
ಬಹುಪಾಲು ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮತ್ತು ಕೆಲವು ಖಾಸಗಿ ವಲಯದ ಬ್ಯಾಂಕ್ ಗಳು ಡಿಪಾಸಿಟರಿ ಪಾರ್ಟಿಸಿಪೆಂಟ್ (ಡಿಪಿ) ಆಗಿ ಕಾರ್ಯ ನಿರ್ವಹಿಸುತ್ತಿವೆ. ಈ ಬ್ಯಾಂಕುಗಳ ಹೊರತಾಗಿ, ದೇಶಾದ್ಯಂತ, ಹಲವಾರು ಖಾಸಗಿ ಹಣಕಾಸು ಸಂಸ್ಥೆಗಳು ಡಿಪಾಸಿಟರಿ ಪಾರ್ಟಿಸಿಪೆಂಟ್ (ಡಿಪಿ)ಯಾಗಿ ಕೆಲಸ ಮಾಡುತ್ತಿವೆ.
ಯಾರನ್ನು ಸಂಪರ್ಕಿಸಬಹುದು?: ಡಿಮ್ಯಾಟ್ ಖಾತೆ ತೆರೆಯಲು ನೀವು ಇವುಗಳಲ್ಲಿ ಯಾವುದನ್ನಾದರೂ ಸಂಪರ್ಕಿಸಬಹುದಾಗಿದೆ.
ಎನ್ಎಸ್ ಡಿಎಲ್ ಠೇವಣಿ ಪಾಲುದಾರರು (ಡಿಪಾಸಿಟರಿ ಪಾರ್ಟಿಸಿಪೆಂಟ್ಸ್ ಆಫ್ NSDL)
ನೀವು ನಿಮಗೆ ಸಮೀಪದಲ್ಲಿರುವ ಮತ್ತು ವ್ಯವಹಾರಕ್ಕೆ ಅನುಕೂಲವೆನಿಸುವ ನಿಮ್ಮ ಆಯ್ಕೆಯ ಯಾವುದೇ ಡಿಪಾಸಿಟರಿ ಪಾರ್ಟಿಸಿಪೆಂಟ್ (ಡಿಪಿ)ಯೊಂದಿಗೆ ಡಿಮ್ಯಾಟ್ ಖಾತೆ ತೆರೆಯಬಹುದಾಗಿದೆ.
ಹೂಡಿಕೆದಾರರು ಡಿಮ್ಯಾಟ್ ಅಕೌಂಟ್ ಅನ್ನು ತೆರೆಯುವ ಸಮಯದಲ್ಲಿ ಮೂಲ ಪ್ಯಾನ್ ಕಾರ್ಡ್ ಅನ್ನು ತೋರಿಸಬೇಕಾಗುತ್ತದೆ.
ಡಿಮ್ಯಾಟ್ ಖಾತೆ ತೆರೆಯಲು ಡಿಪಿಯನ್ನು ಹೇಗೆ ಸಂಪರ್ಕಿಸಬೇಕು?
* ನಿಮ್ಮ ಡಿಪಾಸಿಟರಿ ಪಾರ್ಟಿಸಿಪೆಂಟ್ (ಡಿಪಿ)ಯಿಂದ ಡಿಮ್ಯಾಟ್ ಖಾತೆ ತೆರೆಯುವ ಅರ್ಜಿ ಪುಸ್ತಕವನ್ನು ಪಡೆಯಿರಿ.
* ಅರ್ಜಿ ಫಾರ್ಮ್ ಅನ್ನು ಸರಿಯಾಗಿ ತುಂಬಿರಿ ಮತ್ತು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿರಿ.
* ಅರ್ಜಿ ಫಾರ್ಮ್ ಅನ್ನು ಪ್ಯಾನ್ ಕಾರ್ಡ್, ಪಾಸ್ ಪಾರ್ಟ್ ಅಳತೆಯ ಭಾವಚಿತ್ರ, ಗುರುತಿನ ಚೀಟಿ ಹಾಗೂ ವಿಳಾಸ ಪ್ರಮಾಣ ಪತ್ರಗಳೊಂದಿಗೆ ಸಲ್ಲಿಸಬೇಕು.
* ಅರ್ಜಿದಾರರು ಡಿಪಿಯ ಅಧಿಕೃತ ಅಧಿಕಾರಿಗಳ ಪರಾಮರ್ಶೆಗಾಗಿ ಎಲ್ಲ ದಾಖಲೆಗಳ ಮೂಲ ಪ್ರತಿಯನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು.
* ಹೂಡಿಕೆದಾರರು ಡಿಪಾಸಿಟರಿಯಲ್ಲಿ ಸೂಚಿತ ನಿರ್ದಿಷ್ಟ ವಿಧಾನದಲ್ಲಿ ಡಿಪಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಬೇಕು.
ಡಿಮ್ಯಾಟ್ ಖಾತೆ ತೆರೆಯಲು ಅಗತ್ಯವಿರುವ ದಾಖಲೆಗಳು
* ಪ್ಯಾನ್ ಕಾರ್ಡ್
* ಪಾಸ್ಪೋರ್ಟ್ ಅಳತೆಯ ಫೋಟೋ
* ವಿಳಾಸ ದಾಖಲೆ ಪತ್ರ (ಅಡ್ರೆಸ್ ಪ್ರೂಫ್)
* ಗುರುತಿನ ಪ್ರಮಾಣ ಪತ್ರ
* ಬ್ಯಾಂಕ್ ಖಾತೆ ಸಂಖ್ಯೆ
ಗುರುತಿನ ಪ್ರಮಾಣಕ್ಕೆ ಈ ಕೆಳಗಿನವುಗಳಲ್ಲಿ ಯಾವುದಾದರೊಂದನ್ನು ನೀಡಬಹುದು:
* ಪಾಸ್ ಪೋರ್ಟ್
* ಚುನಾವಣಾ ಗುರುತಿನ ಚೀಟಿ
* ಚಾಲನೆ ಪರವಾನಗಿ ಚೀಟಿ (ಡ್ರೈವಿಂಗ್ ಲೈಸೆನ್ಸ್)
* ಪ್ಯಾನ್ ಕಾರ್ಡ್ (ಭಾವಚಿತ್ರದೊಂದಿಗೆ)
* ಕೇಂದ್ರ/ರಾಜ್ಯ ಸರ್ಕಾರಗಳ ಇಲಾಖೆಗಳ ಮೂಲಕ ಜಾರಿ ಮಾಡಲ್ಪಟ್ಟ ಗುರುತಿನ ಚೀಟಿ (ಭಾವಚಿತ್ರದೊಂದಿಗೆ)
* ಸಾಂವಿಧಾನಿಕವಾಗಿ ಅಥವಾ ಅಧಿಕೃತ ನಿಯಂತ್ರಕರಿಂದ ನೀಡಲಾದ ಗುರುತಿನ ಚೀಟಿ (ಭಾವಚಿತ್ರದೊಂದಿಗೆ)
* ಯಾವುದೇ ಸಾರ್ವಜನಿಕ ವಲಯದಿಂದ ನೀಡಿದ ಗುರುತಿನ ಚೀಟಿ (ಭಾವಚಿತ್ರದೊಂದಿಗೆ)
* ಯಾವುದೇ ವಾಣಿಜ್ಯ ಬ್ಯಾಂಕ್ಗಳಿಂದ ನೀಡಿದ ಗುರುತಿನ ಚೀಟಿ (ಭಾವಚಿತ್ರದೊಂದಿಗೆ)
* ಸಾರ್ವಜನಿಕ ವಲಯದಲ್ಲಿ ನೀಡಿದ ಗುರುತಿನ ಚೀಟಿ (ಭಾವಚಿತ್ರದೊಂದಿಗೆ)
* (ಅರ್ಜಿದಾರರು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ) ಯಾವುದೇ ಕಾಲೇಜಿನಲ್ಲಿ ನೀಡಲಾದ ಗುರುತಿನ ಚೀಟಿ (ಭಾವಚಿತ್ರದೊಂದಿಗೆ)
* ICAI, ICWAI, ICSI, ಬಾರ್ ಕೌನ್ಸಿಲ್ ಇತ್ಯಾದಿಗಳಿಂದ ನೀಡಲಾದ ಗುರುತಿನ ಚೀಟಿ (ಭಾವಚಿತ್ರದೊಂದಿಗೆ)
* ವಾಣಿಜ್ಯ ಬ್ಯಾಂಕ್ ಗಳಲ್ಲಿ ನೀಡಲಾದ ಕ್ರೆಡಿಟ್ ಕಾರ್ಡ್
ವಿಳಾಸ ಪ್ರಮಾಣಪತ್ರವಾಗಿ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ನೀಡಬಹುದು:
* ಪಡಿತರ ಚೀಟಿ
* ಪಾಸ್ಪೋರ್ಟ್
* ಚುನಾವಣಾ ಗುರುತಿನ ಚೀಟಿ
* ವಾಹನ ಚಾಲನೆ ಪರವಾನಗಿ ಚೀಟಿ (ಡ್ರೈವಿಂಗ್ ಲೈಸೆನ್ಸ್)
* ಬ್ಯಾಂಕ್ ಪಾಸ್ ಬುಕ್
* ವಿದ್ಯುತ್ ಬಿಲ್/ದೂರವಾಣಿ ಬಿಲ್ (ಎರಡು ತಿಂಗಳ ಅವಧಿಯೊಳಗಿನ)ಗಳ ಪ್ರಮಾಣೀಕೃತ ಪ್ರತಿ
* ಕೇಂದ್ರ/ರಾಜ್ಯ ಸರ್ಕಾರಗಳ ಇಲಾಖೆಗಳ ಮೂಲಕ ಜಾರಿ ಮಾಡಲ್ಪಟ್ಟ ಗುರುತಿನ ಚೀಟಿ (ಅಂಚೆ ವಿಳಾಸದೊಂದಿಗೆ)
* ಸಾಂವಿಧಾನಿಕವಾಗಿ ಅಥವಾ ಅಧಿಕೃತ ನಿಯಂತ್ರಕರಿಂದ ನೀಡಲಾದ ಗುರುತಿನ ಚೀಟಿ (ಅಂಚೆ ವಿಳಾಸದೊಂದಿಗೆ)
* ಯಾವುದೇ ಸಾರ್ವಜನಿಕ ನೀಡಲಾದ ಚೀಟಿ (ಅಂಚೆ ವಿಳಾಸದೊಂದಿಗೆ)
* ಯಾವುದೇ ವಾಣಿಜ್ಯ ಬ್ಯಾಂಕ್ಗಳಿಂದ ನೀಡಲಾದ ಗುರುತಿನ ಚೀಟಿ (ಅಂಚೆ ವಿಳಾಸದೊಂದಿಗೆ)
* ಸಾರ್ವಜನಿಕ ವಲಯದಲ್ಲಿ ನೀಡಲಾದ ಗುರುತಿನ ಚೀಟಿ (ಅಂಚೆ ವಿಳಾಸದೊಂದಿಗೆ)
* (ಅರ್ಜಿದಾರರು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ) ಯಾವುದೇ ಕಾಲೇಜಿನಲ್ಲಿ ನೀಡಲಾದ ಗುರುತಿನ ಚೀಟಿ (ಅಂಚೆ ವಿಳಾಸದೊಂದಿಗೆ)
* ICAI, ICWAI, ICSI, ಬಾರ್ ಕೌನ್ಸಿಲ್ ಇತ್ಯಾದಿಗಳಿಂದ ನೀಡಲಾದ ಗುರುತಿನ ಚೀಟಿ (ಅಂಚೆ ವಿಳಾಸದೊಂದಿಗೆ)
ಗಮನಿಸಿ: ವಿಳಾಸ ಪ್ರಮಾಣ ಹಾಗೂ ಗುರುತು ಪ್ರಮಾಣ ಪತ್ರಗಳಿಗಾಗಿ ಎರಡು ಪ್ರತ್ಯೇಕ ದಾಖಲೆಗಳನ್ನು ನೀಡಬೇಕು. ಡಿಮ್ಯಾಟ್ ಖಾತೆ ತೆರೆಯುವಿಕೆ ಹಾಗೂ ನಿರ್ವಹಣೆಗಾಗಿ ನೀಡಬೇಕಾದ ಶುಲ್ಕ ಸೆಬಿಯು ಖಾತೆ ತೆರೆಯುವಿಕೆಯ ಶುಲ್ಕಗಳು, ವ್ಯವಹಾರ ಶುಲ್ಕಗಳು (ಸೆಕ್ಯುರಿಟಿಗಳಿಗಾಗಿ ಸಾಲ ಅಥವಾ ಕೊಳ್ಳುವಿಕೆ ವ್ಯವಹಾರಗಳ ಮೇಲಿನ) ಕಸ್ಟಡಿ ಶುಲ್ಕಗಳು ಮತ್ತು ಖಾತೆ ಮುಚ್ಚುವಿಕೆಯ ಶುಲ್ಕಗಳನ್ನು ತೆಗೆದುಹಾಕುವ ಮೂಲಕ ಡಿಮೆಟೀರಿಯಲೈಸೇಶನ್ ಪ್ರಕ್ರಿಯೆಯ ಹಣಕಾಸಿನ ಸಂರಚನೆಯನ್ನು ಸಮನ್ವಯಗೊಳಿಸಿದೆ.
ಈಗ ಕಸ್ಟಡಿ ಶುಲ್ಕಗಳನ್ನು ಜಾರಿಗೊಳಿಸುವ ಸಂಸ್ಥೆಗಳೇ ಭರಿಸುತ್ತವೆ. ಹೂಡಿಕೆದಾರರು ಭರಿಸಬೇಕಾದ ಶುಲ್ಕಗಳ ವಿವರ ಹೀಗಿದೆ:
* ತಮ್ಮ ಸೆಕ್ಯುರಿಟಿಗಳ ಡಿಮೆಟೀರಿಯಲೈಸೇಶನ್ ಹಾಗೂ ರಿಮೆಟೀರಿಯಲೈಸೇಶನ್
* ಖಾತೆ ನಿರ್ವಹಣೆ ವಾರ್ಷಿಕ ಶುಲ್ಕಗಳು
* ವ್ಯವಹಾರ ಶುಲ್ಕ (ಮಾರಾಟ ವ್ಯವಹಾರಗಳಿಗೆ ಮಾತ್ರ)
ಮೇಲಿನ ಶುಲ್ಕಗಳು ಡಿಪಿಯಿಂದ ಡಿಪಿಗೆ ಬದಲಾಗುತ್ತವೆ ಮತ್ತು 30ದಿನಗಳ ಗಡುವಿನೊಂದಿಗೆ ಶುಲ್ಕಗಳಲ್ಲಿ ಬದಲಾವಣೆ ಮಾಡುವ ಹಕ್ಕನ್ನು ಅವು ಹೊಂದಿರುತ್ತವೆ.
ಕೆಲವು ಸಾರ್ವಜನಿಕ ವಲಯದ ಬ್ಯಾಂಕ್ಗಳು ಕೂಡ ಡಿಪಿಯಾಗಿ ವರ್ತಿಸುತ್ತವೆ. ನೀವು ಇವುಗಳೊಂದಿಗೆ ಡಿಮ್ಯಾಟ್ ಖಾತೆಯನ್ನು ತೆರೆಯಬಹುದಾಗಿದೆ. ಅಂತಹ ಬ್ಯಾಂಕ್ ಗಳ ಪಟ್ಟಿ ಇಲ್ಲಿದೆ:
* ಅಲಹಾಬಾದ್ ಬ್ಯಾಂಕ್
* ಕೆನರಾ ಬ್ಯಾಂಕ್
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
* ದೇನಾ ಬ್ಯಾಂಕ್
* ಆಂಧ್ರ ಬ್ಯಾಂಕ್
* ಇಂಡಿಯನ್ ಬ್ಯಾಂಕ್
* ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್
* ಸಿಂಡಿಕೇಟ್ ಬ್ಯಾಂಕ್
* ವಿಜಯಾ ಬ್ಯಾಂಕ್
* ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
* ಇಂಡಿಯನ್ ಬ್ಯಾಂಕ್


Click it and Unblock the Notifications