ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-2024ರ ಸಾಲಿನ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ವಲಯದಲ್ಲಿ ನಿರೀಕ್ಷೆಗಳು ಹೆಚ್ಚಾಗಿದೆ. ಈ ನಡುವೆ ಕೇಂದ್ರ ಸರ್ಕಾರವು ಆಮದು ಸುಂಕವನ್ನು ಹೆಚ್ಚಿಸಿದ ಬಳಿಕ ಹಲವಾರು ದುಬಾರಿ ವಸ್ತುಗಳ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ 2023 ಅನ್ನು ಘೋಷಣೆ ಮಾಡಿದ ಬಳಿಕ, ಕೇಂದ್ರ ಸರ್ಕಾರವು ಸುಮಾರು 35 ವಸ್ತುಗಳ ಆಮದು ಸುಂಕವನ್ನು ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಈ ಪೈಕಿ ಹಲವು ದುಬಾರಿ ವಸ್ತುಗಳು ಇರಲಿದೆ ಎಂದು ಅಧಿಕಾರಿಯೊಬ್ಬರ ಮಾಹಿತಿ ಆಧಾರದಲ್ಲಿ ಮಾಧ್ಯಮಗಳು ವರದಿ ಮಾಡಿದೆ.
"ಸಚಿವಾಲಯದ ಹಲವಾರು ಸಚಿವರುಗಳ ಬಳಿ ಚರ್ಚೆ ನಡೆಸಿ, ಅವರ ಅಭಿಪ್ರಾಯವನ್ನು ಪಡೆದುಕೊಂಡು ಸರ್ಕಾರವು ಒಂದು ಪಟ್ಟಿಯನ್ನು ಮಾಡಿದೆ. ಈ ಪಟ್ಟಿಯಲ್ಲಿರುವ ವಸ್ತುಗಳ ಆಮದು ಸುಂಕವನ್ನು ಹೆಚ್ಚಿಸಲಿದೆ, ಇದರಿಂದಾಗಿ ಬೆಲೆ ಏರಿಕೆ ಆಗಲಿದೆ," ಎಂಬ ಮಾಹಿತಿ ಲಭಿಸಿದೆ. ಜ್ಯುವೆಲ್ಲರಿ, ಖಾಸಗಿ ವಿಮಾನ, ಎಲೆಕ್ಟ್ರಾನಿಕ್ ವಸ್ತುಗಳ ದರವು ಹೆಚ್ಚಾಗುವ ಸಾಧ್ಯತೆಯಿದೆ. ಯಾವೆಲ್ಲ ವಸ್ತುಗಳ ದರ ಹೆಚ್ಚಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

ಯಾವೆಲ್ಲ ವಸ್ತುಗಳ ದರ ಏರಿಕೆಯಾಗಲಿದೆ?
ಸರ್ಕಾರವು 35 ವಸ್ತುಗಳ ಬೆಲೆಯನ್ನು ಹೆಚ್ಚಳ ಮಾಡಿದೆ. ಈ ವಸ್ತುಗಳಲ್ಲಿ ಹೆಚ್ಚಾಗಿ ದುಬಾರಿ ವಸ್ತುಗಳು ಇದೆ. ಖಾಸಗಿ ವಿಮಾನ, ಹೆಲಿಕಾಫ್ಟರ್, ಜ್ಯುವೆಲ್ಲರಿ (ಆಭರಣ), ವಿಟಮಿನ್ಸ್, ಎಲೆಕ್ಟ್ರಾನಿಕ್ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳು, ಅಧಿಕ ಗುಣಮಟ್ಟದ ಪೇಪರ್‌ಗಳ ಆಮದು ಶುಲ್ಕವು ಹೆಚ್ಚಾಗಲಿದೆ. ಇದರಿಂದಾಗಿ ಈ ವಸ್ತುಗಳ ದರವು ಏರಿಕೆಯಾಗಲಿದೆ.
ಕೇಂದ್ರ ಸರ್ಕಾರವು ಹಲವಾರು ಸಮಯದಿಂದ ಕೆಲವು ವಸ್ತುಗಳ ಆಮದು ಸುಂಕವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ಮಾಡುತ್ತಿದೆ. ಇದರಿಂದಾಗಿ ಆ ವಸ್ತುಗಳ ದರವು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಈ ಹಿಂದೆ ವರದಿಯಾಗಿತ್ತು. ಮುಖ್ಯವಾಗಿ ಚಿನ್ನದ ದರವು ಹೆಚ್ಚಾಗಲಿದೆ.
"ರತ್ನಗಳು ಹಾಗೂ ಜ್ಯುವೆಲ್ಲರಿ ಇಂಡಸ್ಟ್ರೀಯು ಆಮದು ಸುಂಕವನ್ನು ಕಡಿತ ಮಾಡುವಂತೆ ಮನವಿ ಮಾಡುತ್ತಿದೆ. ವಾಣಿಜ್ಯ ಸಚಿವಾಲಯವು ಹಣಕಾಸು ಸಚಿವಾಲಯಕ್ಕೂ ಇದೆ ಮನವಿಯನ್ನು ಮಾಡಿದೆ. ಆದರೆ ಸಚಿವಾಲಯವು ಬೇರೆ ವಸ್ತುಗಳ ಆಮದು ಸುಂಕದ ಪರಿಷ್ಕರಣೆಗೆ ಮುಂದಾಗಿದೆ," ಎಂಬ ಮಾಹಿತಿ ತಿಳಿದು ಬಂದಿದೆ.
ವಜ್ರ, ರತ್ನ ಆಮದು ಸುಂಕ ಹೆಚ್ಚಿಸಿದ್ದ ಸರ್ಕಾರ
ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು ಮತ್ತು ರತ್ನದ ಮೇಲಿನ ಆಮದು ಸುಂಕವನ್ನು ಶೇಕಡಾ 5 ಕ್ಕೆ ಇಳಿಸಲಾಗುವುದು ಮತ್ತು ವಲಯವನ್ನು ಉತ್ತೇಜಿಸುವ ಸಲುವಾಗಿ ವಜ್ರದ ಮೇಲಿನ ಆಮದು ಸುಂಕವನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್‌ನಲ್ಲಿ ಹೇಳಿದ್ದಾರೆ. ಪ್ರಸ್ತುತ, ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು ಮತ್ತು ರತ್ನದ ಕಲ್ಲುಗಳ ಮೇಲಿನ ಆಮದು ಸುಂಕವು ಶೇಕಡಾ 7.5 ರಷ್ಟಿದೆ. "ರತ್ನಗಳು ಮತ್ತು ಆಭರಣ ವಲಯಕ್ಕೆ ಉತ್ತೇಜನ ನೀಡಲು, ಪಾಲಿಶ್ ಮಾಡಿದ ವಜ್ರಗಳು ಮತ್ತು ರತ್ನದ ಕಲ್ಲುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 5 ಕ್ಕೆ ಇಳಿಸಲಾಗುತ್ತಿದೆ. ಸ್ವಾನ್ ವಜ್ರದ ಮೇಲಿನ ಆಮದು ಸುಂಕವನ್ನು ತೆಗೆದುಹಾಕಲಾಗುತ್ತದೆ," ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.


Click it and Unblock the Notifications