ಹಿಂದೆಲ್ಲಾ ಹಣ ಜಮಾ (Money Deposite) ಮಾಡುವುದಾದಗಲಿ, ಸಾಲ ಪಡೆಯುವುದಾಗಲಿ, ಯಾವುದೇ ವಹಿವಾಟು ನಡೆಸಬೇಕೆಂದರೂ, ಬ್ಯಾಂಕ್‌ಗೆ ಹೋಗಬೇಕಿತ್ತು. ಆದ್ರೆ ಈಗ ಹಾಗಲ್ಲ, ಎಲ್ಲವೂ ಡಿಜಿಟಲ್‌ಮಯವಾಗಿದೆ. ಯಾವುದೇ ಹಣದ ವಹಿವಾಟು ನಡೆಸಬೇಕೆಂದರೂ, ಗೂಗಲ್ ಪೇ, ಫೋನ್ ಪೇ, ಪೇಟಿಎಂ (Google Pay, PhonePe, Paytm) ಮೂಲಕ ನಡೆಸಬಹುದು.

ಗೂಗಲ್ ಪೇ, ಫೋನ್ ಪೇ, ಪೇಟಿಎಂ ಸೇರಿದಂತೆ ಯುಪಿಐ ಬಳಸಿ ವಹಿವಾಟು ನಡೆಸುವ ಲಕ್ಷಾಂತರ ಬಳಕೆದಾರರಿಗೆ ಫೆಬ್ರವರಿ 2026ರಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI), ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (NPCI) ಮತ್ತು ಸರ್ಕಾರದ ನಿರ್ದೇಶನದಂತೆ ಈ ಬದಲಾವಣೆಗಳು ಡಿಜಿಟಲ್ ಪೇಮೆಂಟ್‌ಗಳನ್ನು ವೇಗವಾಗಿ, ಸುರಕ್ಷಿತವಾಗಿ ಮತ್ತು ಪಾರದರ್ಶಕವಾಗಿ ಮಾಡುವ ಗುರಿ ಇಟ್ಟುಕೊಂಡಿದೆ.
ಡಿಜಿಟಲ್ ಪೇಮೆಂಟ್ ಮಾಡುವವರೇ ಇಲ್ಲಿ ಗಮನಿಸಿ:
ವಹಿವಾಟು ವೇಗ ಹೆಚ್ಚಳ:
ಹೊಸ ನಿಯಮದ ಪ್ರಕಾರ, ಇನ್ಮೇಲೆ ಯುಪಿಐ ಮೂಲಕ ವಹಿವಾಟು ನಡೆಸುವವರು ಗರಿಷ್ಠ 10 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಈ ಹಿಂದೆ ವಹಿವಾಟು ಮಿತಿಯನ್ನು 30 ಸೆಕೆಂಡುಗಳಿಗೆ ನಿಗದಿಪಡಿಸಲಾಗಿತ್ತು.ಆದ್ರೆ ಇದೀಗ ಈ ನಿಯಮದಲ್ಲಿ ಬದಲಾವಣೆ ತಂದಿದ್ದು, ಇದರಿಂದ ಹಣ ಕಳುಹಿಸುವಾಗ ಆಗುತ್ತಿರುವ ತಡ, ಲೋಡಿಂಗ್ ಸಮಸ್ಯೆಗಳು ಕೂಡಾ ಕಡಿಮೆಯಾಗಲಿದೆ. ವಿಶೇಷವಾಗಿ ನೆಟ್‌ವರ್ಕ್ ಸಮಸ್ಯೆ ಇರುವ ಸಂದರ್ಭದಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನಲಾಗಿದೆ.
ಸುರಕ್ಷತೆಗೆ ಒತ್ತು:
ಹೊಸ ನಿಯಮಗಳಿಂದಾಗಿ ವೆರಿಫಿಕೇಶನ್ ಸ್ಟ್ಯಾಂಡರ್ಡ್‌ಗಳು ಕಠಿಣವಾಗಲಿದೆ. ಅಲ್ಲದೇ ಇನ್ಮೇಲೆ ಯುಪಿಐ ಅಪ್ಲಿಕೇಶನ್‌ಗಳಲ್ಲಿ ಟೂ-ಫ್ಯಾಕ್ಟರ್ ಅಥೆಂಟಿಕೇಶನ್ ಕಡ್ಡಾಯಗೊಳಿಸಲಾಗಿದೆ. ಅಲ್ಲದೇ ಬಳಕೆಯಿಲ್ಲದ ಯುಪಿಐ ಐಡಿಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡುವ ನಿರ್ಧಾರಕ್ಕೆ ಮುಂದಾಗಿದೆ. ಅಂದರೆ ದೀರ್ಘಕಾಲ ಬಳಸದಿದ್ದರೆ, ಸ್ವಯಂಚಾಲಿತವಾಗಿ ಬ್ಲಾಕ್ ಆಗಬಹುದು.
ಟ್ರಾನ್ಸಾಕ್ಷನ್ ಫೇಲ್ ಆದ್ರೆ ನಿಖರ ಕಾರಣ:
ಸಾಮಾನ್ಯವಾಗಿ ಕೆಲವು ಕಾರಣಗಳಿಂದ ಕೆಲವೊಮ್ಮೆ ಟ್ರಾನ್ಸಾಕ್ಷನ್‌ಗಳು ಫೇಲ್ ಆಗುತ್ತವೆ. ಈ ಸಂದರ್ಭದಲ್ಲಿ ಕೇವಲ "ಟ್ರಾನ್ಸಾಕ್ಷನ್ ಫೇಲ್ಡ್" ಎಂದು ಮಾತ್ರ ಮೆಸೇಜ್ ಬರುತ್ತಿತ್ತು. ಆದ್ರೆ ಇನ್ಮೇಲೆ ಸ್ಪಷ್ಟ ಮತ್ತು ವಿವರವಾದ ಕಾರಣ ತಿಳಿಸಲಾಗುತ್ತದೆ ಎನ್ನಲಾಗಿದೆ. ಅಂದರೆ ಏಕೆ ವಿಫಲವಾಯಿತು ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ತಿಳಿಯಲಿದೆ.
ಬ್ಯಾಲೆನ್ಸ್ ಚೆಕ್ ಮಿತಿ ಬದಲಾವಣೆ:
ಇನ್ಮೇಲೆ ದಿನಕ್ಕೆ 50 ಬಾರಿ ಬ್ಯಾಲೆನ್ಸ್ ಚೆಕ್ ಮಾಡಬಹುದಾಗಿದೆ. ಆದ್ದರಿಂದ ಗ್ರಾಹಕರಿಗೆ ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.
ದೈನಂದಿನ ವಹಿವಾಟು ಮಿತಿ:
ಸಾಮಾನ್ಯವಾಗಿ P2P ಮತ್ತು P2M ವಹಿವಾಟುಗಳಿಗೆ ದಿನಕ್ಕೆ 1 ಲಕ್ಷ ಮಿತಿ ಮುಂದುವರೆಸಲಾಗಿದೆ. ಆದ್ರೆ ಕೆಲವು ವಿಶೇಷ ವರ್ಗಗಳಿಗೆ ಅಂದರೆ ವಿಮೆ, ಕ್ಯಾಪಿಟಲ್ ಮಾರ್ಕೆಟ್, ಟ್ಯಾಕ್ಸ್ ಪೇಮೆಂಟ್, ಇತ್ಯಾದಿ ವಹಿವಾಟುಗಳಿಗೆ ಪ್ರತೀ ಪೇಮೆಂಟ್ 5 ಲಕ್ಷ ಮತ್ತು ದಿನಕ್ಕೆ 10 ಲಕ್ಷಗಳವರೆಗೆ ವಹಿವಾಟು ನಡೆಸುವ ಅವಕಾಶವಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications