ಭಾರತದಲ್ಲಿ ಸ್ಥಿರ ಠೇವಣಿ...ಅಂದರೆ ಎಫ್‌ಡಿ ಒಂದು ಸುರಕ್ಷಿತ ಹೂಡಿಕೆಯಾಗಿದೆ. ಇದರಲ್ಲಿ ಹೂಡಿಕೆ ಮಾಡುವುದರಿಂದ ಮಾಸಿಕ ಉತ್ತಮ ಬಡ್ಡಿ ಆದಾಯ, ಹಾಗೂ ಮಾರುಕಟ್ಟೆಯ ಅಸ್ಥಿರತೆ ನೋಡುವ ಪರಿಸ್ಥಿತಿ ಬರುವುದಿಲ್ಲ. ನಿಗದಿತ ಅವಧಿಗೆ ನಿಗದಿತ ಬಡ್ಡಿದರ ಪಡೆಯಲು ಇದು ಸಹಾಯಕವಾಗಿದೆ. ಇನ್ನು ಎಫ್‌ಡಿ ಯೋಜನೆಯು ಸ್ಥಿರ ಯೋಜನೆ ಬಯಸುವವರಿಗೆ ಹಾಗೂ ನಿವೃತ್ತರಿಗೆ ಅಚ್ಚು ಮೆಚ್ಚಿನ ಹೂಡಿಕೆ ಆಯ್ಕೆಯಾಗಿದೆ..

ಇನ್ನು ಎಫ್‌ಡಿ ವಿಚಾರದಲ್ಲಿ ಗಮನಿಸಬೇಕಾದ್ದೇನೆಂದರೆ, ಇತ್ತೀಚೆಗೆ ಬ್ಯಾಂಕುಗಳ ನಡುವೆ ಬಡ್ಡಿದರ ಸ್ಪರ್ಧೆ ಹೆಚ್ಚಾಗಿದೆ. ಹಾಗಾಗಿ ಸಣ್ಣ ಹಣಕಾಸು ಬ್ಯಾಂಕುಗಳು ಹೆಚ್ಚು ಆಕರ್ಷಕ ದರಗಳನ್ನು ನೀಡುತ್ತಿರುವುದು ಗಮನಾರ್ಹವಾಗಿದೆ. ಇನ್ನು ಅದೇ ಸಮಯದಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯದ ದೊಡ್ಡ ಬ್ಯಾಂಕುಗಳು ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಮೂಲಕ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ. ಈಕೆಳಗೆ ಕೆಲವು ಪ್ರಮುಖ ಬ್ಯಾಂಕುಗಳು ಮತ್ತು ಅವರು ನೀಡುತ್ತಿರುವ ಅಂದಾಜು ಗರಿಷ್ಠ ಬಡ್ಡಿದರಗಳ ಪಟ್ಟಿ ನೀಡಲಾಗಿದೆ.
ಸಣ್ಣ ಹಣಕಾಸು ಬ್ಯಾಂಕುಗಳು:
- ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ - ಸುಮಾರು 7.9% ವರೆಗೆ
- ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ - ಸುಮಾರು 7.7% ಕ್ಕಿಂತ ಹೆಚ್ಚು
- ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ - ಸುಮಾರು 7.7% ವರೆಗೆ
- ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್ - ಸುಮಾರು 7.5% ವರೆಗೆ
ಖಾಸಗಿ ವಲಯದ ಬ್ಯಾಂಕುಗಳು:
- ಡಿಸಿಬಿ ಬ್ಯಾಂಕ್ - ಸುಮಾರು 7.25% ವರೆಗೆ
- RBL ಬ್ಯಾಂಕ್ - ಸುಮಾರು 7.20% ವರೆಗೆ
- IDFC ಫಸ್ಟ್ ಬ್ಯಾಂಕ್ - ಸುಮಾರು 7% ವರೆಗೆ
- HDFC ಬ್ಯಾಂಕ್ - ಸುಮಾರು 6.5% ವರೆಗೆ
- ಐಸಿಐಸಿಐ ಬ್ಯಾಂಕ್ - ಸುಮಾರು 6.5% ವರೆಗೆ
ಸಾರ್ವಜನಿಕ ವಲಯದ ಬ್ಯಾಂಕುಗಳು:
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ - ಸುಮಾರು 6.7% ವರೆಗೆ
- ಬ್ಯಾಂಕ್ ಆಫ್ ಬರೋಡಾ - ಸುಮಾರು 6.6% ವರೆಗೆ
- ಪಂಜಾಬ್ ನ್ಯಾಷನಲ್ ಬ್ಯಾಂಕ್ - ಸುಮಾರು 6.5% ರಿಂದ 6.6% ವರೆಗೆ
ಈ ಪಟ್ಟಿಯಿಂದ ಸ್ಪಷ್ಟವಾಗುವುದು ಏನೆಂದರೆ, ಸಣ್ಣ ಹಣಕಾಸು ಬ್ಯಾಂಕುಗಳು ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ. ಆದರೆ ಹೆಚ್ಚು ಲಾಭದೊಂದಿಗೆ ಸ್ವಲ್ಪ ಹೆಚ್ಚು ಅಪಾಯವೂ ಇರಬಹುದು. ಸಾರ್ವಜನಿಕ ವಲಯದ ಬ್ಯಾಂಕುಗಳು ಕಡಿಮೆ ಬಡ್ಡಿ ನೀಡಿದರೂ, ಸರ್ಕಾರದ ಬೆಂಬಲ ಮತ್ತು ದೀರ್ಘಕಾಲದ ವಿಶ್ವಾಸದಿಂದ ಜನರಲ್ಲಿ ಭದ್ರತೆಯ ಭಾವನೆ ಹೆಚ್ಚಿದೆ. ಖಾಸಗಿ ಬ್ಯಾಂಕುಗಳು ಮಧ್ಯಮ ಮಟ್ಟದ ಬಡ್ಡಿದರ ಮತ್ತು ಉತ್ತಮ ಸೇವಾ ಸೌಲಭ್ಯಗಳನ್ನು ಒದಗಿಸುತ್ತವೆ.
ಹೂಡಿಕೆ ಮಾಡುವ ಮೊದಲು ನಿಮ್ಮ ಹಣಕಾಸಿನ ಗುರಿ, ಹೂಡಿಕೆ ಅವಧಿ ಮತ್ತು ತೆರಿಗೆ ಪರಿಣಾಮಗಳನ್ನು ಪರಿಶೀಲಿಸುವುದು ಅಗತ್ಯ. ಹೆಚ್ಚಿನ ಬಡ್ಡಿದರ ಮಾತ್ರ ನೋಡದೆ, ಸುರಕ್ಷತೆ ಮತ್ತು ಆದಾಯ ಎರಡರ ಮಧ್ಯೆ ಸಮತೋಲನ ಕಾಯ್ದುಕೊಳ್ಳುವುದು ಉತ್ತಮ ನಿರ್ಧಾರವಾಗುತ್ತದೆ. ಸರಿಯಾದ ಆಯ್ಕೆ ಮಾಡಿದರೆ ಸ್ಥಿರ ಠೇವಣಿ ದೀರ್ಘಕಾಲಿಕ ಹಣಕಾಸು ಸ್ಥಿರತೆಗೆ ಸಹಾಯಕವಾಗುತ್ತದೆ.
(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)


Click it and Unblock the Notifications