ಪ್ರಸ್ತುತ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್‌ನ (ಎಚ್‌ಯುಎಲ್) ಎಂಡಿ ಹಾಗೂ ಸಿಇಒ ಆಗಿರುವ ಸಂಜೀವ್ ಮೆಹ್ತಾ ಮುಂದಿನ ವರ್ಷ ನಿವೃತ್ತಿ ಹೊಂದಲಿದ್ದಾರೆ. ಸಂಸ್ಥೆಯಲ್ಲಿ ಈ ಸ್ಥಾನವನ್ನು ಆಂತರಿಕವಾಗಿ ಉದ್ಯೋಗದಲ್ಲಿರುವವರೆಗೆ ಪಡೆಯುವ ಸಾಧ್ಯತೆಯಿದೆ.
ಮಾಹಿತಿ ಪ್ರಕಾರ, ಪ್ರಸ್ತುತ ಮುಖ್ಯ ಅಧಿಕಾರಿಗಳಲ್ಲಿ ಒಬ್ಬರಾಗಿರುವ ರೋಹಿತ್ ಜಾವಾ ಹಾಗೂ ಆಂಗ್ಲೊ-ಡಚ್‌ನ ಮಾರುಕಟ್ಟೆ ನಿರ್ವಹಿಸುವ ಮುಖ್ಯ ಅಧಿಕಾರಿಯಾದ ಪ್ರಿಯಾ ನಾಯರ್ ಹಿಂದೂಸ್ತಾನ್ ಯೂನಿಲಿವರ್‌ನ ಸಿಇಒ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದಾರೆ. ಆದರೆ ಸಂಜೀವ್ ಮೆಹ್ತಾ ಸಿಇಒ ಸ್ಥಾನದಿಂದ ನಿವೃತ್ತಿಯನ್ನು ಪಡೆಯುತ್ತಾರೆಯೇ ಅಥವಾ ಅವಧಿ ವಿಸ್ತರಣೆಯಾಗಲಿದೆಯೇ ಎಂಬುವುದು ಸ್ಪಷ್ಟವಾಗಿಲ್ಲ.
ಹಿಂದೂಸ್ತಾನ್‌ನ ಬ್ಯೂಟಿ ಹಾಗೂ ವೆಲ್‌ಬಿಂಗ್ ಸೆಗ್‌ಮೆಂಟ್‌ನ ಸಿಎಂಒ ಆಗಿ ಪ್ರಿಯಾ ನಾಯರ್ ಇತ್ತೀಚೆಗೆ ನೇಮಕವಾದ ಕಾರಣದಿಂದಾಗಿ ರೋಹಿತ್ ಜಾವಾ ಮುಂದಿನ ಹಿಂದೂಸ್ತಾನ್ ಯೂನಿಲಿವರ್ ಸಿಇಒ ಆಗುವ ಸಾಧ್ಯತೆ ಅಧಿಕವಾಗಿದೆ. ಆದರೆ ಈ ಬಗ್ಗೆ ಸಂಸ್ಥೆ ಹೇಳುವುದು ಏನು?, ಮುಂದೆ ಓದಿ...

ಸಂಸ್ಥೆ ಹೇಳುವುದು ಏನು?
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಎಚ್‌ಯುಎಲ್, "ಈಗ ನಾವು ಯಾವುದೇ ವದಂತಿ, ಊಹೆಗಗಳಿಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಪ್ರಸ್ತುತ ಸಂಜೀವ್ ಮೆಹ್ತಾ ಸಂಸ್ಥೆಯ ಸಿಇಒ ಆಗಿ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ," ಎಂದು ತಿಳಿಸಿದೆ. "ಸಂಜೀವ್ ಮೆಹ್ತಾ 2013ರ ಅಕ್ಟೋಬರ್‌ನಿಂದ ಸಂಸ್ಥೆಯ ಮುನ್ನಡೆಗೆ ಸಾಕ್ಷಿಯಾಗಿದ್ದಾರೆ. 2018ರಿಂದ ಅವರನ್ನು ಮರುನೇಮಕ ಮಾಡಲಾಗಿದೆ. ಸಂಸ್ಥೆಯ ಷೇರುದಾರರು ಸಭೆಯನ್ನು ನಡೆಸಿ ಸಂಜೀವ್ ಮೆಹ್ತಾರನ್ನು ಮರುನೇಮಕ ಮಾಡಿಕೊಂಡಿದ್ದಾರೆ," ಎಂದು ಕೂಡಾ ಉಲ್ಲೇಖಿಸಲಾಗಿದೆ.
2018 ಸಂಜೀವ್ ಮೆಹ್ತಾರನ್ನು ಎಚ್‌ಯುಎಲ್ ಸಂಸ್ಥೆಯ ಚೇರ್‌ಮನ್ ಆಗಿ ನೇಮಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಅಂದರೆ ಮಾರ್ಚ್ 31ರಿಂದ ಜಾರಿಗೆ ಬರುವಂತೆ ಮೆಹ್ತಾ ಚೇರ್‌ಮನ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಆದರೆ ಸಂಸ್ಥೆಯ ಎಂಡಿ ಹಾಗೂ ಸಿಇಒ ಆಗಿ ಮುಂದುವರಿದಿದ್ದಾರೆ.
ಮೆಹ್ತಾ ಯೂನಿಲಿವರ್ ಲೀಡರ್‌ಶಿಪ್ ಎಕ್ಸೀಕ್ಯೂಟಿವ್‌ನ (ಯುಎಲ್‌ಇ) ಸದಸ್ಯರು ಕೂಡಾ ಹೌದು. ಯೂನಿಲಿವರ್ ದಕ್ಷಿಣ ಏಷ್ಯಾದ ಅಧ್ಯಕ್ಷರು ಆಗಿದ್ದಾರೆ. ಭಾರತ ಮಾತ್ರವಲ್ಲದೆ ಮೆಹ್ತಾ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲಿ ಯೂನಿಲಿವರ್ ಉದ್ಯಮ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಕೂಡಾ ಹೊಂದಿದ್ದಾರೆ. ಈ ವರ್ಷದ ಜುಲೈನಲ್ಲಿ ಸಂಜೀವ್ ಯೂನಿಲಿವರ್ ಇಂಡೋನೇಷ್ಯಾದ ನಾನ್-ಎಕ್ಸಿಕ್ಯೂಟಿವ್ ಚೇರ್‌ಮನ್ ಆಗಿ ನೇಮಕರಾಗಿದ್ದಾರೆ. ಈ ಎಲ್ಲ ನಡೆಯನ್ನು ಸಂಸ್ಥೆಯ ಬೆಳವಣಿಗೆಗಾಗಿ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ.


Click it and Unblock the Notifications