ಪ್ರಧಾನಿ ನರೇಂದ್ರ ಮೋದಿ ಬುಧವಾರ 'ಮೈಕ್ರೋ ಯುನಿಟ್ಸ್ ಡೆವಲಪ್ವೆುಂಟ್ ಆಂಡ್ ರಿಫೈನಾನ್ಸ್ ಏಜೆನ್ಸಿ' ಅಥವಾ 'ಮುದ್ರಾ' ಬ್ಯಾಂಕ್ ಗೆ ನವದೆಹಲಿಯಲ್ಲಿ ಚಾಲನೆ ನೀಡಿದ್ದಾರೆ.
ಪ್ರಧಾನ ಮಂತ್ರಿ ಜನಧನ ಯೋಜನೆಗೆ ಪೂರಕವಾಗಿ ಕೆಲಸ ಮಾಡಲಿರುವ ಹೊಸ ಬ್ಯಾಂಕ್ ನ ಗುಣಲಕ್ಷಣಗಳು ಏನು? ಏತಕ್ಕಾಗಿ ಬ್ಯಾಂಕ್ ತೆರೆಯಲಾಗಿದೆ? ಯಾರು ಲಾಭ ಪಡೆದುಕೊಳ್ಳಬಹುದು? ದೇಶದ ಅರ್ಥ ವ್ಯವಸ್ಥೆಯಲ್ಲಿ ಇದರ ಪಾತ್ರವೇನು? ಎಂಬುದರ ಮೇಲೆ ಗಮನ ಹರಿಸುವುದು ಅಗತ್ಯವಾಗುತ್ತದೆ.[ನ್ಯಾಶನಲ್ ಪೆನ್ಶನ್ ಸ್ಕೀಮ್ ಖಾತೆ ತೆರೆಯುವುದು ಹೇಗೆ?]

ಒಂದೇ ವಾಕ್ಯದಲ್ಲಿ ಹೇಳಬೇಕು ಅಂದರೆ ಬ್ಯಾಂಕ್ ಸಣ್ಣ ಉದ್ದಿಮೆಗಳ ವ್ಯಾಪಾರ, ಉತ್ಪಾದನೆ ಮತ್ತು ಪ್ರೋತ್ಸಾಹಕ್ಕೆ ನೆರವು ನೀಡುತ್ತದೆ.
* ಮೈಕ್ರೋ ಯುನಿಟ್ಸ್ ಡೆವಲಪ್ವೆುಂಟ್ ಆಂಡ್ ರಿಫೈನಾನ್ಸ್ ಏಜೆನ್ಸಿ' ಅಥವಾ 'ಮುದ್ರಾ' ಎಂದು ಹೊಸ ಬ್ಯಾಂಕ್ ನ್ನು ಕರೆಯಲಾಗಿದೆ.
* ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ಸಹಾಯ ನೀಡುವುದು ಧ್ಯೇಯ. ಇದಕ್ಕೆ ಜನಧನ ಯೋಜನೆಯ ನೆರವನ್ನು ಪಡೆದುಕೊಳ್ಳಲಾಗುವುದು.
* ಪ್ರಮುಖವಾಗಿ ಮೂರು ಬಗೆಯ ಸಾಲಗಳನ್ನು ನೀಡಲಾಗುತ್ತಿದೆ.[ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?]
* 'ಶಿಶು', 'ಕಿಶೋರ' ಮತ್ತು 'ತರುಣ' ಎಂಬ ಹೆಸರಿನಲ್ಲಿ 5 ಸಾವಿರದಿಂದ 10 ಲಕ್ಷ ರೂ, ವರೆಗೆ ಸಾಲ ನೀಡುವ ಚಿಂತನೆಯಿದೆ.
* ಶಿಶು- 50 ಸಾವಿರ ರೂ. ವರೆಗೆ ಸಾಲ
* ಕಿಶೋರ- 50 ಸಾವಿರದಿಂದ 5 ಲಕ್ಷದವರೆಗೆ ಸಾಲ
* ತರುಣ- 5 ಲಕ್ಷದಿಂದ 10 ಲಕ್ಷದವರೆಗೆ ಸಾಲ
* ದೇಶದ ಅಭಿವೃದ್ಧಿ ದೃಷ್ಟಿಯಲ್ಲಿ ಎಲ್ಲ ಬಗೆಯ ಸಣ್ಣ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವುದೇ ಬ್ಯಾಂಕ್ ನ ಧ್ಯೇಯ
* ಮುದ್ರಾ ಕಾರ್ಡ್, ಕ್ರೆಡಿಟ್ ಗ್ಯಾರಂಟಿ ಮುಂತಾದ ಯೋಜನೆಗಳ ಮುಖಾಂತರ ಗ್ರಾಹಕರನ್ನು ಸೆಳೆಯಲಾಗುವುದು.
* ಸಮಾಜದ ಮುಖ್ಯವಾಹಿನಿಯಿಂದ ದೂರವಾಗುತ್ತಿರುವ ವಿದ್ಯಾವಂತ ಯುವಕರು ಯೋಜನೆಯ ಟಾರ್ಗೆಟ್. ಮಹಿಳೆಯರ ಅಭಿವೃದ್ಧಿಯ ಗುರಿಯೂ ಇದರ ಹಿಂದೆ ಅಡಗಿದೆ.[ಜನಧನ ಯೋಜನೆಯಡಿ ಜೀವ ವಿಮಾ ಸೌಲಭ್ಯ]
* ದೇಶದೆಲ್ಲೆಡೆ ಇರುವ ಸುಮಾರು 5.77 ಕೋಟಿ ಸಣ್ಣ ಉದ್ದಿಮೆಗಳಿಗೆ ಪ್ರೋತ್ಸಾಹ ಮತ್ತು ಭದ್ರತೆ ಯೋಜನೆಯಿಂದ ಸಾಧ್ಯವಾಗಲಿದೆ.
* ಯೋಜನೆಗೆಂದು 20 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಕ್ರೆಡಿಟ್ ಗ್ಯಾರಂಟಿ ಫಂಡ್ ಹೆಸರಿನಲ್ಲಿ 2 ಸಾವಿರ ಕೋಟಿ ರೂ. ತೆಗೆದಿರಿಸಲಾಗಿದೆ.
* ರಾಜ್ಯದ ಸರ್ಕಾರಿ ಸಾಮ್ಯದ ಬ್ಯಾಂಕ್ ವೊಂದರ ಜತೆ ಹೊಂದಾಣಿಕೆ ಮಾಡಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ಮುಖಾಂತರ ಹಣಕಾಸು ನೆರವು ನೀಡಲಾಗುವುದು.(ಗುಡ್ ರಿಟರ್ನ್ಸ್. ಇನ್)
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications