ಮನೆಯನ್ನು ನಿಭಾಯಿಸಿಕೊಂಡು ಕೆಲಸ ಮಾಡುತ್ತಿರುವ ಮಹಿಳೆಯರು ಇದನ್ನು ಓದಲೇಬೇಕು. ಪ್ರತಿಯೊಬ್ಬ ವ್ಯಕ್ತಿಗೂ ವಿಮೆ ಅಗತ್ಯವಾಗುತ್ತದೆ. ಅದರಲ್ಲೂ ಕೆಲಸ ಮಾಡುತ್ತಿರುವ ಮಹಿಳೆಯರು ತಮ್ಮ ಸುರಕ್ಷತೆಗೆ ಸದಾ ಗಮನ ನೀಡಬೇಕಾಗುತ್ತದೆ.
ಎಚ್ ಡಿಎಫ್ ಸಿ ಲೈಫ್ ಪಾಲಿಸಿ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದಎಷ್ಟು ಮುಖ್ಯವಾಗಿದೆ ಎಂಬುದನ್ನು ಮುಂದೆ ನೋಡೋಣ. ಜೀವನದ ಸಂಧ್ಯಾಕಾಲದಲ್ಲಿ ಹಣಕಾಸು ಮುಗ್ಗಟ್ಟು ಎದುರಾಗದಂತೆ ನೋಡುಕೊಳ್ಳುವುದು ಯೋಜನೆಯ ಮುಖ್ಯ ಉದ್ದೇಶ.[ನಿಮ್ಮ ಮನೆಯ ಹಿರಿಯ ಜೀವಗಳಿಗೆ ಸಿಗುವ ವಿಮಾ ಸೌಲಭ್ಯಗಳೇನು?]

ನಿಮ್ಮ ಆಯ್ಕೆಗೆ ನಾಲ್ಕು ವಿಧಾನಗಳಿವೆ
1. ಇನ್ ಕಮ್ ಫಂಡ್: ಇದು ನಿಮಗೆ ಹೆಚ್ಚಿನ ಹಣ ಮರುಪಾವತಿಯಾಗುವಂತೆ ನೋಡುಕೊಳ್ಳುತ್ತದೆ. ಅಲ್ಲದೇ ಅವಧಿಯೂ ಸಹ ತುಂಬಾ ವಿಸ್ತಾರವಾಗುತ್ತದೆ.
2. ಸಮತೋಲಿತ: ಹೆಸರೇ ಸೂಚಿಸುವಂತೆ ಇಲ್ಲಿ ಹಣ ಹೂಡಿಕೆ ಮತ್ತು ರಿಟರ್ನ್ಸ್ ಸಮತೋಲಿತವಾಗುರುತ್ತದೆ.
3. ಬ್ಲ್ಯೂ ಚಿಪ್ ಫಂಡ್: ಲಾರ್ಜ್ ಕ್ಯಾಪ್ ಈಕ್ವಿಟಿ ಫಂಡ್ ನಲ್ಲಿ ಹೂಡಿಕೆ
4. ಅವಕಾಶದಾಯಕ ಫಂಡ್ : ಮಿಡ್ ಕ್ಯಾಪ್ ಈಕ್ವಿಟಿಯಲ್ಲಿ ಹೂಡಿಕೆ[ಯಾವುದೆ ವಿಮೆ ಮಾಡಿಸುವ ಮುನ್ನ ಇದನ್ನೊಮ್ಮೆ ಓದಿ]
ನೀವು ಕೆಳಗಿನ ಮೂರು ಆಯ್ಕೆಗಳಲ್ಲಿ ಒಂದನ್ನು ತೆಗೆದುಕೊಳ್ಳಬಹುದು
1. ಗರ್ಭಿಣಿಯಾದ ಸಂದರ್ಭ ಅಥವಾ ಮಗುವವಿಗೆ ಜನ್ಮ ನೀಡಿದ ಸಂದರ್ಭ ಹಣ ಕೈಗೆ ಸಿಗುವಂಥ ವ್ಯವಸ್ಥೆ
2. ಹೆಂಗಸರಿಗೆ ಸಂಬಂಧಿಸಿದ ಕ್ಯಾನ್ಸರ್ ನಂಥ ಮಾರಕ ಕಾಯಿಲೆಯಿಂದ ಬಳಲುತ್ತಯಿದ್ದೆ. ಅದೂ ಸ್ತನ ಕ್ಯಾನ್ಸರ್ ಇರಬಹುದು.
3. ಪತಿಯ ಮರಣ(ಇದಕ್ಕೆ ಇಲೈಟ್ ಆಯ್ಕೆ ಮಾತ್ರ ಅನ್ವಯವಾಗುತ್ತದೆ)
ಈ ಆಯ್ಕೆಗಳು ಲಭ್ಯವಿದೆ
* ಕ್ಲಾಸಿಕ್
ನೀವು ಹಣ ಹಾಕಿದ ಮೂರು ವರ್ಷದ ನಂತರ ಲಾಭ ಸಿಗಲು ಆರಂಭವಾಗುತ್ತದೆ. ಇಲ್ಲಿ ಪ್ರೀಮಿಯಂ ಕಟ್ಟುವ ಪ್ರಮಾಣವೂ ಕಡಿಮೆ ಇದ್ದು ಸಿಗುವ ರಿಟರ್ನ್ಸ್ ಪರಿಮಾಣವೂ ಕಡಿಮೆ ಇರುತ್ತದೆ.
* ಪ್ರೀಮಿಯರ್
ಇಲ್ಲಿ ಪ್ರಿಮಿಯಂ ಪ್ರಮಾಣ ಸ್ವಲ್ಪ ಹೆಚ್ಚಾಗಿದ್ದು ಲಾಭವೂ ಹೆಚ್ಚು. ಮೂರು ವರ್ಷದ ನಂತರ ಪೆರಿಯಾಡಿಕ್ ಕ್ಯಾಶ್ ಪೆ ಔಟ್ ನ್ನು ನೀಡಲಾಗುತ್ತದೆ.
* ಇಲೈಟ್
ಇಲ್ಲಿ ಕಟ್ಟಬೇಕಾದ ಪ್ರೀಮಿಯಂ ಪ್ರಮಾಣ ಜಾಸ್ತಿ. ಅಂತೆಯೇ ಲಾಭವೂ ಜಾಸ್ತಿ. ಪೆರಿಯಾಡಿಕ್ ಕ್ಯಾಶ್ ಪೆ ಔಟ್ ನೊಂದಿಗೆ ಗಂಡನ ಸಾವಾದರೆ ಲೈಫ್ ಕವರೇಜ್ ಸಹ ಸಿಗುತ್ತದೆ.
ಗಮನಿಸಬೇಕಾದ ಸಂಗತಿ ಎಂದರೆ ಎಲ್ಲ ಬಗೆಯ ಪಾಲಿಸಿಗಳ ಲಾಭ ಸಿಗಲು ಮೂರು ವರ್ಷ ಕಾಯಬೇಕು. ಸಾಮಾನ್ಯವಾಗಿ 10-15 ವರ್ಷ ಅವಧಿಯ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಕೊನೆ ಮಾತು
ಇಲ್ಲಿ ಹೂಡಿಕೆ ಮಾಡುವ ಹಣಕ್ಕೆ ತೆರಿಗೆ ವಿನಾಯಿತಿ ಲಾಭವೂ 80 ಸಿ ಅನ್ವಯ ಸಿಗುತ್ತದೆ. ಮಹಿಳೆಯರಿಗೆ ಇದೊಂದು ಉತ್ತಮ ಆಯ್ಕೆಯಾಗಿದ್ದು ಅವರ ಅಗತ್ಯಕ್ಕೆ ತಕ್ಕ ವಿಮೆ ಮಾಡಿಸಿಕೊಳ್ಳಬಹುದು(ಗುಡ್ ರಿಟರ್ನ್ಸ್.ಇನ್)


Click it and Unblock the Notifications