ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧವು ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಯ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತಿದೆ. ಜಾಗತಿಕ ಕಚ್ಚಾ ತೈಲ ಬೆಲೆಯು ಸುಮಾರು 13 ವರ್ಷಗಳಲ್ಲಿ ಭಾರೀ ಏರಿಕೆ ಆಗಿದೆ. ಬ್ಯಾರೆಲ್‌ಗೆ 140 ಡಾಲರ್ ಇದೆ. ಈ ನಿಟ್ಟಿನಲ್ಲಿ ಹಲವಾರು ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡಲು ಮುಂದಾಗಿದೆ.
ರಷ್ಯಾದ ಮೇಲೆ ಹೇರಿರುವ ನಿರ್ಬಂಧಗಳು ತೈಲ ಮಾರಾಟವನ್ನು ಅಡ್ಡಿಪಡಿಸಿವೆ. ಈ ಸಂದರ್ಭದಲ್ಲಿ ತೈಲದ ಬೇಡಿಕೆಗಳು ಅಧಿಕವಾಗುತ್ತಿದ್ದು, ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಿಂದಾಗಿ ಶೀಘ್ರದಲ್ಲೇ ಭಾರತದಲ್ಲಿ ಇಂಧನ ದರವು ಏರಿಕೆ ಆಗಲಿದೆ.
ಭಾನುವಾರ ಜಾಗತಿಕ ತೈಲ ಮಾನದಂಡ ಬ್ರೆಂಟ್ ಬೆಲೆ 139.13ಗೆ ಏರಿಕೆ ಆಗಿದೆ. ಈ ಬೆಳವಣಿಗೆಯು ರಾತ್ರಿ ಬೆಳಗಾಗುವುದರೊಳಗೆ ಕಂಡು ಬಂದಿದೆ. 2008ರ ಜುಲೈ ಬಳಿಕ ಮೊದಲ ಬಾರಿಗೆ ಜಾಗತಿಕ ಕಚ್ಚಾ ತೈಲ ದರವು ಈ ಮಟ್ಟಿಗೆ ಏರಿಕೆ ಕಂಡಿದೆ. ಈ ನಡುವೆ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ತೀವ್ರ ಮಟ್ಟಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ.

ಈಗಾಗಲೇ ಭಾರತದಲ್ಲಿ ಈ ವರ್ಷದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವು ಶೇಕಡ 60ರಷ್ಟು ಏರಿಕೆ ಕಂಡಿದೆ. ಈ ನಡುವೆ ರೂಪಾಯಿ ಮೌಲ್ಯವು ಇಳಿಕೆ ಕಾಣುತ್ತಿದೆ. ಇದು ಭಾರತದ ಆರ್ಥಿಕತೆಗೆ ತೀವ್ರ ಪರಿಣಾಮವನ್ನು ಉಂಟು ಮಾಡಲಿದೆ. ಹಣದುಬ್ಬರ ತೀರಾ ಮಟ್ಟಕ್ಕೆ ಏರಿಕೆ ಹಾದಿಯಲ್ಲಿ ಸಾಗುತ್ತಲಿದೆ.
15 ರಿಂದ 22 ರು ಪ್ರತಿ ಲೀಟರ್ ನಂತೆ ಬೆಲೆ ಏರಿಕೆ ಆಗುತ್ತಾ?
ಈಗಾಗಲೇ ಜನರ ಜೇಬಿಗೆ ಕತ್ತರಿಯನ್ನು ಹಾಕುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ದರವು ಇನ್ನೂ ಅಧಿಕ ಆಗುವ ಸಾಧ್ಯತೆ ಇದೆ. ಕಂಪನಿಗಳ ಪ್ರಕಾರ ಸುಮಾರು 15 ರಿಂದ 22 ರು ಪ್ರತಿ ಲೀಟರ್ ನಂತೆ ಬೆಲೆ ಏರಿಕೆ ಮಾಡುವ ಮೂಲಕ ನಷ್ಟ ಸರಿದೂಗಿಸಬಹುದು. ಆದರೆ ಇದು ಜನರನ್ನು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡುವುದಂತ್ತು ಖಂಡಿತ.
"ಪಂಚ ರಾಜ್ಯಗಳ ಚುನಾವಣೆ ಕೊನೆಯಾದ ಬೆನ್ನಲ್ಲೇ ಸರ್ಕಾರವು ಇಂಧನ ದರ ಪರಿಷ್ಕರಣೆಗೆ ಅವಕಾಶ ನೀಡಲಿದೆ," ಎಂಬ ಭರವಸೆಯನ್ನು ತೈಲ ಕಂಪನಿಗಳು ಹೊಂದಿದೆ. ಆದರೆ ತೈಲ ಕಂಪನಿಗಳು ಒಮ್ಮೆಲ್ಲೇ ಈ ಬೆಲೆ ಏರಿಕೆಯನ್ನು ಮಾಡಲಾರದು. ಒಂದೇ ಬಾರಿಗೆ ಆ ರೀತಿ ಹತ್ತು, ಹದಿನೈದು ರೂಪಾಯಿ ಏರಿಕೆ ಮಾಡಿದರೆ, ಜನರ ಮೇಲೆ ಭಾರೀ ಪರಿಣಾಮ ಉಂಟಾಗಲಿದೆ. ಈ ನಿಟ್ಟಿನಲ್ಲಿ ತೈಲ ಕಂಪನಿಗಳು ಪ್ರತಿ ದಿನ ಐವತ್ತು ಪೈಸೆಯಂತೆ ಬೆಲೆಯನ್ನು ಏರಿಕೆ ಮಾಡುವ ಸಾಧ್ಯತೆ ಇದೆ.
ಭಾರತದಲ್ಲಿ ಬಳಕೆಯಾಗಿವ ಇಂಧನದ ಪೈಕಿ ಶೇ 85ರಷ್ಟು ಆಮದು ಮಾಡಿಕೊಳ್ಳಲಾಗುತ್ತದೆ. ಗ್ರಾಹಕರ ದರ ಸೂಚ್ಯಂಕ, ರೀಟೇಲ್ ಹಣ ದುಬ್ಬರ ದರಗಳು ಜನವರಿ ತಿಂಗಳಿನಿಂದ ಏರಿಕೆ ಕಾಣುತ್ತಿವೆ. ಹೆಚ್ಚಿನ ಸರಕು ವೆಚ್ಚಗಳ ಏರಿಕೆಯ ಕಾರಣ ಹಣದುಬ್ಬರ ಕಾಣಲಾಗಿದೆ. ಉದ್ಯಮದ ಲೆಕ್ಕಾಚಾರಗಳ ಪ್ರಕಾರ, ಕಚ್ಚಾ ತೈಲ ಬೆಲೆಯಲ್ಲಿ 10 ಪ್ರತಿಶತ ಏರಿಕೆಯು ಸಿಪಿಐ ಹಣದುಬ್ಬರದಲ್ಲಿ ಸುಮಾರು 10 ಮೂಲ ಅಂಕಗಳನ್ನು ಸೇರಿಸುತ್ತದೆ.
ನಿನ್ನೆಗೆ ಹೋಲಿಕೆ ಮಾಡಿದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಯಾವ ಬದಲಾವಣೆಯು ಕಂಡು ಬಂದಿಲ್ಲ. ಆದರೆ ಶೀಘ್ರದಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ದರವು ತೀವ್ರ ಮಟ್ಟಕ್ಕೆ ಏರಿಕೆ ಆಗಲಿದೆ. ಉಕ್ರೇನ್ ಹಾಗೂ ರಷ್ಯಾ ಯುದ್ಧದ ನಡುವೆ ಈಗಾಗಲೇ ಬ್ರೆಂಟ್ ಕಚ್ಚಾತೈಲದ ದರ ಏರುಗತಿಯಲ್ಲೇ ಸಾಗುತ್ತಿದೆ. ಈ ಸಮಯಕ್ಕೆ 127.0 ಡಾಲರ್ ಪ್ರತಿ ಬ್ಯಾರೆಲ್ ನಂತಿದೆ (1 USD=76.92 ರುಪಾಯಿ). (ಒನ್‌ಇಂಡಿಯಾ ಸುದ್ದಿ)


Click it and Unblock the Notifications