ಗೃಹ ಸಾಲವನ್ನು ತೆಗೆದುಕೊಳ್ಳುವುದು ಒಂದು ದೀರ್ಘಾವಧಿಯ ಹೂಡಿಕೆಯಾಗಿದೆ. ಹಾಗಾದರೆ ಮನೆ ಖರೀದಿಗೆ ಗೃಹ ಸಾಲ ಏಕೆ? ಎಂಬ ಪ್ರಶ್ನೆ ಬಹುತೇಕರದು. ಸ್ವಂತಃ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಇದರಿಂದ ತಿಂಗಳ ಬಾಡಿಗೆ ಹಣವನ್ನು ಉಳಿಸಬಹುದು. ಜೊತೆಗೆ ಹಲವು ಅನುಕೂಲವನ್ನು ಪಡೆಯಬಹುದು. ಹಾಗಾಗಿ ಸ್ವಂತ ಮನೆಯನ್ನು ಖರೀದಿಸುವುದು ಪ್ರಸ್ತುತ ದಿನಮಾನದಲ್ಲಿ ದೊಡ್ಡ ಹೂಡಿಕೆಯಾಗಿದೆ. ಸ್ವತಃ ಮನೆ ಖರೀದಿಸುವುದು ಒಂದೊಳ್ಳೆ ಆಯ್ಕೆ. ಕಾರಣ ಇದು ಭೂಮಿ ಮೌಲ್ಯವನ್ನು ಹೆಚ್ಚಿಸುವ ಆಸ್ತಿಯಾಗಿದೆ. ಇಂತಹ ಆಸ್ತಿಯನ್ನು ಖರೀದಿಸಲು ನೀವು ಗೃಹ ಸಾಲವನ್ನು ತೆಗೆದುಕೊಂಡಾಗ, ಪ್ರತಿ ತಿಂಗಳು ನೀವು ಸಾಲದ ಮರುಪಾವತಿ ಮಾಡಬೇಕಾಗುತ್ತದೆ. ಸಾಲದೊಂದಿಗೆ ನೀವು ಯಾವುದಾದರೂ ಆಸ್ತಿ ಖರೀದಿಸಿದರೆ ಅದರ ಎಲ್ಲಾ EMI ಗಳನ್ನು ಪಾವತಿಸುವವರೆಗೆ ಬ್ಯಾಂಕ್‌ನವರು ನಿಮ್ಮ ಮನೆ ಅಥವಾ ಪ್ರಾಪರ್ಟಿಯನ್ನು ಅಡಮಾನವಾಗಿ ಇಟ್ಟುಕೊಂಡಿರುತ್ತಾರೆ.
ಗೃಹ ಸಾಲ ಪಾವತಿ ಹೇಗೆ
ಸಾವು ಎಂಬುದು ಒಂದು ದುಃಖದ ಘಟನೆಯಾಗಿದ್ದು, ಅದು ಪ್ರತಿಯೊಬ್ಬರ ಜೀವನದಲ್ಲೂ ದುರದೃಷ್ಟಕರ ಸಂಗತಿ. ಕುಟುಂಬಕ್ಕೆ ನೀವು ಮಾತ್ರ ಆಧಾರ ಸ್ತಂಭವಾಗಿದ್ದರಂತೂ ಸಾವು ಕೊಡುವ ನೋವು ಅಷ್ಟಿಷ್ಟಲ್ಲ. ಅಂತಹ ದುಃಖದ ಸಂದರ್ಭದಲ್ಲೂ ಸಾಲದ ಮೊತ್ತದ ಪಾವತಿ/ಇಎಂಐ ಅನ್ನು ಸಾಲಗಾರನ ಅವಲಂಬಿತರಿಗೆ ವರ್ಗಾಯಿಸಲಾಗುತ್ತದೆ. ಖರೀದಿದಾರನ ಮರಣದ ಸಂದರ್ಭದಲ್ಲಿ, ಆಸ್ತಿಯನ್ನು ಉಳಿಸಿಕೊಳ್ಳಲು ಕುಟುಂಬವು ಬಾಕಿ ಇರುವ ಮನೆ ಸಾಲವನ್ನು ಪಾವತಿಸಲು ಬದ್ಧವಾಗಿರಬೇಕು. ಇಲ್ಲದಿದ್ದರೆ, ಸಾಲವನ್ನು ಮರುಪಾವತಿಸಲು ಬ್ಯಾಂಕ್ ಆಸ್ತಿಯನ್ನು ದಿವಾಳಿ ಮಾಡಬಹುದು.
ತಜ್ಞರ ಸಲಹೆ ಏನು?
ಯಾವುದೇ ವ್ಯಕ್ತಿ ಮನೆ ಸಾಲವನ್ನು ತೆಗೆದುಕೊಳ್ಳುವಾಗ ಸಾಮಾನ್ಯವಾಗಿ ರಕ್ಷಣೆ ಯೋಜನೆಯನ್ನು ಶಿಫಾರಸು ಮಾಡಲಾಗುತ್ತದೆ. ಇದರಿಂದ ಅನಿರೀಕ್ಷಿತ ಘಟನೆಯ ಸಂದರ್ಭದಲ್ಲಿ, ವ್ಯಕ್ತಿ ಅಥವಾ ಅವನ ಅಥವಾ ಅವಳ ಕುಟುಂಬವು ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ವಸತಿ ಆಸ್ತಿಯ ಖರೀದಿದಾರನ ಸಾವಿನಂತಹ ಅನಿರೀಕ್ಷಿತ ಘಟನೆಯ ಸಂದರ್ಭದಲ್ಲಿ ಟರ್ಮ್ ಇನ್ಶೂರೆನ್ಸ್ ಅಥವಾ ಲೋನ್ ಪ್ರೊಟೆಕ್ಷನ್ ಪ್ಲಾನ್‌ನಿಂದ ಕವರ್ ಮೊತ್ತವನ್ನು ನಾಮಿನಿ ಸ್ವೀಕರಿಸಲು ಸಾಧ್ಯವಿದೆ. ಈ ಹಣವನ್ನು ಬಾಕಿ ಇರುವ ಸಾಲವನ್ನು ಪಾವತಿಸಲು ಮತ್ತು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಳಸಿಕೊಳ್ಳಬಹುದು. ಹೋಮ್ ಲೋನ್ ವಿಮೆಯು ನಿಮಗೆ ಮತ್ತು ನಿಮ್ಮ ಕುಟುಂಬವನ್ನು ಅನಿರೀಕ್ಷಿತ ಘಟನೆಗಳಿಂದ ಸಂರಕ್ಷಿಸುವ ಜೊತೆಗೆ ಮನಸ್ಸಿನ ಶಾಂತಿಯನ್ನು ಒದಗಿಸುತ್ತದೆ.
ಪ್ಲಾನ್ ಅನ್ನು ಏಕೆ ಖರೀದಿಸಬೇಕು?
ಸಾಮಾನ್ಯವಾಗಿ ಗೃಹ ಸಾಲಗಳು 25 ರಿಂದ 30 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಇರಬಹುದು. ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು, ಗೃಹ ಸಾಲವನ್ನು ತೆಗೆದುಕೊಳ್ಳುವಾಗ, ಗೃಹ ಸಾಲ ವಿಮೆ ಕಡ್ಡಾಯವಲ್ಲ. ಆದಾಗ್ಯೂ, ನಿಮ್ಮ ಆದಾಯ ಮತ್ತು ಬೆಲೆಬಾಳುವ ವಸ್ತುಗಳನ್ನು ಸಂರಕ್ಷಿಸುವ ವಿಧಾನವಾಗಿ, ಅಂತಹ ವಿಮೆಯು ಸಾಲಗಾರನಿಗೆ ಅಗತ್ಯವಾಗಿರುತ್ತದೆ. ಜೀವನದಲ್ಲಿ ಯಾವುದು ಗ್ಯಾರಂಟಿ ಇಲ್ಲ. ಅಲ್ಲದೆ, ಮೇಲೆ ಹೇಳಿದಂತೆ ಸಾಲವು ದೀರ್ಘಕಾಲದವರೆಗೆ ಇರುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಸಾವಿನಂತಹ ದುರದೃಷ್ಟಕರ ಘಟನೆಗಳಲ್ಲಿ ಮತ್ತು ಬಾಕಿ ಸಾಲದ ಮೊತ್ತವನ್ನು ಪಾವತಿಸದಿದ್ದಲ್ಲಿ, ಕುಟುಂಬಕ್ಕೆ ಮೌಲ್ಯಯುತವಾದ ಅಥವಾ ಅಗತ್ಯವಿರುವ ಸಮಯದಲ್ಲಿ ಬಳಸಬಹುದಾದ ವಸ್ತುವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಪರಿಣಾಮವಾಗಿ, ಈ ರೀತಿಯ ನಿದರ್ಶನಗಳಲ್ಲಿ, ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರನ್ನು ರಕ್ಷಿಸಲು ನೀವು ಸಮಯಕ್ಕೆ ಮುಂಚಿತವಾಗಿ ಯೋಜಿಸಬೇಕು. ಟರ್ಮ್ ಇನ್ಶೂರೆನ್ಸ್ ಅನ್ನು ಹೋಮ್ ಲೋನ್ ವಿಮೆಗೆ ಹೋಗಬಹುದು.
ನೀವು ತಿಳಿದುಕೊಳ್ಳಬೇಕಾದ ವಿಷಯಗಳೆಂದರೆ?
ವಿಮಾ ಖರೀದಿದಾರರಾಗಿ, ಈ ಆಯ್ಕೆಯನ್ನು ಆಯ್ಕೆಮಾಡುವ ಮೊದಲು ಚರ್ಚೆ, ಅಗತ್ಯ ಮಾಹಿತಿಯನ್ನು ವಿವಿಧ ಮೂಲಗಳಿಂದ ಪಡೆಯಲು ಮರೆದಿರಿ. ಹಣಕಾಸು ಸಂಸ್ಥೆಗಳು ಹಣವನ್ನು ಗಳಿಸಲು ನಿಮಗೆ ವಿಮೆಯನ್ನು ಮಾರಾಟ ಮಾಡಲು ಪ್ರಯತ್ನಿಸಬಹುದು, ಆದರೆ ನಿಮ್ಮ ಅಗತ್ಯಗಳನ್ನು ಉತ್ತಮವಾಗಿ ಪೂರೈಸುವ ಪಾಲಿಸಿಯನ್ನು ಮಾತ್ರ ನೀವು ಖರೀದಿಸಬೇಕು. ನೀವು ಸಾಲವನ್ನು ತೆಗೆದುಕೊಳ್ಳುತ್ತಿದ್ದರೆ ತಕ್ಷಣವೇ ವಿಮೆಯನ್ನು ಪಡೆದುಕೊಳ್ಳಬೇಕಾಗಿಲ್ಲ. ನೀವು ಇನ್ನೊಂದು ಹಣಕಾಸು ಸಂಸ್ಥೆ, ಬ್ಯಾಂಕ್ ಅಥವಾ ವಿಮೆ-ಮಾರಾಟ ಪೋರ್ಟಲ್ ಮೂಲಕ ವಿಮೆಯನ್ನು ಖರೀದಿಸಬಹುದು.


Click it and Unblock the Notifications