ಸರ್ಕಾರಿ ಸ್ವಾಮ್ಯದ ಅಥವಾ ಖಾಸಗಿ ಬ್ಯಾಂಕ್ ಗಳ ಪೈಕಿ ಯಾವುದರಲ್ಲಾದರೂ ಪರ್ಸನಲ್ ಲೋನ್ ಪಡೆಯಬೇಕು ಅನ್ನೋ ಉದ್ದೇಶ ನಿಮಗಿದೆಯಾ? ಎಲ್ಲಿ ಕಡಿಮೆ ಬಡ್ಡಿ ರೇಟ್ ಗೆ ಪರ್ಸನಲ್ ಲೋನ್ ಸಿಗುತ್ತೆ ಅನ್ನೋ ಪ್ರಶ್ನೆ ಇದೆಯಾ? ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5 ಲಕ್ಷ ರುಪಾಯಿ ಸಾಲವು 5 ವರ್ಷದ ಅವಧಿಗಾದರೆ 8.9% ವಾರ್ಷಿಕ ಬಡ್ಡಿ ದರದಲ್ಲಿ ಸಿಗುತ್ತದೆ.
ಆ ನಂತರ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 8.95%ಗೆ ಸಿಗುತ್ತದೆ. ಸಾಮಾನ್ಯವಾಗಿಯೇ ಪರ್ಸನಲ್ ಲೋನ್ ಮೇಲಿನ ಬಡ್ಡಿ ಸ್ವಲ್ಪ ದುಬಾರಿ. ಏಕೆಂದರೆ, ಅದಕ್ಕಾಗಿ ಏನನ್ನೂ ಅಡಮಾನ ಮಾಡುವುದಿಲ್ಲ. ಇಂಥ ಸಾಲವನ್ನು ಅನ್ ಸೆಕ್ಯೂರ್ಡ್ ಲೋನ್ ಅಂತಲೇ ಕರೆಯುತ್ತಾರೆ.
ಒಂದು ವೇಳೆ ಉಳಿದ ಯಾವ ಸೆಕ್ಯೂರ್ಡ್ ಸಾಲವು ದೊರೆಯುವಂತೆ ಇಲ್ಲ, ಇದೇ ಅಂತಿಮ ಆಯ್ಕೆ ಹಾಗೂ ಇದಕ್ಕಿಂತ ಕಡಿಮೆ ಬಡ್ಡಿ ದರಕ್ಕೆ ಸಾಲ ಸಿಗೋದಿಲ್ಲ ಅಂತಾದಲ್ಲಿ ಮಾತ್ರ ಪರ್ಸನಲ್ ಲೋನ್ ಪಡೆದುಕೊಳ್ಳಿ. ಈ ಲೇಖನದಲ್ಲಿ ಹತ್ತು ಬ್ಯಾಂಕ್ ಗಳಲ್ಲಿನ ಪರ್ಸನಲ್ ಲೋನ್ ಮೇಲಿನ ವಾರ್ಷಿಕ ಬಡ್ಡಿ ದರದ ಮಾಹಿತಿ ಇದೆ.

* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 8.90%
* ಪಂಜಾಬ್ ನ್ಯಾಷನಲ್ ಬ್ಯಾಂಕ್ 8.95%
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 8.95%
* ಇಂಡಿಯನ್ ಬ್ಯಾಂಕ್ 9.05%
* ಬ್ಯಾಂಕ್ ಆಫ್ ಮಹಾರಾಷ್ಟ್ರ 9.55%
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 9.60%
* ಯುಕೋ ಬ್ಯಾಂಕ್ 10.05%
* ಬ್ಯಾಂಕ್ ಆಫ್ ಬರೋಡ 10.10%
* ಫೆಡರಲ್ ಬ್ಯಾಂಕ್ 10.49%
* ಎಚ್ ಡಿಎಫ್ ಸಿ ಬ್ಯಾಂಕ್ 10.75%


Click it and Unblock the Notifications