ಆಡ್ ಆನ್ ಕ್ರೆಡಿಟ್ ಕಾರ್ಡ್ ಅಥವಾ ಸಪ್ಲಿಮೆಂಟರಿ ಕ್ರೆಡಿಟ್ ಕಾರ್ಡ್ ಬಗ್ಗೆ ನಿಮಗೆ ಮಾಹಿತಿ ಇದೆಯೇ? ಸಾಮಾನ್ಯವಾಗಿ ಮುಖ್ಯ ಕ್ರೆಡಿಟ್ ಕಾರ್ಡ್ ನೊಂದಿಗೆ ಸಂಬಂಧಿಸಿ ಇದನ್ನು ನೀಡಲಾಗುತ್ತದೆ. ನಿಮ್ಮ ಪ್ರೀತಿ ಪಾತ್ರರು ಈ ಕಾರ್ಡ್ ಬಳಸಿ ಅವರ ಮನಸ್ಸಿಗೆ ಒಪ್ಪುವ ವಸ್ತುಗಳನ್ನು ಖರೀದಿ ಮಾಡಿಕೊಳ್ಳಬಹುದು.
18 ವರ್ಷ ತುಂಬಿದ ಯಾರಿಗೆ ಬೇಕಾದರೂ ಆಡ್ ಆನ್ ಕ್ರೆಡಿಟ್ ಕಾರ್ಡ್ ನ್ನು ಬ್ಯಾಂಕ್ ಗಳು ನೀಡುತ್ತವೆ. ಪಾಲಕರು, ಹೆಂಡತಿ ಅಥವಾ ಮಕ್ಕಳು ಯಾರಿಗೆ ಬೇಕಾದರೂ ಕಾರ್ಡ್ ವಿತರಣೆ ಮಾಡಬಹುದು.[ಡೆಬಿಟ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]

ಆಡ್ ಆನ್ ಕಾರ್ಡ್ ಗುಣಲಕ್ಷಣಗಳು
* ಕೆಲ ಬ್ಯಾಂಕ್ ಗಳು ಉಚಿತವಾಗಿ ಆಡ್ ಆನ್ ಕಾರ್ಡ್ ಗಳನ್ನು ನೀಡುತ್ತವೆ. ಇನ್ನು ಕೆಲ ಬ್ಯಾಂಕ್ ಗಳು 125 ರಿಂದ 1000 ರು. ಶುಲ್ಕ ಪಡೆದುಕೊಳ್ಳುತ್ತವೆ.
* ಪ್ರಾಥಮಿಕ ಕಾರ್ಡ್ ನಿಂದ ಮಾಡಬಹುದಾದ ಎಲ್ಲ ಬಗೆಯ ಟ್ರಾನ್ಸಾಕ್ಷನ್ ಗಳನ್ನು ಆಡ್ ಆನ್ ಕಾರ್ಡ್ ನಿಂದಲೂ ಮಾಡಬಹುದು.
* ಖರೀದಿ ಲಿಮಿಟ್ ಸಹ ಪ್ರಾಥಮಿಕ ಕಾರ್ಡ್ ನಷ್ಟೇ ಆಗಿರುತ್ತದೆ. ನೀವು ಎಸ್ ಎಂಎಸ್ ಸೌಲಭ್ಯ ಬಳಸಿಕೊಂಡಿ ಖರೀದಿ ಮೊತ್ತವನ್ನು ನಿರ್ಧರಿಸಿ ಇಟ್ಟುಕೊಳ್ಳಬಹುದು.[ಏನಿದು ಕಾಂಟ್ಯಾಕ್ಟ್ ಲೆಸ್ ಡೆಬಿಟ್ ಕಾರ್ಡ್? ಬಳಕೆ ಹೇಗೆ?]
* ಆಡ್ ಆನ್ ಕಾರ್ಡ್ ನಿಂದ ಮಾಡಿದ ಎಲ್ಲ ಬಗೆಯ ಹಣದ ಟ್ರಾನ್ಸಾಕ್ಷನ್ ದಾಖಲೆಗಳು ಪ್ರಾಥಮಿಕ ಕಾರ್ಡ್ ಹೆಸರಿನಲ್ಲಿ ನಮೂದಾಗುತ್ತವೆ.
* ಆಡ್ ಆನ್ ಕಾರ್ಡ್ ಬಳಸಿ ಮಾಡಿದ ಟ್ರಾನ್ಸಾಕ್ಷನ್ ಪಾವತಿ ವಿಳಂಬ, ಬಡ್ಡಿ ಎಲ್ಲದಕ್ಕೂ ಪ್ರಾಥಮಿಕ ಕಾರ್ಡ್ ದಾರನೇ ಹೊಣೆಗಾರನಾಗುತ್ತಾನೆ.
ಆಡ್ ಆನ್ ಕಾರ್ಡ್ ನ ಲಾಭಗಳು
* ಎಟಿಎಂ ನಿಂದ ಹಣ ಡ್ರಾ ಮಾಡಿಕೊಳ್ಳುವ ಅಗತ್ಯ ಸಂದರ್ಭ ಎದುರಾದರೆ ಪ್ರಾಥಮಿಕ ಕಾರ್ಡ್ ಲಿಮಿಟ್ ನಷ್ಟೇ ಹಣವನ್ನು ಡ್ರಾ ಮಾಡಿಕೊಳ್ಳಬಹುದು.
* ಕೆಲ ಬ್ಯಾಂಕ್ ಗಳು ನೀಡುವ ರೀವಾರ್ಡ್ ಪಾಯಿಂಟ್ ಗಳು ಸಪ್ಲಿಮೆಟರಿ ಕಾರ್ಡ್ ಗೂ ಅನ್ವಯವಾಗುತ್ತದೆ. [ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಡುವಿನ ವ್ಯತ್ಯಾಸವೇನು?]
* ಹಣದ ಟ್ರಾನ್ಸಾಕ್ಷನ್ ನ ಎಲ್ಲ ಮಾಹಿತಿಯನ್ನು ಸುಲಭವಾಗಿ ಕಲೆ ಹಾಕಬಹುದು. ನಿಮ್ಮ ಪ್ರಾಥಮಿಕ ಕಾರ್ಡ್ ನ ದಾಖಲಾತಿ ಪರಿಶೀಲನೆ ಮಾಡಿದರೆ ಎಲ್ಲ ಕಾರ್ಡ್ ನ ಹಣ ರವಾನೆ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಿದೆ.
* ನಿಮ್ಮ ಪ್ರೀತಿ ಪಾತ್ರರಿಗೆ ಇಂಥ ಕಾರ್ಡ್ ಮಾಡಿ ನೀಡಿದರೆ ಅವರಿಗೆ ಇಷ್ಟವಾದುದ್ದನ್ನು ಖರೀದಿ ಮಾಡಲು ಪದೇ ಪದೇ ನಿಮಗೆ ದುಂಬಾಲು ಬೀಳಿವುದಿಲ್ಲ.
ಕೊನೆ ಮಾತು: ಪ್ರಾಥಮಿಕ ಕಾರ್ಡ್ ದಾರ ಇಂಥ ಕಾರ್ಡ್ ನ್ನು ಪಡೆದುಕೊಂಡರೂ ಬೇರೆಯವರಿಗೆ ಹಸ್ತಾಂತರ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ವ್ಯತಿರಿಕ್ತ ಬಳಕೆಯಾರೆ ನಿಮ್ಮ ಕೈಯಿಂದಲೇ ಹಣ ಕಟ್ಟಬೇಕಾಗುತ್ತದೆ.


Click it and Unblock the Notifications