ಸಿಹಿ ಸುದ್ದಿ... ಮೋದಿ ಸರ್ಕಾರವು ದೇಶದ ಎಲ್ಲ ನೌಕರರಿಗೆ ಸಾರ್ವತ್ರಿಕ ಪಿಂಚಣಿ ಯೋಜನೆ (Universal Pension Scheme) ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ಯೋಜನೆ ಕೇವಲ ಸರ್ಕಾರಿ ನೌಕರಿಗೆ ಮಾತ್ರವಲ್ಲ ದೇಶದ ಎಲ್ಲ ನೌಕರರಿಗೆ ಈ ಸೌಲಭ್ಯ ಸಿಗಲಿದೆ. ಹಾಗಿದ್ರೆ ಸಾರ್ವತ್ರಿಕ ಪಿಂಚಣಿಯಿಂದ ಏನೆಲ್ಲಾ ಪ್ರಯೋಜಗಳು ಇವೆ? ಹಿರಿಯ ನಾಗರಿಕರಿಗೆ ಏನೆಲ್ಲಾ ಅನುಕೂಲ ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ....
ಹೌದು, ಈ ಯೋಜನೆಯು ನಿರುದ್ಯೋಗ ಮತ್ತು ನಿವೃತ್ತಿ ನಂತರ ಆದಾಯದ ನಿರ್ಧಾರವನ್ನೂ ಸುಧಾರಿಸಲಿದೆ. ಖಾಸಗಿ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವವರಿಗೂ ಪಿಂಚಣಿಯನ್ನು ಒದಗಿಸುವುದರಿಂದ, ಜನರ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

ಈ ಯೋಜನೆಯು ನಿರುದ್ಯೋಗ ಮತ್ತು ನಿವೃತ್ತಿ ನಂತರ ಆದಾಯ ನಿರ್ಧಾರವನ್ನೂ ಸುಧಾರಿಸಲಿದೆ. ಇದರ ಮೂಲಕ, ವಿಶೇಷವಾಗಿ ನಿಯಮಿತ ಆದಾಯವಿಲ್ಲದ, ಅಸಂಗঠಿತ ಕ್ಷೇತ್ರದ ಕೆಲಸಗಾರರಿಗೆ ಬಹುಮುಖ್ಯವಾದ ನೆರವು ದೊರೆಯಬಹುದು. ಅದರಲ್ಲೂ ಈ ಗುಂಪುಗೆ ಸಂಘಟಿತ ವಲಯದ ನೌಕರರು ಸೇರಲಿದ್ದಾರೆ.
ಈಗಾಗಲೇ ನಿರ್ಮಾಣ ಕೆಲಸ ಮಾಡುವ ಕಾರ್ಮಿಕರು, ಗೃಹ ಸಿಬ್ಬಂದಿ ಮತ್ತು ಗಿಗ್ ಕೆಲಸಗಾರರು ಸರ್ಕಾರ ನಡೆಸುವ ಪಿಂಚಣಿ ಯೋಜನೆಗಳ ಸೌಲಭ್ಯಗಳು ಪಡೆಯುತ್ತಿಲ್ಲ ಈ ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗೆ ಬಂದರೆ ಪ್ರತಿಯೊಬ್ಬ ನೌಕರರಿಗೆ ಅನುಕೂಲವಾಗಲಿದೆ.
ಈ ಯೋಜನೆಯಿಂದ ಯಾರೆಲ್ಲಾ ಲಾಭ?
ಸಾರ್ವತ್ರಿಕ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದರೆ ಎಲ್ಲಾ ಸಂಬಳ ಪಡೆಯುವ ಉದ್ಯೋಗಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಈ ಯೋಜನೆಯ ಲಾಭ ಸಿಗುತ್ತದೆ.
ಪ್ರಸ್ತಾವನೆಯ ದಾಖಲೆಯ ಸಿದ್ಧತೆ
ಕೇಂದ್ರ ಸರ್ಕಾರ ಸಾರ್ವತ್ರಿಕ ಪಿಂಚಣಿ ಯೋಜನೆಯನ್ನು ಪರಿಚಯ ಮಾಡಲು ಪ್ರಸ್ತಾವನೆ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ. ವರದಿಗಳ ಪ್ರಕಾರ ಈಗ ಚಾಲ್ತಿಯಲ್ಲಿ ಇರುವ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಗಿಂತ ಈ ಯೋಜನೆ ಬಿನ್ನವಾಗಿರಬಹುದು ಊಹೆಗಳು ಇವೆ.
ರಾಷ್ಟ್ರೀಯ ಪಿಂಚಣಿ ಯೋಜನೆ
ಸಾರ್ವತ್ರಿಕ ಪಿಂಚಣಿ ಯೋಜನೆ (Universal Pension Scheme) ಜಾರಿಗೆ ಬಂದರೂ, ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಅನ್ನು ಯಾವುದೇ ರೀತಿಯ ಸಮಸ್ಯೆಗಳ ಎದುರಾಗುವುದಿಲ್ಲ. ಯಾಕೆಂದರೆ ಈ ಎರಡೂ ಯೋಜನೆಗಳು ವಿಭಿನ್ನವಾಗಿ ಇರುತ್ತದೆ.ತಮ್ಮದೇ ಆದ ಉದ್ದೇಶ ಹಾಗೂ ಕಾರ್ಯವಿಧಾನವನ್ನು ಹೊಂದಿವೆ.
ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ನೌಕರರಿಗೆ, ಜೊತೆಗೆ ಖಾಸಗಿ ಉದ್ಯೋಗಿಗಳಿಗೆ, ನಿವೃತ್ತಿ ನಂತರದ ಪಿಂಚಣಿ ಯೋಜನೆ ಆಗಿದ್ದು, ಆಯ್ಕೆ ಆಧಾರದ ಮೇಲೆ ಹೂಡಿಕೆ ಆಯ್ಕೆಗಳನ್ನು ಇದು ನೀಡುತ್ತದೆ. ಆದರೆ ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗೆ ಬಂದರೆ ಎಲ್ಲಾ ನಿರುದ್ಯೋಗಿಗಳು ಮತ್ತು ಅಸಂಗತ ಕ್ಷೇತ್ರದ ಕೆಲಸಗಾರರಿಗೆ ಪಿಂಚಣಿ ಕಲ್ಪಿಸಲು ಉದ್ದೇಶವನ್ನು ಹೊಂದಿರುವುದಿಂದ ಯಾವುದೇ ತೊಂದರೆಯಾಗುವುದಿಲ್ಲ.
ಈಗ ಜಾರಿಯಲ್ಲಿ ಇರುವ ಪಿಂಚಣಿ ಯೋಜನೆಗಳು
ಭಾರತದಲ್ಲಿ ಎನ್ ಪಿಎಸ್ ಯೋಜನೆ ಜಾರಿಯಲ್ಲಿದೆ. ಇದಲ್ಲದೆ ಅಸಂಘಟಿತ ವಲಯಕ್ಕಾಗಿ ಸರ್ಕಾರಿ ಪಿಂಚಣಿ ಯೋಜನೆ ಜಾರಿಯಲ್ಲಿವೆ. ಇವುಗಳಲ್ಲಿ ಒಂದು ಅಟಲ್ ಪಿಂಚಣಿ ಯೋಜನೆಯಾಗಿದೆ.
ಅಟಲ್ ಪಿಂಚಣಿ ಯೋಜನೆ ಎಂದರೇನು?
ಅಟಲ್ ಪಿಂಚಣಿ ಯೋಜನೆ (Atal Pension Yojana) ಅತ್ಯಂತ ಉತ್ತಮ ಆಯ್ಕೆ. ಅದರಲ್ಲೂ ವಿಶೇಷವಾಗಿ ನಿವೃತ್ತಿಯ ನಂತರ ಪಿಂಚಣಿ ಆವಶ್ಯಕತೆ ಇರುವವರಿಗೆ ಹೆಚ್ಚಿನ ಅನುಕೂಲವಿದೆ.60 ವರ್ಷ ತುಂಬಿದ ವ್ಯಕ್ತಿಗೆ ಪ್ರತಿ ತಿಂಗಳು 1,000 ರಿಂದ 5,000 ರೂ.ಗಳವರೆಗೆ ಪಿಂಚಣಿ ಸಿಗುತ್ತದೆ.ಆದರೆ ಈ ಯೋಜನೆಯಲ್ಲಿ ಪ್ರತಿ ತಿಂಗಳು 210 ರೂಪಾಯಿ ಠೇವಣಿ ಇಡಬೇಕಾಗುತ್ತದೆ.
ಶ್ರಮ ಯೋಗಿ ಮಾನ್ ಧನ್ ಯೋಜನೆ
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ (SYM) ದೇಶದ ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸಗಾರರು ಮತ್ತು ಕಾರ್ಮಿಕರಿಗೆ ಆರ್ಥಿಕ ಸುರಕ್ಷತೆ ಒದಗಿಸಲು ಇರುವಂತಹ ಯೋಜನೆ. ಈ ಯೋಜನೆಯು ದೇಶದ ಅಸಂಗತಿತ ಕ್ಷೇತ್ರದ ಕಾರ್ಮಿಕರಿಗೆ, ವಿಶೇಷವಾಗಿ ಅವಶ್ಯಕತೆಯಲ್ಲಿರುವವರಿಗೆ ನಿವೃತ್ತಿ ನಂತರದ ಪಿಂಚಣಿಯನ್ನು ನೀಡುತ್ತದೆ.
ರೈತರಿಗಾಗಿ ಇರುವ ಪಿಂಚಣಿ ಯೋಜನೆಗಳು
ಕಿಸಾನ್ ಮಾನ್ ಧನ್ ಯೋಜನೆ
ಕಿಸಾನ್ ಮಾನ್ ಧನ್ ಯೋಜನೆ (Kisan Mandhan Yojana) ಕರ್ನಾಟಕ ಸೇರಿದಂತೆ ದೇಶಾದ್ಯಾಂತ ಕೃಷಿಕರಿಗೆ ಆರ್ಥಿಕತೆಯನ್ನು ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆ. ಈ ಯೋಜನೆಯು ಕೃಷಿಕರ ನಿವೃತ್ತಿ ನಂತರದ ಆರ್ಥಿಕ ಬೆಂಬಲ ನೀಡಿದ ಸಾಲದ ಭಾರವನ್ನು ಕಡಿಮೆ ಮಾಡಲು ಸಹಾಯಗವಾಗುತ್ತದೆ.
ಇದರಲ್ಲಿ, ಹೂಡಿಕೆದಾರರಿಗೆ 60 ವರ್ಷ ತುಂಬಿದ ನಂತರ, ಸರ್ಕಾರ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ನೀಡುತ್ತದೆ.
ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)
ಏಕೀಕೃತ ಪಿಂಚಣಿ ಯೋಜನೆ (Unified Pension Scheme)ಯು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿರುವಂತಿದ್ದು, ಇದು ದೇಶಾದ್ಯಾಂತ ಉದ್ಯೋಗಿಗಳಿಗೆ ಪಿಂಚಣಿಯ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ನಿವೃತ್ತಿ ನಂತರವೂ ಆರ್ಥಿಕ ಸುರಕ್ಷತೆ ಒದಗಿಸಲು ಮಹತ್ವದ ಯೋಜನೆ ಆಗಿದೆ. ಈ ಯೋಜನೆಯಡಿಯಲ್ಲಿ, ಒಬ್ಬ ಉದ್ಯೋಗಿ 25 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿವೃತ್ತಿಯ ಮೊದಲು, ಕೆಲಸದ ಕೊನೆಯ 12 ತಿಂಗಳ ಮೂಲ ವೇತನದ ಶೇಕಡಾ 50ರಷ್ಟು ಹಣ ಪಿಂಚಣಿ ರೂಪದಲ್ಲಿ ಅವರಿಗೆ ಸಿಗುತ್ತದೆ.
ಹೀಗೆ ಹಲವಾರು ಸರ್ಕಾರಿ ಪಿಂಚಣಿ ವ್ಯವಸ್ಥೆ ನಮ್ಮ ದೇಶದಲ್ಲಿ ಜಾರಿಯಲ್ಲಿ ಇವೆ. ಇದರಿಂದ ಕೋಟ್ಯಾಂತರ ಜನ ಇದರ ಅನುಕೂಲ ಪಡೆದುಕೊಂಡ ಆರ್ಥಿಕವಾಗಿ ಸಬಲರಾಗಿದ್ದಾರೆ.


Click it and Unblock the Notifications