ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಉಳಿತಾಯ ವ್ಯವಸ್ಥೆಗೆ ಹೊಸ ಅರ್ಥ ನೀಡಿದೆ. ರಾಷ್ಟ್ರೀಯ ಪೆನ್ಶನ್ ಯೋಜನೆಯಲ್ಲಿ ಹಣ ಹೂಡಲು ಇದು ಸೂಕ್ತ ಕಾಲವಾಗಿದ್ದು ಶೇ. 30 ಕ್ಕೂ ಅಧಿಕ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿದೆ. ಸರಿಯಾದ ಹೂಡಿಕೆ ಮಾಡಿದರೆ ಪ್ರತಿವರ್ಷ 15, 450 ರೂ. ಉಳಿತಾಯ ಮಾಡಬಹುದು.
ನ್ಯಾಷನಲ್ ಪೆನ್ಶನ್ ಸ್ಕೀಮ್ ಅಥವಾ ಎನ್ ಪಿಎಸ್ ನ್ನು ಪಿಎಫ್ ಆರ್ ಡಿ ಎ ( Retirement living Finance Regulating Growth Power) ನಿರ್ವಹಿಸುತ್ತದೆ. ಹಣ ಹೂಡಿಕೆ ಅಥವಾ ಪ್ರಿಮಿಯಂ ವ್ಯವಸ್ಥೆಯಲ್ಲೂ ಆಯ್ಕೆಗಳಿದ್ದು ಕನಿಷ್ಠ 500 ರೂ. (ಟೈರ್ 1) ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ಸಾವಿರ ರೂ.ನ ಟೈರ್ 2 ಪದ್ಧತಿಯನ್ನು ಜಾರಿ ಮಾಡುವ ಚಿಂತನೆಯನ್ನು ಬಜೆಟ್ ನಲ್ಲಿ ವ್ಯಕ್ತಪಡಿಸಲಾಗಿದೆ.[ಕ್ರೆಡಿಟ್ ಕಾರ್ಡ್ ಮೇಲಿರುವ ಅಂಕೆಗಳು ಏನನ್ನು ಸೂಚಿಸುತ್ತವೆ?]

ನಿವೃತ್ತಿ ನಂತರ ನೀವು ಮೊತ್ತದ ಶೇ. 60 ರಷ್ಟನ್ನು ವಿತ್ ಡ್ರಾ ಮಾಡಲು ಸಾಧ್ಯವಿದೆ. ವರ್ಷದ ಲೆಕ್ಕದಲ್ಲಿ ನಿಮ್ಮ ಹಣ ಶೇಖರಣೆಯಾಗಿರುತ್ತದೆ. ಅದು ಮಾಸಿಕ ಕಂತುಗಳ ರೂಪದಲ್ಲಿ ಕೈ ಸೇರುತ್ತಿರುತ್ತದೆ.
ಖಾತೆ ತೆರೆಯುವುದು ಹೇಗೆ?
ಭಾರತದ ನಾಗರಿಕ ಅಥವಾ ಭಾರತದ ಹೊರಗೆ ಕೆಲಸ ಮಾಡುತ್ತಿರುವವರು ಖಾತೆ ತೆರೆಯಬಹುದು. ಖಾತೆ ತೆರೆಯುವ ವ್ಯಕ್ತಿಯ ವಯಸ್ಸು 18 ರಿಂದ 55 ವರ್ಷದ ಒಳಗೆ ಇರಬೇಕು.[ಪಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]
1. ಎನ್ ಪಿಎಸ್ ಅರ್ಜಿ ಯನ್ನು ಆನ್ ಲೈನ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಿ
2. ಎನ್ ಪಿಎಸ್ ಹೆಸರಿನಲ್ಲಿ ಚೆಕ್ ನೀಡಿಕೆ ಮಾಡಬೇಕು.
3. ಪೆನ್ಶನ್ ಫಂಡ್ ಮ್ಯಾನೇಜರ್ ಆಯ್ಕೆಯಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗುತ್ತದೆ.(ಪಟ್ಟಿ ಮುಂದೆ ಇದೆ)
4. ಹಣ ಹೂಡಿಕೆ ಆಯ್ಕೆಯನ್ನು ತೀರ್ಮಾನ ಮಾಡಿಕೊಳ್ಳಬೇಕಾಗುತ್ತದೆ.
5. ಅಗತ್ಯವಿರುವ ಕೆವೈಸಿ ದಾಖಲೆಗಳನ್ನು ನೀಡಬೇಕಾಗುತ್ತದೆ.
ಇದರ ಜತೆಗೆ ಗುರುತಿನ ಚೀಟಿ, ದಾಖಲೆಗಳು, ಕೆಲಸಕ್ಕೆ ಸೇರಿದ ದಿನಾಂಕ, ಎರಡು ಪಾಸ್ ಪೋರ್ಟ್ ಸೈಜಿನ ಫೋಟೋ ಲಗತ್ತಿಸಬೇಕಾಗುತ್ತದೆ.
ನೀವು ಆಯ್ಕೆ ಮಾಡಿಕೊಳ್ಳುವ ಯೋಜನೆಗೆ ಸಂಬಂಧಿಸಿದ ದಾಖಲಾತಿಗಳನ್ನು ದೃಢೀಕರಣ ಮಾಡಿ ನೀಡಬೇಕಾಗುತ್ತದೆ. ಒಮ್ಮೆ ನೀವು ಎನ್ ಪಿಎಸ್ ಖಾತೆ ತೆರೆದಿರಿ ಎಂಥಾದರೆ ನಿಮಗೆ 16 ಅಂಕಿಗಳ ಒಂದು ನಂಬರ್ ನೀಡಲಾಗುತ್ತದೆ, ಇದನ್ನು Long lasting Retirement living Consideration Variety (PRAN)' ಎಂದು ಕರೆಯಲಾಗುತ್ತದೆ.
ಪೆನ್ಶನ್ ಫಂಡ್ ಮ್ಯಾನೇಜರ್ ವಿಭಾಗಗಳ ಪಟ್ಟಿ
1. ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ
2. ಕೋಟಕ್ ಮಹಿಂದ್ರಾದ ಅಸೆಟ್ ಮ್ಯಾನೆಜ್ ಮೆಂಟ್
3. ಐಡಿಎಫ್ ಸಿ ಯ ಅಸೆಟ್ ಮ್ಯಾನೆಜ್ ಮೆಂಟ್ ಸ್ಕೀಮ್
4. ಎಸ್ ಬಿಐ ಪೆನ್ಶನ್ ಫಂಡ್ ಲಿಮಿಟೆಡ್
5. ರಿಲಾಯನ್ಸ ಕ್ಯಾಪಿಟಲ್ ಕಂಪನಿ ವಿಮೆ
6. ಯುಟಿಐ ರಿಟೈರ್ ಮೆಂಟ್ ಸೊಲ್ಯೂಷನ್ ಲಿಮಿಟೆಡ್
ಈ ಬಗೆಯ ಹೊಲವಾರು ಯೋಜನೆಗಳು ಜಾರಿಯಲ್ಲಿದ್ದರೂ ಸಾಧಕ ಬಾಧಕಗಳನ್ನು ಅರಿತು ಮುಂದೆ ಹೆಜ್ಜೆ ಇಡಬೇಕಾಗುತ್ತದೆ. (ಗುಡ್ ರಿಟರ್ನ್ಸ್, ಇನ್)
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications