ಕ್ರೆಡಿಟ್ ಕಾರ್ಡ್ ಬಳಕೆ ಈಗ ಸರ್ವೇ ಸಾಮಾನ್ಯವಾಗಿದೆ. ಈ ಕ್ರೆಡಿಟ್ ಕಾರ್ಡ್‌ಗಳು ಸಾಕಷ್ಟು ರೀತಿಯಲ್ಲಿ ಉಪಯೋಗವಾಗುತ್ತವೆ. ಬೇಕಾದ್ದನ್ನು ಕೊಳ್ಳೋದಕ್ಕಾಗಲಿ, ಬೇಕಾದಲ್ಲಿ ಪ್ರಯಾಣಿಸಲಾಗಲಿ ಈಗ ಕ್ರೆಡಿಟ್ ಕಾರ್ಡ್‌ಗಳ ಸೌಲಬ್ಯದಿಂದಲೇ ಉಪಯುಕ್ತವಾಗುತ್ತಿದೆ. ಸುಲಭ ಕ್ರೆಡಿಟ್ ಲಭ್ಯತೆ, ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್‌ಗಳು, ಮತ್ತು ಉಚಿತ ಇಎಂಐ ಆಫರ್‌ಗಳ ಕಾರಣದಿಂದ ಈ ಟ್ರೆಂಡ್ ಜೋರಾಗಿ ಬೆಳೆಯುತ್ತಿದೆ. ಆದರೆ ಈ ಕ್ರೆಡಿಟ್ ಕಾರ್ಡ್ ಬಳಕೆಯ ಜ್ವರದ ಹಿಂದೆ ಇಂಗಿತವಾಗಿರುವ ಆರ್ಥಿಕ ಅಪಾಯಗಳ ಬಗ್ಗೆ ಮಾತ್ರ ಯಾರೂ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ನೀವು ಗಮನಿಸಲೇಬೇಕಾದ 5 ಕ್ರೆಡಿಟ್ ಕಾರ್ಡ್ ಅಪಾಯಗಳ ಬಗ್ಗೆ ಈ ಲೇಖನದಲ್ಲಿದೆ.

1. ಬಡ್ಡಿಯ ಬಲೆಗೆ ಸಿಲುಕುವ ಅಪಾಯ:
ನೀವು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತೀರಿ ಎಂದಾದರೆ, ಅದರ ವ್ಯಯದ ಬಗ್ಗೆ ಗಮನಿಸಲೇಬೇಕು. ನೀವು ಅದರಿಂದ ಬಳಸಿಕೊಂಡ ಹಣಕ್ಕೆ ಇಂತಿಷ್ಟು ಬಡ್ಡಿಯನ್ನು ಪಾವತಿಸಲೇನೇಕು. ಬಡ್ಡಿದರ ಭಾರತದಲ್ಲಿ ಎಲ್ಲಾ ರೀತಿಯ ಸಾಲ ಸಾಧನಗಳಲ್ಲಿ ಅತಿ ಹೆಚ್ಚು ಇದೆ. ಬಹುಬೇಲೆಯಾಗಿ ಬಡ್ಡಿದರವು 35% ರಿಂದ 42% ಶೇಕಡಾವರೆಗೆ ಹೋಗುತ್ತದೆ. ಹಲವರು ತಮ್ಮ ಸಂಪೂರ್ಣ ಬಾಕಿಯನ್ನು ಪಾವತಿಸುವ ಬದಲಿಗೆ ಕೇವಲ 'ಮಿನಿಮಮ್ ಪೇಮೆಂಟ್' ಅನ್ನು ಪಾವತಿಸುತ್ತಾರೆ. ಇದರಿಂದ ಬಡ್ಡಿ ಸಂಗ್ರಹವಾಗುತ್ತಾ ಹೋಗುತ್ತದೆ ಮತ್ತು ಅದೇ ಕಾರಣದಿಂದ ಸಾಲದ ಬಲೆ ಹೆಚ್ಚಾಗುತ್ತದೆ.
2. ಡೀಫಾಲ್ಟ್ ಪ್ರಕರಣಗಳ ಆಘಾತಕಾರಿ ಏರಿಕೆ:
ಇನ್ನು ಕ್ರೆಡಿಟ್ ಕಾರ್ಡ್ NPAಗಳು ಡಿಸೆಂಬರ್ 2023 ರಿಂದ 2024ರ ವರೆಗೆ 28% ಹೆಚ್ಚು ಏರಿಕೆಯಾಗಿ ₹6742 ಕೋಟಿ ಆಗಿವೆ. ಇದು ಅಧಿಕೃತವಾಗಿ ಆರ್‍ಬಿಐನಿಂದ ಬಂದಿರುವ ವರದಿಯಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಇದು ಕೇವಲ ₹1100 ಕೋಟಿಯಷ್ಟಿತ್ತು. ಈ ಸಂಖ್ಯೆಗಳು ನಿರ್ಲಕ್ಷಿಸಲು ಅಸಾಧ್ಯವಾಗಿರುವಷ್ಟು ಗಂಭೀರವಾಗಿವೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ವಿಳಂಬ ಮಾಡುವ ಪ್ರತಿ ತಿಂಗಳು ನಿಮ್ಮ ಕ್ರೆಡಿಟ್ ಸ್ಕೋರ್ ನಿಗೂ ನಿದ್ರೆ ಇಲ್ಲದ ಶತ್ರುವಾಗಬಹುದು.
3. ಯುವಕರಲ್ಲಿ ಗಾಳಿಬದನೆ ಖರೀದಿಯ ದುರ್ಬಲತೆ:
ಇಂದಿನ ಪೀಳಿಗೆಯವರು ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಬ್ರಾಂಡೆಡ್ ಉಡುಪು, ಗ್ಯಾಜೆಟ್‌ಗಳು ಮತ್ತು ಅನೇಕ ಬೃಹತ್ ಖರೀದಿಗಳನ್ನು ಇಎಂಐ ಮೇಲೆ ಮಾಡುತ್ತಿದ್ದಾರೆ. ಸಾಲ ಸುಲಭವಾಗಿ ಲಭ್ಯವಾಗುತ್ತಿರುವುದರಿಂದ, ಜವಾಬ್ದಾರಿಯುತ ಹಣಕಾಸು ವ್ಯವಸ್ಥೆಯ ಅಗತ್ಯತೆಯನ್ನು ಮರೆತುಬಿಡುತ್ತಿದ್ದಾರೆ. ಇದರಿಂದ ಬಜೆಟ್ ಮೀರುವ, ಮರುಪಾವತಿ ವಿಳಂಬ ಹಾಗೂ ಡೀಫಾಲ್ಟ್ ಪ್ರಕರಣಗಳು ಹೆಚ್ಚಾಗುತ್ತಿವೆ.
4. ಉಳಿತಾಯದ ಮೇಲೆ ನಡುಕ:
ಕ್ರೆಡಿಟ್ ಕಾರ್ಡ್‌ಗಳಿಂದ ತಕ್ಷಣದ ಖರ್ಚುಗಳಿಗೆ ಪರಿಹಾರ ಸಿಕ್ಕರೂ, ದೀರ್ಘಾವಧಿಯಲ್ಲಿ ಇದು ನಿಮ್ಮ ಉಳಿತಾಯ ಯೋಜನೆಗಳನ್ನು ದೂಡಬಹುದು. SIP ಅಥವಾ ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಸ್ಥಗಿತಗೊಳಿಸಿ, ಉಳಿತಾಯದ ಬದಲು ಬಾಕಿಗಳ ಪಾವತಿಗೆ ಹಣ ಹರಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು. ಈ ಕಾರಣದಿಂದ ಹಣಕಾಸಿನ ಗುರಿಗಳು ವಿಳಂಬಗೊಳ್ಳುವುದು ಸಹಜ.
5. ಗೋಚರವಾಗದ ಶುಲ್ಕಗಳ ತೊಂದರೆ:
ಹೆಚ್ಚಿನ ಬಳಕೆದಾರರು 'ಗ್ರೆಸ್ ಅಮೌಂಟ್' ಅಥವಾ ಸಂಯೋಜಿತ ಬಿಲ್ ಏನು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದೆ ಖರ್ಚು ಮಾಡುತ್ತಾರೆ. ವರ್ಷದ ಶುಲ್ಕ, ತಡ ಪಾವತಿ ದಂಡ, ಪ್ರಾಸೆಸಿಂಗ್ ಫೀ ಇತ್ಯಾದಿಗಳೊಂದಿಗೆ ನಿಜವಾದ ಸಾಲದ ಮೊತ್ತ ಹೆಚ್ಚಾಗುತ್ತದೆ. ಇದಲ್ಲದೆ, ತಪ್ಪಿದ ಪಾವತಿಗಳಿಂದ ಕ್ರೆಡಿಟ್ ಸ್ಕೋರ್ ಕುಸಿಯುವ ಅಪಾಯವಿದೆ. ಇಲ್ಲಿಯವರೆಗೂ ಗಮನಿಸದ ವೆಚ್ಚಗಳು ಆರ್ಥಿಕ ತೊಂದರೆಗೆ ಕಾರಣವಾಗಬಹುದು.
ಬುದ್ದಿಮತ್ತೆಯಿಂದ ಬಳಸಿ, ಸುಲಭವಾಗಿ ಉಳಿಸಿ:
ಕ್ರೆಡಿಟ್ ಕಾರ್ಡ್‌ನ ವೈಶಿಷ್ಟ್ಯಗಳು ಜಾಗತಿಕ ಆರ್ಥಿಕತೆಯಲ್ಲಿ ಬದಲಾಗುತ್ತಿರುವ ನವೀನ ಪರಿಕಲ್ಪನೆಗಳ ಸಂಕೇತವಾಗಿದ್ದರೂ, ಅವುಗಳನ್ನು ದುರುಪಯೋಗ ಮಾಡಿದರೆ ಸಾಲದ ಬಾಧೆ ಆಗಬಹುದು. ಈ ಕೆಳಗಿನ ನಾಲ್ಕು ಸುಲಭ ಸೂಚನೆಗಳನ್ನು ಪಾಲಿಸಿದರೆ ನೀವು ಭದ್ರವಾಗಿರಬಹುದು:
ಹೀಗಾಗಿ ನೀವು ಇಂತಹ ಅಪಾಯಗಳಿಂದ ತಪ್ಪಿಸಿಕೊಳ್ಳಬೇಕು ಎಂದಾದರೆ, ಪ್ರತಿಮಾಸ ಬಿಲ್ ಅನ್ನು ಸಂಪೂರ್ಣ ಪಾವತಿಸಿ. ಕೇವಲ ತುರ್ತು ಅವಶ್ಯಕತೆಗಳಿಗೆ ಮಾತ್ರ ಕಾರ್ಡ್ ಬಳಸಿ. ನಿಯಮಿತವಾಗಿ ನಿಮ್ಮ ಬಿಲ್ ಸ್ಟೇಟ್ಮೆಂಟ್ ಪರಿಶೀಲಿಸಿ. ಆಕರ್ಷಕ ಆಫರ್‌ಗಳ ಹಿಂದೆ ಬಿದ್ದು ಅವಶ್ಯಕತೆಗಳೇ ಮರೆಯಬೇಡಿ.ನಿಮ್ಮ ಹಣಕಾಸು ಆರೋಗ್ಯವನ್ನು ನೀವು ಹೇಗೆ ನೋಡಿಕೊಳ್ಳುತ್ತೀರಿ ಎಂಬುದೇ ಭವಿಷ್ಯದ ನೆಲೆಗಟ್ಟಾಗಲಿದೆ. ಕ್ರೆಡಿಟ್ ಕಾರ್ಡ್ ನಿಮ್ಮ ಕೈಯಲ್ಲಿರುವ ಶಕ್ತಿಯ ಸರಣಿಯಾಗಿದೆ.


Click it and Unblock the Notifications