ಓರ್ವ ವ್ಯಕ್ತಿಯು ಜೀವಂತವಾಗಿರುವಾಗ ತನ್ನ ಜೀವನದ ಆಸೆಯ ಬಗ್ಗೆ ಲಿಖಿತವಾಗಿ ಬರೆದುಕೊಟ್ಟಿರುವಂತಹ ದಾಖಲೆಯೇ ವಿಲ್ ಆಗಿರುತ್ತದೆ. ವಿಲ್ ಸಾಮಾನ್ಯವಾಗಿ ಯಾರ ಹೆಸರಲ್ಲಿ ಇರುತ್ತದೋ ಅವರ ಸಾವಿನ ಬಳಿಕವೇ ಓದಲಾಗುತ್ತದೆ. ವಿಲ್ ಬರೆದಿರುವವರ ಆಸ್ತಿಯ ಹಂಚಿಕೆ, ಆಸ್ತಿಯನ್ನು ಹೇಗೆ ಹಂಚಿಕೆ ಮಾಡುವುದು ಎಂಬುವುದನ್ನು ಉಲ್ಲೇಖ ಮಾಡಲಾಗಿರುತ್ತದೆ.
ವಿಲ್ ಅನ್ನು ಬರೆಯುವ ವ್ಯಕ್ತಿ ಭಾರತೀಯ ಉತ್ತರಾಧಿಕಾರ ಕಾಯಿದೆ 1925 ರ ಪ್ರಕಾರ, ಅವನ/ಅವಳ ಜೀವಿತಾವಧಿಯ ನಂತರ ತನ್ನ ಆಸ್ತಿಯನ್ನು ಯಾರಿಗೆ ನೀಡಬೇಕು ಎಂಬುವುದನ್ನು ಕೂಡಾ ಈ ವಿಲ್‌ನಲ್ಲಿ ಉಲ್ಲೇಖ ಮಾಡಬಹುದಾಗಿದೆ. ವಿಲ್ ಕಾನೂನಾತ್ಮಕವಾಗಿರುವ ದಾಖಲೆಯಾಗಿದ್ದು, ತನ್ನ ಮರಣದ ನಂತರ ಓದುವಂತೆ ತನ್ನ ನಂಬಿಕಾರ್ಹರ ಬಳಿಕ ನೀಡಬಹುದಾದ ದಾಖಲೆಯಾಗಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ವಿಲ್ ಯಾಕೆ ಬರೆಯಬೇಕಾಗುತ್ತದೆ?
ಭಾರತದಂತಹ ದೇಶದಲ್ಲಿ ಒಂದು ಸಂಬಂಧಗಳ ನಡುವೆ ಉಂಟಾಗುವ ಘರ್ಷಣೆಗೆ, ವಾದ- ಜಗಳಕ್ಕೆ ಸಾಮಾನ್ಯವಾದ ಕಾರಣ ಆಸ್ತಿಯ ಉತ್ತರಾಧಿಕಾರತ್ವ ಆಗಿರುತ್ತದೆ. ನಿಮ್ಮ ಮರಣದ ನಂತರ ನಿಮ್ಮ ಆಸ್ತಿಯನ್ನು ನೀವು ಯಾರಿಗೆ ಕೊಡಲು ಬಯಸುತ್ತೀರೋ ಅವರು ತೊಂದರೆಗೆ ಒಳಗಾಗಬಾರದು ಎಂದಾದರೆ, ನೀವು ವಿಲ್ ಅನ್ನು ಮಾಡುವುದು ಅತೀ ಮುಖ್ಯವಾಗುತ್ತದೆ. ವಿಲ್ ಇದ್ದರೆ ನಿಮ್ಮ ಆಸ್ತಿಯ ವರ್ಗಾವಣೆಯು ಅತೀ ಸರಳ, ಸುಲಭವಾಗಲಿದೆ.
ವಿಲ್ ಬರೆಯುವುದು ಹೇಗೆ?
ಮೊದಲನೆಯದಾಗಿ ನೀವು ತಿಳಿದಿರಬೇಕಾದ ಮಾಹಿತಿ ವಿಲ್ ಬರೆಯುವುದಕ್ಕೆ ಒಂದು ನಿರ್ದಿಷ್ಟವಾದ ಫಾರ್ಮೆಟ್ ಇಲ್ಲ ಎಂಬುವುದಾಗಿದೆ. ಆದರೆ ನೀವು ಬರೆಯುವ ವಿಲ್ ಕಾನೂನಾತ್ಮಕವಾಗಿ ಮಾನ್ಯತೆಯನ್ನು ಹೊಂದಿರಬೇಕಾದರೆ ನೀವು ಈ ಕೆಳಗಿನ ಹಂತಗಳನ್ನು ಪಾಲನೆ ಮಾಡಬೇಕಾಗುತ್ತದೆ.
1. ಒಬ್ಬ ವ್ಯಕ್ತಿಯು ಮಾನಸಿಕವಾಗಿ ಸ್ಥಿರವಾಗಿದ್ದರೆ ಮಾತ್ರ ಕಾನೂನಾತ್ಮಕವಾಗಿ ಮಾನ್ಯವಾದ ವಿಲ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಹಿಂದೆ ಜಾರಿಯಾದ ಎಲ್ಲವು ಹಿಂಪಡೆಯಲಾಗುತ್ತದೆ ಎಂದು ಕೂಡಾ ಉಲ್ಲೇಖ ಮಾಡಬೇಕಾಗುತ್ತದೆ.
2. ನೀವು ಹೊಂದಿರುವ ಪ್ರತಿಯೊಂದು ಆಸ್ತಿಯ ಪಟ್ಟಿಯನ್ನು ಮಾಡಿ. ಎಲ್ಲಾ ರಿಯಲ್ ಎಸ್ಟೇಟ್ ಆಸ್ತಿಗಳು, ಮ್ಯೂಚುಯಲ್ ಫಂಡ್ ಪೋರ್ಟ್‌ಫೋಲಿಯೋಗಳು, ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ನೀವು ಹೊಂದಿರುವ ಒಟ್ಟು ನಗದು ಇತ್ಯಾದಿಗಳನ್ನು ಉಲ್ಲೇಖ ಮಾಡಿ. ನೀವು ಯಾವುದೇ ಆಸ್ತಿಯ ಉಲ್ಲೇಖ ಮಾಡುವುದನ್ನು ಮರೆತಿಲ್ಲ ಎಂಬುವುದನ್ನು ಖಚಿತಪಡಿಸಿಕೊಳ್ಳಿ.
3. ಸರಿಯಾದ ರೀತಿಯಲ್ಲಿ ನಿಮ್ಮ ಆಸ್ತಿಯನ್ನು ವಿಭಜನೆ ಮಾಡಿ, ಯಾರಿಗೆ ಯಾವ ಆಸ್ತಿ ಲಭ್ಯವಾಗಬೇಕು ಎಂಬುವುದನ್ನು ನಿಖರವಾಗಿ ಉಲ್ಲೇಖ ಮಾಡಿ. ಪ್ರತಿಯೊಂದು ಆಸ್ತಿಯನ್ನು ಉಲ್ಲೇಖಿಸಿ, ನಿಮ್ಮ ಮರಣದ ಬಳಿಕ ಯಾರಿಗೆ ಸೇರಬೇಕು ಎಂದು ಉಲ್ಲೇಖಿಸಿ.
4. ನೀವು ಅಪ್ರಾಪ್ತ ವಯಸ್ಕರಿಗೆ ಯಾವುದಾದರೂ ಆಸ್ತಿಯನ್ನು ನೀಡುವುದಾದರೆ ಕೇರ್‌ಟೆಕರ್ ಯಾರು ಎಂದು ಉಲ್ಲೇಖ ಮಾಡಿ. ಆದರೆ ಆ ವ್ಯಕ್ತಿ ನಂಬಿಕಾರ್ಹರೇ ಎಂದು ಮೊದಲು ಖಚಿತಪಡಿಸಿಕೊಳ್ಳಿ.
5. ಮೇಲೆ ನಾವು ಉಲ್ಲೇಖಿಸಿದ ಎಲ್ಲ ಕಾರ್ಯವನ್ನು ಮಾಡಿದ ಬಳಿಕ, ಇಬ್ಬರು ಸಾಕ್ಷಿಗಳ ಮುಂದೆ ವಿಲ್‌ಗೆ ಸಹಿ ಮಾಡಿ. ನೀವು ಇಬ್ಬರು ಸಾಕ್ಷಿಗಳ ಎದುರಲ್ಲಿ ಸಹಿ ಹಾಕಿದ್ದೀರಿ ಎಂದು ಖಾತರಿಪಡಿಸಲು ಸಾಕ್ಷಿದಾರರು ಕೂಡಾ ಅದೇ ಸ್ಥಳದಲ್ಲಿ ಸಹಿ ಹಾಕಬೇಕಾಗುತ್ತದೆ.
6.ನಿಮ್ಮ ಸಂಪೂರ್ಣ ವಿಳಾಸವನ್ನು ಹಾಕಿ. ನಿಮ್ಮ ಹಾಗೂ ಸಾಕ್ಷಿದಾರರ ಸಂಪೂರ್ಣ ಮಾಹಿತಿಯನ್ನು ಕೂಡಾ ಉಲ್ಲೇಖ ಮಾಡಬೇಕಾಗುತ್ತದೆ. ಹಾಗೆಯೇ ವಿಲ್‌ಗೆ ಸಹಿ ಹಾಕಲಾಗುವ ದಿನಾಂಕ, ಸ್ಥಳದ ವಿವರವನ್ನು ಕೂಡಾ ಉಲ್ಲೇಖ ಮಾಡಬೇಕಾಗುತ್ತದೆ. ಎಲ್ಲ ಪುಟದ ಮೇಲೆಯೂ ನಿಮ್ಮ ಹಾಗೂ ಸಾಕ್ಷಿದಾರರ ಸಹಿ ಇರಬೇಕಾಗುತ್ತದೆ.
7. ನೀವು ಯಾವುದೇ ಹೆಚ್ಚಿನ ಬದಲಾವಣೆಗಳನ್ನು ಮಾಡಿದರೆ ನಿಮ್ಮ ಸಾಕ್ಷಿಗಳೊಂದಿಗೆ ತಿದ್ದುಪಡಿ ಮಾಡಲಾದ ವಿಲ್‌ಗೆ ಕೌಂಟರ್‌ಸೈನ್ ಮಾಡಬೇಕಾಗುತ್ತದೆ.
More From GoodReturns

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರಿಗೆ ಈಗ ಯಾವುದು ಬೆಸ್ಟ್?

ಹೂಡಿಕೆದಾರರೇ ಎಚ್ಚರ! ನಿಮ್ಮ ಹಣಕ್ಕೆ ಯಾವುದು ಬೆಸ್ಟ್ ಆಯ್ಕೆ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ, ಈಗ ಎಲ್ಲಿ ಹೂಡಿಕೆ ಮಾಡಬೇಕು?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರಿಗೆ ಈಗ ಅಸಲಿ ಲಾಭ ಎಲ್ಲಿ?

SIP ಹೂಡಿಕೆ ದಾಖಲೆ: ನಿಮ್ಮ ಹಣ ಸುರಕ್ಷಿತವಾಗಿದೆಯೇ?

SBI ಕ್ಯಾಶ್ಬ್ಯಾಕ್ ಕಾರ್ಡ್ ಬಳಕೆದಾರರೇ, ನಿಮ್ಮ ಹಣಕ್ಕೆ ಕುತ್ತು ಬಂದಿದೆ!

ಷೇರು ಮಾರುಕಟ್ಟೆ ರಜೆ: ನಿಮ್ಮ ಹೂಡಿಕೆಯನ್ನು ದ್ವಿಗುಣಗೊಳಿಸುವುದು ಹೇಗೆ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆಯಲ್ಲಿ ಲಾಭ ಗಳಿಸುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?



Click it and Unblock the Notifications