ನಾವು ಯಾವುದೇ ಆದಾಯವಿಲ್ಲದೇ ಜೀವನ ಸಾಗಿಸುವುದು ಸುಲಭವೇನಲ್ಲ. ಆದರೆ ಕಳೆದ ಒಂದೂವರೆ ವರ್ಷದಲ್ಲಿ ಆದಾಯವಿಲ್ಲದೆಯೇ ಸಾಲ ಮಾಡಿಕೊಂಡು ಜೀವನ ಸಾಗಿವುಸುವುದು ಸಾಮಾನ್ಯವಾಗಿದೆ. ಪ್ಯೂ ಸಂಶೋಧನಾ ಕೇಂದ್ರದ ಪ್ರಕಾರ, ಯುಎಸ್ ವಯಸ್ಕರಲ್ಲಿ 44 ಪ್ರತಿಶತದಷ್ಟು ಜನರ ಮನೆಯರವರು ಉದ್ಯೋಗ ನಷ್ಟ ಅಥವಾ ವೇತನ ಕಡಿತದ ಸಮಸ್ಯೆಯನ್ನು ಅನುಭವಿಸಿದ್ದಾರೆ ಎಂದು ಹೇಳುತ್ತಾರೆ. ಇನ್ನು ಏಷ್ಯಾದ ವಯಸ್ಕರು ಕೂಡಾ ಅದೇ ಮಾತನ್ನು ಹೇಳುತ್ತಾರೆ.
ಆಹಾರ, ವಸತಿ, ಮಾಸಿಕ ಬಿಲ್‌ಗಳು ಹಾಗೂ ದೈನಂದಿನ ವೆಚ್ಚಗಳಂತಹ ಮೂಲಭೂತ ವೆಚ್ಚಗಳನ್ನು ಜನರು ಈ ಕೊರೊನಾ ಸಂದರ್ಭದಲ್ಲಿ ಹರಸಾಹಸ ಪಡುತ್ತಿದ್ದಾರೆ. ಆದಾಯದಲ್ಲಿ ಕಡಿತವು ತಾತ್ಕಾಲಿಕವಾಗಿದ್ದರೂ ಸಹ ಇದು ನಮಗೆ ನಂಬಲು ಸಾಧ್ಯವಿಲ್ಲದ ಒತ್ತಡವನ್ನು ಸೃಷ್ಟಿ ಮಾಡುತ್ತಿದೆ. ನಿಮ್ಮ ದೈನಂದಿನ ಹಾಗೂ ಮಾಸಿಕ ಬಜೆಟ್ ಬಗ್ಗೆ ಒಂದು ಲೆಕ್ಕಾಚಾರವನ್ನು ಹೊಂದಿರುವುದು, ಆ ಬಜೆಟ್ ಅನ್ನು ಸರಿದೂಗಿಸುವುದು, ವೇತನವು ದುಂದು ವೆಚ್ಚ ಆಗದಂತೆ ನೋಡಿಕೊಳ್ಳವುದು ಈ ಸಂದರ್ಭದಲ್ಲಿ ಅತೀ ಮುಖ್ಯ ಎಂದು ಪೋರ್ಟ್‌ಲ್ಯಾಂಡ್‌ನ ಒರೆಗಾನ್‌ನ ಹಣಕಾಸು ಶೈಕ್ಷಣಿಕ ಸಲಹೆಗಾರ, ಮನಿಜೆನ್‌ನ ಸ್ಥಾಪಕರು, ಹಣಕಾಸು ಸಲಹೆಗಾರರಾದ ಮನೀಶಾ ಠಾಕೂರ್ ಹೇಳುತ್ತಾರೆ.
ನೀವು ನಿಮ್ಮ ಖರ್ಚಿನ ಬಗ್ಗೆ ಪೂರ್ವ ಯೋಜನೆ ಮಾಡಿದರೆ ನಿಮ್ಮ ಆರ್ಥಿಕ ಸ್ಥಿತಿ ನಿಭಾಯಿಸುವ ಹಾಗೂ ಪ್ರಾಯಶಃ ಆರ್ಥಿಕ ಅಭಿವೃದ್ದಿ ಹೊಂದುವ ಎಲ್ಲಾ ಸಂಭವಗಳು ಇದೆ ಎಂದು ಹೇಳುತ್ತಾರೆ. ಈ ಬಗ್ಗೆ ನೀವು ಈಗಲೇ ಎಚ್ಚೆತ್ತುಕೊಳ್ಳಬೇಕು, ನಿಮ್ಮಾ ಆರ್ಥಿಕ ಸ್ಥಿತಿಯನ್ನು ಸರಿದೂಗಿಸ ಬೇಕು ಎಂದು ಸಲಹೆ ನೀಡಿದ್ದಾರೆ.
ನಿಮ್ಮ ಭಾವನೆಗಳನ್ನು ನೀವು ಒಪ್ಪಿಕೊಳ್ಳಿ
"ನಾವು ಆರ್ಥಿಕವಾಗಿ ಕೆಟ್ಟ ಪರಿಸ್ಥಿತಿಯಲ್ಲಿ ಇರುವ ಸಂದರ್ಭದಲ್ಲಿ ನಾವು ಆರ್ಥಿಕವಾಗಿ ಕೆಟ್ಟ ಸ್ಥಿತಿಯಲ್ಲಿ ಇದ್ದೇವೆ ಎಂದು ಒಪ್ಪಿಕೊಳ್ಳುವುದು ಬಹಳ ಮುಖ್ಯ. ಹಲವಾರು ಮಂದಿ ಇದನ್ನು ಒಪ್ಪಿಕೊಳ್ಳಲು ಸಿದ್ದರಿರುವುದಿಲ್ಲ. ಸಾಮಾನ್ಯವಾಗಿ ಜೀವನ ಎಂದಿನಂತೆ ಸುಲಭವಾಗಿದೆ ಎಂದು ತೋರಿಸಿಕೊಳ್ಳಲು ಹೋಗಿ ಸಾಲದ ಹೊರೆಯಲ್ಲಿ ಬಿದ್ದು ಬಿಡುತ್ತಾರೆ. ಹಾಗಾಗಿ ಈ ಸಾಲದ ಹೊರೆಯನ್ನು ಹೊರದೆ ಆರ್ಥಿಕ ಸ್ಥಿತಿ ಕೆಟ್ಟದಾಗಿದೆ ಎಂದು ಒಪ್ಪಿಕೊಂಡು ನಾವು ಖರ್ಚು ಕಡಿಮೆ ಮಾಡಿ ಬದುಕುವುದು ಉತ್ತಮ. "ಇದು ಒಂದು ಕೆಟ್ಟ ಪರಿಸ್ಥಿತಿ ಎಂದು ಒಪ್ಪಿಕೊಳ್ಳುವುದು ಸರಿ," ಎಂದು ಮನಿ ಸ್ಮಾರ್ಟ್ ಲ್ಯಾಟಿನಾ ವೆಬ್‌ಸೈಟ್‌ನ ಸಂಸ್ಥಾಪಕ ಅಥೇನಾ ವ್ಯಾಲೆಂಟೈನ್ ಲೆಂಟ್ ಹೇಳುತ್ತಾರೆ.
ನಿಮ್ಮ ಖರ್ಚುಗಳನ್ನು ಲೆಕ್ಕಹಾಕಿಕೊಳ್ಳಿ
ನೀವು ಯಾವ ವಸ್ತುಗಳನ್ನು ಖರೀದಿ ಮಾಡುತ್ತಿದ್ದೀರಿ, ಯಾವುದಕ್ಕೆ ಎಷ್ಟು ವಿನಿಯೋಗ ಮಾಡುತ್ತಿದ್ದೀರಿ ಎಂಬುವುದನ್ನು ನೀವು ಲೆಕ್ಕ ಹಾಕಿದರೆ ಮಾತ್ರ ನಿಮ್ಮ ಖರ್ಚು ವೆಚ್ಚವನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನೀವು ಎಲ್ಲಾ ಖರ್ಚುಗಳನ್ನು ಪರಿಶೀಲಿಸುವುದು ಉತ್ತಮ. ಆ ಸಂದರ್ಭ ಯಾವ ಖರ್ಚಿಗೆ ಕತ್ತರಿ ಹಾಕಬೇಕು ಎಂಬುವುದನ್ನು ನೀವು ಲೆಕ್ಕ ಹಾಕಿಕೊಳ್ಳಬಹುದು. "ನೀವು ಅನಗತ್ಯವಾಗಿ ಕೇಬಲ್ ಬಿಲ್ ಕಟ್ಟುವುದು, ಮಕ್ಕಳಿಗೆ ದುಬಾರಿ ಆಟಿಕೆಗಳನ್ನು ಖರೀದಿ ಮಾಡುವುದು ಇದೆಲ್ಲಾವನ್ನು ಕೊನೆಯಾಗಿಸಿ," ಎಂದು ಹಣಕಾಸು ಸಲಹೆಗಾರರಾದ ಮನೀಶಾ ಠಾಕೂರ್ ಹೇಳುತ್ತಾರೆ. ಈ ಮಾರ್ಡನ್ ಯುಗದಲ್ಲಿ ನಮಗೆ ಇಂಟರ್‌ನೆಟ್ ಬೇಕಾಗುತ್ತದೆ. ಈ ಇಂಟರ್‌ನೆಟ್ ಮೂಲಕವೇ ಎಲ್ಲವು ದೊರೆಯುವಾಗ ನಮಗೆ ಕೇಬಲ್ ಅಗತ್ಯವಿರುವುದಿಲ್ಲ. ನನಗೆ ಪೋನ್ ಬೇಕು ಆದರೆ ಪೋನ್‌ನ ದುಬಾರಿ ರೀಚಾರ್ಜ್ ಅಲ್ಲ, ನನಗೆ ದಿನಸಿ ಬೇಕು, ನಾನು ಹೊರಗೆ ತಿನ್ನಬೇಕಾದ ಅಗತ್ಯವಿಲ್ಲ. ನನಗೆ ನೆಟ್‌ಫ್ಲಿಕ್ಸ್ ಅಗತ್ಯವಿಲ್ಲ ನಾನು ಗ್ರಂಥಾಲಯಕ್ಕೆ ಹೋಗಬಹುದು. ನೀವು ಯಾವುದಕ್ಕೆ ಖರ್ಚು ಮಾಡಬೇಕಾಗಿಲ್ಲವೋ ಅದಕ್ಕೆ ಖರ್ಚು ಮಾಡಬೇಡಿ," ಎಂದು ಮನೀಶಾ ಠಾಕೂರ್ ಸಲಹೆ ನೀಡಿದ್ದಾರೆ.
ಆಹಾರಕ್ಕಾಗಿ ಮಾಡದಿರಿ ದುಂದು ವೆಚ್ಚ
ಹೆಚ್ಚಿನ ಜನರಿಗೆ ಆಹಾರವು ಒಂದು ಪ್ರಮುಖ ಖರ್ಚಿನ ಮೂಲವಾಗಿದೆ. ನಮ್ಮ ಎಲ್ಲಾ ಸಂಪಾದನೆಯ ಖರ್ಚಿಗೆ ಪ್ರಮುಖ ಮೂಲ ಆಹಾರವಾಗಿರುತ್ತದೆ. ಎಂದು "Gold Diggers and Deadbeat Dads: True Stories of Friends, Family, and Financial Ruin" ಎಂಬ ಪುಸ್ತಕದ ಲೇಖಕಿ ವ್ಯಾಲೆರಿ ರಿಂಡ್ ಹೇಳುತ್ತಾರೆ. "ನಾನು ತಿನ್ನುವುದನ್ನು ಕಡಿಮೆ ಮಾಡಿದ್ದೇನೆ, ನನಗೆ ಇಷ್ಟವಾದರೂ ಮತ್ತು ನಾನು ಹೆಚ್ಚು ತಿನ್ನುವವನ್ನಲ್ಲ," ಎಂದು ಹೇಳುತ್ತಾರೆ. "ದಿನಸಿಗಾಗಿ ನಾನು ಶಾಪಿಂಗ್ ಮಾಡುವ ವಿಧಾನವನ್ನು ಬದಲಾಯಿಸಿದ್ದೇನೆ. ಹಾಗೆಯೇ ನಾನು ಅಧಿಕವಾಗಿ ಮಡಕೆ ಪಾತ್ರೆಯಲ್ಲಿ ಆಹಾರ ಬೇಯಿಸುತ್ತೇನೆ. ಇದು ನನ್ನ ಆಹಾರ ಕೆಡದಂತೆ ನೋಡುತ್ತದೆ," ಎಂದಿದ್ದಾರೆ ಲೇಖಕಿ ವ್ಯಾಲೆರಿ ರಿಂಡ್. "ಹಾಗೆಯೇ ನಾನು ಯಾವುದಾದರೂ ತಿನ್ನಬೇಕು ಎಂದು ಅತೀ ಆಸೆ ಆದ ಸಂದರ್ಭದಲ್ಲಿ ಮಾತ್ರ ತಿನ್ನುತ್ತೇನೆ. ಇನ್ನುಳಿದ ದಿನ ಸಾಮಾನ್ಯ ಊಟ," ಎಂದಿರುವುದಾಗಿ ವರದಿಯಾಗಿದೆ. ಹಾಗೆಯೇ ನೀವು ಆಹಾರವನ್ನು ಎಸೆಯದಿರಿ. ಆಹಾರ ಹೆಚ್ಚಾದರೆ ಅದನ್ನು ಫ್ರಿಡ್ಜ್‌ನಲ್ಲಿಟ್ಟು ಬೇಕಾದಾಗ ಮತ್ತೆ ಬಳಸಿಕೊಳ್ಳಿ ಎನ್ನುತ್ತಾರೆ
ಸವಾಲಾದರೂ ಮಿತವ್ಯಯ ಉತ್ತಮ
ನಮ್ಮಲ್ಲಿ ನಿರೀಕ್ಷೆ ಇರುವುದು ಸಹಜ, ಆದರೆ ಅದನ್ನು ನಾವು ಸರಿದೂಗಿಸಬೇಕು. "ನಮಗೆ ಕಾರು ಬೇಕು ಎಂದು ಆಗಬಹುದು. ಆದರೆ ದುಬಾರಿ ಕಾರನ್ನು ಕೊಳ್ಳಬೇಕೆಂದಿಲ್ಲ. ಕಡಿಮೆ ವೆಚ್ಚದ ಕಾರನ್ನು ನೀವು ಖರೀದಿ ಮಾಡಬಹುದು," ಎಂದು ಹಣಕಾಸು ಸಲಹೆಗಾರರಾದ ಮನೀಶಾ ಠಾಕೂರ್ ಸೂಚಿಸಿದ್ದಾರೆ. "ಜನರು ಆರಾಮವಾಗಿ ನಿಭಾಯಿಸುವುದಕ್ಕಿಂತ ಹೆಚ್ಚು ದುಬಾರಿ ಕಾರುಗಳನ್ನು ಓಡಿಸುತ್ತಿದ್ದಾರೆ. ಅದಕ್ಕಿಂತ ಆರ್ಥಿಕ ಸಂಕಷ್ಟದಲ್ಲಿರುವಾಗ ಕಡಿಮೆ ವೆಚ್ಚದ ಕಾರುಗಳನ್ನು ಖರೀದಿ ಮಾಡುವುದು ಒಳ್ಳೆಯದು," ಎಂದಿದ್ದಾರೆ. ಇನ್ನು ಇದು ಬರೀ ಕಾರಿಗೆ ಮಾತ್ರ ಸೀಮಿತವಲ್ಲ, ನಮ್ಮಲ್ಲಿ ಹಲವಾರು ನಿರೀಕ್ಷೆಗಳು ಇರುತ್ತದೆ. ಆದರೆ ನಾವು ನಮ್ಮ ಆರ್ಥಿಕ ಸ್ಥಿತಿಗೆ ಸರಿಯಾಗಿ ಪರಿಸ್ಥಿತಿ ನಿಭಾಯಿಸಿದರೆ ಮುಂದೆ ನಿರೀಕ್ಷೆ ತಲುಪಲು ಸಾಧ್ಯವಾಗುತ್ತದೆ. "ಬೇಕಾಬಿಟ್ಟಿ ಖರ್ಚು ಮಾಡುತ್ತಾ ಜೀವನ ಸಾಗಿಸುತ್ತಿದ್ದವರಿಗೆ ಇದ್ದಕ್ಕಿಂದ್ದತೆ ಆರ್ಥಿಕ ಹೊಡೆತ ಉಂಟಾದರೆ ನಮ್ಮ ಖರ್ಚು ವೆಚ್ಚವನ್ನು ಸರಿದೂಗಿಸುವುದು ದೊಡ್ಡ ಸವಾಲಾಗುತ್ತದೆ. ಈ ಸಂದರ್ಭದಲ್ಲಿ ಮಿತವ್ಯಯ ಮಾಡುವುದು ಉತ್ತಮ," ಎಂದು ಲೂಥರ್ ಸೂಚಿಸುತ್ತಾರೆ. "ಆಹಾರ, ಗೃಹಾಲಂಕಾರ ಅಥವಾ ಪರಿಕರಗಳ ವಿಷಯಕ್ಕೆ ಬಂದಾಗ, ನೀವು ಅದನ್ನು ಖರೀದಿಸುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ನೀವೇ ಮಾಡಿಕೊಳ್ಳಬಹುದು, ಅಥವಾ ಈ ಸಂಕಷ್ಟದ ಸಂದರ್ಭದಲ್ಲಿ ಈ ಗೃಹಾಲಂಕಾರಗಳ ಅಗತ್ಯವೇ ಇಲ್ಲ," ಎಂದು ಹೇಳುತ್ತಾರೆ. ಹಾಗೆಯೇ ಮಿತ ವ್ಯಯಕ್ಕೆ ಇನ್ನೊಂದು ಹಾದಿ ನೀವು ಮನೆಯಲ್ಲೇ ತರಕಾರಿ ಬೆಳಯುವುದು. ನಿಮ್ಮ ಮನೆಗೆ ಬೇಕಾಗುವಷ್ಟು ತರಕಾರಿಯನ್ನು ನೀವು ನಿಮ್ಮ ಮನೆಯ ಹಿತ್ತಲಲ್ಲ ಅಥವಾ ಟೆರೇಸ್‌ನಲ್ಲಿ ಬೆಳೆಸಿಕೊಂಡರೆ ನಿಮಗೆ ತರಕಾರಿ ವೆಚ್ಚ ಉಳಿಯುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications