
ಕಾಳಧನ ಎಂದರೆ ಅಕ್ರಮವಾಗಿ ಕೂಡಿಟ್ಟ ಹಣ. ಲಂಚ, ವಂಚನೆ, ಇತರೆ ಕ್ರೈಂಗಳ ಮೂಲಕ ಸಂಗ್ರಹವಾದ ನಗದು ಹಣವನ್ನು ಬ್ಲ್ಯಾಕ್ ಮನಿ ಎನ್ನಬಹುದಾದರೆ ಈ ಬ್ಲ್ಯಾಕ್ ಮನಿಯನ್ನು ವೈಟ್ ಮನಿ ರೀತಿಯಲ್ಲಿ ತೋರಿಸುವುದನ್ನೇ ಮನಿ ಲಾಂಡ್ರಿಂಗ್ ಎನ್ನಲಾಗುತ್ತದೆ.
ಕಾಳಧನಕ್ಕೆ ಯಾವುದೇ ತೆರಿಗೆ ಕಟ್ಟುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆ ಕಣ್ಣಿಗೆ ಬಿದ್ದು ಹಣ ಜಪ್ತಿಯಾಗುವ ಭೀತಿ ಎದುರಾದಾಗ ಡರ್ಟಿ ಮನಿಯನ್ನು ಸ್ವಚ್ಛ ನಗದಾಗಿ ಪರಿವರ್ತಿಸಲು ಮನಿ ಲಾಂಡ್ರಿಂಗ್ ಬಳಸಲಾಗುತ್ತದೆ.
ಕರ್ನಾಟಕದಲ್ಲಿ ಗಣಿಗಾರಿಕೆ ದುಡ್ಡು, ಹಲವು ರಾಜಕಾರಣಿಗಳು ಮನಿ ಲಾಂಡ್ರಿಂಗ್ ನಲ್ಲಿ ಭಾಗಿಯಾಗಿರುವ ಬಗ್ಗೆ ಕೇಳಿರುತ್ತೀರಿ. ಇತ್ತೀಚೆಗೆ ಮನಿ ಲಾಂಡ್ರಿಂಗ್ ಖಾಸಗಿ ಬ್ಯಾಂಕಿಂಗ್ ವಲಯವನ್ನು ತಲ್ಲಣಗೊಳಿಸಿದೆ. ಅಕ್ರಮ ಹಣ ಸಂಗ್ರಹ, ರವಾನೆ ತಡೆಗಟ್ಟಲು ನಿಯಂತ್ರಣ ಸಂಸ್ಥೆಗಳು ಕಠಿಣ ಕ್ರಮಗಳನ್ನು ಜರುಗಿಸುತ್ತಿವೆ.
ಆದರೆ, ಮನಿ ಲಾಂಡ್ರಿಂಗ್ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಜಾಗತಿಕ ಪಿಡುಗಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮವನ್ನು ಬೀರಿದೆ. ಮನಿಲಾಂಡ್ರಿಂಗ್ ಪರಿಣಾಮದ ಬಗ್ಗೆ ಸ್ವಲ್ಪ ತಿಳಿದು ಕೊಳ್ಳೋಣ
ಮನಿ ಲಾಂಡ್ರಿಂಗ್ ಆರ್ಥಿಕವಾಗಿ ಭಾರಿ ಪರಿಣಾಮ ಬೀರುತ್ತದೆ. ಲಾಂಡ್ರಿಂಗ್ ಆದ ಹಣಕ್ಕೆ ಯಾವುದೇ ತೆರಿಗೆ ಪಾವತಿ ಆಗಿರುವುದಿಲ್ಲ. ಹೀಗಾಗಿ ಅದು ಲೆಕ್ಕಕ್ಕೆ ಸಿಗುವುದಿಲ್ಲ. ಕಾನೂನು ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳ ಮೂಲಕ ಈ ಹಣ ಎಲ್ಲೆಡೆ ಹರಿದಾಡುತ್ತದೆ. ಆದರೆ, ಮನಿ ಲಾಂಡ್ರಿಂಗ್ ಲಾಭ ಪಡೆಯುತಿರುವ ಕಂಪನಿಗಳು ಅಕಸ್ಮಾತ್ ಸಿಕ್ಕಿಬಿದ್ದರೆ ಅಥವಾ ದಿವಾಳಿಯಾದರೆ ಅಲ್ಲಿಗೆ ಕಥೆ ಮುಗಿದ ಹಾಗೆ ಲೆಕ್ಕ.
ಕಂಪನಿಯಾಗಲಿ, ಮನಿ ಲಾಂಡ್ರಿಂಗ್ ಮಾಡಿದ ವ್ಯಕ್ತಿಯಾಗಲಿ ಹೂಡಿಕೆ ಮಾಡಿದ ಹಣ ಯಾವುದೇ ಆರ್ಥಿಕ ಲಾಭ ಸಿಗದೆ ದೇಶಕ್ಕೆ ಹೊರೆಯಾಗುತ್ತದೆ. ತೆರಿಗೆ ಕೂಡಾ ಕಟ್ಟಿಲ್ಲದಿರುವುದರಿಂದ ಅನಗತ್ಯ ಆರ್ಥಿಕ ಹೊರೆ ಭಾರ ಜನ ಸಾಮಾನ್ಯರ ಮೇಲೂ ಬೀಳುತ್ತದೆ.
ಮನಿ ಲಾಂಡ್ರಿಂಗ್ ನಿಂದಾಗಿ ಸುಳ್ಳು ಸುಳ್ಳೆ ಬೇಡಿಕೆ ಹೆಚ್ಚಳ ಹಾಗೂ ಪೂರೈಕೆ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ಆರ್ಥಿಕ ಸಾಮಾಜಿಕ ಸಮತೋಲನ ವ್ಯತ್ಯಯವಾಗುತ್ತದೆ. ದೇಶದ ಜಿಡಿಪಿ, ಆಮದು ರಫ್ತು ಸೇರಿದಂತೆ ಅನೇಕ ಅಂಶಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಹಲವು ಕ್ರಿಮಿನಲ್ ಮೂಲಗಳಿಂದ ಸಂಗ್ರಹವಾದ ಹಣ ಲಾಂಡ್ರಿಂಗ್ ಆದಮೇಲೆ ಇನ್ನಷ್ಟು ಕ್ರಿಮಿನಲ್ ಚಟುವಟಿಕೆಗಳಿಗೆ ಉತ್ತೇಜಿಸುವ ಸಾಧ್ಯತೆ ಅಧಿಕವಾಗಿದೆ. ಯಾವುದೇ ದೇಶವಿರಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮನಿ ಲಾಂಡ್ರಿಂಗ್ ದೊಡ್ಡ ಪಿಡುಗಾಗಿ ಪರಿಣಮಿಸಿದ್ದು, ಭ್ರಷ್ಟಾಚಾರದ ಬೇರಾಗಿ ಎಲ್ಲೆಡೆ ವ್ಯಾಪಿಸುತ್ತಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications