ಜೀವ ವಿಮಾ ಪಾಲಿಸಿಗಳು ಕಾರಣವಿದ್ದೋ, ಕಾರಣವಿಲ್ಲದೆಯೋ ಲ್ಯಾಪ್ಸ್ ಆಗಿ ಬಿಡುತ್ತವೆ. ಹಾಗಾದರೆ ಅವಧಿ ಮುಗಿದ ವಿಮಾ ಪಾಲಿಸಿಗೆ ಮರುಜೀವ ಕೊಡುವುದು ಹೇಗೆ? ಎಂಬ ಪ್ರಶ್ನೆಯೂ ಇದರೊಂದಿಗೆ ಮೂಡುತ್ತದೆ.
ಬಹುತೇಕ ಕಂಪನಿಗಳು ಪಾಲಿಸಿ ಅವಧಿ ಮುಗಿದ ಮೇಲೆ ನಿಮ್ಮ ವಿಳಾಸಕ್ಕೆ ನೋಟಿಸ್ ಕಳುಹಿಸಿಕೊಡುತ್ತವೆ. ಆಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಪಾಲಿಸಿ ಲ್ಯಾಪ್ಸ್ ಆಗುವುದು. ಸುಮ್ಮನೆ ಒಂದೆರಡು ಕಂತು ಕಟ್ಟಿದ್ದ ಹಣ ನಷ್ಟ ಮಾಡಿಕೊಳ್ಳಬೇಕಾಗುತ್ತದೆ.[ಕುಟುಂಬದ ಹಣಕಾಸು ಆರೋಗ್ಯ ಕಾಪಾಡಲು 5 ಐಡಿಯಾ]

ಕೆಲವೊಮ್ಮೆ ಆದಾಯ ತೆರಿಗೆ ಲಾಭ ಸಿಗಲಿ ಎಂದು ಅಗತ್ಯಕ್ಕಿಂತ ಹೆಚ್ಚಿನ ಪಾಲಿಸಿಗಳನ್ನು ಮಾಡಿಕೊಂಡಿರುತ್ತೇವೆ. ನಂತರ ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಪಾವತಿ ಮಾಡಲಾಗದೇ ಒದ್ದಾಟ ನಡೆಸುತ್ತೇವೆ.
ಪಾಲಿಸಿ ಲ್ಯಾಪ್ಸ್ ಆಗುವುದಕ್ಕೆ ಮುಖ್ಯವಾಗಿ ಎರಡು ಕಾರಣಗಳನ್ನು ಉಲ್ಲೇಖ ಮಾಡಬಹುದು. ಪ್ರೀಮಿಯಂ ಕಟ್ಟದೇ ಅವಧಿ ಮೀರುವುದು ಮತ್ತು ಪಾಲಿಸಿಯ ಹಣ ವಿಥ್ ಡ್ರಾ ಮಾಡಿಕೊಳ್ಳುವುದು.[ಯಾವುದೆ ವಿಮೆ ಮಾಡಿಸುವ ಮುನ್ನ ಇದನ್ನೊಮ್ಮೆ ಓದಿ]
ಲ್ಯಾಪ್ಸ್ ಆದ ಪಾಲಿಸಿಗೆ ಮರು ಜೀವ ನೀಡುವುದು ಹೇಗೆ?
* ಸಾಮಾನ್ಯ ವಿಧಾನ
ಇಲ್ಲಿ ಪಾಲಿಸಿಯ ಅವಧಿ ಬಹಳ ಮುಖ್ಯವಾಗುತ್ತದೆ. ಆರು ತಿಂಗಳಿಗೂ ಅಧಿಕ ಕಾಲ ನೀವು ಪ್ರೀಮಿಯಂ ತುಂಬದೇ ಇದ್ದಾಗ ಪಾಲಿಸಿ ಜೀವ ಕಳೆದುಕೊಂಡಿರುತ್ತದೆ. ನಂತರ ನಿರ್ದಿಷ್ಟ ಬಡ್ಡಿಯನ್ನು ತುಂಬಿ ಮತ್ತೆ ಹಣದ ಕಂತು ಪಾವತಿ ಮಾಡಿದರೆ ಪಾಲಿಸಿಗೆ ಜೀವ ಬರುತ್ತದೆ.
* ವೈದ್ಯಕೀಯ ಪರೀಕ್ಷೆ
ಪಾಲಿಸಿಯೂ ವರ್ಷಗಳ ಕಾಲ ಚಲಾವಣೆಯಲ್ಲಿ ಇಲ್ಲದಿದ್ದರೆ ನೀವು ವೈದ್ಯಕೀಯ ಪರೀಕ್ಷೆ ಮಾಡಿಸಿ ಪಾಲಿಸಿಗೆ ಜೀವ ಭರಿಸಬೇಕಾಗುತ್ತದೆ. ನಿಮ್ಮ ಆರೋಗ್ಯದ ಸ್ಥಿತಿ ಗತಿಗಳು ಪಾಲಿಸಿಯ ಸ್ಥಿತಿ ಗತಿಯನ್ನು ನಿರ್ಧಾರ ಮಾಡುತ್ತದೆ. ಇದು ಒಂದು ರೀತಿಯಲ್ಲಿ ಹೊಸ ಪಾಲಿಸಿ ಮಾಡಿಸಿದಂತೆ ಆಗುವುದು. ಆದರೆ ನೀವು ಮೊದಲು ತುಂಬಿದ್ದ ಹಣ ಎಲ್ಲೂ ಹೋಗುವುದಿಲ್ಲ.
ಈ ಬಗೆಯ ಪಾಲಿಸಿ ಮಾಡಿಸಿದ ನಂತರ ಪಾಲಿಸಿದಾರ ಮರಣ ಹೊಂದಿದರೆ ವಿಮಾ ಕಂಪನಿ ಸರಣಿ ತನಿಖೆ ಮಾಡಿದರೂ ಆಶ್ಚರ್ಯವಿಲ್ಲ.[ಅಂಚೆ ಇಲಾಖೆ ನೀಡುವ ಪ್ರಮುಖ 7 ವಿಮಾ ಯೋಜನೆಗಳು]
ಕೊನೆ ಮಾತು:
ಎಲ್ಲದಕ್ಕಿಂತ ಮುಖ್ಯವಾಗಿ ನೀವು ಹೊಂದಿರುವ ವಿಮಾ ಕಂಪನಿಯೊಂದಿಗೆ ಪಾರದರ್ಶಕ ಸಂಬಂಧ ಇರಿಸಿಕೊಂಡರೆ ಯಾವ ಸಮಸ್ಯೆಗಳು ಆಗುವುದಿಲ್ಲ. ನಿಮಗೆ ಆರೋಗ್ಯ ಸಮಸ್ಯೆ ಉಂಟಾದರೆ ತಕ್ಷಣ ಅದನ್ನು ವಿಮಾ ಕಂಪನಿ ಗಮನಕ್ಕೆ ತರಬೇಕು. ಅಲ್ಲದೇ ನಿಮ್ಮ ನಾಮಿನಿ ಬಗ್ಗೆಯೂ ಸ್ಪಷ್ಟವಾದ ವಿವರ ನೀಡಿದ್ದರೆ ಯಾವ ಸಮಸ್ಯೆಗಳು ಉಂಟಾಗಲಾರದು.(ಗುಡ್ ರಿಟರ್ನ್ಸ್.ಇನ್)


Click it and Unblock the Notifications