ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Bangalore Chinnaswamy Stadium) ಭಾರತ ಮತ್ತು ಆಫ್ಘಾನಿಸ್ತಾನ (IND vs AFG t20) ನಡುವಿನ 3ನೇ ಟಿ20 ಕ್ರಿಕೆಟ್ ಪಂದ್ಯ ಜನವರಿ 17ರ ಬುಧವಾರ ನಡೆಯಲಿದೆ. ಈ ಪಂದ್ಯಕ್ಕೆ ಬರುವ ಕ್ರಿಕೆಟ್ ಪ್ರಿಯರಿಗೆ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವ ಪ್ರಯತ್ನವನ್ನು ಬಿಎಂಟಿಸಿ, ನಮ್ಮ ಮೆಟ್ರೋ ಮಾಡುತ್ತಿದೆ.
ಈಗಾಗಲೇ ಕ್ರಿಕೆಟ್ ಪ್ರಿಯರು ಮರಳಿ ಮನೆಗಳಿಗೆ ವಾಪಸ್ ಹೋಗುವಾಗ ಸಂಚಾರದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಲು ಬಿಎಂಟಿಸಿ ಜನವರಿ 17 ರಂದು ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದ ಕಾರಣ ಭಾನುವಾರ ಮೆಟ್ರೋ ರೈಲುಗಳು ಅವಧಿಯನ್ನು ವಿಸ್ತಾರ ಮಾಡಲಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಮೆಟ್ರೋ ಸಂಚಾರ ಅವಧಿ ವಿಸ್ತರಣೆ
ಜನವರಿ 17ರಂದು ಬೆಂಗಳೂರಿನಲ್ಲಿ ನಡೆಯಲಿರುವ ಟಿ 20 ಕ್ರಿಕೆಟ್ ಪಂದ್ಯದ ಪ್ರಯುಕ್ತ ಬಿಎಂಆರ್‌ಸಿಎಲ್ ನೇರಳೆ ಹಾಗೂ ಹಸಿರು ಮಾರ್ಗದಲ್ಲಿನ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ರೈಲು ಸೇವೆಗಳನ್ನು ರಾತ್ರಿ 11:45 ಗಂಟೆಯವರೆಗೆ ವಿಸ್ತರಿಸಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ದಿನಾಂಕ 17 ಜನವರಿಯ ಬುಧವಾರ ಮಧ್ಯಾಹ್ನ 2 ಗಂಟೆಯಿಂದ ಮಾರಾಟ ಮಾಡಲಾಗುತ್ತದೆ. ಈ ಕಾಗದದ ಟಿಕೆಟ್‌ಗಳು ರಾತ್ರಿ 8 ಗಂಟೆಯಿಂದ ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ದಿನದ ವಿಸ್ತೃತ ಅವಧಿಯಲ್ಲಿ ಪ್ರಯಾಣಿಸಲು ಮಾತ್ರ ಬಳಸಬಹುದಾಗಿದೆ.
50 ರೂಪಾಯಿ ಪೇಪರ್ ಟಿಕೆಟ್ ಜೊತೆಗೆ ಸಾಮಾನ್ಯ ದರದಲ್ಲಿ ಶೇಕಡ 5 ರಷ್ಟು ರಿಯಾಯಿತಿಯಲ್ಲಿ ಕ್ಯೂಆರ್ ಕೋಡ್ ಟಿಕೆಟ್‌ಗಳು, ಪಂದ್ಯದ ದಿನದಂದು ಖರೀದಿಸಿದರೆ ಇಡೀ ದಿನಕ್ಕೆ ಈ ಟಿಕೆಟ್ ಮಾನ್ಯವಾಗಿರುತ್ತದೆ. ಅನುಕೂಲಕರ ಪ್ರಯಾಣಕ್ಕಾಗಿ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ ವಾಟ್ಸಾಪ್, ನಮ್ಮ ಮೆಟ್ರೋ ಆಪ್, ಪೇಟಿಎಂ ನಲ್ಲಿ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಬಹುದು. ಸ್ಮಾರ್ಟ್ ಕಾರ್ಡ್‌ಗಳು ಮತ್ತು ಎನ್‌ಸಿಎಂಸಿ ಕಾರ್ಡ್‌ಗಳನ್ನು ಸಹ ಎಂದಿನಂತೆ ಬಳಕೆ ಮಾಡಬಹುದು.
ವಿಸ್ತೃತ ಸಮಯದಲ್ಲಿ ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಪೇಪರ್ ಟಿಕೆಡ್‌ಗಳನ್ನು ಮಾತ್ರ ಅನುಮತಿಸಲಾಗಿದೆ. ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್‌ಗಳನ್ನು ಜನಸಂದಣಿಯನ್ನು ತಪ್ಪುಸುವ ನಿಟ್ಟಿನಲ್ಲಿ ಪ್ರಯಾಣಿಕರು ಮೇಲಿನ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.


Click it and Unblock the Notifications