For Quick Alerts
ALLOW NOTIFICATIONS  
For Daily Alerts

Economic Survey 2023-24 : ಜ.31ರಂದು ಆರ್ಥಿಕ ಸಮೀಕ್ಷೆ ಮಂಡನೆ, ಏನಿದು, ಏನಿರುತ್ತದೆ ಇಲ್ಲಿದೆ ಮಾಹಿತಿ

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಜನವರಿ 31ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಫೆಬ್ರವರಿ 1ರಂದು ಬಜೆಟ್ ಮಂಡಿಸಲಾಗುತ್ತದೆ. ಅದಕ್ಕೂ ಮುನ್ನ ಬಜೆಟ್ ಅಧಿವೇಶನದಲ್ಲಿ ಜನವರಿ 31ರಂದು ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡಲಾಗುತ್ತದೆ.

 

ಕೇಂದ್ರ ಸರ್ಕಾರವು ಜನವರಿ 31ರಂದು 2022-2023ರ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್‌ ಸೆಷನ್‌ನಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡಲಿದ್ದಾರೆ. ಕಳೆದ ವರ್ಷವೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಣಕಾಸು ಸಮೀಕ್ಷೆಯನ್ನು ಮಂಡಿಸಿದ್ದಾರೆ.

Economic Survey: 2023ರ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ಶೇ.8-8.5 ನಿರೀಕ್ಷೆEconomic Survey: 2023ರ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ಶೇ.8-8.5 ನಿರೀಕ್ಷೆ

ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಮುಖ್ಯ ಹಣಕಾಸು ಸಲಹೆಗಾರರು ಹಾಗೂ ಹಣಕಾಸು ಸಚಿವರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಏನಿದು ಆರ್ಥಿಕ ಸಮೀಕ್ಷೆ, ಈ ಸಮೀಕ್ಷಾ ವರದಿಯಲ್ಲಿ ಏನಿರುತ್ತದೆ, ಯಾವಾಗ ಇದನ್ನು ಬಿಡುಗಡೆ ಮಾಡಲಾಗುತ್ತದೆ, ಎಂಬ ಮೊದಲಾದ ಮಾಹಿತಿ ಇಲ್ಲಿದೆ ಮುಂದೆ ಓದಿ....

 ಆರ್ಥಿಕ ಸಮೀಕ್ಷೆ ಎಂದರೇನು, ಯಾವಾಗ ಬಿಡುಗಡೆ ಮಾಡಲಾಗುತ್ತದೆ?

ಆರ್ಥಿಕ ಸಮೀಕ್ಷೆ ಎಂದರೇನು, ಯಾವಾಗ ಬಿಡುಗಡೆ ಮಾಡಲಾಗುತ್ತದೆ?

ಆರ್ಥಿಕ ಸಮೀಕ್ಷೆ ಎಂಬುವುದು ಒಂದು ಹಣಕಾಸು ವರ್ಷದ ಲೆಕ್ಕಾಚಾರವಾಗಿದೆ. ಸರ್ಕಾರದ ಮುಖ್ಯ ಹಣಕಾಸು ಸಲಹಗಾರ (ಸಿಇಎ) ವಿ ಅನಂತ್ ನಾಗೇಶ್ವರಮ್ ಈ ಆರ್ಥಿಕ ಸಮೀಕ್ಷೆಯನ್ನು ತಯಾರಿ ಮಾಡುತ್ತಾರೆ. ಈ ಆರ್ಥಿಕ ಸಮೀಕ್ಷೆಯನ್ನು ಪ್ರತಿ ವರ್ಷವೂ ಕೂಡಾ ಬಜೆಟ್‌ ಮಂಡನೆ ಮಾಡುವ ಒಂದು ದಿನಕ್ಕೂ ಮುನ್ನ ಮಂಡನೆ ಮಾಡಲಾಗುತ್ತದೆ. ಜನವರಿ 31, 2023ರಂದು ಆರ್ಥಿಕ ಸಮೀಕ್ಷೆ ಬಿಡುಗಡೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತ ಪಡಿಸಲಿದ್ದಾರೆ.

 ಸಮೀಕ್ಷೆಯಲ್ಲಿ ಏನು ಇರಲಿದೆ?

ಸಮೀಕ್ಷೆಯಲ್ಲಿ ಏನು ಇರಲಿದೆ?

ಪ್ರಸ್ತುತ ಹಣಕಾಸು ವರ್ಷ 2022-2024ರ ಭಾರತದ ಆರ್ಥಿಕ ಸ್ಥಿತಿಯ ಬಗ್ಗೆ ಈ ಸಮೀಕ್ಷೆಯಲ್ಲಿ ಉಲ್ಲೇಖ ಮಾಡಲಾಗಿರುತ್ತದೆ. ಪ್ರತಿ ವರ್ಷವೂ ಆ ವರ್ಷದ ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಲಾಗಿರುತ್ತದೆ. ಬಜೆಟ್ ಸೆಗ್‌ಮೆಂಟ್‌ನಲ್ಲಿ ಎರಡು ಭಾಗಗಳಿವೆ. ಭಾಗ ಎ ಮತ್ತು ಭಾಗ ಬಿ. ಭಾಗ ಒಂದು ಸಾಮಾನ್ಯವಾಗಿ ಆ ವರ್ಷ ಆರ್ಥಿಕ ಬೆಳವಣಿಗೆಯ ಬಗ್ಗೆ ಮಾಹಿತಿ ಹೊಂದಿರುತ್ತದೆ, ಎರಡನೇ ಭಾಗದಲ್ಲಿ ಸಾಮಾಜಿಕ ಭದ್ರತೆ, ಬಡತನ, ಶಿಕ್ಷಣ, ಆರೋಗ್ಯ, ಮಾನವ ಬೆಳವಣಿಗೆ ಮತ್ತು ವಾತಾವರಣದ ಬಗ್ಗೆ ಉಲ್ಲೇಖ ಮಾಡಲಾಗುತ್ತದೆ. ಭಾರತದ ಜಿಡಿಪಿ, ಹಣದುಬ್ಬರ, ಟ್ರೇಡ್ ಡೆಫಿಸಿಟ್ ಮೊದಲಾದ ಮಾಹಿತಿ ಇದರಲ್ಲಿ ಇರಲಿದೆ.

 ಆರ್ಥಿಕ ಸಮೀಕ್ಷೆ ಎಲ್ಲಿ ಲಭ್ಯ, ಆರಂಭ ಯಾವಾಗ?
 

ಆರ್ಥಿಕ ಸಮೀಕ್ಷೆ ಎಲ್ಲಿ ಲಭ್ಯ, ಆರಂಭ ಯಾವಾಗ?

ಆರ್ಥಿಕ ಸಮೀಕ್ಷೆಯ ಆಕ್ಸಸ್ ಅನ್ನು ನಾವು ಪಡೆಯಬಹುದು. http://www.indiabudget.gov.in/economicsurvey ರಲ್ಲಿ ಆರ್ಥಿಕ ಸಮೀಕ್ಷೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪಾರ್ಲಿಮೆಂಟ್‌ನಲ್ಲಿ ಸಮೀಕ್ಷೆಯನ್ನು ಪ್ರಸ್ತುತ ಪಡಿಸಿದ ಬಳಿಕ, ಸಮೀಕ್ಷೆ ಲಭ್ಯವಾಗಲಿದೆ. ಭಾರತದಲ್ಲಿ ಮೊದಲ ಬಾರಿಗೆ 1950-51ರಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗಿದೆ. 1964ರವೆಗೂ ಕೇಂದ್ರ ಬಜೆಟ್ ಜೊತೆಗೆಯೇ ಈ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತಿತ್ತು. ಆದರೆ ಬಳಿಕ ಸಮೀಕ್ಷೆಯನ್ನು ಬಜೆಟ್‌ಗೂ ಒಂದು ದಿನ ಮುನ್ನ ಮಂಡಿಸಲು ಆರಂಭಿಸಲಾಯಿತು.

English summary

Union Budget 2023: Economic Survey to be out on jan 31; All you need to know about economic report

Union Budget 2023: The Economic Survey for 2022-23 will be released on Tuesday, January 31. all you need to know about this.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X