
ಗ್ರಾಚುಟಿ ಅಧಿನಿಯಮ 1972ರ ಪ್ರಕಾರ ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ, ಹಲವು ವಿಧಾನಗಳಲ್ಲಿ ಗ್ರಾಚುಟಿ ಮೊತ್ತವನ್ನು ಲೆಕ್ಕಾ ಹಾಕಲಾಗುತ್ತದೆ. ಈಗ ಒಬ್ಬ ಉದ್ಯೋಗಿ ಗ್ರಾಚುಟಿ ಪೇಮೆಂಟ್ ಕಾಯ್ದೆ 1972ಗೆ ಒಳಪಟ್ಟಿದ್ದರೆ, 15 ದಿನಗಳ ಸಂಬಳದ ಗ್ರಾಚುಟಿ ಮೊತ್ತವನ್ನು ಉದ್ಯೋಗಿಯ ಅನುಭವದ ವರ್ಷಗಳ ಜೊತೆ ಗುಣಿಸಿ ಲೆಕ್ಕ ಹಾಕಲಾಗುತ್ತದೆ
ಸಂಬಳದ ಲೆಕ್ಕದಲ್ಲಿ ಮೂಲ ಸಂಬಳ, ಕೊನೆ ಬಾರಿ ಪಡೆದ ತುಟ್ಟಿಭತ್ಯೆ (DA) ಎಲ್ಲವೂ ಸೇರಿಸಲಾಗುತ್ತದೆ ನಂತರ ಮೊತ್ತವನ್ನು 26ರಿಂದ ಭಾಗಿಸಬೇಕಾಗುತ್ತದೆ.
ಉದಾಹರಣೆಗೆ: ಉದ್ಯೋಗಿಗೆ ಮೂಲ ಸಂಬಳ(basic pay) ಪ್ರತಿ ತಿಂಗಳು 10,000 ರು ಸಂಬಳ ಬರುತ್ತಿದೆ ಎಂದುಕೊಳ್ಳೋಣ. ಇದರ ಜೊತೆಗೆ ತುಟ್ಟಿಭತ್ಯೆ(dearness allowance) ಸೇರಿಸಬೇಕು. ಜೊತೆಗೆ 10 ವರ್ಷದ ಅನುಭವ ಸೇರಿಸಿಕೊಳ್ಳಿ.
ಗ್ರಾಚುಟಿ = ಕೊನೆ ಬಾರಿ ಪಡೆದ ಸಂಬಳ + 15/26 x ಔದ್ಯೋಗಿಕ ಅನುಭವ ವರ್ಷಗಳು
ಈ ಉದಾಹರಣೆಯಂತೆ= 10000x15/26x10 = Rs 57,692
ಒಂದು ವೇಳೆ ಉದ್ಯೋಗಿಯ ಅನುಭವ 4.5 ಅಥವಾ ನಾಲ್ಕು ಮುಕ್ಕಾಲು ವರ್ಷ ಇದ್ದರೆ ಅದನ್ನು ಹತ್ತಿರದ ಸಂಖ್ಯೆಗೆ ರೌಂಡ್ ಆಫ್ ಮಾಡಲಾಗುತ್ತದೆ. ಇದರ ಜೊತೆಗೆ ಸಂಸ್ಥಯಲ್ಲಿ ಉದ್ಯೋಗಿ ನಡೆದುಕೊಂಡ ರೀತಿ, ಉದ್ಯೋಗಿ ಪ್ರಗತಿ ವರದಿ, ಸಂಸ್ಥೆಗೆ ಹಾನಿ ಮಾಡಿದ್ದರೆ ಗ್ರಾಚುಟಿ ಮೊತ್ತ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.
ಗ್ರಾಚುಟಿ ಮೊತ್ತವನ್ನು ಪಡೆಯಲು ಕನಿಷ್ಠ 5 ವರ್ಷಗಳ ಒಂದೇ ಸಂಸ್ಥೆಯನ್ನು ಔದ್ಯೋಗಿಕ ಅನುಭವ ಪಡೆದಿರಬೇಕಾಗುತ್ತದೆ. ಆದರೆ, ಕರ್ತವ್ಯ ನಿರತ ಉದ್ಯೋಗಿ ಮೃತಪಟ್ಟ ಸಂದರ್ಭದಲ್ಲಿ ಒಂದು ವರ್ಷಗಳ ನಿಯಮ ಸಡಿಲಿಕೆಗೆ ಅವಕಾಶವಿದೆ. ನಿವೃತ್ತಿ ಹೊಂದುವ ತನಕ ಉದ್ಯೋಗದಾತರು ಉದ್ಯೋಗಿಗಳಿಗೆ ನೀಡುವ ಉತ್ತಮವಾದ ಸೌಲಭ್ಯವಾಗಿ ಗ್ರಾಚುಟಿ ಬಳಕೆಯಲ್ಲಿದೆ.


Click it and Unblock the Notifications