For Quick Alerts
ALLOW NOTIFICATIONS  
For Daily Alerts

ಸೇವಾ ತೆರಿಗೆ-ಸೇವಾ ಶುಲ್ಕದ ನಡುವಿನ ವ್ಯತ್ಯಾಸವೇನು?

|

ನೀವು ರೆಸ್ಟೋರೆಂಟ್ ವೊಂದಕ್ಕೆ ತೆರಳಿ ತಿಂಡಿ ತಿಂದು ಬಿಲ್ ಪಡೆದ ಮೇಲೆ ಹಲವಾರು ಅನುಮಾನಗಳು ಕಾಡುತ್ತಲೇ ಇರುತ್ತವೆ. ನೀವು ಆರ್ಡರ್ ಮಾಡಿದ ಆಹಾರದ ಲೆಕ್ಕಕ್ಕೂ ಕೈಗೆ ಹೊಟೆಲ್ ಇತ್ತ ಬಿಲ್ ಗೂ ಅಜಗಜಾಂತರ ವ್ಯತ್ಯಾಸ ಕಂಡುಬರಂದಂತೆ ಅನಿಸುತ್ತದೆ.

ಕೆಲವರು ಸುಮ್ಮನೆ ಕೇಳಿದ್ದಷ್ಟು ಬಿಲ್ ನೀಡಿ ಬರುತ್ತಾರೆ. ಪ್ರಶ್ನೆ ಮಾಡಿದರೆ ಹೊಟೆಲ್ ಮಾಲೀಕರು ಸಿದ್ಧ ಉತ್ತರಗಳನ್ನು ನೀಡುತ್ತಾರೆ. ಗ್ರಾಹಕರಿಗೆ ಇರುವ ಕಡಿಮೆ ತಿಳಿವಳಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ರೆಸ್ಟೋರೆಂಟ್ ಮಾಲೀಕರು ಸರಿಯಾಗಿಯೇ ಹಣ ವಸೂಲಿ ಮಾಡುತ್ತಿದ್ದಾರೆ.[ತೆರಿಗೆ ಪಾವತಿ ವೇಳೆ ತಪ್ಪಾದರೆ ಮತ್ತೆ ರಿಟರ್ನ್ಸ್ ಸಾಧ್ಯವೇ?]

ಸೇವಾ ತೆರಿಗೆ-ಸೇವಾ ಶುಲ್ಕದ ನಡುವಿನ ವ್ಯತ್ಯಾಸವೇನು?

 

ಇಲ್ಲಿ ನಿಮಗೆ ಸೇವಾಶುಲ್ಕ, ಸೇವಾ ತೆರಿಗೆ ಎಂಬ ಎರಡು ಶಬ್ದಗಳ ನಡುವಿನ ಗೊಂದಲ ಉಂಟಾಗಬಹುದು. ಇವುಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡರೆ ರೆಸ್ಟೋರೆಂಟ್ ಗಳ ಕರಾಮತ್ತು ಅರ್ಥವಾಗುತ್ತದೆ.[ವಿಳಂಬವಾಗಿದ್ದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಪಾವತಿ ಹೇಗೆ?]

ಸೇವಾ ತೆರಿಗೆ

ನೀವು ಪಡೆದುಕೊಂಡ ಸೇವೆಗೆ ಸರ್ಕಾರಕ್ಕೆ ಪಾವತಿಸುವ ತೆರಿಗೆಯನ್ನು ಸೇವಾ ತೆರಿಗೆ ಎಂದು ಪರಿಗಣನೆ ಮಾಡಬಹುದು. ಸರ್ಕಾರಕ್ಕೆ ಈ ಬಗೆಯ ತೆರಿಗೆ ಪ್ರಮುಖ ಆದಾಯದ ಮೂಲವಾಗಿರುತ್ತದೆ.

ನಿಮ್ಮ ಹೊಟೆಲ್ ಬಿಲ್ ಅಥವಾ ದೂರವಾಣಿ ಬಿಲ್ ಮೇಲೆಯೂ ಈ ತೆರಿಗೆಯ ಉಲ್ಲೇಖವಿರುತ್ತದೆ. ಜುನ್ 1, 2015 ರಿಂದ ಸೇವಾ ತೆರಿಗೆಯನ್ನು ಶೇ. 14 ರಂತೆ ಆಕರಣೆ ಮಾಡಲಾಗುತ್ತಿದೆ. ನೀವು ನೀಡಬೇಕಾದ ಒಟ್ಟು ಮೊತ್ತದ ಶೇ. 5.6 ನ್ನು ಸೇವಾ ತೆರಿಗೆಯಾಗಿ ಪಾವತಿ ಮಾಡಬೇಕಾಗುತ್ತದೆ.

ರೆಸ್ಟೋರೆಂಟ್ ಗಳು ನಿಮ್ಮ ಬಿಲ್ ಅಷ್ಟೂ ಮೊತ್ತಕ್ಕೆ ಸೇವಾ ತೆರಿಗೆ ಪಾವತಿ ಮಾಡುವಂತೆ ಕೇಳುತ್ತವೆ. ಯಾಕೆಂದರೆ ಅವುಗಳು ಶೇ. 5.6 ಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಬೇಕು ಎಂಬ ಮನೋಭಾವ ಹೊಂದಿರುತ್ತವೆ. ರೆಸ್ಟೋರೆಂಟ್ ಗಳು, ಮೆಸ್ ಗಳು, ಹವಾನಿಯಂತ್ರಿತ ಕೊಠಡಿಗಳು ಮುಂತಾದವು ಸೇವಾ ತೆರಿಗೆಯನ್ನು ಪಡೆದುಕೊಳ್ಳುತ್ತವೆ.

ಸೇವಾ ಶುಲ್ಕ

ಸೇವಾ ಶುಲ್ಕ ವನ್ನು ಆಯಾ ರೆಸ್ಟೋರೆಂಟ್ ಮಾಲೀಕರೆ ನಿರ್ಧಾರ ಮಾಡುತ್ತಾರೆ. ಇಲ್ಲಿ ಪಾವತಿಯಾಗುವ ಹಣ ನೇರವಾಗಿ ಮಾಲೀಕರ ಜೇಬನ್ನು ಸೇರುತ್ತದೆ. ಪೂರೈಕೆ ಮಾಡುವ ಆಹಾರ, ಟೇಬಲ್, ಸ್ವಚ್ಛತೆ ಮುಂತಾದ ಕಾರಣಗಳ ಆಧಾರದಲ್ಲಿ ತೆಗೆದುಕೊಳ್ಳುವ ಹಣ ಸೇವಾ ಶುಲ್ಕ ಎಂದು ಕರೆಸಿಕೊಳ್ಳುತ್ತದೆ.

ಆಯಾ ರೆಸ್ಟೋರೆಂಟ್ ಆಧಾರಲ್ಲಿ ಇದರ ಪ್ರಮಾಣ ಹೆಚ್ಚು ಕಡಿಮೆ ಆಗಬಹುದು. ಶೇ. 5 ರಿಂದ 20 ರವೆಗೆ ಸೇವಾ ಶುಲ್ಕವನ್ನು ಪಡೆದುಕೊಳ್ಳಬಹುದು. ಆಯಾ ಪ್ರದೇಶ, ಮಹಾನಗರ, ಸ್ಥಳ ಮುಂತಾದವುಗಳ ಆಧಾರದಲ್ಲಿ ಸೇವಾ ಶುಲ್ಕ ಆಕರಣೆ ಮಾಡಿಕೊಳ್ಳಲಾಗುತ್ತದೆ.

ಕೊನೆ ಮಾತು: ಸೇವಾ ತೆರಿಗೆ ಅಥವಾ ಶೇವಾ ಶುಲ್ಕ ಪಾವತಿ ಮಾಡುವಾಗ ಅನೇಕ ಸಂಗತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಟಿಐಎನ್ ಸಂಖ್ಯೆ ಮತ್ತು ಸೇವಾ ಶುಲ್ಕದ ಸಂಖ್ಯೆಯನ್ನು ಗಮನಿಸುವುದು ಒಳಿತು. ಅಲ್ಲದೇ ಇದು ಸರ್ಕಾರದ ಮಾನ್ಯತೆ ಪಡೆದ ಬಿಲ್ ಹೌದೋ ಎಂಬುದನ್ನು ಮನಗಾಣಬೇಕಾಗುತ್ತದೆ.(ಗುಡ್ ರಿಟರ್ನ್ಸ್.ಇನ್)

English summary

What Is The Difference Between Service Tax and Service Charge?

Confused about your restaurant bill? It may so happen that, you calculate and order the food and when the bill arrives the amount will be much higher than what you have calculated. Most of the individuals love to visit restaurants for reason or without reason and end up paying a higher amount as they will be less aware on the calculation part. So many restaurant owners take advantage and misguide the unaware customers.
Company Search
Enter the first few characters of the company's name or the NSE symbol or BSE code and click 'Go'

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more