ಆಧಾರ್ ಕಾರ್ಡ್ ಪ್ರತಿಯೊಬ್ಬರಿಗೂ ಇಂದು ಅಗತ್ಯವಾಗಿರುವ ಪ್ರಮುಖ ಗುರುತಿನ ದಾಖಲೆಯಾಗಿದೆ. ಸರ್ಕಾರದ ಸಬ್ಸಿಡಿಗಳು ಮತ್ತು ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಂದ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಭಾರತದಲ್ಲಿ ಕಡ್ಡಾಯ ಕೆವೈಸಿ ದಾಖಲೆಗಳಲ್ಲಿ ಒಂದಾಗಿದೆ.
ಇದು 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ವಿತರಿಸುತ್ತದೆ. ಇದು ಸಂಪೂರ್ಣ ಹೆಸರು, ಶಾಶ್ವತ ವಿಳಾಸ ಮತ್ತು ಜನ್ಮ ದಿನಾಂಕ ಸೇರಿದಂತೆ ನಾಗರಿಕರ ಬಗ್ಗೆ ಪ್ರಮುಖ ಮಾಹಿತಿಯನ್ನು ಒಳಗೊಂಡಿರುವುದರಿಂದ ಇದು ಪ್ರಮುಖ ಗುರುತಿನ ಪರಿಶೀಲನಾ ದಾಖಲೆಯಾಗಿ ಪರಿಗಣಿಸಲ್ಪಟ್ಟಿದೆ.

ಆಧಾರ್ ಕಾರ್ಡ್ ಪಡೆಯಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಯಾವುದೇ ಕನಿಷ್ಠ ವಯಸ್ಸಿನ ಮಿತಿ ನಿಗದಿಪಡಿಸಿಲ್ಲ. ಆದರೂ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು 2018 ರಲ್ಲಿ ಬ್ಲ್ಯೂ ಆಧಾರ್ ಕಾರ್ಡ್ (ಬಾಲ್ ಆಧಾರ್) ಪರಿಕಲ್ಪನೆಯನ್ನು ಪರಿಚಯಿಸಿದೆ.
ಇದು ನಿರ್ದಿಷ್ಟವಾಗಿ 5 ವರ್ಷದೊಳಗಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಲ್ಲಿ ಚಿಕ್ಕ ಮಕ್ಕಳ ಸೇರ್ಪಡೆಯನ್ನು ಸರಳಗೊಳಿಸುವಲ್ಲಿ ಬ್ಲ್ಯೂ ಆಧಾರ್ ಕಾರ್ಡ್ ಮಹತ್ವವನ್ನು ಪಡೆಯುತ್ತದೆ. ಐದು ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಈ ಆಧಾರ್ ಕಾರ್ಡ್‌ನ ಪ್ರಮುಖ ವೈಶಿಷ್ಟ್ಯವೆಂದರೆ 5 ವರ್ಷದೊಳಗಿನ ಮಕ್ಕಳು ಬಯೋಮೆಟ್ರಿಕ್ ಡೇಟಾವನ್ನು ಒದಗಿಸುವ ಅಗತ್ಯವಿಲ್ಲ.
ಅಂದರೆ ವಯಸ್ಕರಿಗೆ ಅಗತ್ಯವಿರುವ, ಫಿಂಗರ್ ಪ್ರಿಂಟ್ ಅಥವಾ ರೆಟಿನಾದ ಸ್ಕ್ಯಾನ್ ಇಲ್ಲಿ ಪಡೆಯಲಾಗುವುದಿಲ್ಲ. ಬದಲಾಗಿ, ಅವರ ವಿಶಿಷ್ಟ ಗುರುತು ಸಂಖ್ಯೆಯನ್ನು ಅನ್ನು ಜನಸಂಖ್ಯಾ ಡೇಟಾ ಮತ್ತು ಅವರ ಪೋಷಕರ ವಿಶಿಷ್ಟ ಗುರುತು ಸಂಖ್ಯೆ ಬಳಸಿಕೊಂಡು ಪ್ರಕ್ರಿಯೆ ಮಾಡಲಾಗುತ್ತದೆ. ಮಗುವಿಗೆ ಬ್ಲೂ ಆಧಾರ್ ಕಾರ್ಡ್ ಮಾಡಿಸಿದ ಬಳಿಕ ಅದರ ವಯಸ್ಸು 5 ವರ್ಷ ದಾಟುತ್ತಲೇ ಅಧಾರ್ನ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸುವುದನ್ನು ಪೋಷಕರು ಮರೆಯಬಾರದು.
ಹಾಗಿದ್ರೆ ನೀಲಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಯುಐಡಿಎಐ ಅಧಿಕೃತ ವೆಬ್ಸೈಟ್ಗೆ ಹೋಗಿ uidai.gov.in
ಹಂತ 2: ದಾಖಲಾತಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ.
ಹಂತ 3: ಆಧಾರ್ ಕಾರ್ಡ್ ರಿಜಿಸ್ಟ್ರೇಶನ್ಗಾಗಿ ಅಪಾಯಿಂಟ್‌ಮೆಂಟ್ ಆಯ್ಕೆ ಆರಿಸಿಕೊಳ್ಳಿ.
ಹಂತ 4: ಸಮೀಪದ ದಾಖಲಾತಿ ಕೇಂದ್ರ ಆಯ್ಕೆ ಮಾಡಿಕೊಂಡು ಅಪಾಯಿಂಟ್‌ಮೆಂಟ್ ಪಡೆಯಿರಿ.
ಹಂತ 5: ಪೋಷಕರು ತಮ್ಮ ಆಧಾರ್ ಕಾರ್ಡ್, ಮಗುವಿನ ಜನನ ಪ್ರಮಾಣಪತ್ರ, ರೆಫರೆನ್ಸ್ ನಂಬರ್ ಇತ್ಯಾದಿ ದಾಖಲೆಗಳೊಂದಿಗೆ ಆಧಾರ್ ಕೇಂದ್ರಕ್ಕೆ ಹೋಗಿ
ಅಗತ್ಯವಿರುವ ಕೆಲಸ ಪೂರ್ಣಗೊಳಿಸಿದ ನಂತರ, ಆಧಾರ್ ಸ್ಥಿತಿಗತಿ ಟ್ರ್ಯಾಕ್ ಮಾಡಲು ಸ್ವೀಕೃತಿ ಸಂಖ್ಯೆ ಪಡೆಯಲು ಮರೆಯದಿರಿ


Click it and Unblock the Notifications