ಮೆಡಿಕಲ್ ಶಾಪ್ ಅಂದಕೂಡಲೇ ಕಣ್ಣ ಮುಂದೆ ಬರೋದು ಅದೇ ದುಬಾರಿ ಮೆಡಿಸಿನ್‌ಗಳು, ಸೌಂದರ್ಯವರ್ಧಕಗಳು. ಆರೋಗ್ಯ ಚೆನ್ನಾಗಿದ್ರೆ ಎಲ್ಲವೂ ಸರಿಯಿರುತ್ತೆ, ಅನಾರೋಗ್ಯ ಕಾಡಿದ್ರೆ ಆಸ್ಪತ್ರೆ, ಮೆಡಿಕಲ್ ಶಾಪ್‌ಗಳ ಮೇಲೆ ಅವಲಂಭನೆ ಹೆಚ್ಚಾಗುತ್ತೆ. ರೋಗಿಗಳಿಗೆ ಈ ಮೆಡಿಕಲ್ ಶಾಪ್‌ಗಳು ಒಂದು ರೀತಿಯಲ್ಲಿ ಸಂಜೀವಿನಿ ಬೆಟ್ಟದಂತೆ ಗೋಚರಿಸುತ್ತೆ. ಮಾತ್ರೆ, ಔಷಧಿ ತೆಗೆದುಕೊಂಡ್ರೆ ಎಲ್ಲವೂ ಸರಿಹೋಗುತ್ತೆ ಎನ್ನುವ ನಂಬಿಕೆ.
ನೀವು ಯಾವುದೇ ಉತ್ಪನ್ನಗಳನ್ನು ಖರೀದಿಸುವಾಗಲೂ ಚೌಕಾಸಿ ಮಾಡಿರಬಹುದು. ಆದರೆ ಎಷ್ಟೋ ಗ್ರಾಹಕರು ಮೆಡಿಕಲ್ ಶಾಪ್‌ಗಳಲ್ಲಿ ಮಾತ್ರೆಗಳಿಗೆ , ಔಷಧಿ ಮೇಲಿನ ದರಗಳಿಗೆ ಚೌಕಾಸಿ ಮಾಡೋದನ್ನು ನೀವು ನೋಡಿದ್ದೀರಾ? ಬಹುತೇಕ ಕಡಿಮೆ ಅಲ್ಲವೆ! ಹಾಗಿದ್ದರೆ ನೀವು ಕಡಿಮೆ ಔಕಾಸಿ ಮಾಡುವ ಮೆಡಿಕಲ್‌ನ ಮೆಡಿಸಿನ್‌ಗಳ ಮೇಲೆ ಎಷ್ಟು ಮಾರ್ಜಿನ್ ಇದೆ? ಹಾಗೂ ಮಾರಾಟಗಾರರಿಗೆ ಏನೆಲ್ಲಾ ಸವಾಲುಗಳು ಇದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಓದಿ
ರಿಟೈಲ್ ಮಾರ್ಜಿನ್ 20 ಪರ್ಸೆಂಟ್
ರಾಜ್ಯ, ರಾಷ್ಟ್ರಾದ್ಯಂತ ಸಾವಿರಾರು ಮೆಡಿಕಲ್ ಶಾಪ್‌ಗಳಿವೆ. ಹಾಗೆಯೇ ಲೆಕ್ಕವೇ ಇಲ್ಲದಷ್ಟು ಮೆಡಿಸಿನ್‌ಗಳು ಸಹ ಇವೆ. ಅನೇಕ ಸ್ಟ್ಯಾಂಡರ್ಡ್ ಕಂಪನಿಗಳು ಇದ್ದು, ಹೊಸ ಕಂಪನಿಗಳನ್ನು ಕಾಣಬಹುದು. ಮೆಡಿಕಲ್‌ಗಳಲ್ಲಿ ರಿಟೈಲ್ ಮಾರ್ಜಿನ್ 20 ಪರ್ಸೆಂಟ್‌ವರೆಗೂ ಇರುತ್ತದೆ. ಸ್ಟಾಕಿಸ್ಟ್‌ಗಳು(ಮೆಡಿಕಲ್‌ಗಳಿಗೆ ಔಷಧಿ ವಿತರಕರು) ಕಂಪನಿಯ ಆಫರ್‌ಗಳಿಗೆ ಔಷಧಿಗಳನ್ನು ನೀಡುತ್ತಾರೆ..
ಕೆಲವೊಂದು ಕಂಪನಿಗಳಿಂದ ಸಿಗುತ್ತೆ ಹೆಚ್ಚು ಮಾರ್ಜಿನ್ ರೇಟ್
ಸ್ಟಾಂಡರ್ಡ್ ಕಂಪನಿಗಳು ಮಾರ್ಜಿನ್ ದರದಲ್ಲಿ ಹೆಚ್ಚು ಬದಲಾವಣೆ ಮಾಡುವುದಿಲ್ಲ. ಬಹುತೇಕ 20 ಪರ್ಸೆಂಟ್‌ವರೆಗೂ ಮಾರ್ಜಿನ್ ಬಿಟ್ಟುಕೊಡುತ್ತವೆ. ಆದರೆ ಕೆಲವೊಂದು ಕಂಪನಿಗಳು ಅಂದರೆ ಹೊಸ ಕಂಪನಿಗಳು ಮಾರ್ಕೆಂಟಿಗ್ ಮಾಡುವುದಕ್ಕಾಗಿ 50 ಪರ್ಸೆಂಟ್ ವರೆಗೂ ಮಾರ್ಜಿನ್ ಕೊಡುತ್ತವೆ. ಅದರಲ್ಲೂ ಮೆಡಿಸಿನ್‌ಗಳನ್ನು ಬಲ್ಕ್ ಆಗಿ ಖರೀದಿ ಮಾಡಿದ್ರೆ ಹೆಚ್ಚುವರಿ 10 ಪರ್ಸೆಂಟ್ ನೀಡುತ್ತವೆ.
ಸ್ಟ್ಯಾಂಡರ್ಡ್ ಕಂಪನಿಗಳು ಸೌಂದರ್ಯವರ್ಧಕ ಉತ್ಪನ್ನಗಳ ಮೇಲೆ 10 ರಿಂದ 15 ಪರ್ಸೆಂಟ್‌ವರೆಗಷ್ಟೇ ಮಾರ್ಜಿನ್ ನೀಡುತ್ತವೆ. ಉದಾಹರಣೆಗೆ ಸೋಪು, ಕ್ರೀಮ್‌ಗಳು, ಎನರ್ಜಿ ಡ್ರಿಂಕ್ ಇತ್ಯಾದಿ.
ಸ್ಕೀಂಗಳ ಮೂಲಕವೂ ಸಿಗುತ್ತೆ ಆಫರ್
ಈ ಮೇಲೆ ತಿಳಿಸಿದಂತೆ ಮಾರ್ಜಿನ್ ಪರ್ಸೆಂಟ್ ಸಿಗುವ ಜೊತೆಗೆ ಕೆಲವು ಸ್ಕೀಂಗಳನ್ನು ಕಂಪನಿಗಳು ಹೊಂದಿರುತ್ತವೆ. ಉದಾಹರಣೆಗೆ ಐದು ಎನರ್ಜಿ ಡ್ರಿಂಕ್‌ಗಳನ್ನು ಖರೀದಿಸಿದರೆ ಒಂದು ಎನರ್ಜಿ ಡ್ರಿಂಕ್ ಫ್ರೀ, ಹೀಗೆ ವಿವಿಧ ಉತ್ಪನ್ನಗಳ ಮೇಲೆ ಆಫರ್ ಕೂಡ ಇರುತ್ತದೆ.
ಲಾಭ ಎಷ್ಟು ಸಿಗುತ್ತೆ?
ಇಷ್ಟೆಲ್ಲಾ ಮಾರ್ಜಿನ್ ರೇಟ್, ಸ್ಕೀಂ ಆಫರ್‌ಗಳಿದ್ದು ಮೆಡಿಕಲ್ ಶಾಪ್‌ಗಳ ಮಾಲೀಕರು ಎಷ್ಟು ಲಾಭ ಮಾಡಬಹುದು ಎಂದು ನೀವು ಅಂದುಕೊಳ್ಳಬಹುದು. ಸುಮಾರು ಅಂದಾಜಿನಲ್ಲಿ 1 ಲಕ್ಷದ ಉತ್ಪನ್ನಗಳನ್ನು ಖರೀದಿಸಿದರೆ , 20,000 ರುಪಾಯಿ ಉಳಿಯಬಹುದು. ಇದರಲ್ಲಿ ಖರ್ಚು ವೆಚ್ಚಗಳನ್ನು ತಗ್ಗಿಸಿದರೆ 5,000 ರುಪಾಯಿಗಳವರೆಗೆ ಲಾಭ ಆಗಬಹುದು.
ಹೆಚ್ಚಾದ ಪೈಪೋಟಿ, ಇ-ಫಾರ್ಮಸಿ ಕಿರಿಕಿರಿ
ಇತ್ತೀಚಿನ ಆಧುನಿಕ ದಿನಗಳಲ್ಲಿ ಅನೇಕ ಮೆಡಿಕಲ್ ಶಾಪ್‌ಗಳು ಬಾಗಿಲು ಮುಚ್ಚುವಂತಾಗಿದೆ. ಆನ್‌ಲೈನ್ ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ ಮೇಲೆ ಕಳೆದ ಎರಡು ಮೂರು ವರ್ಷಗಳಲ್ಲಿ ಮೆಡಿಕಲ್‌ಗಳ ಮಾರಾಟ ಸ್ವಲ್ಪ ಮಟ್ಟಿಗೆ ತಗ್ಗಿದೆ.
ಆಸ್ಪತ್ರೆ ಹತ್ತಿರುವ ಇರುವ ಮೆಡಿಕಲ್‌ಗಳಿಗೆ ವ್ಯಾಪಾರ ಚೆನ್ನಾಗಿಯೇ ಆಗುತ್ತಿದ್ದು, ಖಾಲಿ ಜನರಲ್ ಸ್ಟೋರ್ ಮೆಡಿಕಲ್ ಶಾಪ್‌ಗಳ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ಇ-ಫಾರ್ಮಸಿಯಲ್ಲಿ 20 ರಿಂದ 25 ಪರ್ಸೆಂಟ್ ವರೆಗೆ ಆಫರ್ ಮಾಡುತ್ತಿದ್ದು, ಸಾಮಾನ್ಯ ಮೆಡಿಕಲ್‌ಗಳು ಬಾಗಿಲು ಮುಚ್ಚಿಕೊಂಡು ಹೋಗುತ್ತಿವೆ.
ಮಾರುಕಟ್ಟೆಯಲ್ಲಿ ಹೆಚ್ಚಾದ ಉತ್ಪನ್ನಗಳು ಆದರೆ, ಹೆಚ್ಚಾಗುತ್ತಿಲ್ಲ ಮಾರಾಟ
ಈಗಿನ ಪೈಪೋಟಿಯ ಯುಗದಲ್ಲಿ ಮಾರ್ಕೆಟ್‌ಗೆ ಹೊಸ ಹೊಸ ಉತ್ಪನ್ನಗಳು ಕಾಲಿಡುತ್ತಿವೆ. ಉದಾಹರಣೆಗೆ ಸೌಂದರ್ಯವರ್ಧಕಗಳನ್ನೇ ತೆಗೆದುಕೊಂಡ್ರೆ ಅದೆಷ್ಟೋ ಉತ್ಪನ್ನಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ. ಆದರೆ ಇದರ ಮಾರಾಟ ಹೆಚ್ಚಾಗದೇ ಸ್ಥಿರವಾಗಿಯೇ ಉಳಿದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗಿ ಆದಾಯವು ತಗ್ಗುತ್ತಿದೆ.
ಇನ್ನು ಔಷಧಿ ತಯಾರಕರಿಗೇನು ಲಾಭದ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ. ಆದರೆ ಔಷಧಿ ಮಾರಾಟಗಾರರ ಆದಾಯ ತಗ್ಗುತ್ತಾ ಸಾಗಿದೆ. ಹೀಗಾಗಿ ಅನೇಕ ಬಾರಿ ಆನ್‌ಲೈನ್ ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರದ ಅನುಮತಿ ವಿರೋಧಿಸಿ ಪ್ರತಿಭಟನೆಗಳು ಸಹ ನಡೆದಿವೆ.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications