ಇಂದು ಎಲ್ಲರೂ ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಕೆಲವೊಬ್ಬರು ಅದರ ಮೇಲಿರುವ 16 ಅಂಕೆಗಳನ್ನು ನೆನಪಿನಲ್ಲೂ ಇಟ್ಟುಕೊಂಡಿರುತ್ತಾರೆ. ಆದರೆ ನಿಜಕ್ಕೂ ಈ ಅಂಕೆಗಳು ಏನನ್ನು ಸೂಚಿಸುತ್ತವೆ? ಎಂದು ಹಲವರಿಗೆ ಗೊತ್ತಿರುವುದಿಲ್ಲ. ಇದರ ಮಹತ್ವ ಏನು? ಎಂಬುದನ್ನು ತಿಳಿದುಕೊಂಡಿರುವುದಿಲ್ಲ.
ಕ್ರೆಡಿಟ್ ಕಾರ್ಡ್ ಮೇಲೆ ಇರುವ ಅಂಕೆಗಳು ಸುಮ್ಮನೆ ದಾಖಲೆಗೆ ಇಟ್ಟುಕೊಂಡಿರುವುದಲ್ಲ. ಪ್ರತಿಯೊಂದು ಸಂಖ್ಯೆಯೂ ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಅನೇಕ ದೇಶಗಳು ಎಎನ್ ಎಸ್ ಐ ಸ್ಟಾಂಡರ್ಡ್ ನ ಏಕ್ಸ್ 4.13-1983 ಮಾದರಿಯನ್ನು ಬಳಕೆ ಮಾಡುತ್ತಿವೆ. ಅಲ್ಲದೇ ಬಿಲ್ ಪಾವತಿ ವೇಳೆ ಈ ಅಂಕೆಗಳು ಯಾವ ಪಾತ್ರ ವಹಿಸುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.[ಪಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]

ಕ್ರೆಡಿಟ್ ಕಾರ್ಡ್ ನಂಬರ್ ಸಂಖ್ಯೆಗಳ ಗಾತ್ರವು ಬ್ಯಾಂಕ್ ನಿಂದ ಬ್ಯಾಂಕ್ ಗೆ ಭಿನ್ನವಾಗಿರಬಹುದು. ಸಾಮಾನ್ಯವಾಗಿ 16 ಅಂಕೆಗಳನ್ನು 4 ರ ಗುಂಪುಗಳಾಗಿ ವಿಂಗಡಿಸಲಾಗಿರುತ್ತದೆ. ಮೊದಲನೇ ಸಂಖ್ಯೆ ಎಂಐಐ(ಮೇಜರ್ ಇಂಡಸ್ಟ್ರಿ ಐಡೆಂಟಿಫೈಯರ್) ನ್ನು ಸೂಚಿಸುತ್ತದೆ.
ಎಲ್ಲಿ ಕಾರ್ಡ್ ನ್ನು ಹೆಚ್ಚು ಬಳಕೆ ಮಾಡಬಹುದು? ಕಾರ್ಡ್ ಯಾವ ಬಗೆಯ ಗ್ರಾಹಕನಿಗೆ ಸಂಬಂಧಿಸಿದ್ದು ಎಂಬುದನ್ನು ಮೊದಲನೇ ಗುಂಪಿನ ಅಂಕೆಗಳು ಸೂಚಿಸುತ್ತವೆ. ಉದಾಹರಣೆಗೆ 1 ಅಥವಾ 2 ಸಂಖ್ಯೆಯಿಂದ ಕಾರ್ಡ್ ಆರಂಭವಾದರೆ ಇದನ್ನು ಏರ್ ಲೈನ್ಸ್ ಅಥವಾ ಆ ಬಗೆಯ ಸಂಸ್ಥೆಗಳು ವಿತರಣೆ ಮಾಡಿವೆ ಎಂದು ತಿಳಿದುಕೊಳ್ಳಬೇಕು. ಉಳಿದ ಅಂಕೆಗಳು ಏನನ್ನು ಸೂಚಿಸುತ್ತವೆ ಎಂಬುದನ್ನು ಅರಿತಿಟ್ಟುಕೊಳ್ಳಬೇಕು.[ಭಾರತದಲ್ಲಿ ಇ-ಇನ್ಶೂರೆನ್ಸ್ ಖಾತೆ ತೆರೆಯುವುದು ಹೇಗೆ?]
3 - ಅಮೆರಿಕನ್ ಏಕ್ಸ್ಪ್ರೆಸ್, ಡಿನ್ನರ್ ಕ್ಲಬ್
4 - ವೀಸಾ ಕಾರ್ಡ್ (ಬ್ಯಾಂಕಿಂಗ್ ಮತ್ತು ಹಣಕಾಸು ಬ್ಯಾಂಕಿಂಗ್)
5 - ಮಾಸ್ಟರ್ ಕಾರ್ಡ್ (ಬ್ಯಾಂಕಿಂಗ್ ಮತ್ತು ಹಣಕಾಸು ಬ್ಯಾಂಕಿಂಗ್)
6 - ಡಿಸ್ಕವರ್ ಕಾರ್ಡ್ (ವ್ಯಾಪಾರ, ಬ್ಯಾಂಕಿಂಗ್ ಮತ್ತು ಹಣಕಾಸು ಬ್ಯಾಂಕಿಂಗ್)
7 - ಪೆಟ್ರೋಲಿಯಂ ಕಾರ್ಡ್
8 - ಟೆಲಿಕಮ್ಯೂನಿಕೆಶನ್ ಕಾರ್ಡ್
9 - ರಾಷ್ಟ್ರೀಯ ಹುದ್ದೆ
ಎರಡನೇ ಗುಂಪು
2 ರಿಂದ 6ರವರೆಗಿನ ಸಂಖ್ಯೆಗಳು ವಿತರಣೆ ಮಾಡಿರುವ ಸಂಸ್ಥೆಯ ಗುರುತು(ಐಐಎನ್) ತಿಳಿಸುತ್ತದೆ. ಯಾವ ಬ್ಯಾಂಕ್ ಕಾರ್ಡ್ ವಿತರಿಸಿದೆ ಎಂಬ ಮಾಹಿತಿಯೂ ಇರುತ್ತದೆ. ಅಲ್ಲದೇ ರಾಷ್ಟ್ರೀಯತೆನ್ನು ಉಲ್ಲೇಖ ಮಾಡಿರಲಾಗುತ್ತದೆ.
ಮೂರನೇ ಗುಂಪು
6 ನೇ ನಂಬರ್ ನಿಂದ ಕೊನೆಯ ಅಂಕೆ ಒಂದನ್ನು ಬಿಟ್ಟು ಉಳಿದವು ನಿಮ್ಮ ಅಕೌಂಟ್ ನಂಬರ್ ತಿಳಿಸುತ್ತವೆ.[ಗ್ರಾಚುಟಿ ಲೆಕ್ಕಾಚಾರ ಹೇಗೆ ಮಾಡೋದು]
ನಾಲ್ಕನೇ ಗುಂಪು
ಯಾವುದೇ ಕ್ರೆಡಿಟ್ ಕಾರ್ಡ್ ನ ಕೊನೆ ಅಂಕೆ ಚೆಕ್ ಡಿಜಿಟ್ ಎಂದು ಕರೆಸಿಕೊಳ್ಳುತ್ತದೆ. ಮೇಲಿನ ಎಲ್ಲ ಅಂಕೆಗಳು ಆನ್ ಲೈನ್ ನಲ್ಲಿ ದೂರವಾಣಿ ನಂಬರ್ ರೀತಿಯಲ್ಲೇ ಕಾರ್ಯನಿರ್ವಹಿಸುತ್ತವೆ. ವ್ಯಾಪಾರಿ ಮಳಿಗೆಗಳಲ್ಲಿ ಬಿಲ್ ಪಾವತಿ ಮಾಡುವಾಗ ಎಲ್ಲ ಸಂಖ್ಯೆಗಳು ಒಂದಿಲ್ಲೊಂದು ಸಂದರ್ಭದಲ್ಲಿ ಬೇಕಾಗುತ್ತವೆ.(ಗುಡ್ ರಿಟರ್ನ್ಸ್.ಇನ್)


Click it and Unblock the Notifications