ನಾವು ಯಾವುದೇ ತುರ್ತು ಹಣಕಾಸು ಸಂದರ್ಭ ಬಂದಾಗ ಅದಕ್ಕಾಗಿ ನಮ್ಮಲ್ಲಿ ಹಣವನ್ನು ಉಳಿತಾಯ ಮಾಡಿಕೊಂಡು ಇರಿಸುವುದು ಅತೀ ಮುಖ್ಯ. ಅದಕ್ಕಾಗಿ ನಾವು ಉಳಿತಾಯ ಖಾತೆ ಮಾಡಿಕೊಂಡರೆ ಉತ್ತಮ. ನಾವು ಉಳಿತಾಯ ಖಾತೆಯಲ್ಲಿ ಇರಿಸುವ ಹಣ ನಮ್ಮ ಕಷ್ಟ ಕಾಲದಲ್ಲಿ ಸಹಾಯ ಮಾಡುತ್ತದೆ. ಮಾತ್ರವಲ್ಲದೇ ನಮಗೆ ಅದರಿಂದ ಬ್ಯಾಂಕ್‌ನಿಂದ ಬಡ್ಡಿಯನ್ನು ಕೂಡಾ ಪಡೆಯಲು ಸಾಧ್ಯವಾಗುತ್ತದೆ. ಪ್ರಸ್ತುತ ಹಲವಾರು ಬ್ಯಾಂಕುಗಳಲ್ಲಿ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳು ಕಡಿತ ಮಾಡಲಾಗುತ್ತಿದೆ. ಈ ನಡುವೆ ಸಣ್ಣ ಹಣಕಾಸು ಮತ್ತು ಪಾವತಿ ಬ್ಯಾಂಕುಗಳು ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿದೆ.
ಸಣ್ಣ ಹಣಕಾಸು ಮತ್ತು ಪಾವತಿ ಬ್ಯಾಂಕ್‌ಗಳು ಕಡಿಮೆ ವೆಚ್ಚದ, ಉನ್ನತ ತಂತ್ರಜ್ಞಾನ-ಸಕ್ರಿಯಗೊಳಿಸಿದ ವ್ಯಾಪಾರ ಮಾದರಿಗಳನ್ನು ಹೊಂದಿವೆ. ಇದರಿಂದಾಗಿ ಅವರು ಗ್ರಾಹಕರಿಗೆ ಉತ್ತಮ ಬಡ್ಡಿದರವನ್ನು ನೀಡುತ್ತಿದ್ದಾರೆ. ಈ ಸಣ್ಣ ಹಣಕಾಸು ಬ್ಯಾಂಕ್‌ಗಳು ನೀಡುವ ಬಡ್ಡಿದರವು ಪ್ರಮುಖ ಬ್ಯಾಂಕ್‌ಗಳಿಗಿಂತ ಅಧಿಕವಾಗಿದೆ. ಉಳಿತಾಯ, ಹೂಡಿಕೆ, ಸಾಲ ಹಾಗೂ ವಿಮಾ ಅಗತ್ಯತೆಗಳು ಸೇರಿದಂತೆ ಎಲ್ಲಾ ಹಣಕಾಸಿನ ಅಗತ್ಯತೆಗಳನ್ನು ಗ್ರಾಹಕರಿಗೆ ನೀಡುವ ಕಾರ್ಯವನ್ನು ಈ ಬ್ಯಾಂಕ್‌ಗಳು ಮಾಡುತ್ತದೆ.
ನೀವು ಯಾವುದೇ ಬ್ಯಾಂಕ್ ಅನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಶಾಖೆಗಳನ್ನು ಹೊಂದಿರುವ ಹಾಗೂ ಹೆಚ್ಚಿನ ಎಟಿಎಂ ಸೌಲಭ್ಯವನ್ನು ಹೊಂದಿರುವ ಬ್ಯಾಂಕ್‌ಗಳನ್ನು ನೀವು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಆದರೆ ನೀವು ಈ ಸಂದರ್ಭದಲ್ಲೇ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯ ಮೇಲೆ ಎಷ್ಟು ಬಡ್ಡಿದರ ನೀಡುತ್ತಾರೆ ಎಂಬುವುದನ್ನು ಕೂಡಾ ನೋಡಬೇಕು. ಹಾಗಾದರೆ ಯಾವೆಲ್ಲ ಸಣ್ಣ ಹಣಕಾಸು ಮತ್ತು ಪಾವತಿ ಬ್ಯಾಂಕ್‌ಗಳು ಅಧಿಕ ಉಳಿತಾಯ ಖಾತೆಗೆ ಅಧಿಕ ಬಡ್ಡಿ ನೀಡುತ್ತದೆ ಎಂದು ತಿಳಿಯಲು ಮುಂದೆ ಓದಿ....

ಅಧಿಕ ಬಡ್ಡಿದರವನ್ನು ನೀಡುವ ಬ್ಯಾಂಕ್‌ಗಳು ಯಾವುದು?
ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ಶೇಕಡಾ 7 ರವರೆಗೆ ಬಡ್ಡಿದರಗಳನ್ನು ನೀಡುತ್ತವೆ. ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ, ಈ ಬ್ಯಾಂಕ್ ಅತ್ಯುತ್ತಮ ಬಡ್ಡಿದರಗಳನ್ನು ನೀಡುವ ಬ್ಯಾಂಕ್ ಆಗಿದೆ. ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ರೂ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಹೊಂದಿದ್ದರೆ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 6.5 ಪ್ರತಿಶತ ಬಡ್ಡಿಯನ್ನು ನೀಡುತ್ತದೆ. 1 ಲಕ್ಷದವರೆಗಿನ ಬ್ಯಾಲೆನ್ಸ್‌ಗಳಿಗೆ ಬ್ಯಾಂಕ್ ಶೇಕಡಾ 4 ಬಡ್ಡಿಯನ್ನು ನೀಡುತ್ತದೆ.
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ಶೇಕಡಾ 6.25 ರವರೆಗೆ ಬಡ್ಡಿದರಗಳನ್ನು ನೀಡುತ್ತಿದೆ. ನಿಮ್ಮ ಉಳಿತಾಯ ಖಾತೆಯಲ್ಲಿ ಇರಬೇಕಾದ ಸರಾಸರಿ ಮಾಸಿಕ ಬ್ಯಾಲೆನ್ಸ್ 2,000 ರೂಪಾಯಿ ಆಗಿದೆ. ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಉಳಿತಾಯ ಖಾತೆ ಗ್ರಾಹಕರಿಗೆ ಶೇಕಡಾ 6 ರಷ್ಟು ಬಡ್ಡಿಯನ್ನು ನೀಡುತ್ತದೆ. ಪೇಮೆಂಟ್ ಬ್ಯಾಂಕ್‌ಗಳ ಪೈಕಿ, ಈ ಬ್ಯಾಂಕ್ ಅತ್ಯುತ್ತಮ ಬಡ್ಡಿದರಗಳನ್ನು ನೀಡುವ ಬ್ಯಾಂಕ್ ಆಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಈ ಬ್ಯಾಂಕ್ ಅನ್ನು ಶೆಡ್ಯೂಲ್ಡ್ ಬ್ಯಾಂಕ್ ಎಂದು ವರ್ಗೀಕರಿಸಿದೆ. ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೂಡ ಉಳಿತಾಯ ಖಾತೆ ಗ್ರಾಹಕರಿಗೆ ಶೇಕಡಾ 6 ರಷ್ಟು ಬಡ್ಡಿಯನ್ನು ನೀಡುತ್ತದೆ.
ಈ ಮೇಲಿನ ಸಣ್ಣ ಹಣಕಾಸು ಬ್ಯಾಂಕ್‌ಗಳು ಮತ್ತು ಪಾವತಿ ಬ್ಯಾಂಕ್‌ಗಳಿಗೆ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವು ಆಯಾ ಬ್ಯಾಂಕ್ ಸವೆಬ್‌ಸೈಟ್‌ಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಈ ಬ್ಯಾಂಕ್‌ಗಳಲ್ಲಿ ಕೆಲವು ಷರತ್ತು ಕೂಡಾ ಇರಬಹುದು. ಈ ಬ್ಯಾಂಕ್‌ನಲ್ಲಿ ಕನಿಷ್ಠ ಬ್ಯಾಲೆನ್ಸ್ ಅಗತ್ಯವನ್ನು ಪರಿಗಣಿಸಲಾಗುತ್ತದೆ.


Click it and Unblock the Notifications