ಕೇಂದ್ರ ಸರ್ಕಾರವು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸುವ ಸಿದ್ಧತೆಯನ್ನು ನಡೆಸುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಅನ್ನು ಮಂಡಿಸಲಿದ್ದಾರೆ. ಅದಕ್ಕೂ ಮುನ್ನ ಎಲ್ಲ ವಲಯಗಳು ತಮ್ಮ ನಿರೀಕ್ಷೆಗಳನ್ನು, ಬೇಡಿಕೆಗಳನ್ನು ಮುಂದಿಡುತ್ತಿದೆ. ಹೆಚ್ಚಾಗಿ ಎಲ್ಲ ವಲಯಗಳು ತೆರಿಗೆ ಕಡಿತ ಸಂಬಂಧಿತ ನಿರೀಕ್ಷೆಯನ್ನು ಹೊಂದಿದೆ.
ದೇಶದ ಮಧ್ಯಮ ವರ್ಗವೂ ಕೂಡಾ ತನ್ನದೇ ಆದ ನಿರೀಕ್ಷೆಯನ್ನು ಹೊಂದಿದೆ. ತೆರಿಗೆ ಕಡಿತ, ಉದ್ಯೋಗ ಸೃಷ್ಟಿ ಸೇರಿದಂತೆ, ಸರ್ಕಾರದ ಯೋಜನೆಯಿಂದ ಮಧ್ಯಮ ವರ್ಗಕ್ಕೆ ಪ್ರಯೋಜನವಾಗುವ ನಿರೀಕ್ಷೆಯನ್ನು ಹೊಂದಿದೆ. ಕಳೆದ ವರ್ಷವೂ ಮಧ್ಯಮ ವರ್ಗವು ಹಲವಾರು ನಿರೀಕ್ಷೆಗಳನ್ನು ಹೊಂದಿತ್ತು. ಆದರೆ ಅದರಲ್ಲಿ ಪ್ರಮುಖವಾದ ತೆರಿಗೆ ಕಡಿತ ನಿರೀಕ್ಷೆಯು ಈಡೇರಿಲ್ಲ.
ಸಾಮಾನ್ಯವಾಗಿ ವಾರ್ಷಿಕವಾಗಿ 2.5 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಯನ್ನು ಸಂಪಾದನೆ ಮಾಡುವವರು ಇರುವ ಕುಟುಂಬವನ್ನು ಮಧ್ಯಮ ವರ್ಗದ ಕುಟುಂಬ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ವರ್ಗವು ಕೋವಿಡ್ ಸಾಂಕ್ರಾಮಿಕದಿಂದಾಗಿ ಭಾರೀ ಆರ್ಥಿಕ ಹೊಡೆತವನ್ನು ಅನುಭವಿಸಿದೆ. ಹಲವಾರು ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ, ಆದಾಯವನ್ನು ಕಳೆದುಕೊಂಡಿದ್ದಾರೆ. ಹೀಗಿರುವಾಗ ಮುಂದಿನ ಬಜೆಟ್‌ನಿಂದ ಮಧ್ಯಮ ವರ್ಗದ ನಿರೀಕ್ಷೆಗಳೇನು ತಿಳಿಯೋಣ ಮುಂದೆ ಓದಿ....
ತೆರಿಗೆ ರಿಲೀಫ್ ನಿರೀಕ್ಷೆ
ಮುಂದಿನ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರು ಮುಖ್ಯವಾಗಿ ಸರ್ಕಾರವು ತಮಗೆ ತೆರಿಗೆ ರಿಲೀಫ್ ಅನ್ನು ನೀಡುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಬೇಕು ಎಂಬ ನಿರೀಕ್ಷೆಯಿದೆ. ಪ್ರಸ್ತುತ 2.5 ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯವನ್ನು ಹೊಂದಿರುವವರು ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ. ಈ ಮಿತಿಯನ್ನು ಹೆಚ್ಚಿಸಬೇಕು ಎಂಬುವುದು ಮಧ್ಯಮ ವರ್ಗದ ಬೇಡಿಕೆಯಾಗಿದೆ.
ಉದ್ಯೋಗ ಸೃಷ್ಟಿಯ ಬೇಡಿಕೆ
ಇನ್ನು ತೆರಿಗೆ ಮಿತಿ ಹೆಚ್ಚಿಸುವ ನಡುವೆ ಉದ್ಯೋಗ ಸೃಷ್ಟಿಯನ್ನು ಕೂಡಾ ಮಾಡಬೇಕು ಎಂಬುವುದು ಮಧ್ಯಮ ವರ್ಗದ ಬೇಡಿಕೆಯಾಗಿದೆ. ಮುಖ್ಯವಾಗಿ ಕೇಂದ್ರ ಬಜೆಟ್ ವೇಳೆ ಉದ್ಯೋಗ ಸೃಷ್ಟಿ ಸಂಬಂಧಿಸಿ ಯೋಜನೆಗಳನ್ನು ಕೇಂದ್ರ ಸರ್ಕಾರವು ಜಾರಿ ಮಾಡಬೇಕು ಎಂಬುವುದು ಮಧ್ಯಮ ವರ್ಗದ ನಿರೀಕ್ಷೆಯಾಗಿದೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚಾಗಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಹಾಗೆಯೇ ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದವವರು ಕೂಡಾ ಮಧ್ಯಮ ವರ್ಗವಾಗಿದೆ. ಆದ್ದರಿಂದಾಗಿ ಮಧ್ಯಮ ವರ್ಗವು ಕೇಂದ್ರ ಸರ್ಕಾರವು ಉದ್ಯೋಗ ಸೃಷ್ಟಿಸಲು ಕ್ರಮಕೈಗೊಳ್ಳಲಿದೆ ಎಂಬ ನಿರೀಕ್ಷೆಯಿದೆ.
ಆರೋಗ್ಯ ಚಿಕಿತ್ಸೆ, ಗೃಹ ಮೊದಲಾದ ಸೌಲಭ್ಯ
ತಮ್ಮ ಜೀವನ ಸ್ಥಿತಿ ಉತ್ತಮಗೊಳಿಸಲು, ಕಡಿಮೆ ಮೊತ್ತದಲ್ಲಿ ಮನೆಯನ್ನು ಖರೀದಿಸಲು ಸಾಧ್ಯವಾಗುವಂತಹ, ಸುಲಭವಾಗಿ ಆರೋಗ್ಯ ಚಿಕಿತ್ಸೆ ಲಭಿಸುವಂತಹ ವಾತಾವರಣವನ್ನು ಸೃಷ್ಟಿ ಮಾಡಬೇಕು ಎಂಬುವುದು ಮಧ್ಯಮ ವರ್ಗದ ಬೇಡಿಕೆಯಾಗಿದೆ. ಕೇಂದ್ರ ಬಜೆಟ್ 2023ರಲ್ಲಿ ತಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳಿಸುವಂತಹ ಯೋಜನೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂಬುವುದು ಮಧ್ಯಮ ವರ್ಗದ ನಿರೀಕ್ಷೆಯಾಗಿದೆ.


Click it and Unblock the Notifications