ಹೊಸ ಹಣಕಾಸು ವರ್ಷವನ್ನು ಸ್ವಾಗತಿಸಲು ಎಲ್ಲ ಹಣಕಾಸು ವಲಯವು ಸಿದ್ಧವಾಗುತ್ತಿದೆ. ವಾರ್ಷಿಕ ಹಣಕಾಸು ಲೆಕ್ಕಾಚಾರಗಳು ನಡೆಯುತ್ತಿದೆ. ಈ ನಡುವೆ ಜನರು ಕೂಡಾ ಸಿದ್ಧವಾಗುವುದು ಮುಖ್ಯವಾಗಿದೆ. ಯಾಕೆಂದರೆ ಯಾವುದೇ ಹಣಕಾಸು ಬದಲಾವಣೆಯು ಜನರ ವೈಯಕ್ತಿಕ ಹಣಕಾಸಿನ ಮೇಲೆ ಖಂಡಿತವಾಗಿ ಪ್ರಭಾವ ಬೀರುತ್ತದೆ. ಏಪ್ರಿಲ್ 1, 2023ರಲ್ಲಿ ಕೆಲವು ವಸ್ತುಗಳ ದರವು ಏರಿಕೆಯಾದರೆ ಇನ್ನು ಕೆಲವು ವಸ್ತುಗಳ ದರವು ಗಗನಕ್ಕೆ ಏರಲಿದೆ. ಈಗಾಗಲೇ ಭಾರೀ ದುಬಾರಿಯಾದ ವಸ್ತುಗಳು ಕೈಗೆಟುಕದಂತೆ ಆಗಲಿದೆ.
ಆಮದು ಸುಂಕವನ್ನು ಏರಿಕೆ ಮಾಡಿದ ಕಾರಣದಿಂದಾಗಿ ಮುಂದಿನ ಹಣಕಾಸು ವರ್ಷ ಆರಂಭದ ಮೊದಲ ದಿನದಿಂದ ಏಪ್ರಿಲ್ 1, 2023ರಿಂದ ಕೆಲವು ವಸ್ತುಗಳ ದರವು ದುಬಾರಿಯಾಗಲಿದೆ. ಪ್ರಮುಖವಾಗಿ ಖಾಸಗಿ ವಿಮಾನ, ಹೆಲಿಕಾಫ್ಟರ್, ಹೈ ಎಂಡ್ ಎಲೆಕ್ಟ್ರಾನಿಕ್ಸ್, ಪ್ಲಾಸ್ಟಿಕ್ ವಸ್ತುಗಳು, ಜ್ಯುವೆಲ್ಲರಿ, ಹೈ ಗ್ಲಾಸ್ ಪೇಪರ್, ವಿಟಮಿನ್‌ಗಳ ದರವು ಏಪ್ರಿಲ್ ಒಂದರಿಂದ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಮುಖ್ಯವಾಗಿ ಈ ವಸ್ತುಗಳು ಈಗಾಗಲೇ ದುಬಾರಿಯಾಗಿದೆ ಎಂಬುವುದು ಗಮನಾರ್ಹ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ 2023 ಅನ್ನು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಕ್ಯಾಮೆರಾ ಲೆನ್ಸ್, ಸ್ಮಾರ್ಟ್ ಫೋನ್‌ಗಳು ಏಪ್ರಿಲ್ 1ರಿಂದ ಅಗ್ಗವಾಗಲಿದೆ, ಈ ವಸ್ತುಗಳ ದರವು ಕಡಿಮೆಯಾಗಲಿದೆ. ಹಾಗೆಯೇ ಏಲೆಕ್ಟ್ರಾನಿಕ್ ವಸ್ತುಗಳು, ಚಿನ್ನ, ಪ್ಲಾಟಿನಂ ವಸ್ಯುಗಳ ದರವು ಏಪ್ರಿಲ್ 1ರಿಂದ ದುಬಾರಿಯಾಗಲಿದೆ, ಈ ವಸ್ತುಗಳ ದರ ಹೆಚ್ಚಳ ಮಾಡಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
ಆಮದು ಸುಂಕ ಇಳಿಕೆ
ಬಟ್ಟೆ, ಸಂಸ್ಕರಿಸಿದ ಕಪ್ಪೆಚಿಪ್ಪು, ಸಂಸ್ಕರಿಸಿದ ಸ್ಕ್ವಿಡ್ ಮೀನು (frozen squid), ಇಂಗು, ಕೋಕೋ ಬೀನ್ಸ್ ಮೊದಲಾದವು ಆಹಾರ, ಇತರೆ ವಸ್ತುಗಳ ದರವನ್ನು ಇಳಿಕೆ ಮಾಡುವ ನಿರ್ಧಾರವನ್ನು ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಮಾಡಿದೆ. ಹಾಗೆಯೇ ಅಸಿಟಿಕ್ ಆಮ್ಲ (acetic acid), ಕತ್ತರಿಸಿದ ಪಾಲಿಶ್ ಮಾಡಿ ವಜ್ರಗಳು, ಪೆಟ್ರೋಲ್ ಉತ್ಪನ್ನಗಳನ್ನುಬ ತಯಾರಿಸಲು ಬಳಸಲಾಗುವ ಕೆಮಿಕಲ್‌ಗಳು, ಮೊಬೈಲ್ ಫೋನ್‌ನ ಕ್ಯಾಮೆರಾ ಲೆನ್ಸ್‌ಗಳ ಆಮದು ಸುಂಕವನ್ನು ಕೇಂದ್ರ ಸರ್ಕಾರವು ಇಳಿಕೆ ಮಾಡಿದೆ.
ಆಮದು ಸುಂಕ ಏರಿಕೆ
ಹಾಗೆಯೇ ಈ ಸಂದರ್ಭದಲ್ಲೆ ಹಲವಾರು ವಸ್ತುಗಳ ಆಮದು ಸುಂಕವನ್ನು ಕೂಡಾ ಕೇಂದ್ರ ಸರ್ಕಾರವು ಏರಿಕೆ ಮಾಡಿದೆ. ಕೇಂದ್ರ ಸರ್ಕಾರವು ಆರ್ಥಿಕ ಬೆಳವಣಿಗೆಯ ಕನ್ನೋಟವನ್ನು ಇಟ್ಟುಕೊಂಡು ಈ ಆಮದು ಸುಂಕವನ್ನು ಏರಿಕೆ ಮಾಡಿದೆ ಎಂದು ಹೇಳಿಕೊಂಡಿದೆ. ಅಡುಗೆ ಮನೆಯಲ್ಲಿ ಬಳಕೆ ಮಾಡಲಾಗುವ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇಕಡ 7.5ರಿಂದ ಶೇಕಡ 15ಕ್ಕೆ ಏರಿಕೆ ಮಾಡಲಾಗಿದೆ. ಇದು ಸಾಮಾನ್ಯ ಜನರ ಮೇಲೆ ಹೆಚ್ಚಿನ ಪ್ರಭಾವ ಉಂಟು ಮಾಡಲಿದೆ. ಯಾಕೆಂದರೆ ಮಿಕ್ಸಿ ಮೊದಲಾದವುಗಳು ದುಬಾರಿಯಾಗಲಿದೆ. ಹಾಗೆಯೇ ಈ ಸಂದರ್ಭದಲ್ಲೇ ಪ್ರಯೋಗಾಲಯದಲ್ಲಿ ಸಿದ್ಧಪಡಿಸುವ ವಜ್ರಗಳ ಆಮದು ಸುಂಕ ಇಳಿಕೆ ಮಾಡಲಾಗಿದೆ.
ಯಾವೆಲ್ಲ ವಸ್ತುಗಳು ದುಬಾರಿ?
ಆಭರಣಗಳು
ಛತ್ರಿಗಳು
ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನ್ಂ
ಸಿಗರೇಟ್
ವಿದೇಶಿ ವಾಹನ
ಬ್ರಾಂಡೆಡ್ ಬಟ್ಟೆ
ಹೆಡ್‌ಫೋನ್, ಇಯರ್‌ಫೋನ್
ಸ್ಮಾಟ್ ಮೀಟರ್‌ಗಳು, ಸೋಲಾರ್ ಸೆಲ್ಸ್
ಎಕ್ಸ್‌ರೇ ಮಿಷಿನ್, ವೈದ್ಯಕೀಯ ವಸ್ತುಗಳು
ಎಲೆಕ್ಟ್ರಾನಿಕ್ ಆಟದ ಸಾಮಾನು
ಯಾವೆಲ್ಲ ವಸ್ತುಗಳು ಅಗ್ಗವಾಗಲಿದೆ?
ಸಿಮೆಂಟ್ ಮತ್ತು ಉಕ್ಕು
ಮೊಬೈಲ್ ಫೋನ್‌ಗಳು
ಎಲೆಕ್ಟ್ರಾನಿಕ್ ವಸ್ತುಗಳು
ಟಿವಿ
ಎಲೆಕ್ಟಿಕ್ ವಾಹನ
ಎಲೆಕ್ಟ್ರಿಕ್ ಚಿಮಣಿ
ಕ್ಯಾಮರಾ ಲೆನ್ಸ್
ಚಾರ್ಜರ್
ಇಂಗು, ಕೋಕೋ ಬೀನ್ಸ್
ಮೀಥೈಲ್ ಆಲ್ಕೋಹಾಲ್
ಕತ್ತರಿಸಿ ನಯಗೊಳಿಸಿದ ವಜ್ರಗಳು
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications