ಹೂಡಿಕೆ ಯೋಜನೆಗಳಲ್ಲಿ (Investment Scheme) ಹಲವಾರು ಬ್ಯಾಂಕ್‌ಗಳು, ಪೋಸ್ಟ್ ಆಫೀಸ್‌ನಲ್ಲಿ ಉತ್ತಮ ಬಡ್ಡಿದರವನ್ನು ನೀಡುತ್ತದೆ. ಯಾರೇ ಆಗಲಿ ತಾವು ಹೂಡಿಕೆ ಮಾಡುವ ಹಣ ಸೇಫ್ ಆಗಿರಬೇಕು ಮತ್ತು ಹೆಚ್ಚು ಲಾಭ ಬರಬೇಕು ಅಂದುಕೊಂಡಿರುತ್ತಾರೆ. ಅದೇ ರೀತಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಪೋಸ್ಟ್ ಆಫೀಸ್, ಬ್ಯಾಂಕ್‌ನಲ್ಲಿ (Post Office-Bank) ಹಲವಾರು ಹೂಡಿಕೆ ಯೋಜನೆಗಳಿವೆ. ಆದರೆ ಹೂಡಿಕೆ ಮಾಡುವಾಗ ಸರಿಯಾದ ಯೋಜನೆಗಳನ್ನು ಆರಿಸಿಕೊಳ್ಳುವುದು ಬಹಳ ಮುಖ್ಯ.

ಹಿರಿಯ ನಾಗರಿಕರಿಗಾಗಿ ಹಲವಾರು ಬ್ಯಾಂಕ್‌ಗಳು ಎಫ್‌ಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಹೆಚ್ಚಿನ ಬಡ್ಡಿದರಗಳನ್ನು ಸಹ ನೀಡುತ್ತದೆ. ಪ್ರಸ್ತುತ, ಹಿರಿಯ ನಾಗರಿಕರು ಸ್ಥಿರ ಠೇವಣಿಗಳ (FD) ಮೇಲೆ ಶೇಕಡಾ 7.5 ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ಸ್ಥಿರ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಆದಾಯವೂ ಹೆಚ್ಚು, ಹೂಡಿಕೆಯೂ ಸುರಕ್ಷಿತವಾಗಿರುತ್ತದೆ. ಅಲ್ಲದೇ ಉತ್ತಮ ಲಾಭವನ್ನು ನೀಡೋದು ಪಕ್ಕಾ.
ಸಾಮಾನ್ಯವಾಗಿ, ಹಿರಿಯ ನಾಗರಿಕರಿಗಾಗಿ ಬ್ಯಾಂಕುಗಳು ಇತರೆ ಹೂಡಿಕೆದಾರರಿಗಿಂತ ಹೆಚ್ಚಿನ ಬಡ್ಡಿ ನೀಡುತ್ತವೆ. ಅಕ್ಟೋಬರ್ 27 ರ ಬ್ಯಾಂಕ್‌ಬಜಾರ್ ಡೇಟಾ ಪ್ರಕಾರ, ಭಾರತದಾದ್ಯಂತ ಹಲವು ಬ್ಯಾಂಕುಗಳು ₹3 ಕೋಟಿವರೆಗಿನ ಠೇವಣಿಗಳ ಮೇಲೆ ಶೇ 7 ರಿಂದ ಶೇ 7.5 ರಷ್ಟು ಆಕರ್ಷಕ ಎಫ್‌ಡಿ ದರಗಳನ್ನು ನೀಡುತ್ತವೆ ಎನ್ನಲಾಗಿದೆ.
ಖಾಸಗಿ ವಲಯದ ಬ್ಯಾಂಕುಗಳಲ್ಲಿ, ಹಿರಿಯ ನಾಗರಿಕರ ಎಫ್‌ಡಿ ಹೂಡಿಕೆಗೆ, ಇಂಡಸ್‌ಇಂಡ್ ಬ್ಯಾಂಕ್ ಅತಿ ಹೆಚ್ಚು ಎಫ್‌ಡಿ ದರವನ್ನು ನೀಡುತ್ತಿದೆ. ಈ ಬ್ಯಾಂಕ್ 6 ರಿಂದ 12 ತಿಂಗಳ ಅವಧಿಯ ಠೇವಣಿ ಹಣಗಳ ಮೇಲೆ ಶೇ 7.5% ರಷ್ಟು ಬಡ್ಡಿಯನ್ನು ನೀಡುತ್ತದೆ ಎಂದು ವರದಿಯಾಗಿದೆ.
ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಎಚ್‌ಡಿಎಫ್‌ಸಿ ಕೂಡಾ ಉತ್ತಮ ಬಡ್ಡಿದರವನ್ನು ನೀಡುತ್ತದೆ. ಇದು 18 ರಿಂದ 21 ತಿಂಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ಶೇ 7.10% ರಷ್ಟು ಬಡ್ಡಿದರವನ್ನು ಒದಗಿಸುತ್ತದೆ.
ಎರಡನೇ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಐಸಿಐಸಿಐ ಬ್ಯಾಂಕ್‌ನಲ್ಲಿಯೂ 2 ವರ್ಷ 1 ದಿನದಿಂದ 10 ವರ್ಷಗಳವರೆಗಿನ ಎಫ್‌ಡಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ, ಶೇ 7.10% ರಷ್ಟು ಬಡ್ಡಿ ಸಿಗುತ್ತದೆ. ಅದೇ ರೀತಿ ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ, 391 ದಿನಗಳಿಂದ 23 ತಿಂಗಳೊಳಗಿನ ಎಫ್‌ಡಿ ಹೂಡಿಕೆಗೆ ಶೇ 7.10% ರಷ್ಟು ಬಡ್ಡಿ ನೀಡುತ್ತದೆ.
ಇನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳಲ್ಲಿ (PNB) ಹಿರಿಯ ನಾಗರಿಕರಿಗೆ ಎಫ್‌ಡಿಗಳ ಮೇಲೆ ಶೇ 7.10% ರಷ್ಟು ಬಡ್ಡಿದರವನ್ನು ನೀಡಲಾಗುತ್ತಿದೆ.
ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), 5 ರಿಂದ 10 ವರ್ಷಗಳಲ್ಲಿ ಸ್ಥಿರ ಠೇವಣಿಗಳ (FD) ಮೇಲೆ ಶೇ 7.05% ರಷ್ಟು ವಾರ್ಷಿಕವಾಗಿ ಬಡ್ಡಿ ನೀಡುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications