ಬ್ಯಾಂಕ್‌ಗಳು, ಪೋಸ್ಟ್ ಆಫೀಸ್‌ಗಳಲ್ಲಿ (Bank, Post Office) ಎಫ್‌ಡಿ ಯೋಜನೆಗಳು ಚಾಲ್ತೊಯಲ್ಲಿವೆ. ಪರಿಸ್ಥಿತಿಗಳಿಗೆ ಅನುಗುಣವಾಗಿ ತಮ್ಮ ಸ್ಥಿರ ಠೇವಣಿ (FD) ಬಡ್ಡಿದರಗಳನ್ನು ಆಗಾಗ ಪರಿಷ್ಕರಣೆ ಮಾಡುತ್ತಿರುತ್ತದೆ. ಆದ್ರೆ ಯಾರೇ ಆಗಲಿ ಹೂಡಿಕೆ ಮಾಡುವ ಮುನ್ನ ಎಲ್ಲಿ ಹೆಚ್ಚು ಆದಾಯ ಗಳಿಸಬಹುದು ಎಂಬುದನ್ನು ತಿಳಿಯುವುದು ಮುಖ್ಯ. ಹಾಗಿದ್ರೆ ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಪ್ರಸ್ತುತ ಎಫ್‌ಡಿ ಯೋಜನೆಗಳ ಬಡ್ಡಿ (FD Interest Rates) ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ..

ಎಸ್‌ಬಿಐ ಎಫ್‌ಡಿ ಬಡ್ಡಿದರಗಳು: ದೇಶದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಸ್ತುತ ಸಾಮಾನ್ಯ ಠೇವಣಿದಾರರಿಗೆ ಅವಧಿಗೆ ಅನುಗುಣವಾಗಿ ವರ್ಷಕ್ಕೆ ಸುಮಾರು 3.05% ರಿಂದ 6.60% ರಷ್ಟು ಎಫ್‌ಡಿ ಬಡ್ಡಿದರಗಳನ್ನು ನೀಡುತ್ತದೆ. ಹಿರಿಯ ನಾಗರಿಕರು ಸುಮಾರು 0.50% ಅಧಿಕ ಬಡ್ಡಿಯನ್ನು ಇಲ್ಲಿ ಪಡೆಯಬಹುದು. ಕೆಲವು ಅವಧಿಗಳಲ್ಲಿ ಗರಿಷ್ಠ 7.10% ರಷ್ಟಿರುತ್ತದೆ. ಒಂದು ವರ್ಷದ ಸ್ಥಿರ ಠೇವಣಿಗೆ 6.25% ಮತ್ತು ಹಿರಿಯ ನಾಗರಿಕರಿಗೆ 6.75% ಬಡ್ಡಿ ಸಿಗಲಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ಬಡ್ಡಿದರಗಳು 2025: ಎಚ್‌ಡಿಎಫ್‌ಸಿ ಬ್ಯಾಂಕ್‌ನ ರಿಟೇಲ್ ಎಫ್‌ಡಿ ದರಗಳು ಸಾಮಾನ್ಯ ಗ್ರಾಹಕರಿಗೆ 2.75% ಮತ್ತು 6.60% ರ ನಡುವೆ ಇರುತ್ತದೆ, ಆದರೆ ಹಿರಿಯ ನಾಗರಿಕರು ಆಯ್ದ ಅವಧಿಗಳಲ್ಲಿ ಸುಮಾರು 7.10% ವರೆಗೆ ಗಳಿಸಬಹುದು. ಒಂದು ವರ್ಷದ ಅವಧಿಗೆ, ಸಾಮಾನ್ಯ ಹೂಡಿಕೆದಾರರು 6.25% ಮತ್ತು ಹಿರಿಯ ನಾಗರಿಕರು 6.75% ಪಡೆಯುತ್ತಾರೆ.
ಬ್ಯಾಂಕ್ ಆಫ್ ಬರೋಡಾ ಎಫ್‌ಡಿ ದರಗಳು: ಬ್ಯಾಂಕ್ ಆಫ್ ಬರೋಡಾ ಪ್ರಸ್ತುತ ಸಾಮಾನ್ಯ ಜನರಿಗೆ ವಾರ್ಷಿಕ ಸುಮಾರು 3.50% ರಿಂದ 6.60% ಮತ್ತು ಹಿರಿಯ ನಾಗರಿಕರಿಗೆ 4.00% ರಿಂದ 7.10% ವರೆಗೆ ಎಫ್‌ಡಿ ದರಗಳನ್ನು ನೀಡುತ್ತದೆ. ಒಂದು ವರ್ಷದ ಸ್ಟ್ಯಾಂಡರ್ಡ್ ಠೇವಣಿಗೆ, ಸಾಮಾನ್ಯ ಹೂಡಿಕೆದಾರರಿಗೆ ದರ 6.25% ಮತ್ತು ಹಿರಿಯ ನಾಗರಿಕರಿಗೆ 6.75% ಸಿಗುತ್ತದೆ.
ಪಿಎನ್‌ಬಿ ಎಫ್‌ಡಿ ಬಡ್ಡಿದರಗಳು 2025: ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಮಾನ್ಯ ಜನರಿಗೆ 3.00% ರಿಂದ 6.60% ವರೆಗೆ ಎಫ್‌ಡಿ ಬಡ್ಡಿದರಗಳನ್ನು ನೀಡುತ್ತದೆ. ಅದರಲ್ಲೂ ಹಿರಿಯ ನಾಗರಿಕರು ಕೆಲವು ಅವಧಿಗಳಲ್ಲಿ 6.90% ವರೆಗೆ ಪಡೆಯುತ್ತಾರೆ. ಒಂದು ವರ್ಷದ ಎಫ್‌ಡಿಗೆ ಸಾಮಾನ್ಯ ಠೇವಣಿದಾರರಿಗೆ 6.25% ಮತ್ತು ಹಿರಿಯ ನಾಗರಿಕರಿಗೆ 6.75% ಸಿಗಲಿದೆ.
ಐಸಿಐಸಿಐ ಬ್ಯಾಂಕ್ ಎಫ್‌ಡಿ ಬಡ್ಡಿದರಗಳು: ಐಸಿಐಸಿಐ ಬ್ಯಾಂಕ್ ಸಾಮಾನ್ಯ ಜನರಿಗೆ ವಾರ್ಷಿಕ 2.75% ರಿಂದ 6.60% ರ ನಡುವೆ ಮತ್ತು ಹಿರಿಯ ನಾಗರಿಕರಿಗೆ 3.25% ರಿಂದ 7.10% ರ ಎಫ್‌ಡಿ ಬಡ್ಡಿದರಗಳನ್ನು ನೀಡುತ್ತದೆ. 1 ವರ್ಷದಿಂದ 18 ತಿಂಗಳಿಗಿಂತ ಕಡಿಮೆ ಅವಧಿಗೆ, ಎಫ್‌ಡಿ ದರವು ಸಾಮಾನ್ಯ ಠೇವಣಿದಾರರಿಗೆ 6.25% ಮತ್ತು ಹಿರಿಯ ನಾಗರಿಕರಿಗೆ 6.75% ಸಿಗುತ್ತದೆ.
ಸಣ್ಣ ಹಣಕಾಸು ಬ್ಯಾಂಕ್‌ಗಳ ಎಫ್‌ಡಿ ದರಗಳು:
ಸಣ್ಣ ಹಣಕಾಸು ಬ್ಯಾಂಕ್‌ಗಳು ಈ ವರ್ಷವೂ ಹೆಚ್ಚು ಆಕರ್ಷಕ ಎಫ್‌ಡಿ ದರಗಳನ್ನು ನೀಡುತ್ತಿದೆ. ಸಾಮಾನ್ಯವಾಗಿ ದೊಡ್ಡ ಬ್ಯಾಂಕ್‌ಗಳಿಗಿಂತ 150-200 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚು ಬಡ್ಡಿಯನ್ನು ಈ ಬ್ಯಾಂಕುಗಳು ನೀಡುತ್ತದೆ.
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 30-36 ತಿಂಗಳ ಅವಧಿಗಳಲ್ಲಿ ಗರಿಷ್ಠ ಬಡ್ಡಿ ದರಗಳು ಸುಮಾರು 8.40% ಇರುತ್ತದೆ.
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್: ನಿಮ್ಮ ಆಯ್ಕೆಯ 1001 ದಿನಗಳ ಎಫ್‌ಡಿ ಮೇಲೆ 8.60% ವರೆಗೆ ಮತ್ತು ಹಿರಿಯ ನಾಗರಿಕರು 9.10% ವರೆಗೆ ಬಡ್ಡಿ ಪಡೆಯಬಹುದು.
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 2-3 ವರ್ಷಗಳ ಅವಧಿಗಳಿಗೆ 8.25% ವರೆಗೆ ಸಿಗಲಿದೆ.
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಮಧ್ಯಮಾವಧಿ ಠೇವಣಿಗಳ ಮೇಲೆ 8.20% ವರೆಗೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications