ದಿನ ನಿತ್ಯದ ಎಲ್ಲ ಕಾರ್ಯಗಳಿಗೆ ನಾವು ಡಿಜಿಟಲ್ ಪಾವತಿಯನ್ನು ಬಳಕೆ ಮಾಡುತ್ತೇವೆ. ನಗದುವನ್ನು ಚಲಾವಣೆ ಮಾಡುವುದು ಕಣ್ಮರೆಯಾಗುತ್ತಿದೆ. ಪ್ರತಿ ದಿನವೂ ಡಿಜಿಟಲ್ ಪಾವತಿ ಬಳಕೆ ಅಧಿಕವಾಗಿ ವೇಗವನ್ನು ಬೆಳೆಯುತ್ತಿದೆ. ಹೀಗಿರುವಾಗ ಡಿಜಿಟಲ್ ಪಾವತಿ ವೇಳೆ ಕಲೆವರು ವಂಚನೆಗಳಿಗೆ ಒಳಪಟ್ಟಿರುತ್ತಾರೆ. ಇದಕೆಲ್ಲಾ ಕಡಿವಾಣ ಹಾಕಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಪ್ರಮುಖ ಸುರಕ್ಷತಾ ಸಲಹೆಗಳನ್ನು ನೀಡಿದೆ.

ಹೌದು, ಡಿಜಿಟಲ್ ಆರ್ಥಿಕ ವಂಚನೆಗಳಿಂದ ಬಳಕೆದಾರರನ್ನು ರಕ್ಷಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಪ್ರಮುಖ ಸುರಕ್ಷತಾ ಸಲಹೆಗಳನ್ನು ನೀಡಿದೆ. ಯುಪಿಐ ಮತ್ತು ಆನ್‌ಲೈನ್ ಪಾವತಿಗಳನ್ನು ಎಲ್ಲರಿಗೂ ಸುರಕ್ಷಿತವಾಗಿರಿಸುವುದು ಈ ಮಾರ್ಗಸೂಚಿಗಳ ಗುರಿಯಾಗಿದೆ. ಅವುಗಳು ಈ ಕೆಳಗಿನಂತೆ ಇವೆ.
ಸುರಕ್ಷಿತ ಡಿಜಿಟಲ್ ಪಾವತಿ NPCI ಶಿಫಾರಸು ಮಾಡುವ 5 ಪ್ರಮುಖ ಸಲಹೆಗಳು
ಪಾವತಿ ಮಾಡುವ ಮೊದಲು ಪರಿಶೀಲಿಸಿ: ನೀವು ಯಾರಿಗೆ ಯುಪಿಐ ಮೂಲಕ ಡಿಜಿಟಲ್ ಪಾವತಿಯನ್ನು ಮಾಡಿದ್ದರೆ ಮೊದಲು ಪಾವತಿದಾರರ ಹೆಸರು, ವಿವರಗಳನ್ನು ಎರಡು ಬಾರಿ ಪರಿಶೀಲನೆಯನ್ನು ಮಾಡುವುದು ಮುಖ್ಯವೆಂದು NPCI ಹೇಳಿದೆ. ಯಾವ ವ್ಯಕ್ತಿಗೆ ಹಣವನ್ನು ಕಳುಹಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ನಿಮ್ಮ ಹಣ ದುರುಪಯೋಗವಾಗವುದು ತಪ್ಪುತ್ತದೆ.
ವಿಶ್ವಾಸಾರ್ಹ ಅಪ್ಲಿಕೇಶನ್, ವೆಬ್‌ಸೈಟ್‌ಗಳನ್ನು ಮಾತ್ರ ಬಳಸಿ: ಭೀಮ್ ಆಪ್, ಗೂಗಲ್ ಪೇ, ಫೋನ್ ಪೇ,ಪೇಟಿಎಂನಂತಹ ಅಧಿಕೃತ ಅಪ್ಲಿಕೇಶನ್‌ಗಳ ಮೂಲಕ ಪಾವತಿಗಳನ್ನು ಮಾಡಿ ಮತ್ತು ಅಪರಿಚಿತ ಲಿಂಕ್‌ಗಳ ಮೂಲಕಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ಎಸ್‌ಎಮ್‌ಎಸ್ ಮತ್ತು ಇಮೇಲ್ ಮೂಲಕ ಬರುವಂತಹ ಲಿಂಕ್‌ಗಳ ಮೇಲೆ ಕ್ಕಲಿಕ್ ಮಾಡಬೇಡಿ. ಇದರಿಂದ ನಿಮ್ಮ ಖಾತೆಯ್ಲಲಿ ಇರುವ ಹಣದ ವಂಚನೆಯಾಗಬಹುದು.
UPI ಪಿನ್, OTP ಅನ್ನು ಶೇರ್ ಮಾಡಬೇಡಿ: ನೀವು ಯುಪಿಐ ಪಿನ್, ಓಟಿಪಿ ಬ್ಯಾಂಕ್ ರುಜುವಾತುಗಳು ನಿಮ್ಮ ಖಾಸಗಿಯಾಗಿರುತ್ತವೆ. ಬ್ಯಾಂಕ್, ಪೊಲೀಸ್ ಸರ್ಕಾರಿ ಸಂಸ್ಥೆಯಿಂದ ಬಂದವರು ನಾವು ಓಟಿಪಿಯನ್ನು ಹೇಳಿ ಎಂದರೆ ಯಾವುದೇ ಕಾರಣಕ್ಕೂ ಶೇರ್ ಮಾಡಿಕೊಳ್ಳಬೇಡಿ.
ಹಣದ ವಹಿವಾಟಿಗೆ ಆತುರ ಬೇಡ: ನಿಮ್ಮ ಖಾತೆಯಲ್ಲಿ ಹಣವನ್ನು ದೋಚಲು ವಂಚಕರು ಸಾಮಾನ್ಯವಾಗಿ ಬಹುಬೇಗನರ ಪಾವತಿಯನ್ನು ಮಾಡಿ ಎಂದು ಒತ್ತಾಯವನ್ನು ಮಾಡುತ್ತಾರೆ. ಆಗ ನೀವ ಸಮುವನ್ನು ತಗೆದುಕೊಂಡು ಯೋಚನೆಯನ್ನು ಮಾಡಿ. ಯಾವುದೇ ಪಾವತಿ ಮಾಡುವ ಮೊದಲು ಎಚ್ಚರಿಕೆ ಮುಖ್ಯವಾಗುತ್ತದೆ.
ಮೇಲ್ವಿಚಾರಣೆ ಮಾಡಿ: ನಿಮ್ಮ ಹಣಕಾಸಿಗೆ ಸಂಬಂಧಿಸಿದಂತೆ ಎಲ್ಲಾ ವಹಿವಾಟುಗಳಿಗೆ SMS ಮತ್ತು ಯುಪಿಐ ಅಪ್ಲಿಕೇಶನ್ ನೋಟಿಫೀಕೇಶನ್‌ನ್ನು ಆನ್ ಮಾಡಿಕೊಳ್ಳಿ. ಅವುಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ನಿಮ್ಮಗೆ ಏನಾದರೂ ಅನುಮಾನ ಕಂಡುಬಂದರೆ ಮೇಲ್ವಿಚಾರಣೆ ಮಾಡಿ
ನೀವು ಈ ಮೇಲಿನ ಮಾರ್ಗಸೂಚಿಗಳನ್ನು ಅನುಸರಿಸುವುದರಿಂದ ಡಿಜಿಟಲ್ ಪಾವತಿಗಳನ್ನು ಸುರಕ್ಷಿತವಾಗಿ ಇರುವುದರ ಜೊತಗೆ ವಂಚನೆಗಳಿಂದ ಬಹುಬೇಗನೆ ಬಜಾವ್ ಆಗಬಹುದು.


Click it and Unblock the Notifications