ಚಿನ್ನವನ್ನು ಎಂದಿಗೂ ನಮ್ಮ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಹಳದಿ ಲೋಹಕ್ಕೆ ಒಂದು ಪವಿತ್ರವಾದ ಸ್ಥಾನವಿದೆ. ಹಾಗೆಯೇ ಭಾರತೀಯರು ತಮ್ಮ ಕಷ್ಟ ಕಾಲಕ್ಕೆ ಸಹಾಯವಾಗುವುದು ಚಿನ್ನ ಎಂಬ ನಂಬಿಕೆಯನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಭಾರತದಲ್ಲಿ ಒಂದು ಕುಟುಂಬದಲ್ಲಿ ಹಣಕಾಸು ಬಿಕ್ಕಟ್ಟು ಉಂಟಾದಾಗ, ತುರ್ತು ಉಂಟಾದಾಗ ಚಿನ್ನವನ್ನು ಅಡವಿಟ್ಟು ಸಾಲವನ್ನು ಪಡೆಯಲಾಗುತ್ತದೆ. ನಿನ್ನೆಯಷ್ಟೇ ಚಿನ್ನದ ದರ ಭಾರೀ ಏರಿಕೆಯಾಗಿದೆ. ಈ ದರ ಹೆಚ್ಚಳವು ಗೋಲ್ಡ್ ಫೈನಾನ್ಸ್ ಸಂಸ್ಥೆಗಳ ಮೇಲೂ ಪ್ರಭಾವ ಬೀರಲಿದೆ.
ಭಾರತದಲ್ಲಿ ಹಲವಾರು ಹಣಕಾಸು ಸಂಸ್ಥೆಗಳು ಇದ್ದು, ಅವುಗಳು ಚಿನ್ನವನ್ನು ಅಡವು ಪಡೆದು ಅದರ ಮೌಲ್ಯದ ಆಧಾರ, ಲೆಕ್ಕಾಚಾರದಲ್ಲಿ ಸಾಲವನ್ನು ನೀಡುತ್ತದೆ. ಸಾಮಾನ್ಯವಾಗಿ ಇಂತಹ ಸಾಲಕ್ಕೆ ಅತೀ ಕಡಿಮೆ ಬಡ್ಡಿದರವಿರುತ್ತದೆ. ಇಂತಹ ಸಂಸ್ಥೆಗಳ ಮೇಲೆ ಚಿನ್ನದ ಬೆಲೆ ಏರಿಕೆಯು ಪಾಸಿಟಿವ್ ಪ್ರಭಾವವನ್ನು ಉಂಟು ಮಾಡಲಿದೆ. ಸಾಲ ಪಡೆಯುವವರ ಸಂಖ್ಯೆ ಅಧಿಕವಾದಂತೆ ಸಂಸ್ಥೆಗಳ ವಹಿವಾಟು ಅಧಿಕವಾಗಲಿದೆ. ಸೋಮವಾರ ಎಂಸಿಎಕ್ಸ್ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ದರವು 60,000 (ಪ್ರತಿ ಔನ್ಸ್‌ಗೆ 2000 ಡಾಲರ್) ರೂಪಾಯಿಯ ಸಾರ್ವಕಾಲಿಕ ಏರಿಕೆಯನ್ನು ಕಂಡಿದೆ.

ಚಿನ್ನ ಅಡವಿಟ್ಟು ಸಾಲ ಪಡೆಯುವ ಸಂಸ್ಥೆಗಳ ಮೇಲಿನ ಪ್ರಭಾವ
ಭಾರತದಲ್ಲಿ ಹಲವಾರು ಗೋಲ್ಡ್ ಫೈನಾನ್ಸ್‌ಗಳು ಇದೆ. ಅಂದರೆ ಚಿನ್ನವನ್ನು ಅಡಮಾನ ಪಡೆದುಕೊಂಡು ಸಾಲವನ್ನು ನೀಡುವ ಸಂಸ್ಥೆಗಳು ಇದೆ. ಆ ಪೈಕಿ ಮುತ್ತೂಟ್ ಫೈನಾನ್ಸ್ ಹಾಗೂ ಮಣಪ್ಪುರಂ ಫೈನಾನ್ಸ್ ಅತೀ ಮುಖ್ಯವಾದ ಸಂಸ್ಥೆಗಳು ಆಗಿದೆ. ಮಣಪ್ಪುರಂ ಫೈನಾನ್ಸ್‌ನಲ್ಲಿ ಒಟ್ಟು ವಹಿವಾಟಿನ ಶೇಕಡ 58.4ರಷ್ಟು ಚಿನ್ನದ ಸಾಲದ ಮೇಲೆ ಆಧಾರಿತವಾಗಿದೆ. ಇನ್ನು ಮುತ್ತೂಟ್ ಫೈನಾನ್ಸ್‌ನಲ್ಲಿ ಒಟ್ಟು ವಹಿವಾಟಿನ ಶೇಕಡ 98.4 ಅಂದರೆ ಸರಿ ಸುಮಾರು ಸಂಪೂರ್ಣ ವಹಿವಾಟು ಚಿನ್ನದ ಸಾಲದ ಮೇಲೆ ಆಧಾರಿತವಾಗಿದೆ.
ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ ಜನರು ಸಾಮಾನ್ಯವಾಗಿ ಚಿನ್ನವನ್ನು ಅಡವಿಟ್ಟು ಸಾಲವನ್ನು ಪಡೆಯಲು ನಿರ್ಧಾರ ಮಾಡುತ್ತದೆ. ಇದರಿಂದಾಗಿ ಚಿನ್ನ ಅಡಮಾನವಿಟ್ಟು ಸಾಲ ಪಡೆಯುವವರ ಪ್ರಮಾಣ ಹೆಚ್ಚಳವಾಗುತ್ತದೆ, ಅಂದರೆ ಗೋಲ್ಡ್ ಫೈನಾನ್ಸ್‌ಗಳಲ್ಲಿ ಸಾಲ ನೀಡಿಕೆ ಪ್ರಮಾಣ ಅಭಿವೃದ್ದಿಯಾಗುತ್ತದೆ. ಈ ಚಿನ್ನದ ಸಾಲ ಪ್ರಮಾಣ ಹೆಚ್ಚಳವಾಗುವುದು ಜನರಿಗೂ ಸಹಾಯಕವಾಗಲಿದೆ ಮತ್ತು ಸಾಲ ನೀಡುವ ಸಂಸ್ಥೆಗೂ ಸಹಾಯಕವಾಗಲಿದೆ. ಈ ಹಿಂದೆ ಚಿನ್ನ ಅಡವಿಟ್ಟು ಕಡಿಮೆ ಸಾಲವನ್ನು ಪಡೆದಿದ್ದವರು, ಈಗ ಚಿನ್ನ ಅಡವಿಟ್ಟು ಅಧಿಕ ಸಾಲವನ್ನು ಪಡೆಯಬಹುದಾಗಿದೆ. ಇದು ಚಿನ್ನ ಸಾಲ ನೀಡುವ ಸಂಸ್ಥೆಗಳಿಗೂ ಸಹಾಯಕವಾಗಲಿದೆ.
ಚಿನ್ನದ ದರ ಏರಿಕೆ ಹಾಗೂ ಗೋಲ್ಡ್ ಫೈನಾನ್ಸ್‌ಗಳ ಬ್ಯಾಲೆನ್ಸ್ ಶೀಟ್ ಒಂದಕ್ಕೊಂದು ಸಂಬಂಧವನ್ನು ಹೊಂದಿದೆ. ಅಂದರೆ ಚಿನ್ನದ ದರವು ಹೆಚ್ಚಳವಾದರೆ, ಗೋಲ್ಡ್ ಫೈನಾನ್ಸ್‌ಗಳ ಬ್ಯಾಲೆನ್ಸ್ ಶೀಟ್ ಕೂಡಾ ಏರುತ್ತದೆ. ಇದಕ್ಕೆಲ್ಲ ಮುಖ್ಯ ಕಾರಣ ಚಿನ್ನದ ದರ ಏರಿಕೆಯಾದಾಗ ಚಿನ್ನವನ್ನು ಮೇಲಾಧಾರವಾಗಿ ಸಾಲವನ್ನು ಪಡೆದರೆ ನಮಗೆ ಅಧಿಕ ಲಾಭ ಲಭ್ಯವಾಗಲಿದೆ ಎಂಬ ಜನರ ತಿಳುವಳಿಕೆಯಾಗಿದೆ. ಇನ್ನು ಚಿನ್ನವನ್ನು ಅಡವಿಟ್ಟು ಸಾಲ ವಹಿವಾಟನ್ನು ನಡೆಸುತ್ತಿರುವವರು ಕೂಡಾ ಇದರಿಂದ ಲಾಭವನ್ನು ಪಡೆಯುತ್ತಾರೆ. ಅಂದರೆ ನೇರವಾಗಿ ಹೇಳಬೇಕಾದರೆ ಫೈನಾನ್ಸ್ ಸಂಸ್ಥೆಗಳಿಗೆ ಜನರು ಪಡೆಯುವ ಸಾಲವೇ ಆಧಾರವಾಗಿದೆ. ಚಿನ್ನದ ದರ ಹೆಚ್ಚಳವಾದರೆ, ಫೈನಾನ್ಸ್ ಸಂಸ್ಥೆಗಳಿಗೆ ಲಾಭ ಅಧಿಕವಾಗಿದೆ.


Click it and Unblock the Notifications