್ಲಿಯೇ 6 ಲಕ್ಷ ರೂಪಾಯಿ ಮೌಲ್ಯದ ಇಡ್ಲಿಯನ್ನು ಆರ್ಡರ್ ಮಾಡಿದ್ದಾರೆ ಎಂದು ಡೇಟಾ ಉಲ್ಲೇಖಿಸಿದೆ.


Click it and Unblock the Notifications