ಇನ್ಮುಂದೆ.. ಪಿಎಫ್ ಹಣಕ್ಕಾಗಿ ಕಾಯುವ ಅಗತ್ಯವಿಲ್ಲ! ಸುಲಭವಾಗಿ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ವಿತ್ ಡ್ರಾ ಮಾಡಬಹುದು!

ಸಿಹಿ ಸುದ್ದಿ..ಇನ್ಮುಂದೆ ಪಿಎಫ್ ಖಾತೆಯಲ್ಲಿರುವ ಹಣವನ್ನು ವಿತ್ ಡ್ರಾ ಮಾಡಲು ಕಷ್ಟಪಡಬೇಕಿಲ್ಲ..ಇದಕ್ಕಾಗಿ ಅರ್ಜಿ ಸಲ್ಲಿಸುವ ಅಗತ್ಯ ಸಹ ಇರುವುದಿಲ್ಲ.. ಹೌದು, ಕಾರ್ಮಿಕರ ಭವಿಷ್ಯ ನಿಧಿಯಲ್ಲಿ (ಇಪಿಎಫ್ಒ) ಖಾತೆ ಹೊಂದಿರುವ ಉದ್ಯೋಗಿಗಳಿಗೆ ಹಣವನ್ನು ಹಿಂಪಡೆಯುವ ಹೊಸ ವೈಶಿಷ್ಟ್ಯವನ್ನು ಪರಿಚಯ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳತ್ತಿದೆ.

ಪಿಎಫ್ ಹಣವನ್ನು ಸುಲಭವಾಗಿ ಯುಪಿಐ ಮೂಲಕ ಮೂಲಕ ವಿತ್ ಡ್ರಾ ಮಾಡಬಹುದು!

ಶೀಘ್ರದಲ್ಲೇ ನೀವು ಯುಪಿಐ ಮೂಲಕ ಗೂಗಲ್ ಪೇ ಮತ್ತು ಫೋನ್‌ಪೇ ನಂತಹ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಿಎಫ್ ಹಣವನ್ನು ವಿತ್ ಡ್ರಾ ಮಾಡಬಹುದು ಇದರಿಂದ ಹಣ ಸುಲಭವಾಗಿ ನಿಮ್ಮ ಖಾತೆಗೆ ಜಮಾವಾಗುತ್ತದೆ.

ಯಾವಾಗ ಜಾರಿ..?

ವರದಿಗಳ ಪ್ರಕಾರ, UPI ಮೂಲಕ EPFO ​​ಹಣ ವಿತ್ ಡ್ರಾ ಸೌಲಭ್ಯವು ಈ ವರ್ಷದ ಮೇ ಅಥವಾ ಜೂನ್ ವೇಳೆಗೆ ಜಾರಿಗೆ ಬರುವ ಸಾಧ್ಯತೆಯಿದೆ. UPI ಏಕೀಕರಣದೊಂದಿಗೆ PF ಹಣವನ್ನು ಹಿಂಪಡೆಯುವುದು ವೇಗವಾಗಿ ಮತ್ತು ಸುಲಭವಾಗುತ್ತದೆ ಇದರಿಂದಾಗಿ ಕೋಟ್ಯಾಂತರ EPFO ​​ಸದಸ್ಯರಿಗೆ ಪ್ರಯೋಜನವಾಗುತ್ತದೆ.ಸದ್ಯಕ್ಕೆ UPI ಮೂಲಕ PF ಹಣವನ್ನು ಹಿಂಪಡೆಯುವ ಆಯ್ಕೆ ಲಭ್ಯವಿಲ್ಲ.

EPFO ​​ಈ ಕುರಿತು ಅಧಿಕೃತ ಮಾಹಿತಿ ಬಿಡುಗಡೆಯಾದ ನಂತರ ಈ ಸೌಲಭ್ಯಗಳು ನಿಮ್ಮಗೆ ಲಭ್ಯವಾಗುತ್ತವೆ. EPFO ​​ಸದಸ್ಯರು ತಮ್ಮ UPI ಅಪ್ಲಿಕೇಶನ್ ಬಳಸಿ ತಮ್ಮ ಹಣವನ್ನು ಸಲೀಸಾಗಿ ಹಿಂಪಡೆಯಲು ಸಾಧ್ಯವಾಗುತ್ತದೆ ಎಂದು ಈಗಾಗಲೇ ಮಾಹಿತಿಯನ್ನು ಸೂಚಿಸಲಾಗಿದೆ.

KYC ಅತ್ಯಗತ್ಯ

ನಿಮ್ಮ ಪಿಎಫ್ ಹಣವನ್ನು ಹಿಂಪಡೆಯಲು, ನಿಮ್ಮ ಇಪಿಎಫ್ ಖಾತೆಗೆ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅತ್ಯಗತ್ಯ, ಇದರಲ್ಲಿ ನಿಮ್ಮ ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಲಿಂಕ್ ಮಾಡುವ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಯುಪಿಐನಿಂದ ಇಪಿಎಫ್ಒ ಉದ್ಯೋಗಿಗಳಿಗೆ ಆಗುವ ಅನುಕೂಲಗಳು

  • ಯುಪಿಐ ಮೂಲಕ ಇಪಿಎಫ್ ವಿತ್ ಡ್ರಾ ಕ್ಲೈಮ್ ಪ್ರಕ್ರಿಯೆಯು ಗಂಟೆಗಳಲ್ಲಿ ಅಥವಾ ನಿಮಿಷಗಳಲ್ಲಿ ಪೂರ್ಣಗೊಳ್ಳಬಹುದು.ಇಲ್ಲದಿದ್ದರೆ ಅದು 2-3 ದಿನಗಳನ್ನು ತೆಗೆದುಕೊಳ್ಳುತ್ತದೆ.
  • ಯುಪಿಐ ಪಾವತಿಗಳು ವಹಿವಾಟುಗಳನ್ನು ಸರಳಗೊಳಿಸಿದಂತೆಯೇ, ಈ ವೈಶಿಷ್ಟ್ಯದ ಪರಿಚಯವು ಇಪಿಎಫ್‌ಒ ಸದಸ್ಯರು ತಮ್ಮ ಉಳಿತಾಯವನ್ನು ಸುಲಭವಾಗಿ ಹಿಂಪಡೆಯುವ ಪ್ರಕ್ರಿಯೆಯನ್ನು ಸರಳವಾಗುತ್ತದೆ.
  • UPI ಹಿಂಪಡೆಯುವಿಕೆಗಳು ಹಕ್ಕು ನಿರಾಕರಣೆಗಳನ್ನು ಕಡಿಮೆ ಮಾಡಬಹುದು.


ಯುಪಿಐ ಆ್ಯಪ್ ಗಳ ಮೂಲಕ ಪಿಎಫ್ ವಿತ್ ಡ್ರಾ ಮಾಡುವುದು ಹೇಗೆ..?

  • ಮೊದಲು ಮೊಬೈಲಿಗೆ ಯುಪಿಐ ಪೇಮೆಂಟ್ ಆ್ಯಪ್ ಗಳಾದ ಗೂಗಲ್ ಪೇ, ಫೋನ್ ಪೇ, ಪೇಟಿಎಂನಂಥ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕು.
  • ತದನಂತರ ಆ ಆ್ಯಪ್ ಗಳನ್ನು ಓಪನ್ ಮಾಡಿ ಅವುಗಳಲ್ಲಿ ನಿಮ್ಮ ಹೆಸರು, ಬ್ಯಾಂಕ್ ಖಾತೆ ಮತ್ತಿತರ ವಿವರಗಳನ್ನು ನೀಡಿ ನಿಮ್ಮ ಹೆಸರಿನ ಖಾತೆಯನ್ನು ರಚಿಸಿಕೊಳ್ಳಬೇಕು.
  • ನಿಮ್ಮಗೆ ಸದ್ಯದಲ್ಲೇ ಆ ಆ್ಯಪ್ ಗಳಲ್ಲಿ ಇಪಿಎಫ್ಒ ವಿತ್ ಡ್ರಾವಲ್ ಎಂಬ ಹೊಸ ಆಪ್ಷನ್ ಕಾಣಲಿದೆ. ಅದು ಬಳಕೆಗೆ ಬಂದ ನಂತರ ಅದನ್ನು ಟ್ಯಾಪ್ ಮಾಡಬೇಕಾಗುತ್ತದೆ
  • ನೀವು ಇಪಿಎಫ್ಒ ವಿತ್ ಡ್ರಾವಲ್ ಎಂಬ ಆ್ಯಪ್ಷನ್ ಅಡಿಯಲ್ಲಿ ನಿಮ್ಮ ಪಿಎಫ್ ಖಾತೆಯ ಯುಎಎನ್ ನಂಬರ್ ನಮೂದಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಅಲ್ಲಿ ನಿಮ್ಮ ಪಿಎಫ್ ಖಾತೆಯ ಯುಎಎನ್ ನಂಬರ್ ನಮೂದನೆ ಮಾಡಬೇಕಾಗುತ್ತದೆ.
  • ನಿಮ್ಮಗೆ ವಿತ್ ಡ್ರಾ ಲಿಮಿಟ್ ಅಡಿಯಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಿಕೊಳ್ಳಬಹುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+