Income Tax Budget 2023 : ತೆರಿಗೆದಾರರಿಗೆ ಸಿಹಿಸುದ್ದಿ: 7 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಹಣಕಾಸು ವರ್ಷದ ಬಜೆಟ್ ಮಂಡನೆ ವೇಳೆ ತೆರಿಗೆದಾರರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ. ತೆರಿಗೆದಾರರ ನಿರೀಕ್ಷೆಯಂತೆ ಕೇಂದ್ರ ತೆರಿಗೆ ವಿನಾಯಿತಿ ಮಿತಿಯನ್ನು ಏರಿಕೆ ಮಾಡಿದೆ.

ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ಈ ಹಿಂದೆ 5 ಲಕ್ಷ ರೂಪಾಯಿವರೆಗೆ ಆದಾಯವನ್ನು ಹೊಂದಿರುವವರು ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗಿರಲಿಲ್ಲ. ಆದರೆ ಈಗ ಆ ಸ್ಲ್ಯಾಬ್ ಅನ್ನು 7 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಅಂದರೆ 7 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರು ಯಾವುದೇ ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ.

ಕಳೆದ ವರ್ಷವೂ ಬಜೆಟ್ ವೇಳೆ ಕೇಂದ್ರ ಸರ್ಕಾರವು ತೆರಿಗೆ ಸ್ಲ್ಯಾಬ್ ಅನ್ನು ಪರಿಷ್ಕರಣೆ ಮಾಡುವ ನಿರೀಕ್ಷೆಯಿತ್ತು. ಈ ವರ್ಷವೂ ಈ ಹಣದುಬ್ಬದರ ನಡುವೆ ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಣೆ ಬೇಡಿಕೆಯಿತ್ತು. ಆದರೆ ಈ ವರ್ಷ ತೆರಿಗೆ ಪಾವತಿದಾರರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿಯನ್ನು ನೀಡಿದೆ.

ತೆರಿಗೆದಾರರಿಗೆ ಸಿಹಿಸುದ್ದಿ: 7 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ

ಹೊಸ ಆದಾಯ ತೆರಿಗೆ ಸ್ಲ್ಯಾಬ್ ಈ ಕೆಳಗಿನಂತಿದೆ

ವಾರ್ಷಿಕ ಆದಾಯ- ತೆರಿಗೆ ದರ

0-3 ಲಕ್ಷ ರೂಪಾಯಿ - NIL
3-6 ಲಕ್ಷ ರೂಪಾಯಿ - 5%
6-9 ಲಕ್ಷ ರೂಪಾಯಿ - 10%
9-12 ಲಕ್ಷ ರೂಪಾಯಿ -15%
12-15 ಲಕ್ಷ ರೂಪಾಯಿ - 20%
15 ಲಕ್ಷ ರೂಪಾಯಿಗೂ ಅಧಿಕ - 30%

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+