Thali Cost: ವೆಜ್ ಊಟ Vs ನಾನ್‌ ವೆಜ್ ಊಟ- ಬೆಲೆ ಎಷ್ಟಿದೆ, ಯಾವುದು ಅಗ್ಗ?

ದಿನ ಕಳೆದಂತೆ ಪ್ರತಿ ಪ್ಲೇಟ್ ಆಹಾರದ ಬೆಲೆಯೂ ಕೂಡಾ ಹೆಚ್ಚಳವಾಗುತ್ತಾ ಸಾಗುತ್ತಿದೆ. ಈ ನಡುವೆ ನಾವು ವೆಜ್‌ ಊಟ- ನಾನ್‌ ವೆಜ್ ಊಟದಲ್ಲಿ ಯಾವುದೇ ಅಗ್ಗ ಎಂದು ನೋಡಿದರೆ ಹೇಗೆ?. ಕ್ರಿಸಿಲ್ ಮಾರ್ಕೆಟ್ ಇಂಟಲಿಜೆನ್ಸ್ & ಅನಾಲಿಟಿಕ್ಸ್‌ನ ವರದಿಯು ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರದ ಮೇಲಿನ ವೆಚ್ಚದ ಬಗ್ಗೆ ಕೆಲವು ಆಸಕ್ತಿದಾಯಕ ಡೇಟಾವನ್ನು ಹಂಚಿಕೊಂಡಿದೆ.

ವರದಿಯ ಪ್ರಕಾರ, ಸಸ್ಯಾಹಾರಿಗಳು ತಮ್ಮ ಮನೆಯಲ್ಲಿ ತಯಾರಿಸಿದ ಒಂದು ಪ್ಲೇಟ್ ಊಟಕ್ಕೆ ಡಿಸೆಂಬರ್ 2022 ರಲ್ಲಿ ಖರ್ಚು ಮಾಡಿದ್ದಕ್ಕಿಂತ 2023 ರಲ್ಲಿ ಅಧಿಕ ಖರ್ಚು ಮಾಡಿದ್ದಾರೆ. ಅದು ಕೂಡಾ ಒಂದು ಪ್ಲೇಟ್ ಮಾಂಸಹಾರ ಊಟಕ್ಕೆ ಆಗುವ ಖರ್ಚಿಗಿಂತ ಅಧಿಕ ಖರ್ಚು ಸಸ್ಯಾಹಾರ ಊಟಕ್ಕೆ ತಗುಲುತ್ತಿದೆ.

 ವೆಜ್ ಊಟ Vs ನಾನ್‌ ವೆಜ್ ಊಟ- ಬೆಲೆ ಎಷ್ಟಿದೆ, ಯಾವುದು ಅಗ್ಗ?

ವೆಜ್ -ನಾನ್‌ ವೆಜ್: ಯಾವುದು ಅಗ್ಗ?

ಕ್ರಿಸಿಲ್ ವಿಭಾಗದ ವರದಿಯಲ್ಲಿ 2022 ರ ಅವಧಿಯ ವರದಿಯನ್ನು ನಾವು 2023 ರ ಡಿಸೆಂಬರ್‌ ವರದಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಸಸ್ಯಾಹಾರಿ ಊಟದ ಥಾಲಿಯ (ಪ್ಲೇಟ್) ವೆಚ್ಚವು ಶೇಕಡ 12 ರಷ್ಟು ಹೆಚ್ಚಾಗಿದೆ ಎಂದು ತಿಳಿದುಬರುತ್ತದೆ. ಹಾಗೆಯೇ ಈರುಳ್ಳಿ ಮತ್ತು ಟೊಮೆಟೊ ಬೆಲೆಯಲ್ಲಿ ಕ್ರಮವಾಗಿ ಶೇಕಡ 82 ಮತ್ತು ಶೇಕಡ 42 ರಷ್ಟು ಏರಿಕೆಯಿಂದಾಗಿ ಥಾಲಿಯ ಬೆಲೆಯೂ ಕೂಡಾ ಹೆಚ್ಚಳವಾಗಿದೆ.

ಒಂದು ತರಕಾರಿ ಊಟದಲ್ಲಿ ಶೇಕಡ 9 ರಷ್ಟು ಬೆಲೆಯನ್ನು ಹೊಂದಿರುವ ಬೇಳೆಕಾಳುಗಳ ಬೆಲೆಗಳು ವರ್ಷದಲ್ಲಿ ಶೇಕಡ 24 ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳುತ್ತದೆ. ಈ ನಡುವೆ ಮಾಂಸಾಹಾರಿ ಥಾಲಿಯ ಬೆಲೆಯಲ್ಲಿ ಸುಮಾರು ಶೇಕಡ 15 ರಷ್ಟು ಇಳಿಕೆಯಾಗಿದೆ ಎಂದು ವರದಿ ಹೇಳಿದೆ. ಬ್ರಾಯ್ಲರ್ ಬೆಲೆಯಲ್ಲಿ ಇಳಿಕೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಒಟ್ಟಾರೆಯಾಗಿ ನಾವು ನೋಡಿದಾಗ ತರಕಾರಿ ಊಟ ದುಬಾರಿ, ಮಾಂಸಹಾರಿ ಊಟವು ತರಕಾರಿ ಊಟಕ್ಕೆ ಹೋಲಿಸಿದರೆ ಅಗ್ಗವಾಗಿದೆ.

ತಿಂಗಳಿನಿಂದ ತಿಂಗಳ ಆಧಾರದ ಮೇಲೆ ಮನೆಯಲ್ಲಿ ಬೇಯಿಸಿದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ವೆಚ್ಚವು ನವೆಂಬರ್ 2023 ರ ಬೆಲೆಗಳಿಗೆ ಹೋಲಿಸಿದರೆ ಡಿಸೆಂಬರ್ 2023 ರಲ್ಲಿ ಕ್ರಮವಾಗಿ ಶೇಕಡ 3 ಮತ್ತು ಶೇಕಡ 5 ರಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

"ಹಬ್ಬದ ಸೀಸನ್‌ ಅಂತ್ಯದೊಂದಿಗೆ ಈರುಳ್ಳಿ ಮತ್ತು ಟೊಮೆಟೊ ಬೆಲೆಯಲ್ಲಿ ಶೇಕಡ 14 ರಷ್ಟು ಶೇಕಡ 3 ರಷ್ಟು ಇಳಿಕೆಯಾಗಿದೆ. ಮಾಂಸಾಹಾರಿ ಥಾಲಿಯ ಬೆಲೆಯು ಮಾಂಸದ ಬೆಲೆಯಲ್ಲಿ ತಿಂಗಳಿಗೆ ಶೇಕಡ 5-7 ರಷ್ಟು ಕುಸಿತ ಕಂಡಿದೆ. ಇದು ವೆಚ್ಚದ ಶೇಕಡ 50 ರಷ್ಟಿದೆ," ಎಂದು ವರದಿ ಹೇಳಿದೆ.

ಕಳೆದ ತಿಂಗಳು ಅಂದರೆ ಡಿಸೆಂಬರ್‌ನಲ್ಲಿ (ನವೆಂಬರ್ 2023 ರಂದು 30.5 ರೂ.) ಒಂದು ಪ್ಲೇಟ್ ಸಸ್ಯಾಹಾರಿ ಆಹಾರದ ಅಡುಗೆ ವೆಚ್ಚ 29.70 ರೂಪಾಯಿ ಆಗಿದ್ದರೆ ಮಾಂಸಾಹಾರಿ ಊಟದ ಬೆಲೆ 57.6 ರೂಪಾಯಿ (ನವೆಂಬರ್ 2023 ರೂ. 60.4) ಎಂದು ವರದಿ ಹೇಳಿದೆ.

ಶುಕ್ರವಾರ ಬಿಡುಗಡೆಯಾಗಲಿರುವ ಗ್ರಾಹಕರ ಬೆಲೆ ಸೂಚ್ಯಂಕದ ಅಧಿಕೃತ ಅಂಕಿಅಂಶಗಳಿಗಿಂತ ಎರಡು ದಿನಗಳ ಮುಂಚಿತವಾಗಿ ಈ ವಿಶ್ಲೇಷಣೆ ಬಂದಿದೆ. ಅಂಕಿಅಂಶಗಳ ಸಚಿವಾಲಯದ ಅಕ್ಟೋಬರ್‌ನಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ ಶೇಕಡ 4.87ಕ್ಕೆ ಇಳಿದ ನಂತರ ಭಾರತದ ರಿಟೇಲ್ ಹಣದುಬ್ಬರವು ನವೆಂಬರ್‌ನಲ್ಲಿ ಶೇಕಡ 5.55ಕ್ಕೆ ಏರಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+