ತಂತ್ರಜ್ಞಾನ ಬ್ಯಾಂಕಿಂಗ್ ಕೆಲಸವನ್ನು ಮತ್ತಷ್ಟು ಸುಲಭ ಮಾಡಿದೆ. ಬ್ಯಾಂಕ್ ಶಾಖೆಗೆ ಭೇಟಿ ನೀಡದೆ ಸ್ಮಾರ್ಟ್ ಫೋನ್ ಮುಖಾಂತರವೇ ಎಲ್ಲ ಕೆಲಸಗಳನ್ನು ಪೂರೈಸಬಹುದಾಗಿದೆ.
ಆದರೆ ಸೈಬರ್ ಅಪರಾಧದ ಭಯವೂ ಇದರೊಂದಿಗೆ ಹುಟ್ಟಿಕೊಂಡಿದೆ. ಹಾಗಾಗಿ ಪ್ರತಿಯೊಂದು ಹಣದ ರವಾನೆ ಅಥವಾ ಟ್ರಾನ್ಸಾಕ್ಷನ್ ವೇಳೆ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ.[ಎಟಿಎಂ ಮೂಲಕ ಹಣ ಡಿಪಾಸಿಟ್ ಮಾಡೋದು ಹೇಗೆ?]

ಐವಿಆರ್ (ಇಂಟರ್ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್) ಮೂಲಕವು ಹಣ ಪಾವತಿ ಮಾಡಲು ಅವಕಾಶವಿದೆ. ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್ ನೀಡಿದರೆ ವ್ಯವಸ್ಥೆಯೊಂದು ಧ್ವನಿ ತರಂಗ ಆಧಾರದಲ್ಲಿ ಹಣ ಪಾವತಿ ಮಾಡಬಲ್ಲದು. ವಸ್ತುಗಳ ಖರೀದಿ, ವಸ್ತುಗಳ ಖರೀದಿ ಎಲ್ಲವೂ ಇಲ್ಲಿ ಸಾಧ್ಯ.
ಆದರೆ ಐವಿಆರ್ ನ ಒನ್ ಟೈಮ್ ಪಾಸ್ ವರ್ಡ್ (ಒಟಿಪಿ)ಯನ್ನು ಬಳಸಿಕೊಂಡು ಹಣದ ರವಾನೆ ಮಾಡಿಕೊಳ್ಳಬೇಕಾಗುತ್ತದೆ. ಒಮ್ಮೆ ಬಂದ ಒಟಿಪಿ ಒಂದು ಟ್ರಾನ್ಸಾಕ್ಷನ್ ಗೆ ಮಾತ್ರ ಮೀಸಲಾಗರುತ್ತದೆ. ಅಲ್ಲದೇ ಕೇವಲ 30 ನಿಮಿಷ ಕಾಲ ವ್ಯಾಲಿಡಿಟಿ ಹೊಂದಿರುತ್ತದೆ. ಆದರೆ ಇಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆಯೊಂದಿಗೆ ರಜಿಸ್ಟರ್ ಆಗಿರಬೇಕು.[ಆದಾಯ ತೆರಿಗೆ ರಿಫಂಡ್ ಚೆಕ್ ಹಿಂದಕ್ಕೆ ಪಡೆಯುವುದು ಹೇಗೆ?]
ನೀವು ಮೂರು ವಿಧಾನಗಳ ಮೂಲಕ ಒಟಿಪಿಯನ್ನು ಪಡೆದುಕೊಳ್ಳಬಹುದು
* ‘OTP ಎಂದು ಟೈಪ್ ಮಾಡಿ ಸ್ಪೇಸ್ ಬಿಟ್ಟು 5676791ಕ್ಕೆ ಕಳುಹಿಸಿಕೊಡಬೇಕು
* ಸಂಬಂಧಿಸಿದ ಬ್ಯಾಂಕ್ ನ ವೆಬ್ ತಾಣಕ್ಕೆಲಾಗ್ ಇನ್ ಆಗಿ ನಿಮ್ಮ ಯುಸರ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಒಟಿಪಿ ಪಡೆದುಕೊಳ್ಳಬಹುದು.
* ಸಹಾಯವಾಣಿ 1860 180 1291ಕ್ಕೆ ಕರೆ ಮಾಡಿ ಪಡೆದುಕೊಳ್ಳಬಹುದು.
ಒಟಿಪಿ ಎಂದರೇನು?
ಇದೊಂದು ಆರು ಅಂಕೆಗಳ ಸಂಖ್ಯೆಯಾಗಿರುತ್ತದೆ. ನೀವು ಖಾತೆ ಹೊಂದಿರುವ ಬ್ಯಾಂಕ್ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಇದನ್ನು ಕಳುಹಿಸಿ ಕೊಡುತ್ತದೆ.
ಎಸ್ ಬಿಐ ಕಾರ್ಡ್ ಮೂಲಕ ಒಟಿಪಿ ಪಡೆಯುತ್ತೀರಿ ಎಂದಾದರೆ ಹಲವಾರು ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ನಿಮ್ಮ ಕಾರ್ಡ್ ನ ಸಿವಿವಿ ಸಂಖ್ಯೆ, ಕೊನೆಗೊಳ್ಳುವ ದಿನಾಂಕ ಮುಂತಾದ ಮಾಹಿತಿಗಳನ್ನು ನಮೂದಿಸಬೇಕಾಗುತ್ತದೆ. ಮೊಬೈಲ್ ಅಪ್ಲಿಕೇಶನ್ ಗಳ ಮೂಲಕವೂ ಐವಿಆರ್ ವಿಧಾನ ಅಥವಾ ಒಟಿಪಿ ಬಳಸಿ ಟ್ರಾನ್ಶಾಕ್ಷನ್ ಮಾಡಿಕೊಳ್ಳಬಹುದು.(ಗುಡ್ ರಿಟರ್ನ್ಸ್.ಇನ್)


Click it and Unblock the Notifications