ನಿಮ್ಮ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡಿ ಮತ್ತೊಂದು ಹೊಸ ಖಾತೆ ತೆರೆಯಲು ಯೋಚಿಸುತ್ತಿದ್ದೀರಾ? ಹಾಗಾದರೆ ಈ ಖಾತೆ ಬದಲಾವಣೆ ನಿಜವಾಗಿ ನಿಮಗೆ ಲಾಭ ತರುತ್ತದೆಯೇ? ಇಲ್ಲವೇ? ಎಂಬುದನ್ನು ನೋಡಿಕೊಳ್ಳಬೇಕಾಗುತ್ತದೆ.
ಈ ಬಗ್ಗೆ ಒಂದಿಷ್ಟು ಮಾಹಿತಿ ಕಲೆಹಾಕಿ, ಪರಶೀಲನೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಬೇಕಾಗುತ್ತದೆ. ನಿಮಗೆ ಲಾಭ ಎಂದೆನಿಸಿದರೆ ಮಾತ್ರ ಖಾತೆ ಬದಲಾವಣೆ ಮಾಡುಕೊಳ್ಳುವುದು ಉತ್ತಮ. ಹಾಗಾದರೆ ನಿಮ್ಮ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ...[ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಹೇಗೆ?]

1. ಸ್ವಯಂ ಚಾಲಿತ ಪಾವತಿಗಳಿಗೆ ಅಂತ್ಯ ಹಾಡಿ
ವಿವಿಧ ಸಂಗತಿಗಳಿಗೆ ಸಂಬಂಧಿಸಿ ಬ್ಯಾಂಕ್ ಗೆ ನಿಮ್ಮಿಂದ ಸ್ವಯಂಚಾಲಿತವಾಗಿ ಹಣ ಪಾವತಿಯಾಗುತ್ತಿದ್ದರೆ ಮೊದಲು ಅದನ್ನು ನಿಲ್ಲಿಸಲು ಬ್ಯಾಂಕ್ ಗೆ ಅರ್ಜಿ ಸಲ್ಲಿಸಿ. ನಿಮ್ಮಿಂದ ಅಥವಾ ನಿಮಗೆ ಸಲ್ಲಿಕೆಯಾಗಬೇಕಿರುವ ಯಾವುದೆ ರೀತಿಯ ಹಣವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ.
2. ನಿಮ್ಮ ಖಾತೆಯ ಎಲ್ಲ ವಿವರ ಪಡೆದುಕೊಳ್ಳಿ
ಈ ಹಂತವನ್ನು ಯಾವ ಕಾರಣಕ್ಕೂ ಮರೆಯಬೇಡಿ. ನಿಮ್ಮ ಉಳಿಯತಾಯ ಖಾತೆಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಳ್ಳಿ. ಅಗತ್ಯವಿದ್ದರೆ ಒಂದು ಸಾಫ್ಟ್ ಕಾಪಿ ಇಲ್ಲವೇ ಪ್ರಿಂಟ್ ಔಟ್ ತಡೆಗೆದಿಟ್ಟುಕೊಳ್ಳಿವುದು ಒಳಿತು.[ಆದಾಯ ತೆರಿಗೆ ರಿಫಂಡ್ ಚೆಕ್ ಹಿಂದಕ್ಕೆ ಪಡೆಯುವುದು ಹೇಗೆ?]
3. ಹೊಸ ಖಾತೆ ತೆರೆಯಿರಿ
ನಿಮಗಿಷ್ಟವಾದ ಬ್ಯಾಂಕ್ ನಲ್ಲಿ ಹೊಸ ಖಾತೆಯನ್ನು ತೆರೆಯಿರಿ. ಆದರೆ ನಿಮಗೆ ಡೆಬಿಟ್ ಕಾರ್ಡ್, ಪಿನ್ ಮತ್ತು ಚೆಕ್ ಬುಕ್ ಸಿಗುವವರೆಗೆ ಯಾವ ಕಾರಣಕ್ಕೂ ಅಷ್ಟೂ ಹಣವನ್ನು ಟ್ರಾನ್ಸ್ ಫರ್ ಮಾಡಬೇಡಿ.
4. ಬ್ಯಾಲೆನ್ಸ್ ಪರಿಶೀಲನೆ
ನಿಮ್ಮ ಖಾತೆಯ ಮಾಹಿತಿ ಸರಿಯಾಗಿ ಹೊಂದಾಣಿಕೆಯಾಗುತ್ತಿಲ್ಲವಾದರೆ, ಅಥವಾ ನೀವೇ ಬ್ಯಾಂಕ್ ಗೆ ಹಣ ಪಾವತಿಸುವ ಸ್ಥಿತಿಯಿದ್ದರೆ ಖಾತೆ ಕ್ಲೋಸ್ ಮಾಡಲು ಸಾಧ್ಯವಿಲ್ಲ. ಬ್ಯಾಂಕ್ ಗಳು ಸೂಚಿಸಿದಂತೆ ಮಿನಿಮಮ್ ಬ್ಯಾಲೆನ್ಸ್ ಇದ್ದರೆ ಮಾತ್ರ ಖಾತೆಗೆ ಅಂತ್ಯ ಹಾಡಲು ಸಾಧ್ಯವಾಗುತ್ತದೆ.
5. ಆಟೊ ಪೆಮೆಂಟ್ ಸೆಟ್ ಅಪ್
ಹಳೆ ಖಾತೆಯನ್ನು ಕ್ಲೋಸ್ ಮಾಡುವ ಮುನ್ನ ಹೊಸ ಖಾತೆಗೆ ಸ್ವಯಂಚಾಲಿತ ಹಣ ಪಾವತಿ ವಿಧಾನವನ್ನು ಅಳವಡಿಕೆ ಮಾಡಲಾಗಿದೆಯೇ? ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇಲ್ಲಿ ನಿಮ್ಮ ವಿದ್ಯುತ್ ಬಿಲ್ ಪಾವತಿ, ಕ್ರೆಡಿಟ್ ಕಾರ್ಡ್ ಬಿಲ್ ನಂಥವು ಮಿಸ್ ಆಗುವ ಸಾಧ್ಯತೆಯಿರುತ್ತದೆ.
6. ಅಕೌಂಟ್ ನಂಬರ್ ಬಳಕೆ
ನಿಮ್ಮ ಹೊಸ ಖಾತೆಯ ನಂಬರ್ ಅನ್ನು ಕೆಲಸ ಮಾಡುತ್ತಿರುವ ಕಂಪನಿಗೆ ಮೊದಲು ನೀಡಿ. ಸುಲಭವಾಗಿ ನಿಮ್ಮ ವೇತನದ ಹಣ ಯಾವುದೇ ಗೊಂದಲವಿಲ್ಲದೇ ಖಾತೆ ಸೇರಲು ಇದು ನೆರವಾಗುತ್ತದೆ. ಉಳಿದಂತೆ ಅಗತ್ಯವಿರುವೆಡೆ ನಿಮ್ಮ ಹೊಸ ಖಾತೆ ಸಂಖ್ಯೆ ನೀಡಲು ಮರೆಯಬೇಡಿ.
ಈ ಎಲ್ಲ ಮಾಹಿತಿಗಳನ್ನು ಇನ್ನೊಮ್ಮೆ ಪರಿಶೀಲಿಸಿ, ಎಲ್ಲವೂ ಸರಿಯಾಗಿದೆ ಎಂದು ದೃಢಪಟ್ಟ ನಂತರವಷ್ಟೇ ನಿಮ್ಮ ಹಳೆಯ ಬ್ಯಾಂಕ್ ಶಾಖೆಗೆ ತೆರಳಿ ಅಕೌಂಟ್ ಕ್ಲೋಸ್ ಮಾಡುವಂತೆ ತಿಳಿಸಿ.


Click it and Unblock the Notifications