ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2023ರಂದು 2023-2024 ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಮುಖ್ಯವಾಗಿ 2024ರ ಲೋಕಸಭೆ ಚುನಾವಣೆಗೂ ಮುನ್ನ ಈ ಬಜೆಟ್ ಬರುತ್ತಿರುವುದರಿಂದ ಬಜೆಟ್ ಮೇಲಿನ ನಿರೀಕ್ಷೆಗಳು ಹೆಚ್ಚೇ ಇದೆ. ಈಗಾಗಲೇ ಹಲವಾರು ವಲಯಗಳು ತಮ್ಮ ನಿರೀಕ್ಷೆ, ಬೇಡಿಕೆ ಬಗ್ಗೆ ಹೇಳಿಕೆಯನ್ನು ನೀಡುತ್ತಿದೆ.
ತಜ್ಞರುಗಳು ಕೂಡಾ ಬಜೆಟ್ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ನೀಡುತ್ತಿದ್ದಾರೆ. ಈ ನಡುವೆ ವಜ್ರ ಹಾಗೂ ಆಭರಣಗಳ ರಫ್ತುದಾರರು (ಜ್ಯುವೆಲ್ಲರಿ ಇಂಡಸ್ಟ್ರಿ) ಹಲವಾರು ನಿರೀಕ್ಷೆಗಳನ್ನು ಹೊಂದಿದ್ದಾರೆ. ಈ ಹಿಂದೆ 2022-23ನೇ ಸಾಲಿನ ಬಜೆಟ್ ವೇಳೆಯು ಹಲವಾರು ನಿರೀಕ್ಷೆಗಳನ್ನು ಆಭರಣಗಳ ರಫ್ತುದಾರರು ವ್ಯಕ್ತಪಡಿಸಿದ್ದರು. ಆದರೆ ಈ ವಲಯಕ್ಕೆ ಕೊಂಚ ರಿಲೀಫ್ ಅನ್ನು ನೀಡಲಾಗಿತ್ತು.
2023ರ ಕೇಂದ್ರ ಬಜೆಟ್‌ಗೂ ಮುನ್ನ ವಜ್ರ ಹಾಗೂ ಆಭರಣಗಳ ರಫ್ತು, ಆಮದುದಾರರು ಭಾನುವಾರ ಸರ್ಕಾರಕ್ಕೆ ತಮ್ಮ ಮನವಿಯನ್ನು ಮಾಡಿದ್ದಾರೆ. ಈ ವಲಯಕ್ಕೆ ಸಹಕಾರಿಯಾಗುವಂತೆ ವಜ್ರಗಳ, ಆಭರಣಗಳ ಕಚ್ಚಾ ವಸ್ತುಗಳ ಮೇಲೆ ಆಮದು ಸುಂಕ ಕಡಿತ, ರದ್ದು ಮಾಡುವಂತಹ ಕ್ರಮವನ್ನು ಕೈಗೊಳ್ಳಬೇಕು ಎಂದು ಈ ವಲಯವು ಮನವಿ ಮಾಡಿದೆ. ಈ ವಲಯದ ಬೇರೆ ಬೇಡಿಕೆಗಳೇನು, ಈ ಹಿಂದಿನ ಬಜೆಟ್‌ನಲ್ಲಿ ಆಗಿದ್ದೇನೆ ತಿಳಿಯೋಣ ಮುಂದೆ ಓದಿ....
ತೆರಿಗೆ ಕಡಿತ, ವಿನಾಯಿತಿಯ ನಿರೀಕ್ಷೆ
ತೆರಿಗೆ ವಿಧಾನದಲ್ಲಿ ಕೆಲವು ಬದಲಾವಣೆಯನ್ನು ತರಲು ಈ ವಲಯವು ಬಯಸಿದೆ. ವಜ್ರದ ಮಾರಾಟದ ಮೇಲೆ ತೆರಿಗೆಯನ್ನು ಪರಿಷ್ಕರಣೆ ಮಾಡಬೇಕು. ದೇಶ್ ಬಿಲ್ ಅನ್ನು ಪರಿಚಯಿಸಬೇಕು. ಈ ಮೂಲಕ ಪ್ರಸ್ತುತ ವಿಶೇಷ ಆರ್ಥಿಕ ವಲಯಕ್ಕೆ ಜಾರಿಯಲ್ಲಿರುವ ನಿಯಮವನ್ನು ಬದಲಾವಣೆ ಮಾಡಬೇಕು. ಬಜೆಟ್‌ನಲ್ಲಿ ವಜ್ರ ರಫ್ತು, ಆಮದುದಾರಿಗೆ "diamond package" ನಂತಹ ರಿಲೀಫ್ ಅನ್ನು ನೀಡಬೇಕು. ಈ ಹಣದುಬ್ಬರದ, ಯುಎಸ್-ಯುರೋಪ್‌ನಲ್ಲಿ ಆರ್ಥಿಕ ಬಿಕ್ಕಟ್ಟು, ಚೀನಾದಲ್ಲಿನ ಲಾಕ್‌ಡೌನ್ ನಡುವೆ ವಲಯವು ಸಂಕಷ್ಟದಲ್ಲಿದೆ ಎಂದು ಹೇಳಿಕೊಂಡಿದೆ. ವಜ್ರಗಳ ರಫ್ತು, ಆಮದು ಜಾಗತಿಕವಾಗಿ ಭಾರೀ ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಎಂದು ಹೇಳಿದೆ.
ಪ್ರಯೋಗಾಲಯದಲ್ಲಿ ವಜ್ರ ತಯಾರಿ
ಇದರಿಂದಾಗಿ ಪ್ರಯೋಗಾಲಯದಲ್ಲಿಯ ತಯಾರಿಸಲಾಗುವ ವಜ್ರಗಳು ಅಧಿಕವಾಗುತ್ತಿದೆ. ಇದನ್ನು ಲಾಭ ಪಡೆಯಲು ಪರ್ಯಾಯವಾಗಿ ಬಳಸಲಾಗುತ್ತಿದೆ. ಪ್ರಯೋಗಾಲಯದಲ್ಲಿ ತಯಾರಿಸಲಾಗುವ ವಜ್ರಗಳು ಅಥವಾ ಮ್ಯಾನ್‌ಮೇಡ್ ವಜ್ರಗಳು ಪ್ರಯೋಗಾಲಯದ ಒಳಗೆ ತಯಾರಿಸಲಾಗುತ್ತದೆ. ಇದರ ರಚನೆ, ರಾಸಾಯನಿಕ ಕಾಂಪೊನೆಂಟ್‌ಗಳು, ಗುಣಮಟ್ಟ, ನೈಸರ್ಗಿಕವಾದ ವಜ್ರದಂತೆಯೇ ಇರುತ್ತದೆ. ಎಲ್‌ಜಿಡಿ ಅಥವಾ ಲ್ಯಾಬ್‌ನಲ್ಲಿ ಉತ್ಪಾದಿಸಲಾದ ವಜ್ರವನ್ನು ವಜ್ರದ ಬೀಜಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದು ಅತೀ ಮುಖ್ಯವಾಗಿ ಕಚ್ಚಾ ವಸ್ತುವಾಗಿದೆ. ಬಜೆಟ್ ಸಂದರ್ಭದಲ್ಲಿ ಇದಕ್ಕೆ ಸರ್ಕಾರದ ಆರ್ಥಿಕ ಸಹಾಯದ ನಿರೀಕ್ಷೆಯಿದೆ.
ಎಲ್‌ಜಿಡಿ ಕೊಡುಗೆ ಹೆಚ್ಚಾಗಲಿದೆ
"2025ಕ್ಕೆ ಜಾಗತಿಕವಾಗಿ ವಜ್ರಗಳ ಮತ್ತು ಆಭರಣಗಳ ರಫ್ತಿನಲ್ಲಿ ಎಲ್‌ಜಿಡಿ ಅಂದರೆ ಕೊಡುಗೆಯು ಶೇಕಡ 10ರಷ್ಟು ಇರುವ ಸಾಧ್ಯತೆಯಿದೆ. ಇದು ಆರ್ಥಿಕ ಬೆಳವಣಿಗೆಗೂ ಸಹಾಯ ಮಾಡಲಿದೆ. ಆಮದಿನ ಮೇಲಿನ ಅವಲಂಭನೆಯು ಕಡಿಮೆಯಾಗಲಿದೆ. ಹಾಗೆಯೇ ಉದ್ಯೋಗವಕಾಶವು ಕೂಡಾ ಹೆಚ್ಚಾಗಲಿದೆ. ಜನರಿಗೆ ಸಹಾಯವು ಆಗಲಿದೆ. ವಜ್ರವು ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ," ಎಂದು ಕಾಮ ಜ್ಯುವೆಲ್ಲರಿ ಸಂಸ್ಥಾಪಕ ಕಾಲಿನ್ ಶಾ ತಿಳಿಸಿದ್ದಾರೆ. ಕಾಲಿನ್ ಶಾ ವಜ್ರ ಹಾಗೂ ಜ್ಯುವೆಲ್ಲರಿ ರಫ್ತು ಕೌನ್ಸಿಲ್‌ನ ಮಾಜಿ ಚೇರ್‌ಮನ್ ಆಗಿದ್ದಾರೆ.
ಆಮದು ಸುಂಕ ಹೆಚ್ಚಿಸಿದ್ದ ಬಜೆಟ್
ಕತ್ತರಿಸಿದ ಮತ್ತು ಪಾಲಿಶ್ ಮಾಡಿದೆ ವಜ್ರಗಳು ಮತ್ತು ರತ್ನದ ಮೇಲಿನ ಆಮದು ಸುಂಕವನ್ನು ಶೇಕಡಾ 5 ಕ್ಕೆ ಇಳಿಸಲಾಗುವುದು ಮತ್ತು ವಲಯವನ್ನು ಉತ್ತೇಜಿಸುವ ಸಲುವಾಗಿ ವಜ್ರದ ಮೇಲಿನ ಆಮದು ಸುಂಕವನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್‌ನಲ್ಲಿ ಹೇಳಿದ್ದಾರೆ. ಈ ಘೋಷಣೆ ವೇಳೆ ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು ಮತ್ತು ರತ್ನದ ಕಲ್ಲುಗಳ ಮೇಲಿನ ಆಮದು ಸುಂಕವು ಶೇಕಡಾ 7.5 ರಷ್ಟಿತ್ತು.
More From GoodReturns

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?



Click it and Unblock the Notifications