ನಾವು ಈವರೆಗೂ ಗೂಗಲ್ ಪೇ ಮೂಲಕ ಹಣ ಪಾವತಿ, ಹಣ ವರ್ಗಾವಣೆ ಮೊದಲಾದವುಗಳನ್ನು ಮಾಡುತ್ತಿದ್ದೆವು. ಆದರೆ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಾವು ಒಂದು ಲಕ್ಷ ರೂಪಾಯಿಗಳ ಸಾಲವನ್ನು ಗೂಗಲ್ ಪೇ ಮೂಲಕವೇ ಈಗ ಪಡೆಯಬಹುದಾಗಿದೆ. ಹೌದು, Google Pay ನಿಂದ ತ್ವರಿತ ಸಾಲ ಸೌಲಭ್ಯ (Google Pay Instant Personal Loan) ಸೇವೆಯನ್ನು ಪ್ರಾರಂಭಿಸಿದೆ.
ಇದಕ್ಕಾಗಿ ಗೂಗಲ್ ಪೇ ಕೆಲವು ಮಾನದಂಡಗಳನ್ನು ಕೂಡಾ ನಿಗದಿ ಮಾಡಿದೆ. ನೀವು ಗೂಗಲ್ ಪೇ ಮೂಲಕ ಸಾಲವನ್ನು ಪಡೆಯಲು ನಿಮ್ಮ ಗೂಗಲ್ ಪೇ ಬಳಕೆ ಮತ್ತು ನಿಮ್ಮ ಕ್ರೆಡಿಟ್ ಇತಿಹಾಸ ಎರಡೂ ಅಗತ್ಯವಾಗಿದೆ. ನಿಮಗೆ ಅರ್ಹತೆ ಇದ್ದರೆ ನೀವು ಕೆಲವೇ ನಿಮಿಷಗಳಲ್ಲಿ ಒಂದು ಲಕ್ಷ ರೂಪಾಯಿಗಳವರೆಗಿನ ವೈಯಕ್ತಿಕ ಸಾಲವನ್ನು (Personal Loan) ಪಡೆಯಬಹುದು.
ಗೂಗಲ್ ಪೇ ಜೊತೆಗೆ ಸೇರಿ ಡಿಜಿಟಲ್ ಪರ್ಸನಲ್ ಲೋನ್ (Digital Personal Loan) ನೀಡಲು ಹೊಸ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯ ಅಡಿಯಲ್ಲಿ ಗೂಗಲ್ ಪೇ ಬಳಕೆದಾರರು ಎರಡು ಪ್ರಯೋಜನಗಳನ್ನು ನೀಡಿದೆ. ಮೊದಲಿಗೆ, ನೀವು ಗೂಗಲ್‌ನಲ್ಲಿ ಗ್ರಾಹಕರ ಅನುಭವವನ್ನು ಪಡೆಯುವಿರಿ. ಎರಡನೆಯದಾಗಿ, ಈ ಪ್ಲಾಟ್‌ಫಾರ್ಮ್ ಮೂಲಕ ನೀವು ಡಿಎಂಐ ಫಿನಾನ್ಸ್‌ನಿಂದ ತ್ವರಿತ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು.

ಯಾರಿಗೆ ಸಾಲ ಪಡೆಯಲು ಅವಕಾಶವಿದೆ?
Google Pay ಅನ್ನು ಬಳಸುವ ಪ್ರತಿಯೊಬ್ಬ ಬಳಕೆದಾರರು ತ್ವರಿತ ಸಾಲ ಸೇವೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಬದಲಾಗಿ ನಿಮ್ಮ ಕ್ರೆಡಿಟ್ ಇತಿಹಾಸದ ಆಧಾರದ ಮೇಲೆ, ನೀವು ಸಾಲವನ್ನು ಪಡೆಯಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧಾರ ಮಾಡಿ ಆ ಬಳಿಕ ನಿಮಗೆ ಸಾಲವನ್ನು ನೀಡಲಾಗುತ್ತದೆ. ಈ ಸೌಲಭ್ಯದ ಅಡಿಯಲ್ಲಿ, ಡಿಎಂಐ ಫೈನಾನ್ಸ್ ನಿಗದಿಪಡಿಸಿದ ಮಾನದಂಡಗಳ (Criteria) ಪ್ರಕಾರ ಪೂರ್ವ-ಅರ್ಹತೆ ಹೊಂದಿರುವ ಬಳಕೆದಾರರನ್ನು ನಿರ್ಧರಿಸಲಾಗುತ್ತದೆ. ಅಂತಹ ಗ್ರಾಹಕರಿಗೆ Google Pay ಮೂಲಕ ಸಾಲವನ್ನು ನೀಡಲಾಗುತ್ತದೆ.
ಇನ್ನು ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ ಬರಲಿದೆ. ಅರ್ಜಿಯನ್ನು ರಿಯಲ್ ಟೈಮ್ ನಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ. ಪ್ರಕ್ರಿಯೆಯ ಕೆಲವೇ ನಿಮಿಷಗಳಲ್ಲಿ, ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ. ಈ ಸೇವೆಯನ್ನು ಬಳಸಿ ನೀವು ಗರಿಷ್ಠ ಒಂದು ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ಈ ಮೊತ್ತವನ್ನು ಗರಿಷ್ಠ 36 ತಿಂಗಳುಗಳಲ್ಲಿ ಮರುಪಾವತಿಸಬೇಕಾಗುತ್ತದೆ.
ಹಾಗಾದರೆ ಸಾಲವನ್ನು ಪಡೆಯುವುದು ಹೇಗೆ ಎಂದು ತಿಳಿಯಿರಿ...
* ಮೊದಲು ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಪೆ ಆಪ್ ಅನ್ನು ತೆರೆಯಿರಿ
* ನೀವು ಪೂರ್ವ-ಅನುಮೋದಿತ ಸಾಲವನ್ನು ಪಡೆಯಲು ಅರ್ಹರಾಗಿದ್ದರೆ, ನಂತರ ಹಣದ ಆಯ್ಕೆಯು ಪ್ರಚಾರಗಳ ಅಡಿಯಲ್ಲಿ ಕಾಣಿಸಿಕೊಳ್ಳುತ್ತದೆ.
* ಇಲ್ಲಿ ನೀವು loans ಮೇಲೆ ಕ್ಲಿಕ್ ಮಾಡಿ.
* ಈಗ Offers ಎಂಬ ಆಯ್ಕೆ ಕಾಣಿಸಿಕೊಳ್ಳಲಿದೆ.
* ಇದರಲ್ಲಿ ಡಿಎಂಐ ಆಯ್ಕೆ ಕಾಣಲಿದೆ
* ಇಲ್ಲಿ ನೀವು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
* ಅರ್ಜಿಯನ್ನು ಪ್ರಕ್ರಿಯೆಗೊಳಿಸಿದಾಗ, ಸಾಲವನ್ನು ಅನುಮೋದಿಸಿದ ತಕ್ಷಣ, ಮೊತ್ತವು ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ.
ಇನ್ನು ನೀವು ಚಿನ್ನವನ್ನು ಕೂಡಾ ಗೂಗಲ್ ಪೇ ಮೂಲಕವೇ ಖರೀದಿ, ಮಾರಾಟ ಮಾಡಬಹುದಾಗಿದೆ. ಡಿಜಿಟಲ್ ಚಿನ್ನದ ವಹಿವಾಟುಗಳ ಪರಿಚಯದೊಂದಿಗೆ ಈಗ ಚಿನ್ನವನ್ನು ಖರೀದಿಸುವುದು ಮತ್ತು ಸಂಗ್ರಹಿಸುವುದು ಸುಲಭವಾಗಿದೆ. ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುವ ಜನರು ಇನ್ನು ಮುಂದೆ ಅಂಗಡಿಗೆ ಹೋಗಬೇಕಾಗಿಲ್ಲ. ಬದಲಾಗಿ ಗೂಗಲ್ ಪೇ ಮೂಲಕವೇ ಡಿಜಿಟಲ್ ಚಿನ್ನವನ್ನು ಖರೀದಿ ಮಾಡಬಹುದು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications