For Quick Alerts
ALLOW NOTIFICATIONS  
For Daily Alerts

ಡಿಮ್ಯಾಟ್ ಖಾತೆ ಅವಶ್ಯಕತೆ, ಉಪಯೋಗ

By Mahesh
|

ಡಿಮ್ಯಾಟ್ ಖಾತೆ ಅವಶ್ಯಕತೆ, ಉಪಯೋಗ
'ಭಾರತೀಯ ಷೇರು ನಿಯಂತ್ರಣ ಮಂಡಳಿ(ಸೆಬಿ) ನಿರ್ದೇಶನದಂತೆ ಪ್ಯಾನ್ ಕಾರ್ಡ್ ಹೊಂದಿರದ ಡಿಮ್ಯಾಟ್ ಖಾತೆಗಳಿಂದ ಯಾವುದೇ ಷೇರು ಖರೀದಿ, ಮಾರಾಟ ಸಾಧ್ಯವಿಲ್ಲ'

ಡಿಮ್ಯಾಟ್ ಖಾತೆ ಎಂದರೆ ಏನು? ಏನು ಇದರ ಉಪಯೋಗ?

 

ಡಿಮ್ಯಾಟ್ ಎಂದರೆ, ಡಿಮೆಟೀರಿಯಲೈಸ್ಡ್ ಖಾತೆ. ಇದು ಬ್ಯಾಂಕ್ ಖಾತೆಯಂತೆಯೇ ಕಾರ್ಯ ನಿರ್ವಹಿಸುತ್ತದೆ. ಖಾತೆ ಹೊಂದಿರುವವರ ಷೇರು ವ್ಯವಹಾರಗಳು (ಷೇರು ಮಾರಾಟ ಮತ್ತು ಖರೀದಿ) ಹಾಗೂ ಅವರ ವಿವರಗಳನ್ನು ನಿರ್ವಹಿಸಬಹುದು.

 

ಡಿಮ್ಯಾಟ್ ಖಾತೆಯಲ್ಲಿ ಷೇರು ಹಾಗೂ ಸೆಕ್ಯುರಿಟಿಗಳು (ಭದ್ರತಾಪತ್ರಗಳು) ಭೌತಿಕ ಸರ್ಟಿಫಿಕೇಟು(physical forms) ಗಳ ಬದಲಾಗಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಇರಿಸಲ್ಪಟ್ಟಿರುತ್ತವೆ. ಹೂಡಿಕೆದಾರನು ಹೂಡಿಕೆ ದಲ್ಲಾಳಿಯೊಡನೆ (ಅಥವಾ ಉಪ ದಲ್ಲಾಳಿಯೊಡನೆ) ನೋಂದಾವಣೆ ಮಾಡಿಕೊಳ್ಳುವ ಮೂಲಕ ಡಿಮ್ಯಾಟ್ ಖಾತೆಯನ್ನು ತೆರೆಯಬಹುದು.

ಖಾತೆಯನ್ನು ತೆರೆದ ನಂತರ ನಿಮಗೆ ಖಾತೆ ಸಂಖ್ಯೆ ಹಾಗೂ ಡಿಪಿ ಗುರುತಿನ ಸಂಖ್ಯೆಗಳನ್ನು ನೀಡಲಾಗುತ್ತದೆ ಮತ್ತು ಇದನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನಡೆಸುವ ಎಲ್ಲ ವ್ಯವಹಾರಗಳಲ್ಲಿಯೂ ನಮೂದಿಸಬೇಕಾಗುತ್ತದೆ.

ಡಿಮ್ಯಾಟ್ ಖಾತೆ ತೆರೆಯಲು ಅಂತರ್ಜಾಲ ಪಾಸ್ವರ್ಡ್ ಮತ್ತು ವ್ಯವಹಾರ ಪಾಸ್ವರ್ಡ್ ಗಳು ಬೇಕಾಗುತ್ತವೆ. ಹಾಗೆಯೇ ಸೆಕ್ಯುರಿಟಿಗಳ ವರ್ಗಾವಣೆ ಅಥವಾ ಖರೀದಿಯ ಧೃಢಿಕರಣ ಬೇಕಾಗುತ್ತದೆ. ಒಮ್ಮೆ ವ್ಯವಹಾರಕ್ಕೆ ಚಾಲನೆ ದೊರೆತು ಪೂರ್ಣಗೊಂಡ ನಂತರ ಡಿಮ್ಯಾಟ್ ಖಾತೆಯ ಮೇಲಿನ ಸೆಕ್ಯುರಿಟಿಗಳ ಕೊಳ್ಳುವಿಕೆ ಹಾಗೂ ಮಾರಾಟಗಳು ಯಾಂತ್ರಿಕವಾಗಿ ಸಾಗುತ್ತವೆ.

ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ಯು ಎಲ್ಲ ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು, ಅಥವಾ ಜನರ ಗುಂಪುಗಳಿಗೆ
ಜಂಟಿಯಾಗಿ ಡಿಮ್ಯಾಟ್ ಖಾತೆಯನ್ನು ಅವನ/ಅವಳ ಹೆಸರಿನಲ್ಲಿ ಹೊಂದಿದ್ದು, ಷೇರು ವ್ಯವಹಾರ (ಮಾರಾಟ ಮತ್ತು ಕೊಳ್ಳುವಿಕೆ)ಗಳನ್ನು ನಡೆಸಲು ಅಥವಾ ಸ್ಟಾಕ್ ಮಾರ್ಕೆಟ್ಟಿನಲ್ಲಿ ಯಾವುದೇ ಬಗೆಯ ಬಂಡವಾಳ ಹೂಡಲು ಅವಕಾಶ ಕಲ್ಪಿಸುವುದು.

ಡಿಪಾಸಿಟರಿಗಳು : ಡಿಮ್ಯಾಟ್ ಖಾತೆಯನ್ನು ನ್ಯಾಶನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (NSDL) ಬಂಡವಾಳ ದಲ್ಲಾಳಿಗಳು ಯಾ ಉಪ ದಲ್ಲಾಳಿಗಳೊಡನೆ ಅಥವಾ ಸೆಂಟ್ರಲ್ ಡಿಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ (CDSL) ತೆರೆಯಬಹುದಾಗಿದೆ.

NSDL ಮತ್ತು CDSLಗಳು ಡಿಮ್ಯಾಟ್ ಖಾತೆಯನ್ನು ತೆರೆಯಲು ನೇರವಾಗಿ ಸಂಪರ್ಕಿಸುವ ಅವಕಾಶವನ್ನು ಯಾರಿಗೂ ನೀಡಿರುವುದಿಲ್ಲ. ಒಟ್ಟಾರೆಯಾಗಿ 711 ಡಿಪಿಗಳು (266 NSDL, 445 CDSL) ಸೆಬಿಯಲ್ಲಿ ನೋಂದಾಯಿಸಿಕೊಂಡಿವೆ.

ಡಿಮ್ಯಾಟ್ ಖಾತೆ ತೆರೆಯುವುದರ ಉಪಯೋಗಗಳು

* ಭದ್ರತಾ ಪತ್ರಗಳನ್ನು ಕಾಪಾಡಿಕೊಳ್ಳಲು ಸುರಕ್ಷಿತ ಹಾಗೂ ಅನುಕೂಲಕರ ವಿಧಾನ
* ಭದ್ರತಾ ಪತ್ರಗಳ ತತ್ ಕ್ಷಣದ ವರ್ಗಾವಣೆಯ ಅವಕಾಶ
* ಭದ್ರತಾ ಪತ್ರಗಳ ವರ್ಗಾವಣೆಗೆ ಸ್ಟ್ಯಾಂಪ್ ಡ್ಯೂಟಿ ಅಗತ್ಯವಿಲ್ಲದಿರುವುದು
* ಭೌತಿಕ ಪತ್ರಗಳಿಂದ ಉಂಟಾಗಬಹುದಾದ ಕಳಪೆ ಬಟವಾಡೆ, ಹುಸಿ ಭದ್ರತೆ, ವಿಳಂಬ, ಕಳ್ಳತನ ಮೊದಲಾದ ಆತಂಕಗಳ ನಿರ್ಮೂಲನೆ
* ಭದ್ರತಾ ಪತ್ರಗಳನ್ನು ವರ್ಗಾವಣೆಯಲ್ಲಿ ಕಾಗದಪತ್ರಗಳ ನಿರ್ವಹಣಾ ಕಾರ್ಯಗಳಲ್ಲಿ ಕಡಿತ
* ವ್ಯಾವಹಾರಿಕ ವೆಚ್ಚದಲ್ಲಿ ಕಡಿತ
* ಹೊರೆಯಾಗುವ ಸಮಸ್ಯೆಯಿರುವುದಿಲ್ಲ, ಕೇವಲ ಒಂದು ಷೇರನ್ನು ಕೂಡ ಮಾರಾಟ ಮಾಡಬಹುದು
* ನಾಮ ನಿರ್ದೇಶನ(ನಾಮಿನೇಶನ್) ಮಾಡಬಹುದಾದ ಅವಕಾಶ
* ಡಿಪಿಯಲ್ಲಿ ದಾಖಲುಗೊಂಡ ವಿಳಾಸ ಬದಲಾವಣೆಯು ಹೂಡಿಕೆದಾರನ ಭದ್ರತಾಪತ್ರ ಇರುವ ಎಲ್ಲ ಕಂಪೆನಿಯ ದಾಖಲೆಗಳಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕವೇ ನೋಂದಾವಣೆಯಾಗಿಬಿಡುತ್ತದೆ.


ಕೆಲವು ಸಾರ್ವಜನಿಕ ವಲಯದ ಬ್ಯಾಂಕ್ ಗಳು ಕೂಡ ಡಿಪಿಯಾಗಿ ವರ್ತಿಸುತ್ತವೆ. ನೀವು ಇವುಗಳೊಂದಿಗೆ ಡಿಮ್ಯಾಟ್ ಖಾತೆಯನ್ನು ತೆರೆಯಬಹುದಾಗಿದೆ. ಅಂತಹ ಬ್ಯಾಂಕ್ ಗಳ ಪಟ್ಟಿ ಇಲ್ಲಿದೆ:

* ಅಲಹಾಬಾದ್ ಬ್ಯಾಂಕ್
* ಕೆನರಾ ಬ್ಯಾಂಕ್
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
* ದೇನಾ ಬ್ಯಾಂಕ್
* ಆಂಧ್ರ ಬ್ಯಾಂಕ್
* ಇಂಡಿಯನ್ ಬ್ಯಾಂಕ್
* ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್
* ಸಿಂಡಿಕೇಟ್ ಬ್ಯಾಂಕ್
* ವಿಜಯಾ ಬ್ಯಾಂಕ್
* ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
* ಇಂಡಿಯನ್ ಬ್ಯಾಂಕ್

English summary

How to create Demat account | How Demat account works? | ಡಿಮ್ಯಾಟ್ ಖಾತೆ ಎಂದರೇನು? ಹೇಗೆ ಉಪಯುಕ್ತ?

Demat account functions like a bank account, where your bank balance is a mere entry in the bank passbook and you do not hold the cash physically.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X