ಷೇರಲ್ಲಿ ಹಣ ಹೂಡುವ ಮುನ್ನ ಈ 5 ಸಂಗತಿ ತಲೆಯಲ್ಲಿರಲಿ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಸರಳ ಮತ್ತು ಸುಲಭ. ಆದರೆ ಎಲ್ಲಾ ಷೇರುಗಳು ನಿಮಗೆ ಹಣ ತಂದು ಕೊಟ್ಟೇ ಬಿಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ದಶಕಗಳ ಕಾಲ ಮಾರುಕಟ್ಟೆಯನ್ನು ಅಭ್ಯಸಿಸಿ ಆಳಿದಂಥ ವಾರೆನ್ ಬಫೆಟ್ ಅಥವಾ ಬಿಲೆನಿಯರ್ ಹೂಡಿಕೆದಾರ ರಾಕೇಶ್ ಝುನ್ ಝುವಾಲಾರಂಥವರು ಅಳವಡಿಸಿಕೊಂಡ ನೀತಿಯನ್ನು ನಾವು ಕಲಿಯಬೇಕಾಗುತ್ತದೆ.

ಷೇರಲ್ಲಿ ಹಣ ಹೂಡುವ ಮುನ್ನ ಈ 5 ಸಂಗತಿ ತಲೆಯಲ್ಲಿರಲಿ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಮುನ್ನ ಈ 5 ಅಂಶಗಳು ತಲೆಯಲ್ಲಿರಲಿ
ಸೆಕ್ಟರ್ ಲೀಡರ್ ಅಥವಾ ಕಂಪನಿ ಬ್ರ್ಯಾಂಡ್ ಮನಗಾಣಿಸಿಕೊಳ್ಳಿ
ಹಣ ಹೂಡುವ ಮುನ್ನ ಸಂಸ್ಥೆ ಯಾವುದು ಎಂಬುದನ್ನು ಗಮನ ಹರಿಸಬೇಕಾಗುತ್ತದೆ. ಎಂಟು ವರ್ಷಗಳ ಹಿಂದೆ ಎಲ್ ಆಂಡ್ ಟಿ ದಲ್ಲಿ ಹಣ ಹೂಡಿದವರಿಗೆ ನಷ್ಟವಾಗಲಿಲ್ಲ. ಆದರೆ ಅದೇ ವೇಳೆಗೆ ಜಯಪ್ರಕಾಶ ಅಸೋಸಿಯೆಟ್ಸ್ ನಲ್ಲಿ ಹಣ ಹೂಡಿದವರು ನಷ್ಟ ಮಾಡಿಕೊಳ್ಳಬೇಕಾಯಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏಳು ಬೀಳುಗಳು ದೇಶಿಯ ಕಂಪನಿಯನ್ನು ಸಂಪೂರ್ಣ ನಷ್ಟಕ್ಕೆ ದೂಡಿಬಿಡಬಹುದು.[ತರಂಗಾಂತರ ಹಂಚಿಕೆ ನಂತರ ಮೊಬೈಲ್ ದರ ದುಪ್ಪಟ್ಟು?]

ಕಂಪನಿಯ ಸಂಭಾವ್ಯ ಅಭಿವೃದ್ಧಿ ಲೆಕ್ಕ ಹಾಕಬೇಕು
ರಾಕೇಶ್ ಝುನ್ ಝುವಾಲಾ ಟೈಟಾನ್ ಕಂಪನಿ ಏಳಿಗೆ ಸಾಧಿಸುತ್ತದೆ ಎಂಬುದನ್ನು ಮೊದಲೇ ಕಂಡುಕೊಂಡಿದ್ದರು. ಕಂಪನಿಯ ಬಹುಪಾಲು ಷೇರುಗಳನ್ನು ಖರೀದಿಸಿದರು. ಟೈಟಾನ್ ಜನಪ್ರಿಯಯವಾಗುತ್ತಿದ್ದಂತೆ ಷೇರುದಾರರಿಗೂ ಹಣ ಸಂದಾಯವಾಗತೊಡಗಿತು. ಮೊದಲು ಕೈಗಡಿಯಾರ ತಯಾರಿಕೆ ಕಂಪನಿಯಾಗಿದ್ದ ಟೈಟಾನ್ ನಿಧಾನವಾಗಿ ಆಭರಣ, ಕನ್ನಡಕ ಮತ್ತಿತರ ವ್ಯಾಪಾರಗಳ ಮೇಲೂ ಬಂಡವಾಳ ಹೂಡಿ ಯಶಸ್ಸು ಸಾಧಿಸಿತು.

ಸಾಲ ಹೊಂದಿರುವ ಕಂಪನಿ ಷೇರು ಬೇಡ
ಸಾಲ ಹೊಂದಿದ ಕಂಪನಿಯ ಷೇರುಗಳನ್ನು ಯಾವ ಕಾರಣಕ್ಕೂ ಖರೀದಿ ಮಾಡಬೇಡಿ. ಕೈಗಾರಿಕೆ ಮತ್ತು ಉಕ್ಕಿನ ಉದ್ಯಮದ ಅನೇಕ ಕಂಪನಿಗಳು ಅತಿಯಾದ ಸಾಲ ಹೊಂದಿವೆ. ಯಾವ ಕಂಪನಿಯ ಸಾಲ ಕಡಿಮೆ ಇರುವುದು ಎಂಬುದನ್ನು ಗಮನಿಸಿ ಹೆಜ್ಜೆ ಇಡುವುದು ಉತ್ತಮ. ಕಿಂಗ್ ಫಿಶರ್ ಏರ್ ಲೈನ್ಸ್ ನಂಥ ಕಂಪನಿಯ ಷೇರು ತೆಗೆದುಕೊಂಡರೆ ನಷ್ಟ ಕಟ್ಟಿಟ್ಟ ಬುತ್ತಿ.[ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಡುವಿನ ವ್ಯತ್ಯಾಸವೇನು?]

ಸಕಾರಾತ್ಮಕ ಹಣ ಚಲಾವಣೆಗೆ ಗಮನ ನೀಡಿ
ಕಂಪನಿಯ ಹಣ ಸಂದಾಯದ ರೀತಿಯನ್ನು ಗಮನಿಸುವುದು ಮುಖ್ಯವಾಗುತ್ತದೆ. ಹಣ ಸಂದಾಯದ ರೀತಿ ಸರಿಯಾಗಿದ್ದರೆ ಅಥವಾ ಕಾನೂನಿಗೆ ಅನುಗುಣವಾಗಿದ್ದರೆ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ.

ಹಿನ್ನೆಲೆ ಅರಿತುಕೊಳ್ಳಿ
ಹಣ ಹೂಡುವುದಕ್ಕಿಮತ ಮುನ್ನ ಕಂಪನಿಯ ಹಿನ್ನೆಲೆಯೂ ಅಷ್ಟೇ ಮುಖ್ಯವಾಗುತ್ತದೆ. ಹಣ ಹೂಡಿಕೆ ಮಾಡಲು ಇಚ್ಛಿಸಿರುವ ಕಂಪನಿ ಉಳಿದ ಕಂಪನಿಗಳೊಂದಿಗೆ ಹೊಂದಿರುವ ಸಂಬಂಧ, ಮಾರುಕಟ್ಟೆಯಲ್ಲಿ ಅದರ ಸ್ಥಿತಿಗತಿ ಮುಂತಾದವುಗಳನ್ನು ಅರಿತುಕೊಳ್ಳಬೇಕಾಗುತ್ತದೆ.

ಕೊನೆಮಾತು
ಇವು ಕೇವಲ ಮೂಲಭೂತ ಸಂಗತಿಗಳು. ಷೇರಿನ ಮೇಲೆ ಹಣ ಹೂಡುವ ಮುನ್ನ ಇನ್ನು ಅನೇಕ ವಿಷಯಗಳನ್ನು ಅಭ್ಯಸಿಸಬೇಕಾಗುತ್ತದೆ. ನಿರ್ದಿಷ್ಟ ರೀತಿಯ ವಿಶ್ಲೇಷಣೆ ಮೂಲಕ ಅಂತಿಮ ತೀರ್ಮಾನಕ್ಕೆ ಬರಬೇಕಾಗುತ್ತದೆ.(ಗುಡ್ ರಿಟರ್ನ್ಸ್.ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+