For Quick Alerts
ALLOW NOTIFICATIONS  
For Daily Alerts

India Unemployment Rate : ದೇಶದಲ್ಲಿ ಇಳಿಕೆ ಕಾಣುತ್ತಿದೆ ನಿರುದ್ಯೋಗ ಪ್ರಮಾಣ

|

ಕೊರೊನಾ ವೈರಸ್‌ ಸೋಂಕಿನ ಕಾರಣದಿಂದಾಗಿ ದೇಶದಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಿಕೆ ಮಾಡುತ್ತಿದ್ದಂತೆ ದೇಶದಲ್ಲಿ ಆರ್ಥಿಕತೆಯು ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಈ ನಡುವೆ ಭಾರತದಲ್ಲಿ ನಿರುದ್ಯೋಗ ಪ್ರಮಾಣವು ಇಳಿಕೆ ಕಾಣುತ್ತಿದೆ ಎಂದು ಸಿಎಂಐಇ ಡೇಟಾ ಮಾಹಿತಿ ನೀಡಿದೆ.

ಸೆಂಟರ್‌ ಫಾರ್‌ ಮಾನೆಟರಿಂಗ್ ಇಂಡಿಯನ್‌ ಇಕಾನಮಿ ಪ್ರತಿ ತಿಂಗಳು ಭಾರತದಲ್ಲಿನ ನಿರುದ್ಯೋಗ ಪ್ರಮಾಣದ ಬಗ್ಗೆ ಪರೀಶಿಲನೆ ನಡೆಸಿ ಡೇಟಾ ಬಿಡುಗಡೆ ಮಾಡುತ್ತದೆ. ಕಳೆದ ತಿಂಗಳು ಈ ಡೇಟಾ ಪ್ರಕಾರ ಭಾರತದಲ್ಲಿ ನಿರುದ್ಯೋಗ ಪ್ರಮಾಣವು ಅಧಿಕವಾಗಿತ್ತು. ಆದರೆ ಈ ತಿಂಗಳಿನಲ್ಲಿ ಭಾರತದಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಆಗಿದೆ ಎಂದು ಈ ಡೇಟಾವು ಹೇಳುತ್ತದೆ.

ಆರ್ಥಿಕತೆಯು ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ದೇಶದಲ್ಲಿ ನಿರುದ್ಯೋಗ ದರವು ಕಡಿಮೆಯಾಗುತ್ತಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಮಾಸಿಕ ದತ್ತಾಂಶದ ಪ್ರಕಾರ ಫೆಬ್ರವರಿ 2022 ರಲ್ಲಿ ಭಾರತದಲ್ಲಿ ಒಟ್ಟಾರೆ ನಿರುದ್ಯೋಗ ದರವು ಶೇಕಡಾ 8.10 ರಷ್ಟಿತ್ತು. ಇದು ಮಾರ್ಚ್‌ನಲ್ಲಿ ಶೇಕಡಾ 7.6 ಕ್ಕೆ ಇಳಿದಿದೆ ಎಂದು ಬಹಿರಂಗಪಡಿಸಿದೆ.

ದೇಶದಲ್ಲಿ ಇಳಿಕೆ ಕಾಣುತ್ತಿದೆ ನಿರುದ್ಯೋಗ ಪ್ರಮಾಣ

ಏಪ್ರಿಲ್ 2 ರಂದು, ಈ ಅನುಪಾತವು ಶೇಕಡಾ 7.5 ಕ್ಕೆ ಇಳಿದಿದೆ. ನಗರ ನಿರುದ್ಯೋಗ ದರವು ಶೇಕಡಾ 8.5 ಮತ್ತು ಗ್ರಾಮೀಣ ಭಾಗವು ಶೇಕಡಾ 7.1 ರಷ್ಟಿದೆ. ಒಟ್ಟಾರೆ ನಿರುದ್ಯೋಗ ದರವು ಕಡಿಮೆಯಾಗುತ್ತಿದ್ದರೂ, ಭಾರತದಂತಹ "ಬಡ" ದೇಶಕ್ಕೆ ಇದು ಇನ್ನೂ ಅಧಿಕವಾಗಿದೆ ಎಂದು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನ ಅರ್ಥಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಅಭಿರೂಪ್ ಸರ್ಕಾರ್ ಹೇಳಿದ್ದಾರೆ.

ನಿರುದ್ಯೋಗ ಪ್ರಮಾಣ ಇಳಿಕೆಯಾದರೂ ಕಡಿಮೆಯಲ್ಲ!

ಅನುಪಾತದಲ್ಲಿನ ಇಳಿಕೆಯು ಎರಡು ವರ್ಷಗಳ ಕಾಲ ಕೊರೊನಾ ವೈರಸ್‌ನಿಂದ ತತ್ತರಿಸಿದ ನಂತರ ಆರ್ಥಿಕತೆಯು ಮತ್ತೆ ಟ್ರ್ಯಾಕ್‌ಗೆ ಬರುತ್ತಿದೆ ಎಂದು ತೋರಿಸುತ್ತದೆ ಎಂದು ಅವರು ಹೇಳಿದರು. "ಆದರೆ ಇನ್ನೂ, ಬಡ ದೇಶವಾಗಿರುವ ಭಾರತಕ್ಕೆ ಈ ನಿರುದ್ಯೋಗ ದರವು ಅಧಿಕವಾಗಿದೆ. ಬಡ ಜನರು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ನಿರುದ್ಯೋಗಿಗಳಾಗಿ ಉಳಿಯಲು ಸಾಧ್ಯವಿಲ್ಲ. ಆದ್ದರಿಂದಾಗಿ ಅವರು ಯಾವುದೇ ಕೆಲಸವನ್ನಾದರೂ ಮಾಡುತ್ತಿದ್ದಾರೆ," ಎಂದು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನ ಅರ್ಥಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಅಭಿರೂಪ್ ಸರ್ಕಾರ್ ತಿಳಿಸಿದರು.

ದೇಶದಲ್ಲಿ ಇಳಿಕೆ ಕಾಣುತ್ತಿದೆ ನಿರುದ್ಯೋಗ ಪ್ರಮಾಣ

ಅಂಕಿಅಂಶಗಳ ಪ್ರಕಾರ, ಹರಿಯಾಣದಲ್ಲಿ ಮಾರ್ಚ್‌ನಲ್ಲಿ ಅತಿ ಹೆಚ್ಚು ನಿರುದ್ಯೋಗ ದರ ಇದೆ. ಈ ರಾಜ್ಯದಲ್ಲಿ 26.7 ಶೇಕಡ ನಿರುದ್ಯೋಗ ದರವಿದೆ. ರಾಜಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ ಶೇಕಡಾ 25, ಬಿಹಾರದಲ್ಲಿ ಶೇಕಡಾ 14.4, ತ್ರಿಪುರದಲ್ಲಿ ಶೇಕಡಾ 14.1 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇಕಡಾ 5.6ರಷ್ಟು ನಿರುದ್ಯೋಗ ಪ್ರಮಾಣವಿದೆ.

ಏಪ್ರಿಲ್ 2021 ರಲ್ಲಿ, ಒಟ್ಟಾರೆ ನಿರುದ್ಯೋಗ ದರವು ಶೇಕಡಾ 7.97 ರಷ್ಟಿತ್ತು ಮತ್ತು ಕಳೆದ ವರ್ಷ ಮೇ ತಿಂಗಳಲ್ಲಿ 11.84 ಶೇಕಡಾಕ್ಕೆ ಏರಿತು. ಮಾರ್ಚ್, 2022 ರಲ್ಲಿ ಕರ್ನಾಟಕ ಮತ್ತು ಗುಜರಾತ್ ಕನಿಷ್ಠ ನಿರುದ್ಯೋಗ ದರವನ್ನು ಪ್ರತಿ ಶೇಕಡಾ ದಾಖಲು ಮಾಡಿದೆ. ಈ ರಾಜ್ಯಗಳಲ್ಲಿ ಮಾರ್ಚ್ ತಿಂಗಳಿನಲ್ಲಿ 1.8. ಶೇಕಡ ನಿರುದ್ಯೋಗ ಪ್ರಮಾಣವಿದೆ.

English summary

Unemployment rate decreasing in India Says CMIE

Unemployment rate decreasing in India Says CMIE.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X