ಕ್ರೆಡಿಟ್ ಕಾರ್ಡ್ ಯಾವಾಗ ಬಳಸಬೇಕು? ಇಲ್ಲಿವೆ ಟಿಪ್ಸ್

ಕ್ರೆಡಿಟ್ ಕಾರ್ಡ್ ಬಳಕೆ ಎಂಬುದು ಇತ್ತೀಚಿನ ದಿನಮಾನದಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ. "ಬಳಸುತ್ತೇವೋ ಇಲ್ಲವೋ ಯಾವುದಕ್ಕೂ ಒಂದು ಕ್ರೆಡಿಟ್ ಕಾರ್ಡ್ ಇರಲಿ," ಅಂತ ಯೋಚಿಸುವವರು ಹೆಚ್ಚು. ಈ ಪ್ಲಾಸ್ಟಿಕ್ ಹಣ ಜೇಬಿನೊಳಗೆ ಸಲೀಸಾಗಿ ಹಿಡಿಸುವ ಪುಟ್ಟ ತುಂಡಿನಂತೆ ಕಂಡರೂ ಇದರ ಶಕ್ತಿ ಅಗಾಧ.

ಕಾರ್ಡ್ ದಾರರು ದಿನಸಿಯಂಥ ಸಣ್ಣ ಮಟ್ಟದ ಖರೀದಿಯಿಂದ ಪೀಠೋಪಕರಣದ ತನಕ ದೊಡ್ಡ ದೊಡ್ಡ ವೆಚ್ಚಕ್ಕೆ ಕ್ರೆಡಿಟ್ ಕಾರ್ಡ್ ಬಳಸುವುದು ಕಾಣಬಹುದು. ಕ್ರೆಡಿಟ್ ಕಾರ್ಡ್ ಬಳಸಿದ ನಂತರ ಆ ಬಿಲ್ ಪಾವತಿ ಅವಧಿಯೊಳಗೆ ಕಟ್ಟಿದರೆ ಯಾವುದೇ ಬಡ್ಡಿ ಪಾವತಿ ಮಾಡುವ ಅಗತ್ಯವಿಲ್ಲ.

ಸರಿಯಾಗಿ ಕ್ರೆಡಿಟ್ ಕಾರ್ಡ್ ಬಳಸಿಕೊಂಡಲ್ಲಿ ಅದಕ್ಕಿಂತ ಒಳ್ಳೆ ಹಣಕಾಸು ವ್ಯವಸ್ಥೆ ಮತ್ತೊಂದಿಲ್ಲ. ಆದರೆ ಬಹಳ ಮಂದಿ ಕ್ರೆಡಿಟ್ ಕಾರ್ಡ್ ದಾರರು ಬೇಕಾಬಿಟ್ಟಿ ಬಳಸುತ್ತಾರೆ. ಈ ಕಾರಣಕ್ಕೆ ಸಾಲದ ವಿಷ ವರ್ತುಲಕ್ಕೆ ಸಿಲುಕಿಕೊಳ್ಳುತ್ತಾರೆ. ಹಾಗಿದ್ದರೆ ಕ್ರೆಡಿಟ್ ಕಾರ್ಡ್ ಯಾವಾಗ ಬಳಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಉತ್ತಮ.

ಬಿಲ್ ಪಾವತಿ

ಬಿಲ್ ಪಾವತಿ

ಕ್ರೆಡಿಟ್ ಕಾರ್ಡ್ ಅನ್ನು ಬಹು ಮುಖ್ಯವಾಗಿ ಬಳಸುವುದು ಬಿಲ್ ಪಾವತಿಗೆ. ಬಹುತೇಕ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಕ್ರೆಡಿಟ್ ಕಾರ್ಡ್ ಸ್ವೀಕರಿಸುತ್ತಾರೆ. ಇನ್ನು ಹಲವು ಕ್ರೆಡಿಟ್ ಕಾರ್ಡ್ ಗಳಿಗೆ ಕ್ಯಾಶ್ ಬ್ಯಾಕ್ ಮತ್ತಿತರ ಆಫರ್ ಗಳು ಸಹ ದೊರೆಯುತ್ತವೆ. ರೆಸ್ಟೋರೆಂಟ್ ಗಳಿಗೆ ತೆರಳಿದಾಗ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಖರ್ಚಾಗಿದ್ದಲ್ಲಿ, ಡೆಬಿಟ್ ಕಾರ್ಡ್ ನಲ್ಲಿ ಅಗತ್ಯ ಪ್ರಮಾಣದ ಬ್ಯಾಲೆನ್ಸ್ ಇಲ್ಲದಿದ್ದಲ್ಲಿ ಮಾತ್ರ ಕ್ರೆಡಿಟ್ ಕಾರ್ಡ್ ಬಳಸಿ. ಇದನ್ನು ಹೊರತುಪಡಿಸಿ ದಿನಸಿ, ವಿದ್ಯುತ್ ಬಿಲ್, ನೀರಿನ ಬಿಲ್, ಮೊಬೈಲ್ ರೀಚಾರ್ಜ್, ಫಾರ್ಮಸಿ ಬಿಲ್ ಗಳು ಇಂಥವುಗಳ ಪಾವತಿಗೆ ಕ್ರೆಡಿಟ್ ಕಾರ್ಡ್ ಬಳಸಬಹುದು ಹಾಗೂ ರಿವಾರ್ಡ್ ಪಾಯಿಂಟ್ ಗಳನ್ನು ಗಳಿಸಬಹುದು.

ತುರ್ತು ಪರಿಸ್ಥಿತಿ

ತುರ್ತು ಪರಿಸ್ಥಿತಿ

ನೀವು ಅಂದುಕೊಳ್ಳದ ರೀತಿಯಲ್ಲಿ ತುರ್ತು ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ಇರುತ್ತದೆ. ಇಂಥ ಸಂಕಷ್ಟದ ಸಮಯದಲ್ಲಿ ನಿಮ್ಮ ಉಳಿತಾಯದ ಹಣವೂ ಕೊರತೆ ಆಗಬಹುದು. ತುರ್ತು ನಿಧಿಯೂ ಇಲ್ಲ ಅಂತಾದಾಗ ಕ್ರೆಡಿಟ್ ಕಾರ್ಡ್ ಬಳಸುವ ಆಯ್ಕೆಯನ್ನು ಇಟ್ಟುಕೊಳ್ಳಿ. ಯಾವಾಗ ಉಳಿತಾಯ ಮಾಡಿಕೊಂಡಿದ್ದ ಹಣ ಖರ್ಚಾಗುತ್ತದೋ ಆಗ ಮಾತ್ರ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಳ್ಳಿ. ಒಂದು ವೇಳೆ ಎಮರ್ಜೆನ್ಸಿ ಫಂಡ್ ಅಂತ ಮಾಡಿಕೊಂಡಲ್ಲಿ ಈ ರೀತಿ ಅಗತ್ಯವೂ ಬರುವುದಿಲ್ಲ. ತೀರಾ ಸಂಕಷ್ಟದ ಸಮಯದಲ್ಲಿ ಮಾತ್ರ ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಸಾಲ ಸುಳಿಗೆ ಸಿಲುಕುವ ಭಯವೂ ಇರುವುದಿಲ್ಲ.

ರಜಾ ದಿನದ ಖರೀದಿಗೆ

ರಜಾ ದಿನದ ಖರೀದಿಗೆ

ರಜಾ ದಿನಗಳಿಗೆ ಪ್ಲಾನಿಂಗ್ ಮಾಡಿ. ರಿವಾರ್ಡ್ ಪಾಯಿಂಟ್ ಗಳನ್ನು ರಜಾ ದಿನಗಳಿಗಾಗಿ ಬಳಸಿ. ಕ್ರೆಡಿಟ್ ಕಾರ್ಡ್ ಬಳಸಿ ಮುಂಚಿತವಾಗಿಯೇ ಬುಕ್ಕಿಂಗ್ ಮಾಡಿದಲ್ಲಿ ಕೆಲವು ಏರ್ ಲೈನ್ಸ್ ಗಳಿಂದ ರಿಯಾಯಿತಿ ಇರುತ್ತದೆ. ಕೆಲವು ಕ್ರೆಡಿಟ್ ಕಾರ್ಡ್ ವಿತರಕರು ವಾರ್ಷಿಕವಾಗಿ ವಿಮಾನದ ವೋಚರ್ ಗಳನ್ನು ನೀಡುತ್ತಾರೆ. ಅದನ್ನು ಬಳಸಿ, ಟಿಕೆಟ್ ಹಣ ಪಾವತಿಸಬಹುದು. ಹಾಗಂತ ಇಡೀ ವರ್ಷ ಎಲ್ಲಕ್ಕೂ ಕ್ರೆಡಿಟ್ ಕಾರ್ಡ್ ಬಳಸಿ, ಪಾವತಿಸುವುದು ಸರಿಯಲ್ಲ. ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಪ್ಲ್ಯಾನಿಂಗ್ ಮತ್ತು ಶಿಸ್ತು ಎರಡೂ ಬಹಳ ಮುಖ್ಯ. ಆ ಎರಡೂ ಗಮನದಲ್ಲಿ ಇರಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+