ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯು ತಿಂಗಳಿನಿಂದ ತಿಂಗಳಿಗೆ ಬೆಳೆಯುತ್ತಲೇ ಇದೆ. ಅಕ್ಟೋಬರ್ 2023 ರಲ್ಲಿ ಒಟ್ಟು 71,604 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲಾಗಿದೆ. ಪ್ರಮುಖವಾಗಿ ಹೊಸ ಸಂಸ್ಥೆಗಳು ಇದಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ.
ಇದಕ್ಕೆ ಪ್ರಮುಖ ಕೊಡುಗೆ ನೀಡುವುದು ಹೊಸ ಸಂಸ್ಥೆಗಳ ವಿವರವನ್ನು ನಾವಿಲ್ಲಿ ನೀಡಿದ್ದೇವೆ. ವಾಹನ್ ಪ್ರಕಾರ ಅಕ್ಟೋಬರ್ 2023 ರಲ್ಲಿ ಮಾರಾಟವಾದ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಳವಣಿಗೆಯನ್ನು ನಾವಿಲ್ಲಿ ನೀಡಿದ್ದೇವೆ, ಮುಂದೆ ಓದಿ...

ಎಲೆಕ್ಟ್ರಿಕ್ ಸ್ಕೂಟರ್ ಓಲಾ
ಅಕ್ಟೋಬರ್ 2023 ರಲ್ಲಿ ಓಲಾ ಬ್ರ್ಯಾಂಡ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಅಕ್ಟೋಬರ್ 2023 ರಲ್ಲಿ, ಓಲಾ 22,284 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಸೆಪ್ಟೆಂಬರ್ 2023 ರಲ್ಲಿ 18,691 ಯುನಿಟ್‌ಗಳನ್ನು ಮಾರಾಟ ಮಾಡಿದೆ. ತಿಂಗಳಿನಿಂದ ತಿಂಗಳಿಗೆ ಶೇಕಡ 19.2 ಬೆಳವಣಿಗೆಯನ್ನು ದಾಖಲಿಸಿದೆ.
ಟಾಪ್ 2 ಟಿ.ವಿ.ಎಸ್
ಎರಡನೇ ಸ್ಥಾನದಲ್ಲಿ ಹೊಸೂರು ಮೂಲದ ಮೋಟಾರ್‌ಸೈಕಲ್ ತಯಾರಕ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಇದೆ. ಟಿವಿಎಸ್‌ನಲ್ಲಿ ಸೆಪ್ಟೆಂಬರ್ 2023 ರಲ್ಲಿ ಮಾರಾಟವಾದ 15,584 ಯೂನಿಟ್‌ಗಳಿಗೆ ಹೋಲಿಸಿದರೆ ಅಕ್ಟೋಬರ್ 2023 ರಲ್ಲಿ 15,603 ಯೂನಿಟ್‌ಗಳನ್ನು ಮಾರಾಟ ಮಾಡಿದೆ. ಮಾಸಿಕವಾಗಿ ಶೇಕಡ 0.1 ರಷ್ಟು ಬೆಳವಣಿಗೆ ಕಂಡಿದೆ.
ಮೂರನೇ ಸ್ಥಾನದಲ್ಲಿ ಬಜಾಜ್
ಬಜಾಜ್ ಮೂರನೇ ಸ್ಥಾನದಲ್ಲಿದೆ. ಚೇತಕ್, ಈ ಸಮಯದಲ್ಲಿ ತಯಾರಕರ ಏಕೈಕ ಆಲ್-ಎಲೆಕ್ಟ್ರಿಕ್ ಕೊಡುಗೆಯಾಗಿದೆ. ಬಜಾಜ್ ಅಕ್ಟೋಬರ್ 2023 ರಲ್ಲಿ ಚೇತಕ್‌ನ 8,430 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಬಜಾಜ್ ಸೆಪ್ಟೆಂಬರ್ 2023 ರಲ್ಲಿ ಚೇತಕ್‌ನ 7,097 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮಾಸಿಕವಾಗಿ ಶೇಕಡ 18.7 ರಷ್ಟು ಬೆಳವಣಿಗೆಯನ್ನು ಕಂಡಿದೆ.
ಟಾಪ್ 4 ಅಥೆರ್
ಅತ್ಯಂತ ಯಶಸ್ವಿ ಇವಿ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾದ ಅಥೆರ್, ಕಳೆದ ತಿಂಗಳು 8,027 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಟಾಪ್ 5 ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ 2023 ರ ಸೆಪ್ಟೆಂಬರ್‌ನಲ್ಲಿ 7,151 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಟಾಪ್ 4ನೇ ಸ್ಥಾನದಲ್ಲಿರುವ ಈ ಸ್ಟಾರ್ಟ್‌ಅಪ್ ಮಾಸಿಕವಾಗಿ ಶೇಕಡ 12.2 ರಷ್ಟು ಬೆಳವಣಿಗೆ ದಾಖಲಾಗಿದೆ.
ಟಾಪ್ 5 ಗ್ರೀವ್ಸ್
ಅಕ್ಟೋಬರ್ 2023 ರಲ್ಲಿ ಅತ್ಯುತ್ತಮವಾಗಿ ಮಾರಾಟವಾದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಟಾಪ್ 5 ಪಟ್ಟಿಯಲ್ಲಿ ಗ್ರೀವ್ಸ್ ಎಲೆಕ್ಟ್ರಿಕ್ ಇದೆ. ಈ ಸಂಸ್ಥೆ ಕಳೆದ ತಿಂಗಳು ಅಂದರೆ ಅಕ್ಟೋಬರ್‌ನಲ್ಲಿ 4,019 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ 3,612 ಯುನಿಟ್‌ಗಳನ್ನು ಮಾರಾಟ ಮಾಡಿದ್ದು ತಿಂಗಳಿನಿಂದ ತಿಂಗಳಿಗೆ ಶೇಕಡ 11.2ರಷ್ಟು ಬೆಳವಣಿಗೆ ದಾಖಲಾಗಿದೆ.


Click it and Unblock the Notifications