ODMPL ಕನ್ನಡ ವಿಭಾಗದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 10 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಸ್ವಂತ ಊರು ಸಕಲೇಶಪುರದ ಒಂದು ಪುಟ್ಟ ಹಳ್ಳಿ, ಬೆಳೆದಿದ್ದು ಬೇಲೂರಿನಲ್ಲಿ, ಇರುವುದು ಬೆಂಗಳೂರಿನಲ್ಲಿ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಸಮಯ ಟಿವಿ, ಜನಶ್ರೀ ನ್ಯೂಸ್, ಸುದ್ದಿ ಟಿವಿ, ನ್ಯೂಸ್ 18 ಕನ್ನಡದಲ್ಲಿ ಹಿರಿಯ ಕ್ರೀಡಾ ವರದಿಗಾರನಾಗಿ, ಕ್ರೀಡಾ ಸಂಪಾದಕನಾಗಿ ಹಾಗೂ ಸುದ್ದಿ ನಿರ್ಮಾಪಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಎಲೆಕ್ಟ್ರಾನಿಕ್ ಮಾಧ್ಯಮದಿಂದ 2019ರಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಬಂದೆ. ಹಣಕಾಸು, ಆರ್ಥಿಕತೆ, ಬ್ಯಾಂಕಿಂಗ್, ಕ್ರೀಡೆ ಪರವಾದ ಸುದ್ದಿಗಳ ಬಗ್ಗೆ ಹೆಚ್ಚಿನ ಆಸಕ್ತಿ. ಪ್ರವಾಸ ಮಾಡುವುದು, ದೂರ ಪ್ರಯಾಣ, ಚಾರಣ ನನ್ನ ಅಚ್ಚುಮೆಚ್ಚಿನ ಹವ್ಯಾಸಗಳು.
ಪ್ರಸ್ತುತ oneindia ಕನ್ನಡ ವಿಭಾಗದಲ್ಲಿ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಣೆ. ವಾರ್ತಾಭಾರತಿಯಲ್ಲಿ ಇಂಟರ್ನ್ಶಿಪ್ ನಿರ್ವಹಣೆ, ಬಳಿಕ ದಾಯ್ಜಿವಲ್ಡ್ ಸುದ್ದಿಜಾಲತಾಣದಲ್ಲಿ ಒಂದೂವರೆ ವರ್ಷದ ವೃತ್ತಿ ಜೀವನ. ಪತ್ರಿಕೋದ್ಯಮದಲ್ಲಿ ಬಿ.ಎ ಹಾಗೂ ಎಂಎ ವ್ಯಾಸಂಗ. 2019 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿದ್ದೇನೆ. ರಂಗನಾಟಕ, ನೃತ್ಯ, ಗಾಯನ, ಪುಸ್ತಕ ಓದು, ಚಾರಣ ಆಸಕ್ತಿಯ ವಿಷಯ.
ODMPL ಕನ್ನಡ ವಿಭಾಗದಲ್ಲಿ ನವೆಂಬರ್ 2019ರಿಂದ ಹಿರಿಯ ಉಪ ಸಂಪಾದಕ ಹಾಗೂ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ರಾಜಕೀಯ, ಸಿನಿಮಾ, ಸಂಗೀತ, ಕನ್ನಡ ಸಾಹಿತ್ಯ, ಪ್ರವಾಸ ಮತ್ತು ಫೋಟೋಗ್ರಪಿ ನನ್ನ ಹವ್ಯಾಸವಾಗಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಎಸ್ ಜೆಜೆಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದೇನೆ. ಪ್ರಜಾ ಟಿವಿ, ದಿಗ್ವಿಜಯ ನ್ಯೂಸ್, ಪವರ್ ಟಿವಿ ಕನ್ನಡ ಸುದ್ದಿ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಪತ್ರಿಕೋದ್ಯಮ ರಂಗದಲ್ಲಿ ಕಳೆದ 6 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ರಾಜಕೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳಿಗೆ ನನ್ನ ಆದ್ಯತೆ.
ODMPL ಕನ್ನಡ ವಿಭಾಗದಲ್ಲಿ ವರದಿಗಾರ್ತಿ ಹಾಗೂ ಉಪ ಸಂಪಾದಕಿಯಾಗಿ 2017 ರಿಂದ ಕೆಲಸ ನಿರ್ವಹಣೆ. 2014ರಿಂದ ಪತ್ರಿಕೋದ್ಯಮದಲ್ಲಿದ್ದೇನೆ. ಮೊದಲು ವರದಿಗಾರ್ತಿಯಾಗಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ 2014-17ರವರೆಗೆ ಕೆಲಸ ಮಾಡಿದ ಅನುಭವ. ಪತ್ರಿಕೋದ್ಯಮದಲ್ಲಿ ಡಿಗ್ರಿ, ಹಿಂದಿಯಲ್ಲಿ ಎಂ.ಎ ವ್ಯಾಸಂಗ ಮಾಡಿದ್ದೇನೆ. ಹಿಂದಿ ಸಾಹಿತ್ಯ,ನೃತ್ಯ, ಹಾಡುಗಾರಿಕೆ ಮತ್ತು ಚಾರಣ ನನ್ನ ಆಸಕ್ತಿ ವಿಷಯಗಳು.
ODMPL ಕನ್ನಡದಲ್ಲಿ ಜನವರಿ 2006ರಿಂದ ಕೆಲಸ ನಿರ್ವಹಿಸುತ್ತಿದ್ದೇನೆ. ಸಂಸ್ಥೆಯ ಆಡಳಿತಾಧಿಕಾರಿ. ಜೊತೆಗೆ, ಸಂಸ್ಥೆಯ ಕನ್ನಡ ವಿಭಾಗಕ್ಕೆ ಆರ್ಟಿಕಲ್ ಕೂಡಾ ಬರೆಯುತ್ತಿದ್ದೇನೆ. ಲೇಖನ ಬರೆಯಲು ಶುರು ಮಾಡಿದ್ದು ODMPL ಸಂಸ್ಥೆಯಿಂದಲೇ. ಹುಟ್ಟಿ ಬೆಳೆದದ್ದು, ವಿದ್ಯಾಭ್ಯಾಸ, ಉಡುಪಿ ಮತ್ತು ಬೆಂಗಳೂರಿನಲ್ಲಿ. ಮಾನವೀಯ ಸಂವೇದಿ ಸುದ್ದಿ, ರಾಜಕೀಯ ವಿಷಯಕ್ಕೆ ಸಂಬಂಧಿಸಿದ ಸುದ್ದಿಗೆ ನನ್ನ ಆದ್ಯತೆ ಎನ್ನುವುದಕ್ಕಿಂತಲೂ, ಇದರಲ್ಲಿ ಆಸಕ್ತಿ ಜಾಸ್ತಿ. ಹಳೆಯ ಕನ್ನಡ ಹಾಡು ಕೇಳುವುದು, ಪ್ರವಾಸ, ನನ್ನ ಆಸಕ್ತಿಯ ವಿಷಯಗಳು.
ಒನ್ ಇಂಡಿಯಾ ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 10 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ.ಹುಟ್ಟಿ ಬೆಳೆದದ್ದು ಅಪ್ಪಟ ಮಲೆನಾಡಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ಸಿನಿಗಂಧ, ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ವರದಿಗಾರಾಗಿ ಕೆಲಸ ಮಾಡಿದ್ದೇನೆ. ಪತ್ರಿಕಾ ಪ್ರಪಂಚದಿಂದ ಆನ್ಲೈನ್ ಮಾಧ್ಯಮಕ್ಕೆ ಬಂದೆ. ಮಾನವೀಯ, ಅಪರಾಧ, ರಾಜಕೀಯ, ರೈತ ಪರವಾದ ಸುದ್ದಿಗಳ ಬಗ್ಗೆ ವಿಪರೀತ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳು. ಪೂರ್ಣಚಂದ್ರ ತೇಜಸ್ವಿ ನೆಚ್ಚಿನ ಲೇಖಕರು.
ODMPL ನಲ್ಲಿ ಹಿರಿಯ ವರದಿಗಾರ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 12 ವರ್ಷಗಳ ಅನುಭವ. ಹುಟ್ಟಿ ಬೆಳೆದಿದ್ದು ರಾಯಚೂರು ಜಿಲ್ಲೆಯ ಹೊಕ್ರಾಣಿಯಲ್ಲಿ. ಶಾಲಾ-ಕಾಲೇಜು ರಾಯಚೂರು ಜಿಲ್ಲೆಯಲ್ಲಿಯೇ. ಸುದ್ದಿಮೂಲ ದಿನಪತ್ರಿಕೆ ನಾನು ಪತ್ರಕರ್ತನಾಗಲು ಕಾರಣವಾದ ವಿಶ್ವವಿದ್ಯಾಲಯ. ನಂತರ ಟೈಮ್ಸ್ ಆಫ್ ಇಂಡಿಯಾ ಕನ್ನಡ, ವಿಜಯ ಕರ್ನಾಟಕ ಹಾಗೂ ಪ್ರಜಾವಾಣಿ ದಿನಪತ್ರಿಗಳಲ್ಲಿ ಉಪಸಂಪಾದಕ, ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದೇನೆ. ಗ್ರಾಮೀಣ, ರೈತ, ರಾಜಕೀಯ, ನಗರ ಸಂಬಂಧಿತ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಮತ್ತು ಈ ವಿಷಯಗಳಲ್ಲಿಯೇ ಹೆಚ್ಚಿನ ವರದಿಗಾರಿಕೆ ಮಾಡಿದ್ದೇನೆ. ಸದಾ ಹೊಸತನಗಳಿಗೆ ಹೊಂದಿಕೊಳ್ಳುವುದು, ಪ್ರವಾಸ, ಸಂಗೀತ ಕೇಳುವುದು ಆಸಕ್ತಿಯ ವಿಷಯ.
ODMPL ಕನ್ನಡ ವೆಬ್ ತಾಣದಲ್ಲಿ ಉಪ ಸಂಪಾದಕ. ಪ್ರಸ್ತುತ ಸಿನಿಮಾ ವಿಭಾಗದಲ್ಲಿ ಕೆಲಸ ನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬಿಡಿ ಸುದ್ದಿ ಸಂಗ್ರಹಕನಾಗಿ ಪತ್ರಿಕೋದ್ಯಕ್ಕೆ ಪ್ರವೇಶ. ನಂತರ ಅಪ್ರೆಂಟಿ ಉಪಸಂಪಾದಕ, ಉಪಸಂಪಾದಕನಾಗಿ ಸರಿ ಸುಮಾರು 7 ವರ್ಷದಿಂದ ಪತ್ರಿಕೋದ್ಯಮ ವೃತ್ತಿಯಲ್ಲಿ ತೊಡಗಿಕೊಂಡಿದ್ದೇನೆ. ಚಲನಚಿತ್ರ ವೀಕ್ಷಣೆ, ಸಾಹಿತ್ಯ ಮತ್ತು ಕ್ರೀಡೆ ನನ್ನ ಮೆಚ್ಚಿನ ಹವ್ಯಾಸಗಳು.